ಯಾರಾದರೂ ಪ್ರಜ್ಞೆ ತಪ್ಪಿ ಬಿದ್ದಾಗ ಭಯಪಡಬೇಡಿ.. ಪ್ರಥಮ ಚಿಕಿತ್ಸೆ ಈ ರೀತಿ ನೀಡಿ!

  • by

ಇದಕ್ಕಿದ್ದಂತೆ ನಿಮ್ಮ ಎದುರು ಯಾರಾದರೂ ಕುಸಿದು ಬಿದ್ದರೆ, ಧಿಡೀರ್ ಅಂತ ವೈದ್ಯರ ಬಳಿಗೆ ಹೋಗಲು ನಿಮ್ಮ ಬಳಿ ಯಾವುದೇ ಆಯ್ಕೆ ಗಳಿರುವುದಿಲ್ಲ. ಅಸ್ವಸ್ಥತೆ, ಪ್ರಜ್ಞೆ ತಪ್ಪಿ ಬೀಳುವುದು ಸಾಮಾನ್ಯ ಸಮಸ್ಯೆ ಎಂದೇ ಹೇಳಬಹುದು. ಅಪಸ್ಮಾರ, ಫಿಟ್ಸ್, ಮೂರ್ಛೆ ರೋಗ, ಎಪಿಲೆಪ್ಸಿ, ಸನ್ನಿ ಎಂದೆಲ್ಲಾ ಕರೆಯಲಾಗುತ್ತದೆ. ಈ ರೋಗ ಅನಾದಿ ಕಾಲದಿಂದಲೂ ಜಗತ್ತಿಗೆ ಚಿರಪರಿಚಿತ ಜಗತ್ತಿನಾಂದ್ಯಂತ ೫೦ ದಶಲಕ್ಷ ಹೆಚ್ಚು ಜನರು ತೊಂದರೆ ಗೀಡಾಗುತ್ತಿದ್ದಾರೆ. ಮೂರ್ಛೆ ರೋಗ ಎಂಬುದು ಪ್ರತ್ಯೇಕ ರೋಗ ಅಲ್ಲ. ಇದನ್ನು ಆಂಗ್ಲ ಭಾಷೆಯಲ್ಲಿ ಸೀಷರ್ಸ್ , ಕನ್ವಲ್ಶನ್, ಎಪಿಲೆಫ್ಟಿಕ್ ಎಂದು ಕರೆಯಲಾಗುತ್ತದೆ.

ಈ ಪರಿಸ್ಥಿತಿಯಲ್ಲಿ ಮೆದುಳಿನ ಕೋಶಗಳು ಇದ್ದಕ್ಕಿದ್ದಂತೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದ್ರಿಂದಾಗಿ ಹಠಾತನೇ ಮನುಷ್ಯನ ವರ್ತನೆ ಬದಲಾಗುತ್ತದೆ. ಅನೇಕ ಸಂದರ್ಭದಲ್ಲಿ ಆತ ತನಗೆ ಅರಿವಿಲ್ಲದಂತೆ ಪ್ರಜ್ಞೆ ತಪ್ಪಿ ಬೀಳುತ್ತಾನೆ. 2 ನಿಮಿಷಗಳವರೆಗೂ ಹೆಚ್ಚು ಕಾಲ ಮೂರ್ಛೆ ರೋಗ ಇದ್ದರೆ, ಪ್ರಥಮ ಚಿಕಿತ್ಸೆ ಹೇಗಿರಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಮೂರ್ಛೆ ರೋಗ ಪ್ರಥಮ ಚಿಕಿತ್ಸೆ ಅಗತ್ಯವಿದ್ದಾಗ ಭಯಪಡದೇ, ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ಮೂರ್ಛೆ ರೋಗ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದು ಎಲ್ಲಾ ವಯೋಮಾನದವರಲ್ಲೂ ಕಂಡು ಬರುತ್ತದೆ. ಮೆದುಳಿನ ಚಟುವಟಿಕೆಯಲ್ಲಾಗುವ ಏರು ಪೇರು ಉಂಟಾದಾಗ ಮೂರ್ಛೆ ರೋಗಕ್ಕೆ ಕಾರಣವಾಗುತ್ತದೆ. ಕೈ ಕಾಲು ಅದರುವುದು ಸೆಟೆದುಕೊಳ್ಳುವುದು ಮೂರ್ಛೆ ರೋಗದ ಲಕ್ಷಣ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಮೂರ್ಛೆ ರೋಗ ಕಾಣಿಸಿಕೊಳ್ಳುತ್ತದೆ. ಇನ್ನು ದೇಹದಲ್ಲಿ ಮ್ಯಾಗ್ನೇಶಿಯಂ ಕೊರತೆ ಉಂಟಾದರೆ , ಮೂರ್ಛೆ ರೋಗ ಕಾಣಿಸಿಕೊಳ್ಳಬಹುದು. ಎಳೆ ನೀರು ಕುಡಿಯುವುದು ಮೂರ್ಛೆ ರೋಗಕ್ಕೆ ಮನೆ ಮದ್ದು ಎಂದು ಹೇಳಬಹುದು.

ಪ್ರಾಥಮಿಕ ಚಿಕಿತ್ಸೆಗಳು ಇಲ್ಲಿವೆ

ಸುರಕ್ಷಿತ ಸ್ಥಳಕ್ಕೆ ಕರೆದ್ಯೊಯಿರಿ!

ಅನೇಕ ಸಂದರ್ಭದಲ್ಲಿ ಮೂರ್ಛೆ ರೋಗಕ್ಕೆ ಒಳಗಾಗುವ ವ್ಯಕ್ತಿಗಳು ಇದ್ದಕ್ಕಿಂತದ್ದಂತೆ ಕೆಳಗೆ ಬೀಳುತ್ತಾರೆ. ಇದ್ರಿಂದ ಸಾಕಷ್ಟು ಅಪಾಯ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ನೀವು ಸುರಕ್ಷಿತ ಸ್ಥಳಕ್ಕೆ ಅವರನ್ನು ಕರೆದ್ಯೊಯಿರಿ. ರಸ್ತೆಯ ಮಧ್ಯೆ ಅವರನ್ನು ಇರಲು ಬಿಡಬೇಡಿ. ಯಾವುದಾದರೂ ಸುರಕ್ಷಿತ ಸ್ಥಳಕ್ಕೆ ಅವರನ್ನು ಕರೆದ್ಯೂಯ್ದು. ಮಲಗಿಸಿ.

ದೂರ ನಿಲ್ಲದೇ, ಸಹಾಯಕ್ಕೆ ಧಾವಿಸಿ..!

ನಿಮ್ಮ ಮನೆಯಲ್ಲಿ ಮನೆಯ ಸುತ್ತ ಮುತ್ತ ಯಾರಾದರೂ ಪ್ರಜ್ಞೆ ತಪ್ಪಿ ಬಿದ್ದರೆ, ಮಾನವೀಯತೆ ಇರಲಿ. ಅವರನ್ನು ದೂರವಿಡದೇ, ಸಹಾಯಕ್ಕೆ ಧಾವಿಸಿ. ಅಲ್ಲದೇ, ವ್ಯಕ್ತಿಯನ್ನು ಒಂದು ಬದಿಗೆ ಕರೆದ್ಯೊಯ್ದು.. ಸುತ್ತಲಿನ ಪ್ರದೇಶವನ್ನು ಕ್ಲೀನ್ ಮಾಡಿ. ಅವರ ತಲೆ ಕೆಳಗೆ ಸಮತಟ್ಟಾದ ಹಾಗೂ ಮೃದುವಾದ ಯಾವುದಾದರೂ ವಸ್ತು ಇರಿಸಿ. ಅವರು ಕನ್ನಡಕ ಧರಿಸಿದ್ದರೆ, ಅದನ್ನು ತೆಗೆಯಿರಿ. ಕುತ್ತಿಗೆಯ ಭಾಗವನ್ನು ಸಡಿಲಗೊಳಿಸಿ. ಉಸಿರಾಡಲು ಇದು ನೆರವಾಗುತ್ತದೆ. ೫ ನಿಮಿಷಗಳಿಗಿಂತಲೂ ಮೂರ್ಛೆ ರೋಗ ಕಂಡು ಬಂದರೆ ತಕ್ಷಣ ವೈದ್ಯರಲ್ಲಿ ಕರೆದುಕೊಂಡು ಹೋಗಿ.. ಸರಿಯಾಗಿ ಗಾಳಿ ಬರುವಂತೆ ನೋಡಿಕೊಳ್ಳಿ.

ಪರಿಹಾರಗಳೇನು?
ಮೂರ್ಛೋರೋಗ ಎಂಬುದು ಸಾಮಾನ್ಯ ಕಾಯಿಲೆ. ಇದು ಶಾಪವಲ್ಲ. ಸೂಕ್ತ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವಿನಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಆದ್ರೆ ಆತ್ಮವಿಶ್ವಾಸ ಹಾಗೂ ಮನೋಬಲ ನಿಮ್ಮಲ್ಲಿ ಇರಬೇಕು. ಸೂಕ್ತ ಚಿಕಿತ್ಸೆ , ಔಷಧ ಮೂಲಕ ಇದನ್ನು ನಿವಾರಿಸಬಹುದು.

ಮನೆ ಮದ್ದುಗಳೇನು?

ಮೂರ್ಛೆ ಬಂದತಹ ಸಂದರ್ಭದಲ್ಲಿ ಸುಲಭವಾಗಿ ಸೀಗುವಂತಹ ಬಿಳಿ ಈರುಳ್ಲಿ ರಸವನ್ನು ರೋಗಿಯ ಮೂಗಿಗೆ ಬೀಡುವುದು. ವಾಯುವಿಳಂಗ , ಕರಿಮೆಣಸು , ಹಾಗೂ ನುಗ್ಗೆ ಇಪ್ಪೆ ಬೀಜಗಳನ್ನು ಕುಟ್ಟಿ ಶೋಧಿಸಿ ಮೂಗಿಗೆ ಹನಿಗಳನ್ನು ಬಿಟ್ಟಲ್ಲಿ ಹಿಸ್ಟೋರಿಯಾದಿಂದ ಮೂರ್ಛೆ ಹೋದವರಿಗೆ ಉಪಶಮನ ದೊರೆಯುತ್ತದೆ. ವಿಟಮಿನ್ ಸಿ , ಹೊಂದಿರುವಂತಹ ಕಿತ್ತಳೆ ಹಣ್ಣಿನ ನಿರಂತರ ಸೇವನೆ ಮೂರ್ಛೆ ರೋಗವನ್ನು ತಗ್ಗಿಸಲು ಸಹಾಯ ಮಾಡುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ