ಎಲ್ಲಾ ವೇಳೆಯಲ್ಲೂ ನಿದ್ರೆ ನಿಮ್ಮನ್ನು ಆವರಿಸಿಕೊಳ್ಳುತ್ತಿದೆಯೇ? ಆಯುರ್ವೇದದ ಪ್ರಕಾರ ಕಾರಣಗಳು..!

  • by


ನಿತ್ಯ ಜೀವನದ ಸಂಜೀವಿನಿ ನಿದ್ದೆ ಅಂತಾ ಹೇಳಬಹುದು. ಆರೋಗ್ಯಕ್ಕೆ ಎಷ್ಟು ಅಗತ್ಯವಾದದ್ದು ಪ್ರತಿ ದಿನ ಅಷ್ಟು ನಿದ್ದೆ ಮಾಡಬೇಕು. ಆದ್ರೆ ಆಗಾಗ್ಗೆ ಹಗಲಿನಲ್ಲಿ ನಿದ್ರೆ, ಆಲಸ್ಯ ಹಾಗೂ ಜಡತೆಯನ್ನು ಅನುಭವಿಸುತ್ತಿದ್ದೀರಾ..? ಹೌದು ಎಂದಾದರೆ, ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡದಿದ್ದರೆ, ಆಲಸ್ಯವು ಸಮಸ್ಯೆ ಹೆಚ್ಚಾಗುತ್ತದೆ.

ಉತ್ತಮ ನಿದ್ರೆ ಮಾಡಿದ ನಂತರವೂ ನಿಮಗೆ ಪದೇ ಪದೇ ನಿದ್ದೆ ಬರುವ ಅನುಭವವಾಗುತ್ತಿದ್ದರೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇಡೀ ದಿನ ನಿಮಗೆ ದಣಿವು ಹಾಗೂ ನಿದ್ರೆ ಉಂಟಾಗಲು ಕೆಲವು ಕಾರಣಗಳಿರಬಹುದು.Feel Sleepy All Time? Ayurveda , Reasons & Solutions, kannada Tips, ಪದೇ ಪದೇ ನಿದ್ದೆ ಅನುಭವ, ಆಲಾಸ್ಯ, ಆಯುರ್ವೇದ, ಕಾರಣಗಳು, ಪರಿಹಾರ,

ತಲೆ ನೋವು
ದೇಹದ ನೋವು
ರಾತ್ರಿಯಲ್ಲಿ ನಿದ್ದೆಯ ಕೊರತೆ
ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು
ಕೆಲಸ ಅಥವಾ ಅಧ್ಯಯನದಲ್ಲಿ ಏಕಾಗ್ರತೆ ಕೊರತೆ
ಒತ್ತಡ ಮತ್ತು ಖಿನ್ನತೆ
ದೈನಂದಿನ ವೇಳಾಪಟ್ಟಿ ನಿಭಾಯಿಸುವಲ್ಲಿ ತೊಂದರೆ
ಅಜೀರ್ಣ
ಬೇಸರ

ಆಯುರ್ವೇದದ ಪ್ರಕಾರ, ಆಗಾಗ ನಿದ್ರೆ ಬರಲು ಕಾರಣವೇನು.. ?

ಇಡೀ ದಿನ ನಿಮಗೆ ನಿದ್ರೆ ಬರಲು ಹಲವು ಕಾರಣಗಳಿವೆ ಎಂದು ಆಯುರ್ವೇದ ಹೇಳುತ್ತದೆ. ಕಾರಣಗಳು ದೈಹಿಕ ಬದಲಾವಣೆಗಳು ಅಥವಾ ಮಾನಸಿಕ ಒತ್ತಡಕ್ಕೆ ಸಂಬಂಧಿಸಿರಬಹುದು.Feel Sleepy All Time? Ayurveda , Reasons & Solutions, kannada Tips, ಪದೇ ಪದೇ ನಿದ್ದೆ ಅನುಭವ, ಆಲಾಸ್ಯ, ಆಯುರ್ವೇದ, ಕಾರಣಗಳು, ಪರಿಹಾರ,

ಅನುಚಿತ ನಿದ್ರೆಯ ವೇಳಾಪಟ್ಟಿ!

ಹಗಲಿನಲ್ಲಿ ನಿದ್ರೆ ಬರುವ ಮುಖ್ಯ ಕಾರಣವೆಂದರೆ ರಾತ್ರಿಯಲ್ಲಿ ಕನಿಷ್ಠ ಆರರಿಂದ ಏಳು ಗಂಟೆಗಳ ಕಾಲ ಸಾಕಷ್ಟು ನಿದ್ರೆ ಮಾಡದೇ ಇರುವುದು. ನೀವು ಮಲಗುವ ಮುನ್ನ ಮೂರರಿಂದ ನಾಲ್ಕು ಗಂಟೆಗಳ ಮೊದಲು ಕೆಫೀನ್ (ಚಹಾ, ಕಾಫಿ) ಸೇವಿಸುವುದನ್ನು ನಿಲ್ಲಿಸಬೇಕು,.

ಒತ್ತಡ..!

ಒತ್ತಡ , ಖಿನ್ನತೆ, ಕೋಪದಂತಹ ಅಂಶಗಳು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮನ್ನು ಮಂದ ಹಾಗೂ ಆಲಸ್ಯವನ್ನುಂಟು ಮಾಡಿ ಬಿಡುತ್ತದೆ. ಇದನ್ನು ನಿವಾರಿಸಲು ಒತ್ತಡದಿಂದ ದೂರವಿರಲು ಪ್ರಯತ್ನಿಸಿ.ನಿಮ್ಮ ಸಂಬಂಧ ಹಾಗೂ ಕೆಲಸದಲ್ಲಿ ಯಾವುದೇ ಸಮಸ್ಯೆಗಳಿದ್ದರೆ , ಅವುಗಳನ್ನು ಸರಿಪಡಿಸಲು ಪ್ರಯತ್ನಿಸಿ.

ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದೇ ಇದ್ದರೆ, ನಿಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಮಾತನಾಡಿ. ನೀವು ವೃತ್ತಿಪರ ಕೌನ್ಸಿಲಿಂಗ್ ಸಹ ಆಯ್ಕೆ ಮಾಡಿಕೊಳ್ಳಬಹುದು. ಇದು ನಿಮ್ಮ ಭಾವನಾತ್ಮಕ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ಎದುರಿಸಲು ಸಹಾಯ ಮಾಡುತ್ತದೆ.

ಭಾರವಾಗಿರುವ ಊಟ ತ್ಯಜಿಸಿ!

ರಾತ್ರಿ ಸಮಯದಲ್ಲಿ ಭಾರವಾಗಿರುವ ಊಟ ಸೇವಿಸದರೆ , ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ ಎಂಬ ತಪ್ಪು ಕಲ್ಪನೆ ಅನೇಕ ಜನರಿಗೆ ಇದೆ. ಆದಾಗ್ಯೂ, ಇದು ಸೂಕ್ತವಲ್ಲ. ನಿಮ್ಮ ಭೋಜನವನ್ನು ಸಾಧ್ಯವಾದಷ್ಟು ಹಗುರವಾಗಿರಲಿ. ಸರಿಯಾದ ಮಾರ್ಗದರ್ಶನಕ್ಕಾಗಿ ನೀವು ಆಹಾರ ತಜ್ಞರನ್ನು ಸಹ ಸಂಪರ್ಕಿಸಬಹುದು.

ಸಕಾರಾತ್ಮಕ ದೃಷ್ಟಿಕೋನ..!

ಕೆಲವು ಜನರು ಸ್ವಭಾವತಃ ಹೆಚ್ಚು ಆಲಸ್ಯ ಹೊಂದಿರುತ್ತಾರೆ. ಭವಿಷ್ಯದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಹೊಂದಿರುವುದು ಮುಖ್ಯ. ಅಂತಹ ಜನರು ಯೋಗ, ಪ್ರಾರ್ಥನೆ ಮತ್ತು ಅವರ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುವ ಇತರ ಎಲ್ಲಾ ವಿಧಾನಗಳು ಅನುಸರಿಸಬಹುದು.


Feel Sleepy All Time? Ayurveda , Reasons & Solutions, kannada Tips, ಪದೇ ಪದೇ ನಿದ್ದೆ ಅನುಭವ, ಆಲಾಸ್ಯ, ಆಯುರ್ವೇದ, ಕಾರಣಗಳು, ಪರಿಹಾರ,

ಗುಪ್ತ ರೋಗಗಳು..!

ಮಧುಮೇಹದಂತಹ ಅನೇಕ ಕಾಯಿಲೆಗಳಿವೆ. ಅದು ನಿಮ್ಮ ದೇಹವನ್ನು ದುರ್ಬಲಗೊಳಿಸುವುದಲ್ಲದೇ, ಇಡೀ ದಿನ ನಿಮಗೆ ನಿದ್ರೆಯ ಅನುಭವವಾಗಬಹುದು. ಹಾಗಾಗಿ ಸರಿಯಾದ ವೈದ್ಯರನ್ನು ಸಂಪರ್ಕಿಸಿ, ತಪಾಸಣೆಗಳನ್ನು ಮಾಡಿಸಿಕೊಳ್ಳಬಹುದು.

ಅಜೀರ್ಣ ಸಮಸ್ಯೆ !

ಅಜೀರ್ಣ ಸಮಸ್ಯೆ ನಿಮಗೆ ನಿದ್ರೆ ಹಾಗೂ ಆಲಸ್ಯವನ್ನುಂಟು ಮಾಡುತ್ತದೆ. ಈ ಪರಿಸ್ಥಿತಿಯನ್ನು ತಪ್ಪಿಸಲು, ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಶುಂಠಿ ಮತ್ತು ಮೆಣಸಿನಕಾಯಿಯಂತಹ ಹಲವು ನೈಸರ್ಗಿಕ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇಲ್ಲವೇ ಶುಂಠಿ ಚಹಾ ಸಹ ಸೇವಿಸಬಹುದು.

ತಾಲೀಮು ಕೊರತೆ

ಸೋಮಾರಿತನ ಹೆಚ್ಚಾಗಲು ತಾಲೀಮು, ವ್ಯಾಯಾಮದ ಕೊರತೆ ಕಾರಣವಾಗಬಹುದು. ಸೋಮಾರಿತನ ಹೋಗಲಾಡಿಸಲು ಸರಳವಾದ ವ್ಯಾಯಾಮಗಳನ್ನು ಅಳವಡಿಸಿಕೊಳ್ಳಬಹುದು. ತಾಲೀಮು ನಿಯಮಿತವಾಗಿ ಮಾಡಿದರೆ, ನಿಮ್ಮ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ದೊರೆಯುತ್ತದೆ. ಇದ್ರಿಂದಾಗಿ ನೀವು ತಾಜಾತನ ಅಲುಭವಿಸುತ್ತೀರಿ.Feel Sleepy All Time? Ayurveda , Reasons & Solutions, kannada Tips, ಪದೇ ಪದೇ ನಿದ್ದೆ ಅನುಭವ, ಆಲಾಸ್ಯ, ಆಯುರ್ವೇದ, ಕಾರಣಗಳು, ಪರಿಹಾರ,

ತಾಜಾ ಗಾಳಿ

ತಾಜಾ ಗಾಳಿ ನಿಮ್ಮ ಕೋಣೆಯಲ್ಲಿ ಪ್ರವೇಶಿಸುವಂತಿರಬೇಕು. ನಿಮ್ಮ ಕೋಣೆಗೆ ಗಾಳಿ ಪ್ರವೇಶಿಸಿದೆಯೇ .. ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅಲ್ಲದೇ ನಿಮ್ಮ ಕೋಣೆ ಗಾಳಿ, ಬೆಳಕಿನಿಂದ ಕೂಡಿರಲಿ. ಡಾರ್ಕ್ ಕೋಣೆಯಲ್ಲಿ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

ಕುಳಿತುಕೊಳ್ಳುವ ಭಂಗಿ ಸರಿಯಾಗಿರಲಿ..!

ಕುಳಿತುಕೊಳ್ಳುವ ಭಂಗಿಯೂ ನಿಮಗೆ ನಿದ್ರೆ ಮತ್ತು ಆಲಸ್ಯವನ್ನುಂಟು ಮಾಡುತ್ತದೆ. ನೇರ ಮತ್ತು ಎಚ್ಚರಿಕೆಯ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಪ್ರಾಣಾಯಾಮ ಮಾಡಿ

ಪ್ರಾಣಾಯಾಮದಂತಹ ಕೆಲ ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಅಲ್ಲದೇ ಯೋಗಾಭ್ಯಾಸ ಮಾಡಬಹುದು. ನಿಮ್ಮ ದೇಹವನ್ನು ಚೆನ್ನಾಗಿ ಪೋಷಿಸಿ ಮತ್ತು ಪೌಷ್ಠಿಕಾಂಶವಿರುವ ಆಹಾರಗಳೊಂದಿಗೆ ಹೈಡ್ರೀಕರಿಸಿ. ನಿಮ್ಮ ಆಹಾರದಲ್ಲಿ ಹೆಚ್ಚಿನ ಹಣ್ಣುಗಳನ್ನು ಸೇವಿಸಿ. ಅಲ್ಲದೇ, ಧೂಮಪಾನ ಹಾಗೂ ಮಧ್ಯಪಾನ ಸೇವನೆ ತ್ಯಜಿಸುವುದು ಪ್ರಮುಖ ಸಲಹೆಗಳಲ್ಲಿ ಒಂದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ