ಉಪವಾಸ ಮಾಡೋದ್ರಿಂದ ಲಾಭ-ನಷ್ಟಗಳು

  • by

ವಿಶ್ವದ ಎಲ್ಲಾ ಧರ್ಮಗಳಲ್ಲಿ ಉಪವಾಸಕ್ಕೆ ಮಹತ್ವದ ಸ್ಥಾನವಿದೆ.  ಪ್ರಪಂಚದ ಎಲ್ಲಾ ಧರ್ಮಗಳಲ್ಲಿ, ದೇವರನ್ನು ಸಮೀಪಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಉಪವಾಸವನ್ನು ಪರಿಗಣಿಸಲಾಗುತ್ತದೆ. ಉಪವಾಸವು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ಉಪವಾಸವನ್ನು ಖಾಲಿ ಇಡುವ ಅಭ್ಯಾಸವಾಗಿದೆ. ಉಪವಾಸವು ಪ್ರತಿ ರೋಗಕ್ಕೂ ಪರಿಹಾರವಾಗಬಲ್ಲದ್ದದು, ದೇಹದಿಂದ ವಿಷಕಾರಿ ಅಂಶಗಳನ್ನು ತೊಡೆದು ಹಾಕಲು ಉಪವಾಸ ನೆರವಾಗುತ್ತದೆ. 

ಉಪವಾಸ ಮಾಡುವುದರಿಂದ ದೇವರಿಗೆ ಮೆಚ್ಚುಕೆಯಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಧಾರ್ಮಿಕ ಮನೋಭಾವ ಉಳ್ಳವರು, ತಿಂಗಳಿಗೊಮ್ಮೆಯಾದರೂ ಉಪವಾಸ ವ್ರತವನ್ನು ಮಾಡುತ್ತಾರೆ. ತಿಂದುಂಡು ಸುಖ ಪಡುವ ದೇಹಕ್ಕೆ ಹಸಿವಿನ ಅರಿವು ಆಗಬೇಕಾದರೆ, ಉಪವಾಸ ಮಾಡಿ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. 

Fasting Benefits,  Side Effects, 
ಉಪವಾಸ,  ಲಾಭ-ನಷ್ಟಗಳು,

ಆಧುನಿಕ ಜೀವನಶೈಲಿಯಲ್ಲಿ ಸಿಕ್ಕಿದೆಲ್ಲವನ್ನು ತಿಂದು ತೇಗಿ ಹೊಟ್ಟೆ ಹಾಳು ಮಾಡಿಕೊಂಡು, ಆಸ್ಪತ್ರೆಗೆ ಒಂದಷ್ಟು ದುಡ್ಡು ಸುರಿಯುತ್ತೇವೆ. ಅದರ ಬದಲು ಆರೋಗ್ಯ ಕಾಪಾಡಿಕೊಳ್ಳಲು ‘ಉಪವಾಸ’ವ್ರತಾಚರಣೆಯನ್ನು ಒಂದು ಅಸ್ತ್ರದಂತೆ ಬಳಸಿಕೊಳ್ಳಬಹುದು. ಪ್ರಕೃತಿ ಚಿಕಿತ್ಸೆಯು ಉಪವಾಸವನ್ನು ಹೇಗೆ.. ಎಲ್ಲಿ ಮಾಡಬೇಕು ಎಂಬುದಕ್ಕೆ ಪ್ರಾಶಸ್ಯ ನೀಡಲಾಗುತ್ತದೆ. ವ್ಯಕ್ತಿಯ ಉಪವಾಸದಲ್ಲಿ ತೊಡಗಿದಾಗ ಜೀರ್ಣಾಂಗದ ಶ್ರಮವು ಕಡಿಮೆಯಾಗಿ ಜೀರ್ಣಾಂಗವು ಬಲಿಷ್ಠಗೊಂಡು ದೇಹದಲ್ಲಿ ಉತ್ಪತ್ತಿಯಾಗುವ ವಿಷವನ್ನು ಹೊರಹಾಕಿ ರೋಗ ಶಮನ ವಾಗುತ್ತದೆ. ಮನುಷ್ಯನ ಆರೋಗ್ಯದ ಹಿತಕ್ಕಾಗಿ ವಾರದಲ್ಲಿ ೧ ದಿನ ಅಥವಾ ಕನಿಷ್ಠ ೧೫ ದಿನಗಳಿಗೆ ಒಮ್ಮೆಯಾದರೂ ೧ ದಿನ ಉಪವಾಸ ಮಾಡಬೇಕು. 

ಉಪವಾಸ ಮಾಡೋದ್ರಿಂದ ಏನೆಲ್ಲಾ ಲಾಭಗಳಿವೆ. 

ನಮ್ಮ ಜೀವನ ಶೈಲಿಯಲ್ಲಿ ದಿನದಿಂದ ದಿನಕ್ಕೆ ಆರೋಗ್ಯ ಸುಧಾರಿಸಲು ಉಪವಾಸ ಅತ್ಯಗತ್ಯವಾಗಿದೆ. ದೇಹದ ಜೀರ್ಣಕ್ರಿಯೆ ಯನ್ನು ಸರಿಪಡಿಸಲು ಉಪವಾಸ ಮುಖ್ಯ ಪಾತ್ರ ವಹಿಸುತ್ತದೆ. ಹಾಳಾದ ಜೀರ್ಣಕ್ರಿಯೆಯನ್ನು ಸರಿ ಪಡಿಸಲು ವಾರಕ್ಕೊಮ್ಮೆ ಹಾಗೂ ತಿಂಗಳಿಗೊಮ್ಮೆಯಾದರೂ ಉಪವಾಸವಿರಬೇಕು ಎಂದು ಹೇಳುವವರನ್ನು ಕೇಳುತ್ತೇವೆ. ಆದ್ರೆ ಉಪವಾಸ ಮಾಡಿದ್ರೆ ಏನೆಲ್ಲಾ ಪ್ರಯೋಜನಗಳಿವೆ, ನಷ್ಟಗಳಿಗೆ ಎಂಬುದರ ಬಗ್ಗೆ ಡಿಟೇಲ್ಸ್ ಇಲ್ಲಿದೆ. 

ಉಪವಾಸ ಮಾಡೋದ್ರಿಂದ ದೇಹದ ತೂಕ ಇಳಿಕೆಗೆ ಕಾರಣವಾಗುತ್ತದೆ. ಪಥ್ಯ ಮಾಡುವುದರಿಂದ ಹೆಚ್ಚಾಗಿ ಕೊಬ್ಬಿನ ಕೋಶಗಳನ್ನು ಬರ್ನ್ ಮಾಡಲು ಅವಕಾಶ ಕಲ್ಪಿಸುತ್ತದೆ. 


Fasting Benefits,  Side Effects, 
ಉಪವಾಸ,  ಲಾಭ-ನಷ್ಟಗಳು,

ಉಪವಾಸ ಹೇಗಿರಬೇಕು

ತಿಂಗಳಿಗೊಮ್ಮೆ ಹಾಗೂ ವಾರಕ್ಕೊಮ್ಮೆ ಉಪವಾಸ ಮಾಡುವುದು ಮುಖ್ಯ. ಆರೋಗ್ಯ ದೃಷ್ಟಿಯಿಂದ ಉಪವಾಸ ಒಳ್ಳೆಯದು ಎಂದು ಹೇಳಲಾಗುತ್ತದೆ. ಉಪವಾಸ ಮಾಡಿದರೆ ಆರೋಗ್ಯ ಸಮಸ್ಯೆ ಉಲ್ಭಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಉಪವಾಸ ಸರಿಯಾದ ರೀತಿಯಲ್ಲಿ ಮಾಡಬೇಕು. ದೇಹದಲ್ಲಿನ ಪರಿಸ್ಥಿತಿಯನ್ನು ಸರಿಯಾಗಿ ಪಾಲಿಸದಿದ್ದರೆ. ಅನಾರೋಗ್ಯ ಕಾಡಬಹುದು. 

ಉಪವಾಸದ ಪ್ರಯೋಜನಗಳು 

ತ್ವಚೆ ಸಮಸ್ಯೆ ಹೋಗಲಾಡಿಸುವಲ್ಲಿ ಉಪವಾಸ ತುಂಬಾ ಮಹತ್ವಕಾರಿಯಾಗಿದೆ. ಉಪವಾಸದಿಂದ ದೇಹದ ತೂಕ ಸಮ ಪ್ರಮಾಣದಲ್ಲಿ ಇಡಲು ಸಾಧ್ಯವಾಗುತ್ತದೆ. ಅಲ್ಲದೇ, ಮಾನಸಿಕ ಆರೋಗ್ಯಕ್ಕೂ ಉಪವಾಸ ತುಂಬಾ ಉತ್ತಮವಾದದ್ದು. ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸಬಹುದು. ಅಲ್ಲದೇ, ಚಯಾಪಚಯವನ್ನು ವೇಗಗೊಳಿಸುತ್ತದೆ. ಉಪವಾಸವು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ನೀಡುತ್ತದೆ. ಇದು ದೀರ್ಘಾಯುಷ್ಯಕ್ಕೂ ಉಪವಾಸ ಒಳ್ಳೆಯದು. ನೀವು ಕಡಿಮೆ ತಿನ್ನುವುದರಿಂದ ಹೆಚ್ಚು ಕಾಲ ಬದುಕುತ್ತೀರಿ. ಕೆಲವು ಅಧ್ಯಯನಗಳು ಈಗಾಗ್ಲೇ ಇದನ್ನು ಸಾಬೀತು ಪಡಿಸಿವೆ. 


Fasting Benefits,  Side Effects,  
ಉಪವಾಸ,  ಲಾಭ-ನಷ್ಟಗಳು,

ಉಪವಾಸದಲ್ಲಿ ಎಷ್ಟು ಪ್ರಕಾರಗಳು

ಉಪವಾಸದಲ್ಲಿ ವಿವಿಧ ಪ್ರಕಾರಗಳಿವೆ. ದ್ರವಾಹಾರ, ಒಪ್ಪೊತ್ತು. ಸಂಪೂರ್ಣ ಉಪವಾಸ, ಫಲಾಹಾರ, ನಮ್ಮ ಆರೋಗ್ಯ ಮತ್ತು ಖುತುಮಾನಕ್ಕೆ ತಕ್ಕಂತೆ ಯಾವುದಾದರೂ ಒಂದು ರೀತಿಯ ಉಪವಾಸವನ್ನು ಫಾಲೋ ಮಾಡಬಹುದು. ದಿನವಿಡೀ ಉಪವಾಸವಿದ್ದು ಕೆಲವರು, ರಾತ್ರಿ ಹೊಟ್ಟೆ ತುಂಬಾ ಊಟ ಮಾಡಲು ಬಯಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವಲ್ಲ. ಹೊಟ್ಟೆ ತುಂಬಾ ತಿನ್ನುವುದರಿಂದ ಜೀರ್ಣಶಕ್ತಿ ನಾಶವಾಗಿ ಹೋಗುತ್ತದೆ. ಹಾಗೂ ಉಪವಾಸ ಮುಗಿದ ಮರುದಿನ ಬೇಯಿಸಿದ ಆಹಾರ, ಹಸಿ ತರಕಾರಿ ತಿನ್ನಬೇಕು. ಜಿಡ್ಡಿರುವ ಆಹಾರ, ಸಂಸ್ಕರಿಸಿದ ಆಹಾರಗಳನ್ನು ಸೇವಿಸಬಾರದು. 

ಉಪವಾಸ ಮಾರ್ಗದರ್ಶನದ ಮೇರೆಗೆ ಮಾಡಿ.. 

ಮುಖ್ಯವಾಗಿ ಉಪವಾಸವನ್ನು ಮಾರ್ಗದರ್ಶನದ ಮೇರೆಗೆ ಮಾಡಬೇಕಾಗುತ್ತದೆ.  ಗ್ಯಾಸ್ಟ್ರಿಕ್ ಸಮಸ್ಯೆ, ಹೃದ್ರೋಗ, ಮಧುಮೇಹ ಸಮಸ್ಯೆ ಇರುವವರು ಉಪವಾಸವನ್ನು ವೈದ್ಯರ ಸಲಹೆ ಮೇರೆಗೆ ಮಾಡಬೇಕಾಗುತ್ತದೆ.  ಇನ್ನುಳಿದ ಯಾರು ಬೇಕಾದರೂ ಉಪವಾಸವನ್ನು ಮಾಡಬೇಕು.  

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ