ಜಂಕ್ ಫುಡ್ ಹೆಚ್ಚಾಗಿ ತಿನ್ನುತ್ತೀರಾ.. ? ಆರೋಗ್ಯಕ್ಕೆ ದುಷ್ಪರಿಣಾಮಗಳೇನು!

  • by

ಮನೆಯಲ್ಲಿ ಊಟ, ಉಪಹಾರ ಬಿಟ್ಟು ಇತ್ತೀಚೆಗೆ ಫಾಸ್ಟ್ ಫುಡ್ ಹೋಗಿ ಸೇವಿಸುವವರ ಸಂಖ್ಯೆ ಹೆಚ್ಚಿದೆ. ಜಂಕ್ ಫುಡ್ ತಿಂದು ಅನಾರೋಗ್ಯ ಹೆಚ್ಚಾಗಿವೆ.  ಪಿಜ್ಜಾ, ಬರ್ಗರ್, ಜೈನೀಸ್ ತಿಂಡಿಗಳು ಯುವಕರನ್ನು, ಮಕ್ಕಳನ್ನು ಸೆಳೆಯುತ್ತಿವೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಕರಗಲು ತಿಂಡಿ ತಿನ್ನುತ್ತಿರುವುದು ಯಾವೆಲ್ಲಾ ಅನಾರೋಗ್ಯಗಳು ಕಾಡಬಹುದು. ಇಲ್ಲಿದೆ ಉದಾಹರಣೆ.

ಜಂಕ್ ಫುಡ್ ಸೇವನೆ ಮಾಡುವುದರಿಂದ ಟೈಪ್ ೨ ಡಯಾಬಿಟೀಸ್ ರೋಗ ಕಾಡಬಹುದು. ಮಧುಮೇಹ ಸೇರಿದಂತೆ ಅನೇಕ ದೈಹಿಕ ಕಾಯಿಲೆಗಳು ಹಲವಾರು ದೀರ್ಘಕಾಲಿಕ ರೋಗಗಳನ್ನು ನಿಮ್ಮನ್ನು ಕಾಡಬಹುದು. ಈ ಆಹಾರದಲ್ಲಿ ಸೋಡಿಯಂ , ಸಕ್ಕರೆ, ಮತ್ತು ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಹೆಚ್ಚಿನ ಜಂಕ್ ಆಹಾರಗಳು ಕಾರ್ಬೋಹೈಡ್ರೇಟ್ ಗಳಿಂದ ತುಂಬಿರುತ್ತವೆ. ಮತ್ತು ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಲು ಕಾರಣವಾಗಬಹುದು. 

ಹೃದ್ರೋಗ ಸಮಸ್ಯೆ ಹೆಚ್ಚಳ!

ಜಂಕ್ ಆಹಾರ ಹಾಗೂ ಸ್ಯಾಚುರೇಟೆಡೆ ಕೊಬ್ಬುಗಳು ಮತ್ತು ಟ್ರಾನ್ಸ್ ಕೊಬ್ಬುಗಳಿಂದ ತುಂಬಿರುತ್ತದೆ. ಇದು ನಿಮ್ಮ ಎಚ್ ಡಿಎಲ್ ತಗ್ಗಿಸಿ ಎಲ್ ಡಿಎಲ್ ಅನ್ನು ಹೆಚ್ಚಿಸಬಹುದು. ಪರಿಣಾಮ ಟೈಪ್ ೨ ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಯ ಅಪಾಯ ಹೆಚ್ಚುತ್ತದೆ. 

ತೂಕದಲ್ಲಿ ಹೆಚ್ಚಳ..!

ಇನ್ನು ಜಂಕ್ ಫುಡ್ ಸೇವನೆ ಮಾಡುವುದರಿಂದ ತೂಕ ಹೆಚ್ಚಳವಾಗುವ ಸಂಭವ ಹೆಚ್ಚಾಗಿದೆ. ಹೆಚ್ಚು ಕ್ಯಾಲೋರಿ , ಕಕಡಿಮೆ ಪೌಷ್ಟಿಕಾಂಶ ಹೊಂದಿರುತ್ತದೆ. ಸಕ್ಕರೆ ಮತ್ತು ಕೊಬ್ಬು ದೇಹದಲ್ಲಿ ಹೆಚ್ಚಾದಾಗ ಹೃದ್ರೋಗ ಸಮಸ್ಯೆಗಳನು ನಿಮ್ಮನ್ನು ಕಾಡಬಹುದು. 

ಕಿಡ್ನಿಗೆ ಹಾನಿ ಯಾಗುವ ಸಂಭವ ಹೆಚ್ಚು!

ಜಂಕ್ ಫುಡ್ ತಿನ್ನುವುದರಿಂದ ಕಿಡ್ನಿಗೆ ಅಪಾಯ ಹೆಚ್ಚಾಗುವ ಸಂಭವ ಹೆಚ್ಚು. ಓವರ್ ವೇಟ್ ಅಲ್ಲದಿದ್ದರೂ ಮದ್ಯದಂತೆ ಜಂಕ್ ಫುಡ್ ಕೂಡಾ ಲಿವರ್ ಗೆ ಹಾನಿಯನ್ನುಂಟು ಮಾಡುತ್ತದೆ. 

ಇನ್ನು ಜಂಕ್ ಫುಡ್ ತಿನ್ನುವುದರಿಂದ ಉಸಿರಾಟದ ತೊಂದರೆ ಹೆಚ್ಚಾಗಬಹುದು. ಕ್ಯಾಲೋರಿಯುಕ್ತ ಆಹಾರ ಸೇವಿಸುವುದೆಂದರೆ ಬೊಜ್ಜು ಅಥವಾ ಅಧಿಕ ತೂಕ ಹೆಚ್ಚಾಗುವ ಅಪಾಯ ಹೆಚ್ಚುತ್ತಿದೆ ಎಂದರ್ಥ. ಅಸ್ತಮಾ ಸೇರಿದಂತೆ ಉಸಿರಾಟದ ತೊಂದರೆಯನ್ನು ಉಂಟು ಮಾಡುವ ಸಾಧ್ಯತೆಯನ್ನು ಬೊಜ್ಜು  ಹೆಚ್ಚಿಸಬಹುದು. 

ಮಕ್ಕಳ ಅನಾರೋಗ್ಯಕ್ಕೆ ಹೇಗೆ ಪರಿಣಾಮ ಬೀರತ್ತದೆ..?

ಮಕ್ಕಳು ಸೇವಿಸುವ ಜಂಕ್ ಫುಡ್ ಪ್ರಮಾಣವನ್ನು ಖಂಡಿತವಾಗಿಯೂ ಕಡಿಮೆ ಮಾಡಬೇಕು. ಯಾವ ವಯಸ್ಸಿನಲ್ಲಿ ಹೇಗೆ ಆಹಾರ ಆಯ್ಕೆ ಮಾಡಬೇಕು ಎಂದು ಅವರಿಗೆ ತಿಳಿದಿರಲ್ಲ. ಆಗ ಯಾವಲ್ಲಾ ಆಹಾರ ಸೇವಿಸಬೇಕು ಎಂಬುದನ್ನು ಮನದಟ್ಟು ಮಾಡಬೇಕು. ಉಪಹಾರ, ತಿನಿಸುಗಳು ನೀಡಿದರೂ ಆರೋಗ್ಯಕರ ವಾಗಿರುವುದನ್ನೇ ನೀಡಬೇಕು. ಆಗಾಗ ಜಂಕ್ ಫುಡ್ ಗಳನ್ನು ನೀಡದೇ. ಪಾರ್ಟಿಯಂತಹ ಕೆಲವು ವಿಶೇಷ ಸಂದರ್ಭದಲ್ಲಿ ಮಾತ್ರ ಜಂಕ್ ಆಹಾರಗಳಿಂದ ದೂರ ಇಡಬೇಕು. ಆರೋಗ್ಯಕರ ಆಹಾರ ಶೈಲಿಯನ್ನು ಯಾಕೆ ರೂಢಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡಲು ಜಂಕ್ ಆಹಾರ ಶೈಲಿಯಿಂದ ಹಿಡಿದು ಎಲ್ಲವನ್ನು ನಿಯಂತ್ರಿಸಬೇಕಾಗುತ್ತದೆ.  ವಿವಿಧ ಬಗೆಯ ಆಹಾರಗಳು ಮತ್ತು ಅವುಗಳ ಪೌಷ್ಟಿಕಾಂಶ ಮಹತ್ವ. ಮತ್ತು ಮೌಲ್ಯದ ಬಗ್ಗೆ ನಾವು ತಿಳಿಸಿಕೊಳಬಹುದು. 

ಮಕ್ಕಳು ಬೆಳೆದು ಆಹಾರದ ವಿಚಾರದಲ್ಲಿ ಅವರು ಹೆಚ್ಚು ಸ್ವಾವಲಂಬಿಗಳಾದಾಗ ಅದು ತನಕ ನಿಷೇಧಿಸಿದ್ದನ್ನು ಹೆಚ್ಚು ಪ್ರಯತ್ನಿಸುವ ಆಸಕ್ತಿ ಅವರಲ್ಲಿ ಉಂಟಾಗುತ್ತದೆ. ಆಗ ಇಂತಹ ಆಹಾರಗಳನ್ನು ವರ್ಜಿಸುವುದನ್ನು ಕಲಿಸಬೇಕಾಗಿಲ್ಲ. ಅವುಗಳು ಆರೋಗ್ಯಕ್ಕೆ ಏಕೆ ಹಾನಿಕಾರಕ ಎಂಬುದನ್ನು ಹೇಳಿಕೊಡಬೇಕು. ಹೇಳಿಕೊಟ್ಟರೆ ಆರೋಗ್ಯಕರ ತಿನಿಸುಗಳನ್ನು ಅವರೇ ಆಯ್ಕೆ ಮಾಡುತ್ತಾರೆ. 

 ತಿನ್ನಬಾರದು ಎನ್ನಬೇಡಿ..! 

ಮಕ್ಕಳಿಗೆ ಜಂಕ್ ಫುಡ್ ತಿನ್ನಬಾರದು ಎಂದು ಹೇಳಬೇಡಿ. ಸಭೆ, ಸಮಾರಂಭದಲ್ಲಿ ಕೇಕ್ , ಚಾಕಲೇಟ್, ಐಸ್ ಕ್ರೀಂ, ಪಿಜ್ಜಾ ಇತ್ಯಾದಿಗಳು ಕಣ್ಮನ ಸಳೆದೇ ಸೆಳೆಯುತ್ತವೆ. ಆಗ ತಿನ್ನಬೇಡಿ ಎಂದು ಹೇಳವುದು ಸರಿಯಲ್ಲ. ಅವರ ದೇಹಕ್ಕೆ ಅಗತ್ಯವಾದದ್ದು ಯಾವುದು, ಯಾಕೆ ಜಂಕ್ ಆಹಾರಗಳನ್ನು ಮಿತವಾಗಿ ಸೇವಿಸಬೇಕು. ಪ್ರತಿ ದಿನ ಸಮತೋಲಿತ ಆಹಾರ ಸೇವಿಸಲು ತಿಳಿಸಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ