ಪುರುಷರ ಫೇಸ್ ವೈಟ್ನಿಂಗ್ ಕ್ರೀಮ್ ಗಳು..

  • by

ಟಾಪ್ 5 ಪುರುಷರ ವೈಟ್ನಿಂಗ್ ಕ್ರೀಮ್
ಪುರುಷರಿಗಾಗಿ ವೈಟ್ನಿಂಗ್ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಇದೀಗ ಲಭ್ಯವಿದ್ದು ಇದು ತ್ವಚೆಯನ್ನು ಬೆಳ್ಳಗಾಗಿಸಿ ಮುಖವನ್ನು
ಸುಂದರ ಮತ್ತು ಕಾಂತಿಯುಕ್ತವನ್ನಾಗಿಸುತ್ತದೆ. ನಿಸರ್ಗದ ಹಾನಿಕಾರಕ ಅಂಶಗಳಿಂದ ಪುರುಷರ ತ್ವಚೆಯನ್ನು ಸಂರಕ್ಷಿಸುವ ಅಂಶವನ್ನು
ಕೂಡ ವೈಟ್ನಿಂಗ್ ಕ್ರೀಮ್‌ಗಳು ಒಳಗೊಂಡಿವೆ. ವೈಟ್ನಿಂಗ್ ಕ್ರೀಮ್‌ಗಳನ್ನು ಪುರುಷರು ಏಕೆ ಬಳಸಬೇಕೆಂದರೆ ಇದು ನಿಸ್ತೇಜ ತ್ವಚೆಗೆ
ಪುನರುಜ್ಜೀವನ್ನು ಒದಗಿಸುತ್ತದೆ. ಇದು ಪೋಷಣೆ ಮತ್ತು ನೈಸರ್ಗಿಕ ಹೊಳೆಯುವಿಕೆಯನ್ನು ಒದಗಿಸುತ್ತದೆ. ಪುರುಷರದ್ದು ದಪ್ಪನೆಯ
ತ್ವಚೆಯಾದ್ದರಿಂದ ವೈಟ್ನಿಂಗ್ ಕ್ರೀಮ್‌ಗಳು ತ್ವಚೆಯ ಪೋಷಕಾಂಶವನ್ನು ಲಾಕ್ ಮಾಡಿ ಮುಖದ ರಕ್ಷಣೆಯನ್ನು ಮಾಡುತ್ತದೆ.

ಗಾರ್ನಿಯರ್ ಮೆನ್ ಆಯಿಲ್ ಕ್ಲಿಯರ್
ಗಾರ್ನಿಯರ್ ಮೆನ್ ಆಯಿಲ್ ಕ್ಲಿಯರ್ ತ್ವಚೆಯಲ್ಲಿ ಉತ್ಪದನೆಗೊಳ್ಳುವ ಜಿಡ್ಡಿನ ನಿಯಂತ್ರಣವನ್ನು ಮಾಡುತ್ತದೆ. ಇದು
ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ ಅಂತೆಯೇ ಮೊಡವೆ ಕಪ್ಪು ಕಲೆಗಳಿಂದ ಸಂರಕ್ಷಣೆಯನ್ನು ಒದಗಿಸುತ್ತದೆ. ಇದರಲ್ಲಿ ಲಿಂಬೆಯ
ಸಾರವಿದ್ದು ಇದು ಒಳ್ಳೆಯ ಬ್ರ್ಯಾಂಡ್ ಎಂದು ಹೆಸರುವಾಸಿಯಾಗಿದೆ.

ನಿವಿಯಾ ಮೆನೆ ವೈಟ್ನಿಂಗ್ ಕ್ರೀಮ್
ನಿವಿಯಾದ ಈ ಕ್ರೀಮ್ 10 ಪ್ರಕಾರದ ಪೋಷಕ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ಇದು ಹೆಚ್ಚಿನ ಜಿಡ್ಡಿನಂಶವನ್ನು ತಡೆಯುತ್ತದೆ.
12 ಗಂಟೆಗಳವರೆಗೆ ತ್ವಚೆಗೆ ಪೋಷಣೆಯನ್ನು ಒದಗಿಸುತ್ತದೆ. ಮೊಡವೆಯನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ಇದು
ತಡೆಯುತ್ತದೆ. ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ವೈಟ್ನಿಂಗ್ ಕ್ರೀಮ್‌ಗಳಲ್ಲಿ ಇದು ಒಂದಾಗಿದೆ.

ನಿವಿಯಾ ಮೆನ್ ಡಾರ್ಕ್ ಸ್ಪಾಟ್ ರಿಡಕ್ಶನ್ ಕ್ರೀಮ್
ನಿವಿಯಾ ಮೆನ್ ಡಾರ್ಕ್ ರಿಡಕ್ಶನ್ ಕ್ರೀಮ್ ಯುವಿ ಫಿಲ್ಟರ್‌ಗಳನ್ನು ಒಳಗೊಂಡಿದ್ದು ಇದು ಮುಖದಲ್ಲಿರುವ ಕಪ್ಪು ವರ್ತುಗಳನ್ನು
ತಡೆಯುತ್ತದೆ. ಇದು ಅಲ್ಟ್ರಾ ಲೈಟ್ ಆಗಿದ್ದು ಗ್ರೀಸಿ ಅಲ್ಲದ ಕ್ರೀಮ್ ಆಗಿದೆ. ಇದು ನಿಮ್ಮ ಮುಖಕ್ಕೆ ಚೆನ್ನಾಗಿ ಹರಡುತ್ತದೆ.
ಮಾರುಕಟ್ಟೆಯಲ್ಲಿ ಒಂದೊಳ್ಳೆ ವೈಟ್ನಿಂಗ್ ಕ್ರೀಮ್ ಎಂಬುದಾಗಿ ಈ ಕ್ರೀಮ್ ಹೆಸರುವಾಸಿಯಾಗಿದೆ.

ಅವೊನ್ ಫಾರ್ ಮೆನ್ ಬ್ರೈಟ್ನಿಂಗ್ ಕ್ರೀಮ್
ಪುರುಷರ ಬ್ರೈಟ್ನಿಂಗ್ ಕ್ರೀಮ್ ನಿಮ್ಮ ತ್ವಚೆಯಲ್ಲಿರುವ ಮೆಲನಿನ್ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಇದು ಪ್ರೊ ವೈಟ್ 5 ಇನ್
ಒನ್ ಕಾಂಪ್ಲೆಕ್ಸ್ ಅನ್ನು ತನ್ನಲ್ಲಿ ಹೊಂದಿದ್ದು ನಿಮ್ಮ ತ್ವಚೆಗೆ ನೈಸರ್ಗಿಕ ಕಾಂತಿಯನ್ನು ಒದಗಿಸುತ್ತದೆ. ಇದು ತ್ವಚೆಯ ಕಾಂತಿಯನ್ನು
ದ್ವಿಗುಣಗೊಳಿಸುತ್ತದೆ ಮತ್ತು ನೈಸರ್ಗಿಕ ಕಾಂತಿಯನ್ನು ಕೂಡ ನೀಡುತ್ತದೆ.

ಲೋಟಸ್ ಹರ್ಬಲ್ಸ್ ಸ್ಕಿನ್ ವೈಟ್ನಿಂಗ್ ಕ್ರೀಮ್
ಇದು ಎಸ್‌ಪಿಎಫ್ – 25 ಅಂಶವನ್ನು ಒಳಗೊಂಡಿದ್ದು ಮಲ್‌ಬೆರ್ರಿ, ಸ್ಯಾಕ್ಸಿಫ್ರಾಗಾ ಮತ್ತು ಗ್ರೇಪ್ ಅಂಶಗಳನ್ನು ಒಳಗೊಂಡಿದೆ.
ಇದು ತ್ವಚೆಯ ಡಲ್‌ನೆಸ್ ನಿವಾರಿಸುತ್ತದೆ. ಇದು ಜೆಲ್ ರೂಪದಲ್ಲಿದ್ದು ನಿಮ್ಮ ತ್ವಚೆಯಲ್ಲಿ ಚೆನ್ನಾಗಿ ಹರಡುತ್ತದೆ ಮತ್ತು
ಬೇಸಿಗೆಯಲ್ಲಿ ಇದು ಬೆವರುವಂತೆ ಮಾಡುವುದಿಲ್ಲ.

ಇನ್ನು ಈ ಕ್ರೀಮ್‌ನ ಬಳಕೆಯೊಂದಿಗೆ ಪುರುಷರು ಮನೆಯಲ್ಲಿ ತ್ವಚೆಯ ಕಾಳಜಿಯನ್ನು ಮಾಡಬೇಕು. ಇವರ ತ್ವಚೆ
ಒರಟಾಗಿರುವುದರಿಂದ ಕಾಂತಿಯುತವಾಗಿ ಕಾಣಲು ಕೆಲವೊಂದು ತ್ವಚೆಯ ಆರೈಕೆಯನ್ನು ಮಾಡಬೇಕಾಗುತ್ತದೆ. ಮುಖಕ್ಕೆ ಸೋಪು
ಹಚ್ಚುತ್ತಿದ್ದರೆ ಅದನ್ನು ನಿಲ್ಲಿಸಿ ಹೈಡ್ರೇಟಿಂಗ್ ಕ್ಲೆನ್ಸರ್ ಹಚ್ಚಿ. ವಾಟರ್ ಟೋನರ್ ಬಳಸಿ ಕ್ಲೆನ್ಸ್ ಮಾಡುವುದು ತ್ವಚೆಗೆ
ಒಳ್ಳೆಯದು. ಜಿಡ್ಡಿನ ತ್ವಚೆಯುಳ್ಳವರು ವಾರಕ್ಕೊಮ್ಮೆ ಕ್ಲೆ ಮಾಸ್ಕ್ ಹಚ್ಚಿದರೆ ಒಳ್ಳೆಯದು. ಇದರಿಂದ ಉತ್ತಮ ಫಲಿತಾಂಶ
ದೊರೆಯುತ್ತದೆ.

ಶೇವ್ ಮಾಡುವಾಗ ಗುಣಮಟ್ಟದ ರೇಝರ್ ಬಳಸಿ. ಶೇವ್ ಮಾಡುವ ಮೊದಲು ಶೇವಿಂಗ್ ಕ್ರೀಮ್ ಹಚ್ಚಿ, ಶೇವಿಂಗ್ ಮಾಡಿದ ನಂತರ
ಮಾಯಿಶ್ಚರೈಸರ್ ಹಚ್ಚಿ.

ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ ಸನ್ ಟ್ಯಾನ್ ಸಮಸ್ಯೆ ಕಂಡುಬರುತ್ತದೆ. ಮನೆಯಿಂದ ಹೊರಗೆ ಹೋಗುವ ಮೊದಲು
ಸನ್‌ಸ್ಕ್ರೀನ್ ಲೋಶನ್ ಹಚ್ಚಿ ಇದರಿಂದ ತ್ವಚೆಗೆ ಸಂರಕ್ಷಣೆ ದೊರೆಯುತ್ತದೆ.

ಇನ್ನು ಮಲಗುವ ಮುಂಚೆ ರೆಟಿನೋಲ್ ಬೇಸ್ಡ್ ಕ್ರೀಮ್ ಅಥವಾ ವಿಟಮಿನ್ ಸಿ ಅಂಶವಿರುವ ಕ್ರೀಮ್ ಅನ್ನು ಹಚ್ಚಿ.ಇದರಿಂದ ಮುಖ
ಫ್ರೆಶ್ ಆಗಿ ಕಾಣಿಸುತ್ತದೆ. ಸೋಪಿನ ಬದಲಿಗೆ ಫೇಸ್ ವಾಶ್ ಬಳಸಿ. ಮಾಯಿಶ್ಚರೈಸರ್ ಮಾಡಿ. ಬಿಸಿಲಿನಲ್ಲಿ ಓಡಾಡುವಾಗ ಸನ್‌ಸ್ಕ್ರೀನ್
ಬಳಸಿ. ಲಿಪ್ ಬಾಮ್ ಬಳಸಲು ಮರೆಯದಿರಿ. ತ್ವಚೆಯ ಅಲರ್ಜಿಗೆ ವೈದ್ಯರನ್ನು ಕೂಡಲೇ ಕಾಣಿ. ಮುಖವನ್ನು ಕರ್ಚೀಫ್‌ನಿಂದ
ಒರೆಸಬೇಡಿ ಬದಲಿಗೆ ಫೇಸ್ ಟಿಶ್ಯೂ ಬಳಸಿ. ಶುದ್ಧವಾದ ಟವೆಲ್ ಬಳಸಿ.

ಇನ್ನು ಆದಷ್ಟು ನೀರು ಕುಡಿದು ತ್ವಚೆಯನ್ನು ಹೈಡ್ರೇಟ್ ಮಾಡಿಕೊಳ್ಳಿ. ಸ್ನಾನದ ನಂತರ ಮಾಯಿಶ್ಚರೈಸ್ ಮಾಡಿಕೊಳ್ಳಲು
ಮರೆಯದಿರಿ. ಇದರಿಂದ ತ್ವಚೆ ಒರಟಾಗುವುದನ್ನು ತಡೆಯಬಹುದು. ಬಿಸಿಲಿನಲ್ಲಿ ಓಡಾಡುವಾಗ ಸನ್‌ಸ್ಕ್ರೀನ್ ಲೋಶನ್ ಹಚ್ಚಿ.
ಒಂದು ಬೌಲ್ ಸಲಾಡ್ ತಿನ್ನಿ. ವ್ಯಾಯಾಮ ಮಾಡಿ. 7-8 ಗಂಟೆ ಚೆನ್ನಾಗಿ ನಿದ್ದೆ ಮಾಡಿ.

ಚಳಿಗಾಲದಲ್ಲಿ ಗಾಳಿಯಿಂದ ಆರ್ದ್ರ ಅಥವಾ ತೇವಾಂಶ ತ್ವಚೆಗೆ ದೊರೆಯದೇ ಇರುವುದರಿಂದ ಇದನ್ನು ನಾವೇ ಮಾಡಬೇಕಾಗುತ್ತದೆ.
ತೇವಕಾರಕವನ್ನು ಆಗಾಗ್ಗೆ ಮುಖಕ್ಕೆಹಚ್ಚುತ್ತಿರಿ. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆಯನ್ನು ಒದಗಿಸುತ್ತದೆ.

ಕಣ್ಣುಗಳ ಆರೈಕೆಯನ್ನು ಕಡೆಗಣಿಸದಿರಿ ಕಣ್ಣಿನ ಸುತ್ತ ಕಪ್ಪು ವರ್ತುಲ ಬೇಗನೇ ಉಂಟಾಗುವುದರಿಂದ ಈ ಭಾಗದ ಮೇಲೆ ಹೆಚ್ಚಿನ
ಕಾಳಜಿಯನ್ನು ಮಾಡಬೇಕಾಗುತ್ತದೆ. ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ. ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ
ಮಾಡುವುದು ತ್ವಚೆಯ ಆರ್ದ್ರತೆಯನ್ನು ನಷ್ಟಗೊಳಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಆದಷ್ಟು ಉಗುರು ಬೆಚ್ಚನೆಯ ನೀರಿನಿಂದ
ಸ್ನಾನ ಮಾಡಿ. ತುಟಿಗಳಿಗೆ ಕಂಡೀಷನರ್ ಬಳಸಿ. ಆಗಾಗ್ಗೆ ಲಿಪ್‌ಬಾಮ್‌ನಿಂದ ತುಟಿಯ ಆರೈಕೆಯನ್ನು ಮಾಡುತ್ತಿರಿ. ಸುಗಂಧ
ದ್ರವ್ಯವನ್ನು ಮೈಗೆ ಹಚ್ಚಿಕೊಳ್ಳಿ. ತ್ವಚೆಗೆ ಬಾಡಿ ಲೋಶನ್ ಹಚ್ಚಿ ಆರೈಕೆ ಮಾಡಿ. ಇಡಿಯ ದಿನ ದೇಹಕ್ಕೆ ಸೂಕ್ತವಾದ ಬಾಡಿ ಲಾಶನ್
ಹಚ್ಚಿ ದೇಹದ ಆರ್ದ್ರತೆ ನಷ್ಟವಾಗದಂತೆ ನೋಡಿಕೊಳ್ಳಿ. ಇನ್ನು ಗಡ್ಡವಿದ್ದರೆ ಗಡ್ಡ ಮತ್ತು ಮೀಸೆಗೆ ಸೂಕ್ತವಾದ ತೇವಕಾರಕ
ತೈಲವನ್ನು ಹಚ್ಚಿ. ಇದರಿಂದ ಗಡ್ಡ ಸೊಂಪಾಗಿರುತ್ತದೆ ಮತ್ತು ಒಣಗಿದಂತೆ ಕಾಣುವುದಿಲ್ಲ.

ಹೀಗೆ ತ್ವಚೆಗೆ ಬೇಕಾದ ಕಾಳಜಿಯನ್ನು ಪುರುಷರು ತೆಗೆದುಕೊಂಡಾಗ ಮಾತ್ರವೇ ತ್ವಚೆಯ ಕಾಂತಿಯನ್ನು
ಪುನರುಜ್ಜೀವನಗೊಳಿಸಬಹುದು. ಕ್ರೀಮ್ ಲಾಶನ್ ಬಳಸುವುದರ ಜೊತೆಗೆ ತ್ವಚೆಗೆ ಬೇಕಾದ ಅಗತ್ಯ ಆರೈಕೆಯನ್ನು ಮಾಡಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ