ದುಬಾರಿ ಫೇಸ್ ಕ್ರೀಮ್ ನಿಂದ ದೂರವಿರಿ.. ಈ ತರಕಾರಿ ಟ್ರೈ ಮಾಡಿ!

  • by

ಪ್ರತಿಯೊಬ್ಬರು ಮುಖಕ್ಕೆ ಹೊಳಪು ಬರಲು ಫೇಸ್ ಕ್ರೀಮ್ ಹಚ್ಚಿಕೊಳ್ಳುತ್ತಾರೆ. ಆದ್ರೆ ಮಾರುಕಟ್ಟೆಯಲ್ಲಿ ಸೀಗುವ ಕ್ರೀಮ್ ಗಳನ್ನು ಬಳಸುವುದರಿಂದ  ನಿಮ್ಮ ಚರ್ಮಕ್ಕೆ ಹಾನಿಯಾಗುತ್ತದೆ. ಅಲ್ಲದೇ ಕ್ರೀಮ್ ಬಳಸಿದರೆ ಮುಖ ಕೆಲವು ದಿನಗಳವರೆಗೆ ಹೊಳಪು ಇರುತ್ತದೆ. ಮನೆಯಲ್ಲೇ ಸೀಗುವ ವಸ್ತುಗಳಿಂದ ಚರ್ಮದ ಹೊಳಪನ್ನು ಹೇಗೆ ಹೆಚ್ಚಿಸಬಹುದು. ನಾವು ನಿಮ್ಗೆ ತಿಳಿಸುತ್ತೇವೆ. 

face cream, Home Remedies, tomato , ಟಮೆಟೋ ಫೇಸ್ ಪ್ಯಾಕ್, ಉಪಯೋಗ

ಇಲ್ಲಿಯವರೆಗೆ ನೀವು ತರಕಾರಿಗಳಲ್ಲಿ ಟೊಮೆಟೊವನ್ನು ಸಾಕಷ್ಟು ಸೇವಿಸಿರುತ್ತೀರಿ. ಆದ್ರೆ ನಿಮ್ಮ ಚರ್ಮಕ್ಕೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಟೊಮೆಟೋ ಮುಖದ ಸೌಂದರ್ಯ ಹೆಚ್ಚಿಸುತ್ತದೆ. ಇದು ಸಾಕಷ್ಟು ಲೈಕೋಪೀನ್‌ ನನ್ನು ಹೊಂದಿರುತ್ತದೆ. ಚರ್ಮಕ್ಕೆ ಹಾನಿಯಾಗದಂತೆ ತಡೆಯುತ್ತದೆ. 

ಟೊಮೆಟೋ ತಿರುಳನ್ನು ತೆಗೆದುಕೊಂಡು ಹಸಿ ಹಾಲನ್ನು ಬೆರೆಸಿ ಕಾಟನ್ ಪ್ಯಾಡ್ ನೊಂದಿಗೆ ಮುಖ ಹಾಗೂ ಕುತ್ತಿಗೆಗೆ ಹಚ್ಚಬೇಕು. ಮೊದಲು ಮುಖವನ್ನು ತೊಳೆದುಕೊಳ್ಳಬೇಕು. 

ಈಗ ಮುಂದಿನ ಹಂತ ಸ್ಕಬ್ಬಿಂಗ್ ಆಗಿರುತ್ತದೆ. ಇದಕ್ಕಾಗಿ ಅರ್ಧ ಟೊಮೆಟೊ ತೆಗೆದುಕೊಂಡು ಅದರ ಮೇಲೆ ಸಕ್ಕರೆ ಹಾಕಿ, ಟೊಮೊಟೋ ಹಾಗೂ ಸಕ್ಕರೆಯೊಂದಿಗೆ ಚರ್ಮವನ್ನು ನಿಧಾನವಾಗಿ ಮಸಾಜ್ ಮಾಡಿ. ನೀವು ಕೈಗಳಿಂದ ನಿಧಾನವಾಗಿ ಮಸಾಜ್ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. 

ನಂತರ ಮುಖವನ್ನು ಹಬೆಗೆ ಹಿಡಿಯಬೇಕು.. ನಿಮ್ಮ ಹತ್ತಿರ ಎಲೆಕ್ರ್ಟಿಕ್ ಸ್ಟೀಮರ್ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ನೀರನ್ನು ಒಂದು ಪಾತ್ರೆಯಲ್ಲಿ ಬಿಸಿ ಮಾಡಿ ಮುಖವನ್ನು ಟವೆಲ್ ನಿಂದ ೫ ರಿಂದ ೧೦ ನಿಮಿಷಗಳ ಕಾಲ ಮುಚ್ಚಬೇಕು. ಸ್ಟೀಮಿಂಗ್ ಮಾಡಬೇಕು. 

face cream, Home Remedies, tomato , ಟಮೆಟೋ ಫೇಸ್ ಪ್ಯಾಕ್, ಉಪಯೋಗ

ಈಗ ಅಂತಿಮವಾಗಿ ನಾವು ಫೇಸ್ ಮಾಸ್ಕ್ ಮುಖಕ್ಕೆ ಹಚ್ಚಿಕೊಳ್ಳಿ.. ಇದಕ್ಕಾಗಿ ಶ್ರೀಗಂಧದ ಪುಡಿ ಮತ್ತು ಜೇನುತುಪ್ಪವನ್ನು ಬೆರೆಸಿ ಫೇಸ್ ಮಾಸ್ಕ್ ತಯಾರಿಸಿ. ನಂತರ ೧೫ ನಿಮಿಷಗಳ ಕಾಲ ನಿಮ್ಮ ಚರ್ಮದ ಮೇಲೆ ಹಚ್ಚಿ. ಈಗ ನಿಮ್ಮ ಮುಖವನ್ನು ನಾರ್ಮಲ್ ನೀರಿನಿಂದ ತೊಳೆಯಿರಿ. ನಂತರ ಅಲೋವೇರಾ ಜೆಲ್. ನಿಮ್ಮ ನೆಚ್ಚಿನ ಮಾಯಿಶ್ಚರೈಸರ್ ಬಳಸುವುದು ಉತ್ತಮ.  ಕೆಲವು ಫೇಸ್ ಪ್ಯಾಕ್ ಗಳನ್ನು ಬಳಸಬಹುದು.

ಟೊಮೆಟೋ ಹಾಗೂ ಆಲಿವ್ ಎಣ್ಣೆಯ ಫೇಸ್ ಪ್ಯಾಕ್

ಯಾವಾಗಲೂ ಚರ್ಮದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತಾ ಇದೆ ಎನ್ನುವವರಿಗೆ ಆಲಿವ್ ಎಣ್ಣೆ ಟೊಮೆಟೊದ ಮಾಸ್ಕ್ ತುಂಬಾ ಒಳ್ಳೆಯದು. ಒಂದು ಟೆಮೆಟೋ ತೆಗೆದುಕೊಂಡು ಅದರ ತಿರುಳು ತೆಗೆಯಿರಿ. ಇದಕ್ಕೆ ೧ ಚಮಚ ಆಲಿವ್ ಎಣ್ಣೆ ಹಾಗೂ ೧ ಚಮಚ ಜೋಜೋಬಾ ತೈಲ ಸರಿಯಾಗಿ ಮಿಶ್ರಮಾಡಿ. ಇದನ್ನು ಹದವಾದ ಪೇಸ್ಟ್ ಮಾಡಿಕೊಂಡು ಬಳಿಕ ಮುಖ ಹಾಗೂ ಕುತ್ತಿಗೆಗೆ ಹಚ್ಚಿ. ೧೦ ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. 

ಟೊಮೆಟೋ ಮುಖಕ್ಕೆ ಏಕೆ ಒಳ್ಳೆಯದು

ಟೊಮೆಟೋ ಫೇಸ್ ಪ್ಯಾಕ್ ನಲ್ಲಿ ಪೋಷಕಾಂಶಗಳು ಅಧಿಕವಾಗಿದ್ದು, ಇದರಲ್ಲಿ ಫೆಮಾಲಿಕ್ ಅಂಶಗಳು ಹೆಚ್ಚಾಗಿರುತ್ತವೆ. ಕ್ಯಾರೋಟನಾಯ್ಡ್ , ಫಾಲಿಕ್ ಆಮ್ಲ, ಮತ್ತು ವಿಟಮಿನ್ ಸಿ ಇದೆ. ಚರ್ಮಕ್ಕೆ ಲಾಭ ನೀಡಲಿದೆ. 

ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಆಂಟಿಟ್ರೋಸಿನೇಸ್ ಗುಣಗಳು ಕಲೆಗಳ ಬಣ್ಣ ಮಾಸುವಂತೆ ಮಾಡುವುದು. ಮತ್ತು ಚರ್ಮಕ್ಕೆ ಹಾನಿಯಾಗದಂತೆ ತಡೆಯುತ್ತದೆ. ವಯಸ್ಸಾಗುವ ವೇಳೆ ಕಾಣಿಸಿಕೊಳ್ಳುವ ನೆರಿಗೆ, ಗೆರೆಗಳು ಮತ್ತು ಚರ್ಮ ಜೋತು ಬೀಳುವ ಸಮಸ್ಯೆ ನಿವಾರಣೆ ಆಗುತ್ತದೆ. 

ಲೈಕೋಪೆನೆ ಎನ್ನುವ  ಅಂಶವು ಮುಖಕ್ಕೆ ಆಗುವ ಹಾನಿ ತಡೆಯುತ್ತದೆ. ವಿಟಮಿನ್ ಸಿ, ಕಾಲಜನ್ ಉತ್ಪತ್ತಿ ಸುಧಾರಿಸುತ್ತದೆ. ಚರ್ಮದ ಸ್ಥಿತಿಸ್ಥಾವಕತ್ವ ಹೆಚ್ಚಿಸುವುದು. 

ಟೊಮೊಟೋ ತಿರುಳಿನಲ್ಲಿ ಬ್ಯಾಕ್ಟೇರಿಯಾ ವಿರೋಧಿ ಮತ್ತು ಶಿಲೀಂದ್ರ ವಿರೋಧಿ ಗುಣಗಳು ಇವೆ. ಚರ್ಮದಲ್ಲಿನ ಪಿಎಚ್ ಮಟ್ಟವನ್ನು ಇದು ಸಮತೋಲನದಲ್ಲಿ ಇಡುತ್ತದೆ. ಇದ್ರಿಂದಾಗಿ ಚರ್ಮದಲ್ಲಿನ ನೈಸರ್ಗಿಕ ತೈಲ ಉತ್ಪತ್ತಿ ಕೂಡ ಸಮತೋಲನದಲ್ಲಿ ಇಡುತ್ತದೆ. 

face cream, Home Remedies, tomato , ಟಮೆಟೋ ಫೇಸ್ ಪ್ಯಾಕ್, ಉಪಯೋಗ

ಬಣ್ಣ ಕಪ್ಪಾಗುವುದನ್ನು ತಡೆಯಲು ಟೊಮೆಟೋ ಫೇಸ್ ಪ್ಯಾಕ್

ಟೊಮೆಟೋ ಹಾಗೂ ಮೊಸರು ಬಳಸಿಕೊಂಡು ಬಿಸಿಲಿನಿಂದ ಆಗುವ ಕಪ್ಪು ಚರ್ಮವನ್ನು ಕಾಂತಿಯುತವಾಗಿ ಮಾಡಬಹುದು. ಚರ್ಮದ ಬಣ್ಣ ಉತ್ತಮಪಡಿಸಲು ಇದು ಒಳ್ಳೆಯದು. ಟೊಮೆಟೋ ತಿರುಳು ಮತ್ತು ಅದಕ್ಕೆ ಸ್ವಲ್ಪ ಮೊಸರು ಹಾಕಿ. ೧ ಚಮಚ ಜೇನುತುಪ್ಪ ಮತ್ತು ಚಿಟಿಕೆ ಅರಶಿಣ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ. 

ಟಮೆಟೋ, ಓಟ್ಸ್ ಮಾಸ್ಕ್ 

ಮೊಡವೆ ಮತ್ತು ಚರ್ಮದಲ್ಲಿರುವ ಬೊಕ್ಕೆಗಳನ್ನು ನಿವಾರಮೆ ಮಾಡಲು ಟೊಮೆಟೋ ಮತ್ತು ಓಟ್ಸ್ ಪೇಸ್ ಮಾಸ್ಕ್ ತುಂಬಾ ಒಳ್ಳೆಯದು. ಈ ಫೇಸ್ ಮಾಸ್ಕ್ ಅನ್ನು ಪ್ರತಿ ನಿತ್ಯ ಬಳಸಿದರೆ ಕಪ್ಪು ಮತ್ತು ಬಿಳಿ ಕಳೆಗಳು ನಿವಾರಣೆಯಾಗುತ್ತವೆ. ೧ ಟೊಮೆಟೋ ತಿರುಳನ್ನು ತೆಗೆಯಿರಿ. ಇದಕ್ಕೆ ಒಂದು ಚಮಚ ಓಟ್ಸ್, ೧ ಚಮಚ ಜೇನುತುಪ್ಪ, ೧ ಚಮಚ ನಿಂಬೆರಸ ಬೆರೆಸಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ