ಕಣ್ಣಿನ ಆರೈಕೆಗೆ ಆಹಾರಗಳು ಹೇಗಿರಬೇಕು..?

  • by

ಮಾನವನ ದೇಹದಲ್ಲಿ ಎಲ್ಲಾ ಅಂಗಾಂಗ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಲ್ಲೂ ಕಣ್ಣುಗಳಿಗೆ ಮುಖ್ಯವಾದ ಸ್ಥಾನವಿದೆ. ಕಣ್ಣುಗಳ ನಮಗೆ ಪ್ರಪಂಚದ ಸೌಂದರ್ಯದ ಬಗ್ಗೆ ಅರಿವು ಮೂಡಿಸುತ್ತವೆ. ಕಣ್ಣುಗಳು ಸೂಕ್ಷ್ನತೆ ಇಂದ ಕೂಡಿದಷ್ಟು ಇದ್ದಷ್ಚು ಸುಂದರ.. ಆದ್ದರಿಂದ ಯಾವಾಗಲೂ ಕಣ್ಣುಗಳ ಆರೋಗ್ಯಕರವಾಗಿ ಇಡಬೇಕಾಗುತ್ತದೆ. ಜೀವನಶೈಲಿ ಬದಲಾದಂತೆ ಕಣ್ಣಿನ ಹಲವು ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತವೆ.  ವಾಸ್ತವವಾಗಿ ಕಣ್ಣಿನ ಆರೈಕೆ ಕೂಡ ಮುಖ್ಯವಾಗುತ್ತದೆ. ಆರೋಗ್ಯಕರ ಕಣ್ಣುಗಳನ್ನು ಪಡೆಯಲು ಕಣ್ಣುಗಳಿಗೆ ರಕ್ಷಣೆ ಕೊಡುವ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಕಣ್ಣುಗಳ ಆರೋಗ್ಯ ಕಾಪಾಡಲು ಯಾವ ರೀತಿಯ ಆಹಾರ ಸೇವಿಸಬೇಕು… ಉಪಯುಕ್ತ ಮಾಹಿತಿ ಇಲ್ಲಿದೆ. 

Eyes health, ಕಣ್ಣುಗಳ ರಕ್ಷಣೆ,

ಹಸಿ ತರಕಾರಿ..!

ಪಾಲಕ್ ಸೊಪ್ಪು ಹಾಗೂ ಇತರ ಹಸಿ ತರಕಾರಿಗಳು ಸೇವಿಸುವುದರಿಂದ ಕಣ್ಣುಗಳ ಆರೈಕೆ ಮಾಡಬಹುದು. ಪಾಲಕ್ ಸೊಪ್ಪಿನಲ್ಲಿ ಲ್ಯೂಟೈನ್ ಮತ್ತು ಜಿಯಾಕ್ಸಂಟಿನ್ ಗಳು ಉತ್ತಮವಾಗಿವೆ. ಆದ್ದರಿಂಗ ಪೌಷ್ಟಿಕಾಂಶಗಳು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳಿಗೆ ಉತ್ತಮ ರಕ್ಷಣೆ ನೀಡುತ್ತದೆ. ಮೂಲಂಗಿ , ದಂಟು, ಸಪ್ಪಸಿಗೆ ಸೊಪ್ಪು, ಹೂ ಕೋಸು ಹಾಗೂ ಮೊಟ್ಟೆಗಳು ಕಣ್ಣಿಗೆ ಉತ್ತಮ ಎಂದು ಹೇಳಲಾಗುತ್ತದೆ. 

ಬಿಟ್ ರೂಟ್ ನಲ್ಲಿ ವಿಟಮಿನ್ ಎ ಸಮೃದ್ಧವಾಗಿರುವುದರಿಂದ, ಕಣ್ಣುಗಳಿಗೆ ಉತ್ತಮವಾದದ್ದು. ಕಣ್ಣುಗಳ ಆರೋಗ್ಯಕ್ಕೆ ಬಿಟ್ ರೂಟ್ ಸೇವನೆ ಮಾಡುವುದು ತುಂಬಾ ಉತ್ತಮ ಎಂದು ಹೇಳಲಾಗುತ್ತದೆ.  ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಕ್ಯಾರೇಟ್ ಸೇವನೆಯಿಂದ ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ. ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. 

ಬಾದಾಮಿ ಕಣ್ಣಿನ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿಟಮಿನ್ ಇ ಮತ್ತು ಕೊ್ಬಬಿನಾಮ್ಲಗಳು ಬಾದಾಮಿಯಲ್ಲಿ ಸಮೃದ್ಧವಾಗಿವೆ. ಕಣ್ಣುಗಳನ್ನು  ಆರೋಗ್ಯಕರ ಸ್ಥಿತಿಯಲ್ಲಿಟ್ಟುಕೊಳ್ಳಲು ಇದು ಸಹಾಯ ಮಾಡುತ್ತದೆ. 

ಒಮೆಗಾ -೩ ಸಮೃದ್ಧ ಆಹಾರಗಳು.

Eyes health, ಕಣ್ಣುಗಳ ರಕ್ಷಣೆ,

ಸಲ್ಮಾನ್ , ತುನಾ, ಸಾರ್ಡಿನೆಸ್ ಮೀನಿನಂತಹ ಓಮೇಗಾ ೩ ಸಮೃದ್ಧತೆ ಹೆಚ್ಚಾಗಿರುವ ಆಹಾರಗಳಲ್ಲಿ ವಿಟಮಿನ್ ಡಿ ಹೆಚ್ಚಾಗಿರುತ್ತದೆ. ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಉತ್ತಮ. ಒಂದು ವೇಳೆ ಮೀನು ತಿನ್ನದಿದ್ದರೆ, ಕಡಲೇಕಾಯಿ , ಅಗಸೆ ಬೀಜಗಳನ್ನು ಸೇವಿಸಿ. 

ದ್ವಿದಳ ಧಾನ್ಯಗಳು ಮತ್ತು ಬೀನ್ಸ್ ಗಳಲ್ಲಿ ಸತುವಿನ ಪ್ರಮಾಣ ಹೆಚ್ಚಾಗಿದ್ದು, ಇಂತಹ ಆಹಾರಗಳನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯಕ್ಕೆ ಉತ್ತಮವಾದದದ್ದು. ಕಡಿಮೆ ಕೊಬ್ಬಿನಾಂಶವಿರುವ ಹಾಲು , ಮೊಟ್ಟೆ ಯೊಂದಿಗೆ ಉತ್ತಮ ರೀತಿಯಲ್ಲಿ ರಕ್ಷಿಸಿಕೊಳ್ಳಬಹುದು, ಟೊಮ್ಯಾಟೋ ಬೆಳ್ಳುಳ್ಳಿ. ಮತ್ತಿತರ ಪೌಷ್ಟಿಕ ಆಹಾರ ಹೆಚ್ಚಾಗಿರುವ ಆಹಾರಗಳನ್ನು ಸೇವಿಸುವುದರಿಂದ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಂದು ಇಂತಹ ಆಹಾರಗಳನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಕಡಿಮೆ ಕೊಬ್ಬಿನಾಂಶವಿರುವ ಹಾಲು , ಮೊಟ್ಟೆಯೊಂದಿಗೆ ಉತ್ತಮ ರೀತಿಯಲ್ಲಿ ಸಂರಕ್ಷಿಸಿಕೊಳ್ಳಬಹುದಾಗಿದೆ. 

ಸಿಟ್ರಸ್ ಜಾತಿಯ ಹಣ್ಣು !

ವಿಟಮಿನ್ ಸಿ ಎಂದು ಹೇಳಿದರೆ, ಅದು ಸಿಟ್ರಸ್ ಹಣ್ಣುಗಳಿಗೆ ಎಂದು ಗೊತ್ತಿದೆ. ಕಿತ್ತಳೆ ಹಾಗೂ ದ್ರಾಕ್ಷಿ ಹಣ್ಣುಗಳನ್ನು ತಿನ್ನಲು ರುಚಿಯಾಗಿರುತ್ತದೆ.ಶೀತ ಮತ್ತು ಕೆಮ್ಮನ್ನು ವಾಸಿ ಮಾಡುವುದು. ಮತ್ತು ಕಣ್ಣುಗಳಿಗೆ ಸಹ ಉತ್ತಮ ಆಹಾರ. ಸಿಟ್ರೆಸ್ ಹಣ್ಣುಗಳನ್ನು ಸೇವಿಸಿ ಅಕ್ಷಿಪಟಲದ ಅವನತಿ ಮತ್ತು ಕ್ಯಾಟರಾಕ್ಟ್ ಇವುಗಳಿಂದ ದೂರವಿರಬಹುದು. 

ಹುರುಳಿ, ಅವರೆ ಕಾಳುಗಳು..!

ಎಲ್ಲಾ ರೀತಿಯ ಕಾಳುಗಳಲ್ಲಿ ಕಣ್ಣುಗಳಿಗೆ ಅಗತ್ಯವಾದ ಸತು ಇರುತ್ತದೆ. ಈ ಖನಿಜ ಸೇವನೆಯಿಂದ ಬೆಳಕಿನ ಹಾನಿಕಾರಕ ಪರಿಣಾಮಗಳಿಂದ ಕಣ್ಣುಗಳನ್ನು ರಕ್ಷಿಸಬಹುದು. 

Eyes health, ಕಣ್ಣುಗಳ ರಕ್ಷಣೆ,

ಕಣ್ಣಿನ ಆರೈಕೆಗೆ ಮೊಟ್ಟೆಗಳು..!

ಮೊಟ್ಟೆಯನ್ನು ಒಂದು ಸಂಪೂರ್ಣ ಆಹಾರ ಎಂದು ಹೇಳಲಾಗುತ್ತದೆ. ನಿಮ್ಮ ಉಪಹಾರಕ್ಕೆ ಒಂದು ಮೊಟ್ಟೆಯನ್ನು ಸೇರಿಸಿದರೆ, ನಿಮ್ಮ ದಿನಂಪೂರ್ತಿ ಅಗತ್ಯವಿರುವ ವಿಟಮಿನ್ ಗಳು ಮತ್ತು ಜೀವಸತ್ವಗಳ ಪೊರೈಕೆಯಾಗುತ್ತಿದೆ. ಮೊಟ್ಟೆಯ ಲ್ಯೂಟೆನ್ ಮತ್ತು ಜಿಯಾಕ್ಸಂಟಿನ್ ಗಳ ಉತ್ತಮ ಮೂಲವಾಗಿದ್ದು, ನಿಮ್ಮ ಕಣ್ಣುಗಳಿಗೆ ಅಗತ್ಯವಿರುವ ರಕ್ಷಣೆ ಒದಗಿಸುತ್ತವೆ. 

ವಿಶ್ರಾಂತಿ ವ್ಯಾಯಾಮ ಮಾಡಿ.. ನಿಮ್ಮ ಎರಡು ಕೈಗಳನ್ನು ಒಂದಕ್ಕೊಂದು ಉಜ್ಜಿ. ಆಗ ಬಿಸಿ ಅಥವಾ ಶಾಖ ಉತ್ಪತ್ತಿಯಾಗುತ್ತದೆ, ನಿಮ್ಮ ಕೈಗಳನ್ನು ಕಣ್ಣುಗಳಿಗೆ ಇದು ನಿಮ್ಮ ಕಣ್ಣುಗಳ ಸುಸ್ತನ್ನು ಶಮನ ಮಾಡುತ್ತದೆ. ನಿಮ್ಮ ಕಣ್ಣುಗಳನ್ನು ಮುಚ್ಚಿ, ನಿಮಗಿಷ್ಟವಾದ ವಿಷಯ ವನ್ನು ನೆನಪಿಸಿಕೊಳ್ಳಿ. ನಿಮಗೆ ಇಷ್ಟವಾದ ಜಗತ್ತಿಗೆ ಪ್ರವೇಶಿಸಿದಂತೆ  ನಿಮ್ಮ ಕಣ್ಣಿಗೆ ಒದಗಿಸುತ್ತದೆ. 

ದೂರದೃಷ್ಟಿ ನಾವು ವಸ್ತುಗಳನ್ನು ಅತ್ಯಂತ ನಿಕಟವಾಗಿ ನೋಡಲು ಅಭ್ಯಾಸ ಮಾಡಿಕೊಂಡಿರುತ್ತಾರೆ. ನೀರು ಎಲ್ಲಾ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರ ಎಂದು ಹೇಳಬಹುದು. ನಿಯಮಿತವಾಗಿ ನೀರನ್ನು ಕುಡಿಯುವುದರಿಂದ ಡಿಹೈಡ್ರೇಷನ್ ನಿಂದ ದೃಷ್ಟಿ ಸುಧಾರಿಸುತ್ತದೆ. ಒಣ ಗಾಳಿಯಿಂದ ದೂರವಿರಿ.  ನಿಮ್ಮ ಕಣ್ಣುಗಳೂ ಎಂದಿಗೂ ತೇವಾಂಶ ಕಳೆದುಕೊಳ್ಳಲು ಬಿಡಬೇಡಿ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ