ಐಬ್ರೋ ಅಂದ ಹೆಚ್ಚಿಸಲು ಟಿಪ್ಸ್..!

  • by

ಇಂದಿನ ದಿನಗಳಲ್ಲಿ ಸೌಂದರ್ಯ ಹೆಚ್ಚಗಾಗಲು ಅದರಲ್ಲೂ ಕಣ್ಣಿನ ಸೌಂದರ್ಯ ಹೆಚ್ಚಲು ಐಬ್ರೋಗೆ ಶೇಪ್ ನೀಡೋದು ಸಹಜ. ಪ್ರತಿಯೊಬ್ಬರು ತಮ್ಮ ಹುಬ್ಬುಗಳ ಅಂದ ಹೆಚ್ಚಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ನಿಮ್ಮ ಮುಖದ ಅಂದ ಹೆಚ್ಚಿಸಲು ಹುಬ್ಬುಗಳು ಮುಖ್ಯವಾಗುತ್ತದೆ. ಇವು ಸೌಂದರ್ಯದ ಪ್ರಮುಖ ಭಾಗವಾಗಿದೆ. ಹುಬ್ಬಿನ ಸೌಂದರ್ಯ ಹೆಚ್ಚಿಸುವುದು ಹೇಗೆ. ಇಲ್ಲಿದೆ ಸರಳವಾಗಿರುವ ಟಿಪ್ಸ್.


ಸರಿಯಾದ ಕನ್ನಡಿ ಬಳಿಸಿ

ಐಬ್ರೋ ಮಾಡಲು ಹೊರಟಾಗ ನೀವು ಸರಿಯಾದ ಕನ್ನಡಿಯನ್ನು ಬಳಸಬೇಕು. ಐಬ್ರೋಗೂ ಹಾಗಾೂ ಕನ್ನಡಿಗೂ ಅಂತರ ವಿರಬೇಕು. ಇದ್ರಿಂದ ಐಬ್ರೋವನ್ನು ನೋಡಲು ಸಾಧ್ಯವಾಗುತ್ತದೆ. ಐಬ್ರೋ ಮಾಡುವಾಗ ನಿಮ್ಮ ತೋಳಿನ ಉದ್ದದಲ್ಲಿ ಕನ್ನಡಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಮುಖದ ಸಮೀಪ ಕನ್ನಡಿ ಇಡುವುದಕ್ಕಿಂತಲೂ, ನೀವು ಎಷ್ಟು ಐಬ್ರೋ ಟ್ರಿಂ ಮಾಡುತ್ತೀರಿ ಎಂಬುದು ಮುಖ್ಯ.


eyebrow-shaping-tips-women-fashion-ಐಬ್ರೋ ಧ್ರೆಡ್ಡಿಂಗ್, ಬ್ಯೂಟಿ ಟಿಪ್ಸ್, ಐಬ್ರೋ ಸೌಂದರ್ಯ

ಐಬ್ರೋ ಮಧ್ಯೆ ಗ್ಯಾಪ್ ಇದ್ದರೆ ಸರಿಪಡಿಸಿ..!

ಬಹಳಷ್ಟು ಜನರಿಗೆ ಐಬ್ರೋ ಮಧ್ಯೆ ಗ್ಯಾಪ್ ಗಳಿರುತ್ತವೆ. ನಿಮ್ಮ ಹುಬ್ಬುಗಳ ಕೂದಲು ಸರಿಯಾಗಿ ಬೆಳೆಯುತ್ತಿಲ್ಲ ಎಂದಾದರೆ, ಮೇಕಪ್ ನಿಂದ ತುಂಬಿಸಿ. ಇಲ್ಲವೇ ಹರಳೆಣ್ಣೆ ಹಚ್ಚಿಕೊಳ್ಳಿ. ದೊಡ್ಡ ಹುಬ್ಬು ಅಂದಗೊಳಿಸುವ ಉತ್ಪನ್ನಗಳಿವೆ. ಅದು ನಿಮ್ಮ ಹುಬ್ಬಿನ ಬಣ್ಣೆಕ್ಕೆ ಹೊಂದಿಕೆಯಾಗೇ ಆಗುತ್ತವೆ. ಜೆಲ್, ಪೆನ್ಸಿಲ್ ಮುಂತಾದವುಗಳೆಲ್ಲವು ನಿಮ್ಮ ಹುಬ್ಬುಗಳ ಮೆರಗು ಹೆಚ್ಚಿಸಬಲ್ಲವು. ಅಲ್ಲದೇ ನೈಸರ್ಗಿಕ ಉತ್ಪನ್ನಗಳಿಂದ ಹುಬ್ಬಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಐಬ್ರೋ ಹೇಗಿರಬೇಕು?

ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಗೆ ತಕ್ಕಂತೆ ಐಬ್ರೋಸ್ ಮಾಡಿಸಿಕೊಳ್ಳಲಾಗ್ತಿದೆ. ಕೆಲವರಲ್ಲಿ ಐಬ್ರೋ ಥಿನ್ ಆಗಿರುತ್ತೆ, ಮತ್ತೆ ಕೆಲವರಲ್ಲಿ ದಪ್ಪಗಿರುತ್ತದೆ.

ನಿಮ್ಮ ಹಣೆ ಅಗಲವಾಗಿದ್ದರೆ ಐಬ್ರೋ ದಪ್ಪವಾಗಿರಬೇಕು. ಮುಖದ ಆಕಾರಕ್ಕೆ ಹೊಂದುವಂತೆ ಹುಬ್ಬು ತಿಡಿಕೊಳ್ಳಿ. ಹೆಣ್ಣುಮಕ್ಕಳ ಹುಬ್ಬು ಕಪ್ಪಾಗಿದ್ದರೆ ಚೆಂದವಾಗಿ ಕಾಣಿಸುತ್ತದೆ. ಥಿನ್ ಐಬ್ರೋ ಹೊಂದಿರುವವರು ಐಬ್ರೋ ಪೆನ್ಸಿಲ್ ಉಪಯೋಗಿಸಿ. ಐಬ್ರೋ ಮಾಡಿದ ನಂತಪ ಅಲೋವೆರಾವನ್ನು ಮುಖಕ್ಕೆ ಹಚ್ಚಿದರೆ ಅದು ಮಾಯಿಶ್ಚರೈಸರ್ ಕಾಪಾಡುತ್ತದೆ. ಇದೀಗ ಮಾರುಕಟ್ಟೆಯಲ್ಲಿ ಐಬ್ರೋಸ್ ಗಾಗಿ ಅದೆಷ್ಟು ಬ್ಯೂಟಿ ಪ್ರಾಡೆಕ್ಟ್ ಗಳು ಬಂದಿವೆ. ಕಡಿಮೆ ವೆಚ್ಚದ ಐಬ್ರೋ ಪೆನ್ಸಿಲ್ ಗಳು ಲಭ್ಯಇವೆ, ನೀವಾಗಿಯೇ ಹುಬ್ಬಿನ ಕೂದಲಿಗೆ ಬಣ್ಣ ಹಚ್ಚುವ ಮೊದಲು, ಎಕ್ಸ್ ಪರ್ಟ್ ಗಳನ್ನು ಕೇಳಿ ಹಚ್ಚಿದ್ದರೆ ಒಳ್ಳೆಯದು.

ಕೋಲುಮುಖದವರಿಗೆ ಐಬ್ರೋ
ಕೋಲು ಮುಖದವರಾಗಿದ್ದರೆ ಐಬ್ರೋಗಳಿಗೆ ಯಾವ ಶೇಪನ್ನು ಮಾಡಿಸದಿರಿ. ಅವು ನೇರವಾಗಿಯೇ ಇರಲಿ.

ದುಂಡುಮುಖ
ದುಂಡು ಮುಖದವರಿಗೆ ಅವರ ಮುಖದ ಗಾತ್ರವನ್ನು ಒಂದಷ್ಟು ಲಂಬವಾಗಿಸುವಂತೆ ಕಾಣಿಸಬೇಕು ಎಂದರೆ, ಅದಕ್ಕಾದಿ ನಿಮ್ಮ ಹುಬ್ಬಿನ ಉಬ್ಬನ್ನು ಶಿಖರದಂತೆ ಎತ್ತಿ ಬಾಗಿಸಬೇಕು.


eyebrow-shaping-tips-women-fashion-ಐಬ್ರೋ ಧ್ರೆಡ್ಡಿಂಗ್, ಬ್ಯೂಟಿ ಟಿಪ್ಸ್, ಐಬ್ರೋ ಸೌಂದರ್ಯ

ವಜ್ರಾದಾಕಾರ
ಕೋಲುಮುಖದಂತೆ ಕಂಡರೂ ಕೆನ್ನೆಯ ಮೂಳೆಗಳು ಮುಂಬಾಗಿದಂತಿರುತ್ತವೆ. ಅವರ ಹುಬ್ಬನ್ನು ಕಣ್ಣಿನಗುಂಟ ಇರುವಂತೆ ನೋಡಿಕೊಂಡರೆ ಸಾಕು.

ಐಬ್ರೋ ಮಾಡಿಸುವ ಮುನ್ನ ಸಲಹೆಗಳು..!

  1. ಐಬ್ರೋ ವನ್ನು 3 ವಾರಕ್ಕೊಮ್ಮೆಯಾದರೂ ಮಾಡಿಸಬೇಕು.
  2. ಐಬ್ರೋ ಮಾಡಿಸಿದ ನಂತರ ಐಬ್ರೋ ಪೆನ್ಸಿಲ್ ಬಳಸಿದರೆ ಮುಖದ ಆಕರ್ಷಣೆ ಹೆಚ್ಚುತ್ತದೆ.
  3. ಮುಖ ಟ್ಯಾನ್ ಆಗಿದ್ದರೆ ಐಬ್ರೋ ಮಾಡಿಸಬೇಡಿ.
  4. ಐಬ್ರೋ ಮಾಡಿಸಿದ ನಂತರ ಕೂಡಲೇ ಕೆಮಿಕಲ್ ಹಾಕಿ ಮುಖ ತೊಳೆಯಬೇಡಿ.
  5. ಸ್ವಲ್ಪ ಸಮಯದ ನಂತರ ಮುಖ ತೊಳೆದು ಕ್ರೀಮ್ ಹಚ್ಚಿ.
  6. ಹರಳಣ್ಣೆ ಹಚ್ಚಿದರೆ ಐಬ್ರೋ ಕಪ್ಪಾಗಿ , ಆಕರ್ಷಕವಾಗಿ ಕಾಣುತ್ತದೆ.
  7. ಐಬ್ರೋ ಮಾಡಿಸುವ ಮುನ್ನ ಮುಖವನ್ನು ಸಚ್ಚವಾಗಿ ತೊಳೆಯಿರಿ. ತ್ವಚೆ ಒಣಗಿದ ನಂತರ ಅಷ್ಟು ನೋವಾಗುವುದಿಲ್ಲ. ತುಂಬಾ ಬೆವರು ಇದ್ದಾಗ ಹಾಗೇ ಐಬ್ರೋ ಮಾಡಿಸದೇ ಮುಖವನ್ನು ತೊಳೆದು ಮಾಡಿಸುವುದು ಉತ್ತಮ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ