ಕಣ್ಣುಗಳು ಆಕರ್ಷಕವಾಗಿ ಕಾಣಬೇಕೇ.. ಟಿಪ್ಸ್ ಇಲ್ಲಿದೆ.!

  • by

ನಾವು ಜಗತ್ತನ್ನು ಕಣ್ಣುಗಳ ಮೂಲಕ ಮಾತ್ರ ನೋಡುವುದಿಲ್ಲ. ಬದಲಾಗಿ ಕಣ್ಣುಗಳು ನಮ್ಮ ಆರೋಗ್ಯದ ಸ್ಥಿತಿಯನ್ನು ಸಹ ಹೇಳುತ್ತವೆ. ಯೋಚಿಸಿ… ನಾವು ಶೀತ, ಜ್ವರ, ಅಥವಾ ಒತ್ತಡದಿಂದ ಬಳಲುವಾಗ ಕಣ್ಣುಗಳೇ ಎಲ್ಲವನ್ನು ಹೇಳುತ್ತವೆ. ನೀವು ಯಾರೊಂದಿಗಾದರೂ ಸಂವಹನ ನಡೆಸುವ ಮೊದಲ ವಿಧಾನವೆಂದರೆ ಅದು ಕಣ್ಣುಗಳ ಮೂಲಕ. ಮೊದಲು ಕಣ್ಣುಗಳ ಸಂವಹನದಿಂದ, ಮುಖದಲ್ಲಿ ಸ್ಮೈಲ್ ಏರ್ಪಡುತ್ತದೆ. ನಂತರ ಸಂಭಾಷಣೆ ಮುಂದುವರಿಯುತ್ತದೆ. ಆದ್ದರಿಂದ ವ್ಯಕ್ತಿ ವ್ಯಕ್ತಿತ್ವಕ್ಕೆ ಕಣ್ಣುಗಳು ಮೆರಗು ಹೆಚ್ಚಿಸುತ್ತವೆ. ಸುಂದರ, ಆಕರ್ಷಣೆ ಕಣ್ಣುಗಳಿಂದ ವ್ಯಕ್ತಿಯ ಸೌಂದರ್ಯ ಇಮ್ಮುಡಿಗೊಳ್ಳುತ್ತದೆ.


eye care tips ,beautiful eyes, ಕಣ್ಣುಗಳ ಸೌಂದರ್ಯ, ಐ ಕೇರ್ ಟಿಪ್ಸ್,

ಆಕರ್ಷಕ ಕಣ್ಣುಗಳ ನಿಮ್ಮದಾಗಬೇಕಾದರೆ ನೀವು ಸೇವಿಸುವ ಆಹಾರ ಸರಿಯಾಗಿದೆಯೋ , ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಕಣ್ಣುಗಳ ಮೂಲಕ ನಮ್ಮ ಸ್ನೇಹಿತರು, ಆತ್ಮೀಯರು, ನಮ್ಮ ಆರೋಗ್ಯದ ಬಗ್ಗೆ ತಿಳಿದುಕೊಳ್ಳುತ್ತಾರೆ. ಕಣ್ಣುಗಳ ಆಕರ್ಷಣೆ ಹೆಚ್ಚಿಸಲು ಬಹಳ ಮುಖ್ಯವಾದ ವಿಷಯಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಕಾರ್ನಿಯಾ ಆರೋಗ್ಯ ಎಂದರೇನು..?

ಕಾರ್ನಿಯಾ ಎನ್ನುವುದು ನಮ್ಮ ಕಣ್ಣಿನ ಅತ್ಯಗತ್ಯ ಭಾಗವಾಗಿದೆ. ಇದು ನಮ್ಮ ದೃಷ್ಟಿಯಲ್ಲಿ ಕಾಣಿಸಿಕೊಳ್ಳುವ ವಸ್ತುಗಳ ಪ್ರತಿ ಫಲನವನ್ನು ಮಾಡಲು ಸಹಾಯ ಮಾಡುತ್ತವೆ. ಈ ರೀತಿಯಾಗಿ ನಾವು ವಸ್ತು, ವ್ಯಕ್ತಿ ಅಥವಾ ಸ್ಥಳವನ್ನು ಗುರುತಿಸಬಹುದು. ಕಾರ್ನಿಯಾ ಆರೋಗ್ಯ ಸರಿಯಾಗಿಡಲು ನಮ್ಮ ಕಣ್ಣುಗಳಿಗೆ ವಿಟಮಿನ್ ಎ ಅಗತ್ಯವಿದೆ. ಕಣ್ಣೀರಿನ ನಾಳಗಳು ಒಣಗಿದರೆ, ಕಾರ್ನಿಯಾ ಮೃದುವಾಗುತ್ತದೆ. ಅದರ ಕಾರ್ಯಕ್ಷಮತೆ ಕಡಿಮೆ ಯಾಗುತ್ತದೆ. ಇದು ಕುರುಡುತನಕ್ಕೆ ಕಾರಣವಾಗಬಹುದು.

eye care tips ,beautiful eyes, ಕಣ್ಣುಗಳ ಸೌಂದರ್ಯ, ಐ ಕೇರ್ ಟಿಪ್ಸ್,

ಅಡುಗೆ ಮನೆಯಲ್ಲಿ ತಯಾರಿಸಲಾದ ಸಾತ್ವಿಕ ಆಹಾರವನ್ನು ನಿಯಮಿತವಾಗಿ ಸೇವಿಸಿದರೆ, ಯಾವುದೇ ವ್ಯಕ್ತಿಯ ದೇಹದಲ್ಲಿ ವಿಟಮಿನ್ ಎ ಕೊರತೆಯ ಸಾಧ್ಯತೆ ಕಡಿಮೆ. ಹಸಿರು ತರಕಾರಿಗಳಾದ ಕ್ಯಾಪ್ಸಿಕಂ ಹಾಗೂ ಕುಂಬಳಕಾಯಿ ನಿಮ್ಮ ಆಹಾರದಲ್ಲಿ ಸೇರಿಸಿ. ಥೈಮಿನ್ ಅನ್ನು ವಿಟಮಿನ್ ಬಿ 1 ಎಂದು ಕರೆಯಲಾಗುತ್ತದೆ. ಇದು ಮುಖ್ಯವಾಗಿ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲನೆಯದು ದೇಹದ
ಜೀವಕೋಶಗಳ ಕಾರ್ಯವನ್ನು ನಿರ್ವಹಿಸುತ್ತದೆ. ಮತ್ತು ಎರಡನೆಯದಾಗಿಸ್ನಾಯುಗಳನ್ನು ಶಕ್ತಿಯುತವಾಗಿ ಇರಿಸಲು ಸಹಾಯ ಮಾಡುತ್ತದೆ. ದ್ವಿದಳ, ಧಾನ್ಯಗಳು , ಮಾಂಸ ಮತ್ತು ಮೀನುಗಳಿಂದ ಸಂಪೂರ್ಣ ಲಭ್ಯವಿದೆ.

ನಿಯಾಸಿಸ್ ಎಂದರೆ ವಿಟಮಿನ್ ಬಿ 3 ಆಹಾರವನ್ನು ದೇಹದೊಳಗಿನ ಶಕ್ತಿಯನ್ನಾಗಿ ಪರಿವರ್ತಿಸಲು ಕೆಲಸ ಮಾಡುತ್ತದೆ. ಇದಲ್ಲದೇ, ಇದು ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ. ನಿಯಾಸಿಸ್ ನಮ್ಮ ಕಣ್ಣಿನಲ್ಲಿ ಗ್ಲುಕೋಮಾ ಎಂಬ ರೋಗವನ್ನು ತಡೆಯುತ್ತದೆ.

ಇತ್ತೀಚಿನ ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ದೈನಂದಿನ ಆಹಾರದಲ್ಲಿ ಸುಮಾರು 490 ಮಿ.ಗ್ರಾಂ ವಿಟಮಿನ್ ಸಿ ಸೇವಿಸಿದರೆ, ಕಣ್ಣಿನ ಪೊರೆಯಂತಹ ತೊಂದರೆಗಳು ಪ್ರತಿಶತದಷ್ಟು 75 ಕಡಿಮೆಯಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ 125 ಗ್ರಾಂ ಅಥವಾ ಅದಕ್ಕಿಂತ ಕಡಿಮೆ ವಿಟಮಿನ್ ಸಿ ತೆಗೆದುಕೊಳ್ಳುವ ಜನರು ಕಣ್ಣಿನ ಪೂರೆಯ ಸಾಧ್ಯತೆಯನ್ನು ಶೇ. 75ರಷ್ಟು ಹೆಚ್ಚಿಸುತ್ತದೆ.

ವಿಟಮಿನ್ ಇ ಪಡೆಯಲು ಸಮೃದ್ಧ ಆಹಾರಗಳು…!

ವಿಟಮಿನ್ ಇ ಪಡೆಯಲು, ನೀವು ಒಣ ಹಣ್ಣುಗಳು ಕಡಲೆಕಾಯಿ , ವಾಲ್ನೆಟ್ಸ್, ಮೀನು, ಹಸಿರು ತರಕಾರಿಗಳನ್ನು ಸೇವಿಸಬಹುದು. ಸಾಕಷ್ಟು ಪೋಷಕಾಂಶಗಳಿಗಾಗಿ ನಿಮ್ಮ ಆಹಾರದಲ್ಲಿ ಎಲ್ಲಾ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ.


eye care tips ,beautiful eyes, ಕಣ್ಣುಗಳ ಸೌಂದರ್ಯ, ಐ ಕೇರ್ ಟಿಪ್ಸ್,

ಒಮೆಗಾ-3 ಕೊಬ್ಬಿನಾಮ್ಲಗಳು

ಒಮೆಗಾ-3 ಕೊಬ್ಬಿನಾಮ್ಲಗಳು ನಮ್ಮ ಕಣ್ಣಿನ ರೆಟಿನಾದಲ್ಲಿ ಡಿಎಚ್ಎ ರೂಪದಲ್ಲಿ ಕಂಡು ಬರುತ್ತವೆ. ಇದು ನಿಮ್ಮ ದೃಷ್ಟಿಯಲ್ಲಿ ಉರಿಯೂತವನ್ನು ತಡೆಯುತ್ತದೆ. ಮಧುಮೇಹ ರೆಟಿನೋಪತಿಯನ್ನು ತಡೆಯುತ್ತದೆ.

ಕ್ಯಾರೆಟ್ ಗಳಲ್ಲಿದೆ ಕರಗುವ ನಾರು…!
ಕ್ಯಾರೆಟ್ ಗಳಲ್ಲಿ ಕರಗುವ ನಾರು ಹೆಚ್ಚಿನ ಪ್ರಮಾಣದಲ್ಲಿದ್ದು, ಇವುಗಳ ಸೇವನೆಯಿಂದ ಸಕ್ಕರೆ ಹಾಗೂ ಪಿಷ್ಟದ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತದೆ. ಈ ಮೂಲಕ ರಕ್ತದಲ್ಲಿ ಸಕ್ಕರೆಯನ್ನು ನಿಧಾನವಾಗಿ ಪ್ರವಹಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ. ಕ್ಯಾರೆಟ್ ಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ. ಇವುಗಳ ಮಲಬದ್ಧತೆಯಾಗದಂತೆ ನೆರವಾಗುತ್ತದೆ. ಹಾಗೂ ಕರಳುಗಳಲ್ಲಿ ಆಹಾರದ ಚಲನೆ ಸುಲಭವಾಗಿಸಿ ಆರೋಗ್ಯ ವೃದ್ಧಿಸುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ