ಕೋವಿಡ್ -19 ಸಮಯದಲ್ಲಿ, ಎನರ್ಜಿ ಹೆಚ್ಚಿಸುವ ಆಹಾರಗಳು..! -( energy foods during the Covid-19 pandemic..!)

  • byಕೋವಿಡ್ -19 ದೇಶದಲ್ಲಿ ಹೆಚ್ಚು ಆತಂಕ ಮೂಡಿಸುತ್ತಿದೆ. ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಆತಂಕ ಹಾಗೂ ಭೀತಿಯನ್ನು ಕಡಿಮೆ ಮಾಡಲು , ನೀವು ಹೆಚ್ಚು ಸಕ್ರೀಯರಾಗಿರಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಇಲ್ಲಿ ತಿಳಿಸಲಾದ ಆಹಾರಗಳನ್ನು ಸೇವಿಸುವುದು ಉತ್ತಮ.

ಖಿಚಡಿ

ಅಕ್ಕಿಯಿಂದ ತಯಾರಿಸಿದ ಖಿಚಡಿ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ಹೇಳಬಹುದು. ನೀವು ದಾಲ್ ಅಥವಾ ಅಕ್ಕಿಯ ಮಿಶ್ರಣದಿಂದ ಇದನ್ನು ತಯಾರಿಸಬಹುದು. ದೇಹಕ್ಕೆ ಎನರ್ಜಿ ನೀಡುವಲ್ಲಿ ಖಿಚಡಿ ಹೆಚ್ಚು ಪ್ರಯೋಜನಕಾರಿ ಅಂತಲೇ ಹೇಳಬಹುದು. ಲಾಕ್ ಡೌನ್ ಸಮಯದಲ್ಲಿ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು. ಅದರಲ್ಲೂ ದಾಲ್ ಅನ್ನು ಅನ್ನದ ಜತೆಗೆ ಸೇವಿಸಬಹುದು. ಇನ್ನು ಖಿಚಡಿಯಲ್ಲಿ ಪ್ರೋಟೀನ್ ಗಳು ಮತ್ತು ಕಾರ್ಬೋಹೈಡ್ರೇಟ್ ಗಳು ಮತ್ತು ಪ್ರೋಟೀನ್ ಗಳನ್ನು ಹೆಚ್ಚು ಹೊಂದಿರುತ್ತದೆ. ದಾಲ್ ಪ್ರೋಟೀನ್ ಹೊಂದಿರುತ್ತದೆ. ದಾಲ್ ನಲ್ಲಿ ವಿಟಮಿನ್ ಸಿ , ಪೊಟ್ಯಾಶಿಯಂ, ಕ್ಯಾಲ್ಸಿಯಂ ಹಾಗೂ ರಂಜಕವನ್ನು ಹೊಂದಿರುತ್ತದೆ.


energy foods, covid-19 pandemic,ಕೊರೊನಾ ವೈರಸ್, ಎನರ್ಜಿ ಆಹಾರಗಳು

ವೆಜಿಟೇಬಲ್ ದಲಿಯಾ

ವೆಜಿಟೇಬಲ್ ದಲಿಯಾ ಪ್ರೋಟೀನ್ ಹೆಚ್ಚಾಗಿರುತ್ತದೆ. ಇದು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇದು ಚಯಾಪಚಯಕ್ರಿಯೆನ್ನು ಹೆಚ್ಚಿಸುವುದಲ್ಲದೇ, ತೂಕವನ್ನು ನಿಯಂತ್ರಿಸುತ್ತದೆ.

ರಾಗಿ ರೊಟ್ಟಿ

ರಾಗಿ ರೊಟ್ಟಿ ಸೇವನೆಯಿಂದ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಶಕ್ತಿ ಹೆಚ್ಚಿಸುವ ಆಹಾರದ ಮೂಲಗಳಲ್ಲಿ ಇದು ಕೂಡಾ ಒಂದಾಗಿದೆ ಎಂದು ಹೇಳಲಾಗುತ್ತದೆ. ಇದು ಹೆಚ್ಚಿನ ಸಮಯದವರೆಗೆ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ನಟ್ಸ್

ನಟ್ಸ್ ನಲ್ಲಿ ಶಕ್ತಿಯನ್ನು ಪೂರೈಸುವ ಎಲ್ಲಾ ಪ್ರೋಟೀನ್ ಗಳು ಇರುವುದರಿಂದ ನಟ್ಸ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಪೋಷಕಾಂಶ ಭರಿತ ನಟ್ಸ್ ನಿಮ್ಮ ಮೂಡ್ ನ್ನು ಬೂಸ್ಟ್ ಮಾಡುವಲ್ಲಿ ಸಹಕಾರಿಯಾಗಿದೆ. ಗೋಡಂಬಿ, ಬಾದಾಮಿಯಲ್ಲಿ ಹೆಚ್ಚು ಕ್ಯಾಲೋರಿ ಮತ್ತು ಸಾಕಷ್ಟು ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್ ಇರುವುದರಿಂದ ಇದು ಆರೋಗ್ಯಕರ ಕೊಬ್ಬನ್ನು ಉತ್ಪತ್ತಿ ಮಾಡುತ್ತದೆ. ಈ ಪೋಷಕಾಂಶ ದಿನವಿಡೀ ಹೆಚ್ಚು ಚಟುವಟಿಕೆಯಿಂದ ಇರಲು ನೆರವಾಗುತ್ತದೆ.


energy foods, covid-19 pandemic,ಕೊರೊನಾ ವೈರಸ್, ಎನರ್ಜಿ ಆಹಾರಗಳು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ , ಪೊಟ್ಯಾಶಿಯಂ ಹಾಗೂ ವಿಟಮಿನ್ ಬಿ 6 ನ ಮೂಲವಾಗಿದೆ. ಇದು ನಿಮ್ಮ ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ದಿನವಿಡೀ ನಿಮ್ಮ ಚಟುವಟಿಕೆಯಿಂದ ಇರಲು ನೆರವಾಗಬಲ್ಲದ್ದು. ವಿಟಮಿನ್ ಡಿ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯೆನ್ನು ಬಲಪಡಿಸಬಹುದು. ಕೊರೊನಾ ವೈರಸ್ ಸೋಂಕಿನ ಅಪಾಯವನ್ನು ತಡೆಗಟ್ಟಲು ವಿಟಮಿನ್ ಡಿ ನೆರವಾಗುತ್ತದೆ. ನಿಮ್ಮ ಆಹಾರದಲ್ಲಿ ಸಾಲ್ಮನ್ ಮೀನು ಹಾಗೂ ಹಾಲನ್ನು ಸೇವಿಸಬಹುದು.


energy foods, covid-19 pandemic,ಕೊರೊನಾ ವೈರಸ್, ಎನರ್ಜಿ ಆಹಾರಗಳು

ಅಣಬೆಗಳನ್ನು ಸೇವಿಸುವುದು ಉತ್ತಮ

ಕೊರೊನಾ ವೈರಸ್ ನಿಂದ ಕಾಪಾಡಿಕೊಳ್ಳಲು ಅಣಬೆ ಸೇವಿಸುವುದನ್ನು ಮರೆಯದಿರಿ. ತಜ್ಞರ ಪ್ರಕಾರ, ಅಣಬೆಗಳು ಬೀಟಾ ಗ್ಲುಕೋಸ್ ನಿಂದ ಸಮೃದ್ಧವಾಗಿದ್ದು, ಆಂಟಿ ವೈರಲ್ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಪಡೆದುಕೊಂಡಿದೆ. ಜತೆಗೆ ಕೊರೊನಾ ವೈರಸ್ ಸೇರಿದಂತೆ ಇತರ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

ಅಲ್ಕೋಹಾಲ್ ಸೇವಿಸಬೇಡಿ.

ಕೊರೊನಾ ವೈರಸ್ ನಿಂದ ಸುರಕ್ಷಿತವಾಗಿರಲು ಹೆಚ್ಚು ಅಲ್ಕೋಹಾಲ್ ಸೇವಿಸುವುದನ್ನು ನಿಲ್ಲಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ವಾಸ್ತವವಾಗಿ ಅಲ್ಕೋಹಾಲ್ ಸೇವನೆಯು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸೋಂಕಿನಿಂದ ದೂರವಿರಲು ಅಲ್ಕೋಹಾಲ್ ಸೇವಿಸಬೇಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ