ಮಾವಿನಹಣ್ಣು ಸೇವಿಸುವುದರಿಂದ ತೂಕ ಹೆಚ್ಚಳವಾಗುವುದಿಲ್ಲ..!

  • by

ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳು ಎಲ್ಲೆಡೆ ಆಕರ್ಷಣೆಯ ಕೇಂದ್ರವಾಗಿರುತ್ತವೆ. ವಿವಿಧ ಬಗೆ ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಯಾದ್ಯಂತ ಮಾರಾಟವಾಗುತ್ತವೆ. ರಸಭರಿತ ಮಾವಿನ ಹಣ್ಣು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಈ ಸಿಹಿ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಗ್ಲೂಕೋಸ್ ಇದ್ದು, ಇದು ನೈಸರ್ಗಿಕವಾಗಿ ಕ್ಯಾಲೋರಿ ಹೆಚ್ಚಿಸುತ್ತದೆ. ಮಾವಿನ ಹಣ್ಣನ್ನು ತುಂಬಾ ಸೇವಿಸುವುದಿರಿಂದ ತೂಕ ಹೆಚ್ಚಳವಾಗುತ್ತದೆಯೇ, ಅಥವಾ ಇಲ್ಲವೇ ಎಂದು ಹಲವರ ಪ್ರಶ್ನೆ. ಆದರೆ ತಜ್ಞರ ಪ್ರಕಾರ, ಮಾವಿನಹಣ್ಣು ಸೇವಿಸುವುದರಿಂದ ತೂಕ ಹೆಚ್ಚಾಗುವುದಿಲ್ವಂತೆ.

eating-mangogain-weight, ಮಾವಿನಹಣ್ಣು, ತೂಕ ಹೆಚ್ಚಳ

ಮಾವು ಜೀವಸತ್ವ ಹಾಗೂ ಖನಿಜಗಳಿಂದ ಕೂಡಿದೆ.

ಮಾವಿನಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ. ವಿಟಮಿನ್ ಎ , ಕಬ್ಬಿಣ , ತಾಮ್ರ, ಪೋಟ್ಯಾಶಿಯಂ ನಂತಹ ಪೋಷಕಾಂಶಗಳು ಇದರಲ್ಲಿ ಕಂಡು ಬರುತ್ತವೆ. ಆದರೆ ಮಾವು ಸಂಪೂರ್ಣ ಆಹಾರವಲ್ಲಯ ಇದು ಗಮನಾರ್ಹ ಪ್ರಮಾಣದ ಗ್ಲೂಕೋಸ್ ಅನ್ನು ಹೊಂದಿರುತ್ತದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ನಿಮ್ಮನ್ನು ಚೈತನ್ಯಗೊಳಿಸುತ್ತದೆ.

ಮಾವಿನ ಹಣ್ಣು ಸೇವಿಸುವುದರಿಂದ ನಿಮ್ಮನ್ನು ಚೈತನ್ಯಗೊಳಿಸುತ್ತದೆ. ಇದು ಉತ್ತಮ ಪ್ರಮಾಣದ ವಿಟಮಿನ್ ಸಿ ಹೊಂದಿದೆ. ಇದು ದೇಹದ ಪ್ರತಿರೋಧಕವನ್ನು ಹೆಚ್ಚಿಸುತ್ತದೆ. ಇದು ಮಾತ್ರವಲ್ಲ. ಇದರಲ್ಲಿ ಸಾಕಷ್ಟು ಫೈಬರ್ ಇದ್ದು, ಇದು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಗರವಾಗಿಡಲು ಸಹಾಯ ಮಾಡುತ್ತದೆ.

ಮಾವಿನ ಹಣ್ಣು ಹೆಚ್ಚು ಮಾವು ತಿನ್ನುವುದರಿಂದ ಕ್ಯಾಲೋರಿ ಹೆಚ್ಚಾಗಬಹುದು. ಮಾವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ನಿಮಗೆ ಯಾವುದೇ ಹಾನಿ ಇಲ್ಲ. ಆದರೆ ಹೆಚ್ಚು ಮಾವಿನ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದಲ್ಲದೇ, ತೂಕ ಹೆಚ್ಚಳವಾಗಬಹುದು. ಹೆಚ್ಚು ಮಾವಿನ ಹಣ್ಣು ತಿನ್ನುವುದು ಖಂಡಿತವಾಗಿಯೂ ನಿಮ್ಮ ಕ್ಯಾಲೋರಿ ಪ್ರಮಾಣವನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಹಾಗೂ ಸಂಜೆ ಉಪಹಾರದಲ್ಲಿ ಮಾವಿನಹಣ್ಣು ಸೇವಿಸಿದರೆ, ಕ್ಯಾಲೋರಿ ಸೇವನೆ ನಿಯಂತ್ರಿಸಬಹುದು. ತೂಕ ಹೆಚ್ಚಳದ ಬಗ್ಗೆ ಯಾವುದೇ ತೊಂದರೆ ಇರುವುದಿಲ್ಲ.

ಮಾವಿನಹಣ್ಣಿನಲ್ಲಿ ಉತ್ತಮವಾದ ಫೈಬರ್ ಇರುವುದರಿಂದ ಇವೆರೆಡು ಜೀರ್ಣಕ್ರಿಯೆ ಸಹಾಯ ಮಾಡುತ್ತವೆ.ಮಧುಮೇಹಿಗಳು ಮಾವಿನಹಣ್ಣನ್ನು ಸೇವಿಸಬಹುದು. ಆದರೆ ಸೀಮಿತ ಪ್ರಮಾಣದಲ್ಲಿ ಹಣ್ಣನ್ನು ಸೇವಿಸಬೇಕು. ಇಲ್ಲದಿದ್ದರೆ ವೈದ್ಯರ ಸಲಹೆ ಮೇರೆಗೆ ಮಾವಿನಹಣ್ಣು ಸೇವಿಸುವುದು ಉತ್ತಮ. ಮಾವು ರಕ್ತದೋತ್ತಡವನ್ನು ನಿಯಂತ್ರಿಸುತ್ತದೆ. ರಕ್ತದೋತ್ತಡ ರೋಗಿಗಳಿಗೆ ಮಾವು ನೈಸರ್ಗಿಕ ಚಿಕಿತ್ಸೆ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಇರುತ್ತದೆ. ತೂಕವನ್ನು ಹೆಚ್ಚಿಸಲು ಬಯಸುವವರು ಮಾವು ಸೇವಿಸಬಹುದು. 150 ಗ್ರಾಂ ಮಾವಿನಲ್ಲಿ 86 ಕ್ಯಾಲೋರಿ ಶಕ್ತಿ ಇದೆ. ಇದು ದೇಹದಿಂದ ಸುಲಭವಾಗಿ ಹೀರಲ್ಪಡುತ್ತದೆ. ಪಿಷ್ಟವು ಮಾವಿನಹಣ್ಣಿನಲ್ಲಿ ಕಂಡು ಬರುತ್ತದೆ.


eating-mangogain-weight, ಮಾವಿನಹಣ್ಣು, ತೂಕ ಹೆಚ್ಚಳ

ಮಾವಿನಹಣ್ಣು ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. ಮಾವಿನಹಣ್ಣಿನಲ್ಲಿ ಕಬ್ಬಿಣವು ಹೇರಳವಾಗಿ ಕಂಡು ಬರುತ್ತದೆ. ನಿಯಮಿತ ಮತ್ತು ನೈಸರ್ಗಿಕ ಮಾವಿನ ಸೇವನೆಯು ದೇಹದಲ್ಲಿನ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ರಕ್ತಹೀನತೆಯಂತಹ ರೋಗಗಳನ್ನು ನಿವಾರಿಸುತ್ತದೆ.

ಗರ್ಭಿಣಿ ಮಹಿಳೆಯರಿಗೆ ಪ್ರಯೋಜನಕಾರಿ

ಗರ್ಭಿಣಿ ಮಹಿಳೆಗೆ ಕಬ್ಬಿಣದ ವಿಶೇಷ ಅಗತ್ಯವಿದೆ. ಆದ್ದರಿಂದ ಮಾವು ತುಂಬಾ ಪ್ರಯೋಜನಕಾರಿ ಅಂತಲೇ ಹೇಳಬಹುದು. ಕಬ್ಬಿಣದ ಮಾತ್ರೆಗಳನ್ನು ತೆಗೆದುಕೊಳ್ಳಲು ವೈದ್ಯರು ಶಿಫಾರಸು ಮಾಡಿದರೂ, ನೀವು ಬಯಸಿದರೆ ಕಬ್ಬಿಣದಿಂದ ಸಮೃದ್ಧವಾಗಿರುವ ಮಾವಿನಹಣ್ಣಿನ ಜ್ಯೂಸ್ ಸೇವಿಸಬಹುದು.

ಮಾವಿನಹಣ್ಣು ಯಾವಾಗ ಸೇವಿಸಬೇಕು..?

ಮಾವಿನಹಣ್ಣು ಸೇವಿಸುವ ಸಮಯವೆಂದರೆ ಇದನ್ನು ಊಟದ ವೇಳೆ ಸೇವಿಸಬೇಡಿ. ಸರಿಯಾದ ಮಾರ್ಗವೆಂದರೆ ಸಂಜೆ ಹೊತ್ತು ಲಘು ಆಹಾರವಾಗಿ ಇದನ್ನು ಸೇವಿಸಬಹುದು. ಇದು ತೂಕ ಹೆಚ್ಚಳವನ್ನು ತಡೆಯುತ್ತದೆ.ಅಲ್ಲದೇ ಮಾವಿನಹಣ್ಣನ್ನು ಕಟ್ ಮಾಡಿ ಸೇವಿಸಬಹುದು. ಆದರೆ ಜ್ಯೂಸ್ ಸೇವಿಸುವುದರಿಂದ ಫೈಬರ್ ಹಾಗೂ ಪೌಷ್ಟಿಕಾಂಶ ದೊರೆಯುವುದಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ