ಬೆಳ್ಳುಳ್ಳಿಯಿಂದ ಕೊರೊನಾ ವೈರಸ್ ತಡೆಗಟ್ಟಬಹುದೇ..? WHO ಹೇಳೋದೇನು..?

  • by

ಕೊರೊನಾ ವೈರಸ್ ಎಂಬ ಮಹಾ ಮಾರಿ ಇಡೀ ವಿಶ್ವವನ್ನೇ ಅಲುಗಾಡಿಸುತ್ತಿದೆ. ಇಲ್ಲಿಯವರೆಗೆ ಈ ವೈರಸ್ ಗೆ ಚಿಕಿತ್ಸೆ ಪತ್ತೆಯಾಗಿಲ್ಲ. ಇಂತಹ ಭಯದ ವಾತಾವರಣದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಮಾಹಿತಿಗಳು ಹರಿದಾಡುತ್ತಿವೆ. ಇವುಗಳಲ್ಲಿ ಬೆಳ್ಳುಳ್ಳಿ ಕೊರೊನಾ ವೈರಸ್ ನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸೂಕ್ತ ಎಂದು ಹೇಳಲಾಗುತ್ತಿದೆ.
ಆದ್ರೆ ಈ ಎಲ್ಲಾ ಮಾಹಿತಿ ನಿಜಕ್ಕೂ ಸತ್ಯನಾ .. ಎಂದು ಇದುವರೆಗೂ ಖಚಿತತೆ ಇಲ್ಲ.


ಸೋಷಿಯಲ್ ಮೀಡಿಯಾದಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಕೊರೊನಾ ವೈರಸ್ ನ್ನು ಹೋಗಲಾಡಿಸಬಹುದು ಎಂು ಹೇಳಲಾಗುತ್ತಿದೆ. . ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಬೆಳ್ಳುಳ್ಳಿ ಉತ್ತಮ ಮತ್ತು ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗಿದೆ. ಆದರೆ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕೊರೊನಾ ವೈರಸ್ ಪರಿಣಾಮಕಾರಿಯಾಗಿ ನಿವಾರಿಸಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದ್ರೆ ಬೆಳ್ಳುಳ್ಳಿ ಆಂಟಿ ವೈರಲ್ ಅಂಶಗಳು ಹೆಚ್ಚಾಗಿದ್ದು, ಸೂಪ್ ಅಥವಾ ಸಲಾಡ್ ಅನ್ನು ಹೊರತುಪಡಿಸಿ, ಕಚ್ಚಾ ಬೆಳ್ಳುಳ್ಳಿ ಸೇವಿಸಬಹುದು.

1 ಚಮಚಾ ಜೇನುತುಪ್ಪದ ಜತೆಗೆ ಬೆಳ್ಳುಳ್ಳಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬೆಳ್ಳುಳ್ಳಿ ವೈರಸ್ ಹಾಗೂ ಬ್ಯಾಕ್ಟೇರಿಯಾ ನಿವಾರಕ ಗುಣಗಳಿದ್ದು, ಇದು ಶಕ್ತಿಯನ್ನು ಬಲಪಡಿಸುತ್ತದೆ. ಹಲವು ಸೋಂಕುಗಳಿಗೆ ರಕ್ಷಣೆ ಒದಗಿಸುತ್ತದೆ. ಪ್ರತಿ ದಿನ ಒಂದೆರೆಡು ಬೆಳ್ಳುಳ್ಳಿ ಎಸಳುಗಳನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು, ಹಸಿಯಾಗಿ ನಿತ್ಯವು ಉಗುರು ಬೆಚ್ಚಿಗಿನ ನೀರಿನ ಜತೆಗೆ ಸೇವಿಸಿದಾ, ಇದರ ಗರಿಷ್ಟ ಪ್ರಯೋಜನಗಳನ್ನು ಪಡೆಯಬಹುದು. ಆಹಾರದಲ್ಲಿ ಬೆರೆಸಿ ಇದನ್ನು
ಸೇವಿಸಬಹುದು.

ಬೆಳ್ಳುಳ್ಳಿ ತಿನ್ನುವುದರಿಂದ ಯಾರಿಗೂ ಹಾನಿಯಾಗುವುದಿಲ್ಲ. ಆದರೆ ಇದು ಕೊರೊನಾ ವೈರಸ್ ಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಖಚಿತತೆ ಇಲ್ಲ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ತರಕಾರಿಗಳು ಮತ್ತು ಕುಡಿಯುವ ನೀರನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಯಾವ ಆಹಾರವನ್ನು ಸೇವಿಸುವುದರಿಂದ ಕೊರೊನಾ ವೈರಸ್ ನಿವಾರಣೆಯಾಗಲಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.


ಮಿನಿರಲ್ ಪವಾಡ..!

ಜೋರ್ಡಾನ್ ಸೆಟ್ಟಾರ್ ಯೂಟ್ಯೂರ್ ಆಗಿದ್ದು, ಇವರು ಸಾಮಾಜಿಕ ಜಾಲತಾಣದಲ್ಲಿ ಅನೇಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ, ಇವರ ಪ್ರಕಾರ, ಮಿರಾಕಲ್ ಮಿನಿರಲ್ ಸಪ್ಲಿಮೆಂಟ್ ಅನ್ನು ಬಳಸಿಕೊಂಡು ಕೊರೊನಾ ವೈರಸ್ ಗುಣಪಡಿಸಬಹುದು ಎಂದು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಈ ಉತ್ಪನ್ನಗಳನ್ನು ಸೇವಿಸುವುದರಿಂದ ರೋಗವನ್ನು ಗುಣಪಡಿಸಬಹುದೇ ಎಂಬ ಯಾವ ಸಂಶೋಧನೆ ಇಲ್ಲ ಎಂದು ತಿಳಿದು ಬಂದಿದೆ.ಇನ್ನು ಎಳ್ಳೆಣ್ಣೆ ಸೇವಿಸುವುದರಿಂದ ಕೊರೊನಾ ವೈರಸ್ ನಿಂದ ತಪ್ಪಿಸಿಕೊಳ್ಳಬಹುದೇ. ಎಂದರೆ ಖಂಡಿತ ಇಲ್ಲ. ಎಳ್ಳೆಣ್ಣೆ ಕೊರೊನಾ ವೈರಸ್ ಕೊಲ್ಲುವುದಿಲ್ಲ. ಇದರ ಬದಲು ಬ್ಲೀಚ್, ಕ್ಲೋರಿನ್ , ಕ್ಲೋರೋಫಾರ್ಮ್ ಗಳು ಮೈ ಮೇಲಿರುವ ವೈರಸ್ ಕೊಲ್ಲಬಹುದು. ಆದ್ರೆ ಇದು 100 ಪರ್ಸೆಂಟ್ ಅಲ್ಲ. ಬದಲಾಗಿ ಇವು ದೇಹ ಸೇರಿ ಆರೋಗ್ಯಕ್ಕೆ ಹಾನಿ ಮಾಡುವ ಸಾಧ್ಯತೆ ಹೆಚ್ಚು.

‘ಬೆಳ್ಳುಳ್ಳಿ’ ಸೇವನೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು..?

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ WHO, ಬೆಳ್ಳುಳ್ಳಿ ಆರೋಗ್ಯಕರ ಆಹಾರವಾಗಿದೆ. ಇದರಲ್ಲಿ ಆಂಟಿ ಮೈಕ್ರೊಬಿಯಲ್ ಗುಣಗಳಿದ್ದು, ಕೊರೊನಾ ವೈರಸ್ ಸೋಂಕನ್ನು ಬೆಳ್ಳುಳ್ಳಿ ತಿನ್ನುವುದರಿಂದ ತಡೆಗಟ್ಟಬಹುದು ಎಂದು ಯಾವುದೇ ಅಂಶಗಳು ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ