ದಾಲ್, ರೊಟ್ಟಿ ಸೇವಿಸಿದ್ರೆ ಹೃದ್ರೋಗದ ಅಪಾಯ ತಪ್ಪಿಸಬಹುದು..!

  • by

ಹೃದಯ ಆರೋಗ್ಯಕ್ಕೆ ಯಾವ ಆಹಾರ ಒಳ್ಳೆಯದು ಮೌಂಸಆಹಾರನಾ ಅಥವಾ ಸಸ್ಯಹಾರವೇ.. ಮೌಂಸ ಆಹಾರವನ್ನು ಬಿಟ್ಟು ಸಸ್ಯಹಾರ ಸೇವಿಸುವವರಲ್ಲಿ ಹೃದ್ರೋಗ ಸಂಬಂಧಿತ ಕಾಯಿಲೆಗಳು ಕಡಿಮೆ ಪ್ರಮಾಣದಲ್ಲಿರುವುದು ಪತ್ತೆಯಾಗಿದೆ. ಹೌದು, ಸಸ್ಯಹಾರವನ್ನು ನಿಮ್ಮ ಡಯೆಟ್ ನಲ್ಲಿ ಅಳವಡಿಸುವ ಕೊಳ್ಳುವ ಮೂಲಕ ಹೆಚ್ಚು  ಹೃದಯದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. 

ಹೃದಯ ಸಂಬಂಧಿತ ಕಾಯಿಲೆಗಳನ್ನು ನಿವಾರಿಸಲು ಸಸ್ಯಾಹಾರ ಉತ್ತಮವಾದದ್ದು ಎಂದು ಹೇಳಬಹುದು. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಮತ್ತು ಪೋಷಕಾಂಶಗಳ ಒದಗಿಸುವಲ್ಲಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಸ್ಯಹಾರ ಪ್ರಯೋಜನಕಾರಿಯಾಗಿದೆ. 

ಹೃದಯದ ಆರೋಗ್ಯ ಹೆಚ್ಚಿಸುವಲ್ಲಿ ಯಾವ ಆಹಾರಗಳು ಪ್ರಯೋಜನಕಾರಿ..!

ಹೃದಯದ ಆರೋಗ್ಯಕ್ಕೆ ದಾಲ್ ರೊಟ್ಟಿ ಹೆಚ್ಚು ಸೂಕ್ತ ಎಂದು ಹೇಳಲಾಗುತ್ತದೆ. ದಾಲ್ , ರೊಟ್ಟಿ ಸೇವಿಸುವುದರಿಂದ ಅನೇಕ ಹೃದ್ರೋಗದ ಅಪಾಯವನ್ನು ತಪ್ಪಿಸಬಹುದಾಗಿದೆ ಎಂದು ಇತ್ತೀಚೆಗೆ ನಡೆದ ಸಂಶೋಧನೆಯಿಂದ ತಿಳಿದು ಬಂದಿದೆ. 

ಆಯುರ್ವೇದದ ಪ್ರಕಾರ, ಮಸಾಲೆ ಹಾಗೂ ಗಿಡಮೂಲಿಕೆ ಗಳು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಾಕಾರಿ ಎಂದು ಹೇಳಲಾಗುತ್ತದೆ. ಪ್ರತಿ ದಿನ ಆಹಾರದಲ್ಲಿ ದಾಲ್ಚಿನಿ ಪುಡಿ ಹಾಗೂ ಖಾರದ ಉಪ್ಪನ್ನು ಸೇವಿಸಬೇಕು. ಬೆಳ್ಳುಳ್ಳಿಯ ಒಣ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್, ಲಿಂಬೆರಸ ಸೂರ್ಯ ಕಾಂತಿ ಬೀಜಗಳನ್ನು ಬಳಸಬಹುದು. ಆಲಿವ್ ತೈಲ ಹೃದಯಕ್ಕೆ ಅತ್ಯುತ್ತಮ ಎಂದೇ ಹೇಳಬಹುದು. ಇದರಲ್ಲಿ ಪೋಷಕಾಂಶಗಳು ಹಾಗೂ ಆಂಟಿ ಆಕ್ಯಿಡೆಂಟ್ ಗಳು ಹೆಚ್ಚಾಗಿದ್ದು, ಕೆಟ್ಟ ಕೊಲೆಸ್ಟ್ರಾಲ್ ನ್ನು ತಡೆಗಟ್ಟುತ್ತವೆ. ಒಟ್ಟಾರೆ ನಿಮ್ಮ ಅಡುಗೆ ಮನೆಯಲ್ಲಿ ಆಲಿವ್ ಎಣ್ಣೆಯನ್ನು ಬಳಸುವುದು ಸೂಕ್ತ. 

ಮೀನು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಸಾಲ್ಮನ್ ಮೀನು ಒಮೆಗಾ ೩ ಕೊಬ್ಬಿನಾಮ್ಲದಿಂದ ಸಮೃದ್ಧವಾಗಿದೆ. ಸಾಲ್ಮನ್ ಅಥವಾ ಒಮೆಗಾ ೩ ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಮೀನನ್ನು ಎರಡು ವಾರದಲ್ಲಿ ಸೇವನೆ ಮಾಡಬೇಕು. ಹೃದಯದ ಆರೋಗ್ಯಕ್ಕೆ ಇದು ಹೆಚ್ಚು ಪ್ರಯೋಜನಕಾರಿ ಎಂದು ಹೇಳಬಹುದು. 

ಓಟ್ ಮೀಲ್ ನಲ್ಲಿ , ಖನಿಜಾಂಶ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ನಾರಿನಾಂಶ ಇದರಲ್ಲಿದ್ದು,  ಹೃದಯದ ಆರೋಗ್ಯಕ್ಕೂ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ನೇರಳೆ ಹಣ್ಣು ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ

ಬಾರ್ಲಿ ಸಹ ಹೃದಯದ ಆರೋಗ್ಯಕ್ಕೆ ಉತ್ತಮವಾದದ್ದು.. ಬಾರ್ಲಿಯನ್ನು ತೊಳೆದು ತಣ್ಣೀರಿನಲ್ಲಿ ಇಡೀ ರಾತ್ರಿ ನೆನೆಯಿಡಿ. ನಂತರ ಬಾರ್ಲಿಯ ಸೂಪ್ ಹಾಗೂ ಭಕ್ಷ್ಯಗಳನ್ನು ಆಗಾಗ ನಿಮ್ಮ ಆಹಾರದಲ್ಲಿ ಸೇರಿಸಿ. ಗೋಧಿ ಉಪಯೋಗಿಸುವುದರಿಂದ ಅಥವಾ ಹುಗ್ಗಿ ಮೊದಲಾದ ಸಿಹಿ ಪದಾರ್ಥಗಳನ್ನು ಸೇವಿಸುವುದರಿಂದಲೂ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. 

ಬಿಳಿ ಬ್ರೆಡ್ ನಲ್ಲಿ ಹೆಚ್ಚಿನ ನಾರಿನಾಂಶ , ವಿಟಮಿನ್ ಮತ್ತು ಖನಿಜಾಂಶ ಇರುವುದರಿಂದ ಇದನ್ನು ಉಪಯೋಗಿಸಬಹುದು. ಹೃದಯದ ಆರೋಗ್ಯಕ್ಕೂ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ನೇರಳೆ ಹಣ್ಣು ಸಹ ಹೃದಯದ ಆರೋಗ್ಯಕ್ಕೆ ಉತ್ತಮ ಎಂದೇ ಹೇಳಬಹುದು. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿ ಆಕ್ಸಿಡೆಂಟ್ ಗಳು ನಾರಿನಾಂಶ ಮತ್ತು ವಿಟಮಿನ್ ಸಿ ಹೆಚ್ಚಾಗಿವೆ. 

ಅಗಸೆಬೀಜದಲ್ಲಿ ಒಮೇಘಾ 3 ಕೊಬ್ಬಿನಾಮ್ಲಗಳು ಹೆಚ್ಚಿರುತ್ತವೆ.  ಅಗಸೆ ಬೀಜವನ್ನು ಪುಡಿ ಮಾಡಿ, ಅಥವಾ ನೇರವಾಗಿ ತಿನ್ನುವುದರಿಂದ 

ದೇಹಕ್ಕೆ ಪೋಷಕಾಂಶ ದೊರೆಯುತ್ತದೆ. ಅಲ್ಲದೇ ರಕ್ತದ ಒತ್ತಡವನ್ನು ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿವಾರಿಸುತ್ತದೆ. 

ಮೊದಲು ಮೊಸರಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಗಳಿದ್ದು, ಕೊಬ್ಬು ಹೆಚ್ಚಾಗಿರುವುದರಿಂದ ಹೃದಯಕ್ಕೆ ಮೊಸರಿನಅಂಶಗಳು ಉತ್ತಮವಾದರೂ, ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ  ಸೇವಿಸಬಾರದು. 

ಬೀನ್ಸ್ , ಬಟಾಣಿ ಹಾಗೂ ದಿದ್ವಳ ಧಾನ್ಯಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ಹೇಳಬಹುದು. ಕಡಿಮೆ ಕೊಲೆಸ್ಟ್ರಾಲ್ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಫೈಬರ್ , ಪ್ರೋಟೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳಿಂದ ಕೂಡಿದ್ದು, ಇವೆಲ್ಲವು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ. 

ಹಣ್ಣುಗಳು 

ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿವೆ. ಇದು ಹೃದಯದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಣ್ಣುಗಳು ಫೈಬರ್, ಫೋಲೇಟ್, ಕಬ್ಬಿಣ , ಕ್ಯಾಲ್ಸಿಯಂ, ವಿಟಮಿನ್ ಎ ಹಾಗೂ ವಿಟಮಿನ್ ಸಿ ಹೆಚ್ಚಾಗಿದ್ದು, ಇವುಗಳಲ್ಲಿ ಕೊಬ್ಬು ಕಡಿಮೆ ಇರುತ್ತದೆ. 

ಕೋಸುಗಡ್ಡೆ..

ನಿಯಮಿತವಾಗಿ ಬೇಯಿಸಿದ ಕೋಸುಗಡ್ಡೆಯನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಮತ್ತು ಹೃದ್ರೋಗವನ್ನು ತಡೆಯುತ್ತದೆ. ಅಲ್ಲದೇ ಅಗಸೆ ಬೀಜಗಳು ಆಲ್ಫಾ ಲಿನೋಲೆನಿಕ್ ಆಮ್ಲದ ಮೂಲವಾಗಿದೆ. ಒಮೆಗಾ 3ಗಳು ಇವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೇ ಅಗಸೆ ಬೀಜಗಳು ರಕ್ತದೋತ್ತಡವನ್ನು ಕಡಿಮೆ ಮಾಡುತ್ತದೆ. 

ಒಮೆಗಾ 3 ಆಹಾರಗಳು ಹೃದಯಾಘಾತಕ್ಕೆ ಕಾರಣವಾಗುವ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 

ಡಾರ್ಕ್ ಚಾಕಲೇಟ್ ಕೂಡಾ ಹೃದಯದ ಆರೋಗ್ಯಕ್ಕೆ ಹೆಚ್ಚು ಉತ್ತಮವಾದದ್ದು. ಇದು ಹೃದಾಯಾಘಾತ ಹಾಗೂ ಪಾರ್ಶ್ವವಾಯು ಅಪಾಯವನ್ನು ತಪ್ಪಿಸುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ