ನೀರು ಕುಡಿಯಲು ಸರಿಯಾದ ಸಮಯ, ಸರಿಯಾದ ಮಾರ್ಗ ಯಾವುದು?

  • by

ದೇಹಕ್ಕೆ ನೀರು ಬಹಳ ಮುಖ್ಯವಾದದ್ದು ಎಂದು ಎಲ್ಲರಿಗೂ ಗೊತ್ತು. ನೀರು ದೇಹವನ್ನು  ಹೈಡ್ರೀಕರಿಸಿ ಅನೇಕ ಗಂಭೀರ ಕಾಯಿಲೆಗಳನ್ನು ದೂರವಿರಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಆರೋಗ್ಯವಂತ ವ್ಯಕ್ತಿ ದಿನಕ್ಕೆ 3 ರಿಂದ 5 ಲೀಟರ್ ನೀರನ್ನು ಕುಡಿಯಬೇಕು. ಆದ್ರೆ ನೀರು ಕುಡಿಯಲು ಸರಿಯಾದ ಮಾರ್ಗವೂ ಇದೆ. ತಪ್ಪಾದ ರೀತಿಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ನೀರನ್ನು ಕುಡಿಯಲು ಸರಿಯಾದ ಮಾರ್ಗ ಯಾವುದು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನೀರು ಕುಡಿಯಲು ಸರಿಯಾದ ಮಾರ್ಗ ಮತ್ತು ಸರಿಯಾದ ಸಮಯದ ಬಗ್ಗೆ ತಿಳಿದುಕೊಳ್ಳಿ. 

Easy Ways  Drink Water,
ನೀರು ಕುಡಿಯಲು, ಸರಿಯಾದ ಸಮಯ, ಸರಿಯಾದ ಮಾರ್ಗ ,

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ!

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹವು ಹೈಡ್ರೇಟ್ ಜತೆಗೆ ಡಿಟಾಕ್ಸ್ ಆಗುತ್ತದೆ. ಅಷ್ಟೇ ಅ್ಲಲ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಗ್ಯಾಸ್ ಹಾಗೂ ಮಲಬದ್ಧತೆ ಸಮಸ್ಯೆಯಿಂದಲೂ ಪರಿಹಾರ ಸೀಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿದರೆ, ದೇಹದ ವಿಷಕಾರಿ ಅಂಶ ಹೊರ ಹೋಗುತ್ತದೆ. 

ನಿಂತುಕೊಂಡು ನೀರು ಕುಡಿಯಬಾರದು!

ನಿಂತುಕೊಂಡು ನೀರು ಕುಡಿಯಬಾರದು ಎಂದು ಹಿರಿಯರು ಹೇಳುತ್ತಾರೆ. ಇದರ ಹಿಂದಿನ ಕಾರಣವನ್ನು ನಿಮಗೆ ಗೊತ್ತಿಲದೇ ಇರಬಹುದು. ಆದ್ರೆ ಆಯುರ್ವೇದದ ಪ್ರಕಾರ, ನಿಂತುಕೊಂಡೇ ನೀರು ಕುಡಿಯುವುದರಿಂದ ನೀರು ಹೊಟ್ಟೆಯ ಕೆಳಭಾಗಕ್ಕೆ ಹೋಗುತ್ತದೆ. ಇದ್ರಿಂದ ನೀವು ಸೇವಿಸಿದ ಆಹಾರ ಪೋಷಕಾಂಶ ಪಡೆಯಲು ಸಾಧ್ಯವಾಗದೇ ಇರಬಹುದು.

Easy Ways  Drink Water,
ನೀರು ಕುಡಿಯಲು, ಸರಿಯಾದ ಸಮಯ, ಸರಿಯಾದ ಮಾರ್ಗ ,

ತಾಲೀಮು ನಂತರ ನೀರು ಕುಡಿಯಿರಿ..!

ವ್ಯಾಯಾಮ ಅಥವಾ ಯಾವುದೇ ರೀತಿಯ ತಾಲೀಮು ನಂತರ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ. ನಿಮ್ಮ ದೇಹವು ಯಾವಾಗಲೂ ನೀರಿನ ಅಂಶದಿಂದ ಕೂಡಿರುತ್ತದೆ. ಏಕೆಂದರೆ ವ್ಯಾಯಾಮ ನಂತರ ದೇಹದಲ್ಲಿ ದ್ರವ ಪ್ರಮಾಣ ಕಡಿಮೆ ಯಾಗುತ್ತದೆ. 

ಒಂದೇ ಬಾರಿ ತುಂಬಾ ಜನರು ವೇಗವಾಗಿ ನೀರು ಕುಡಿಯುತ್ತಾರೆ. ಇದರ ಬದಲು ಪದೇ ಪದೇ ಗುಟುಕು ನೀರನ್ನು ಅನೇಕ ಬಾರಿ ಕುಡಿಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಜೀರ್ಣ ಕ್ರಿಯೆ ಸಲೀಸಾಗಿ ಆಗುತ್ತದೆ. ಇದರ ಜತೆಗೆ ಚಯಾಪಚಯ ಕ್ರಿಯೆ ಉತ್ತಮವಾಗಿಡಲು ಸಹಾಯವಾಗುತ್ತದೆ. 

ತಿನ್ನುವ ಅರ್ಧ ಗಂಟೆ ಮೊದಲು ನೀರು ಕುಡಿಯಿರಿ!

ತಿನ್ನುವ ಮೊದಲು ನೀವು ತಕ್ಷಣಕ್ಕೆ ನೀರು ಕುಡಿದರೆ ,ಆಹಾರವನ್ನು ಹೊಟ್ಟೆ ತುಂಬಾ ತಿನ್ನಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆಹಾರ ಸೇವಿಸುವುದಕ್ಕೂ ಮುನ್ನ ನಿಮ್ಮ ಹೊಟ್ಟೆ ತುಂಬುತ್ತದೆ. ಹೀಗಾಗಿ ಆಹಾರ ಸೇವಿಸಿದ ಕೂಡಲೇ ನೀವು ನೀರು ಕುಡಿದರೆ ನಿಮಗೆ ಜೀರ್ಣ ಕ್ರಿಯೆ ಸಮಸ್ಯೆ, ಮಲಬದ್ಧತೆಯ ಸಮಸ್ಯೆಗಳಿಗೂ ಕಾರಣವಾಗಬಹುದು. ಇದ್ರಿಂದ ವಾಂತಿ ಸಮಸ್ಯೆಯೂ ಹೆಚ್ಚಾಗಬಹುದು. 

ಊಟಕ್ಕೂ ಮುನ್ನ ೧ ಗ್ಲಾಸ್ ನೀರು ಕುಡಿಯಿರಿ…!

ಮತ್ತೊಂದು ಉತ್ತಮ ಮಾರ್ಗವೆಂದರೆ ಪ್ರತಿ ಊಟಕ್ಕೂ ಮುನ್ನ 1 ಗ್ಲಾಸ್ ನೀರು ಕುಡಿಯಬೇಕು.  ನೀವು ಪ್ರತಿ ದಿನ ೩ ಹೊತ್ತು ಊಟ ಮಾಡಿದರೆ, ಸುಮಾರು 720 ml ನೀರು ಕುಡಿಯಬೇಕು. ಹೀಗೆ ಮಾಡುವುದರಿಂದ ಹೊಟ್ಟೆ ತುಂಬಿದ ಅನುಭವ ನಿಮಗೆ ಆಗುವುದಿಲ್ಲ. ಇನ್ನು ನೀವು ತೂಕ ಇಳಿಸಿಕೊಳ್ಳಲು ಬಯಸುವಿರಾದರೆ, ಒಂದು ಗ್ಲಾಸ್ ನಷ್ಟು ನೀರನ್ನು ಕುಡಿಯಬೇಕು. ಇದ್ರಿಂದ ನಿಮ್ಮ ಕ್ಯಾಲೋರಿ ಕಡಿತಗೊಳಿಸಲು ಇದು ಸಹಾಯ ಮಾಡುತ್ತದೆ. 

Easy Ways  Drink Water,
ನೀರು ಕುಡಿಯಲು, ಸರಿಯಾದ ಸಮಯ, ಸರಿಯಾದ ಮಾರ್ಗ ,

ಫಿಲ್ಟರ್ ನೀರನ್ನು ಕುಡಿಯಿರಿ!

ಮನೆಯ ನೀರು ಶುದ್ಧವಾಗಿಲ್ಲದಿದ್ದರೆ ಫಿಲ್ಟರ್ ನೀರನ್ನು ಕುಡಿಯಬಹುದು. ನೀರು ಫಿಲ್ಟರ್ ಮಾಡುವುದರಿಂದ ರುಚಿಯನ್ನು ಕಾಯ್ದುಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಫಿಲ್ಟರ್ ಲಭ್ಯವಿವೆ. ಕಲುಷಿತ ಟ್ಯಾಪ್ ನೀರಿನಿಂದ ಹರಡುವ ಬ್ಯಾಕ್ಟೇರಿಯಾ ಮಟ್ಟವನ್ನು ತಗ್ಗಿಸಲು ಇದು ಸಹಾಯ ಮಾಡುತ್ತದೆ. ನೀರಿನ ಫಿಲ್ಟರ್ ಬಳಸುವುದು ಬಾಟಲಿ ನೀರನ್ನು ಖರೀದಿಸುವುದಕ್ಕಿಂತಲೂ ಕಡಿಮೆ ವೆಚ್ಚದಾಯಕ ಹಾಗೂ ಪರಿಸರ ಸ್ನೇಹಿ ಎಂದು ಹೇಳಬಹುದು. 

ಕೆಲಸದ ಸ್ಥಳದಲ್ಲಿ ಪ್ರತಿ 1 ಗಂಟೆಗೆ ನೀರು ಕುಡಿಯುವುದು!

ನೀವು ಪ್ರತಿ ದಿನ ಕೆಲಸ ಮಾಡುತ್ತಿದ್ದರೆ, ಕೆಲಸದ ವೇಳೆ ಪ್ರತಿ 1 ಗಂಟೆಗೂ 1 ಲೋಟ ನೀರು ಕುಡಿಯಬೇಕು. ನಿಮ್ಮ ದೈನಂದಿನ ನೀರಿನ ಪ್ರಮಾಣ 1,920 ಮಿಲಿ ವರೆಗೆ ಇರಬೇಕು. ಈ ವಿಧಾನ ಅನುಸರಿಸಿದರೆ ನೀವು ದಿನವಿಡೀ ನೀರಿನ ಸೇವನೆಯನ್ನು ಸ್ಥಿರವಾಗಿರಿಸಬಹುದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ