ಹಾಗಲಕಾಯಿ ಕಹಿ ಕಡಿಮೆ ಮಾಡಲು ಟಿಪ್ಸ್..!

  • by

ಹಾಗಲಕಾಯಿ ತರಕಾರಿಗಳಲ್ಲಿ ಒಂದು. ಇದು ಕಹಿಯಾದರೂ ಆರೋಗ್ಯಕರವಾದದ್ದು. ಹಾಗಲಕಾಯಿ ಪ್ರತಿ ದಿನ ಆಹಾರದಲ್ಲಿ ಸೇರಿಸಿದರೆ ಯಾವತ್ತೂ ನೀವು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ಮಧುಮೇಹ ರೋಗಿಗಳಿಗೆ ಹಾಗಲಕಾಯಿ ತಿನ್ನಲು ವಿಶೇಷವಾಗಿ ವೈದ್ಯರು ಸಲಹೆ ನೀಡುತ್ತಾರೆ. ಆದ್ರೆ ಕೆಲವು ಮನೆಗಳಲ್ಲಿ ಹಾಗಲಕಾಯಿ ಕಹಿ ಎನ್ನುವ ಕಾರಣಕ್ಕೆ, ದೂರವಿರುತ್ತಾರೆ. ಹಾಗಲಕಾಯಿ ಖರೀದಿ ಮಾಡುವುದೇ ಇಲ್ಲ. ಆದರೆ ನೀವು ಯೋಚಿಸಬೇಕಿಲ್ಲ. ಹಾಗಲಕಾಯಿಯ ಕಹಿಯನ್ನು ಈ ವಿಧಾನಗಳ ಮೂಲಕ ಕಡಿಮೆ ಮಾಡಬಹುದು, ರುಚಿ ರುಚಿಕರವಾದ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಹಾಗಲಕಾಯಿಯ ಕಹಿ ಹೇಗೆ ಕಡಿಮೆ ಮಾಡುವುದು? ಇಲ್ಲಿದೆ ಟಿಪ್ಸ್.


easy tips, removing bitterness, bitter gourd, 
ಹಾಗಲಕಾಯಿ ಕಹಿ ಕಡಿಮೆ, ಟಿಪ್ಸ್,

ಹಾಗಲಕಾಯಿಯ ಸಿಪ್ಪೆ ತೆಗೆಯಿರಿ..!

ಹಾಗಲಕಾಯಿಯಲ್ಲಿರುವ ಕಹಿಯನ್ನು ನಿವಾರಿಸಲು ಮೇಲಿನ ಸಿಪ್ಪೆ ತೆಗೆಯಬೇಕು. ಏಕೆಂದರೆ ಈ ಸಿಪ್ಪೆಯಲ್ಲಿ ಕಹಿ ಜಾಸ್ತಿಯಾಗಿರುತ್ತದೆ. ಆದ್ರೆ ಈ ಸಿಪ್ಪೆಯನ್ನು ಎಸೆಯಬೇಡಿ. ಬದಲಿಗೆ ಅದರಲ್ಲಿ ಸ್ವಲ್ಪ ಉಪ್ಪು ಹಾಕಿ ಬಿಸಿಲಿನಲ್ಲಿ ಒಣಗಿಸಿ. ಇದರಲ್ಲಿ ಪೋಶಕಾಂಶಗಳು ಹೆಚ್ಚಾಗಿರುವುದರಿಂದ , ರಾತ್ರಿ ಮಸಾಲೆಯಲ್ಲಿ ಇದನ್ನು ಫ್ರೈ ಮಾಡಬಹುದು. ಆಗ ಕಹಿಯಾಗುವುದಿಲ್ಲ. ಬದಲಾಗಿ ರುಚಿ ಹೆಚ್ಚಾಗುತ್ತದೆ.

ಬೀಜಗಳನ್ನು ತೆಗೆಯಿರಿ

ಹಾಗಲಕಾಯಿಯ ಕಹಿ ನಿವಾರಿಸಲು ಮತ್ತೊಂದು ಉಪಾಯವೆಂದರೆ ಇದರಲ್ಲಿರುವ ಬೀಜಗಳನ್ನು ತೆಗೆಯಿರಿ. ಬೀಜಗಳು ಹೆಚ್ಚು ಕಹಿ ಅಂಶವನ್ನು ಹೊಂದಿರುತ್ತವೆ. ಮತ್ತು ತಿನ್ನುವಾಗ ಬೀಜಗಳು ಬಾಯಿಗೆ ಬಂದು ಅಡ್ಡಿಪಡಿಸಬಹುದು.


easy tips, removing bitterness, bitter gourd, 
ಹಾಗಲಕಾಯಿ ಕಹಿ ಕಡಿಮೆ, ಟಿಪ್ಸ್,

ಉಪ್ಪು ಸೇರಿಸಿ.!.
ಕಹಿ ಹಾಗಲಕಾಯಿಯನ್ನು ಉಪ್ಪು ಸೇರಿಸುವ ಮೂಲಕ ರುಚಿಯನ್ನಾಗಿ ಮಾಡಬಹುದು. ಉಪ್ಪು ಹಾಗಲಕಾಯಿಯ ಕಹಿ ರಸವನ್ನು ನಿವಾರಿಸುತ್ತವೆ. ಇದಕ್ಕಾಗಿ ಹಾಗಲಕಾಯಿ ತೆಗೆದುಕೊಂಡು ಇದಕ್ಕೆ ಉಪ್ಪು ಸೇರಿ, ಸುಮಾರು 20 ರಿಂದ 30 ನಿಮಿಷಗಳ ವರೆಗೂ ಇರಿಸಿ. ನಂತರ ಸ್ವಲ್ಪ ಸಮಯದ ಬಳಿಕ ಹಾಗಲಕಾಯಿಯಲ್ಲಿರುವ ಕಹಿ ರಸವಾಗಿ ಹೊರಬರುತ್ತದೆ. ಬಳಿಕ ಇದನ್ನು ಪಲ್ಯ, ಗೊಜ್ಜು ರೂಪದಲ್ಲಿ ಬಳಸಬಹುದು.


easy tips, removing bitterness, bitter gourd, 
ಹಾಗಲಕಾಯಿ ಕಹಿ ಕಡಿಮೆ, ಟಿಪ್ಸ್,

ಮೊಸರು ಬಳಕೆ!

ಹಾಗಲಕಾಯಿಯಲ್ಲಿರುವ ಕಹಿಯನ್ನು ನಿವಾರಿಸಲು ಮೊಸರನ್ನು ಸಹ ಬಳಸಬಹುದು. ಹಾಗಲಕಾಯಿಯನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, 1 ಗಂಟೆ ಮೊಸರಿನಲ್ಲಿ ನೆನೆಹಾಕಿ. ಇದ್ರಿಂದ ಹಾಗಲಕಾಯಿಯ ಕಹಿ ನಿವಾರಣೆಯಾಗುತ್ತದೆ.

easy tips, removing bitterness, bitter gourd, 
ಹಾಗಲಕಾಯಿ ಕಹಿ ಕಡಿಮೆ, ಟಿಪ್ಸ್,

ಈರುಳ್ಳಿ ಸಹ ಬಳಸಬಹುದು..!

ಹಾಗಲಕಾಯಿಯ ಕಹಿ ನಿವಾರಿಸಲು ಈರುಳ್ಳಿ ಸಹ ಬಳಸಬಹುದಾಗಿದೆ. ಹಾಗಲಕಾಯಿಯನ್ನು ಕೆಲವರು ತಕ್ಷಣಕ್ಕೆ ತಯಾರಿಸುತ್ತಾರೆ. ಈ ಸಮಯದಲ್ಲಿ ಹಾಗಲಕಾಯಿಯನ್ನು ಸಣ್ಣದಾಗಿ ಕತ್ತರಿಸಿ, ನಂತರ ಮೂರು ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ, ಇದರ ಜತೆ ಸೇರಿಸಿ ಬಾಣಲೆಗೆ ಹಾಕಿ ಹುರಿಯಿರಿ. ಇದ್ರಿಂದ ಕಹಿ ಕಡಿಮೆಯಾಗುತ್ತದೆ. ಹಾಗಲಕಾಯಿಯನ್ನು ಸ್ವಚ್ಚ ಮಾಡಿ, ಸಣ್ಮದಾಗಿ ಕಟ್ ಮಾಡಿ ಅದಕ್ಕೆ ಉಪ್ಪು ಹಾಕಿ 1 ಗಂಟೆ ನೆನೆಯಲು ಬಿಡಿ. ಬಳಿಕ ಇದನ್ನು ನೀರಿನಲ್ಲಿ ತೊಳೆದು ಅಡುಗೆಗೆ ಬಳಸಬಹುದು.

ಹಾಗಲಕಾಯಿಯ ಪ್ರಯೋಜನಗಳು..!

ಹಾಗಲಕಾಯಿಯನ್ನು ನಿಂಬೆ ರಸದ ಜತೆ ಮಿಶ್ರಣ ಮಾಡಿ ಸೇವಿಸಿದರೆ, ರಕ್ತ ಶುದ್ಧಿಯಾಗುತ್ತದೆ. ಜೀವಕೋಶಗಳ ಪುನರುತ್ಪಾದನೆಯಲ್ಲಿ ಹಾಗಲಕಾಯಿ ಸಹಾಯ ಮಾಡುತ್ತದೆ. ಕಿಡ್ನಿಯನ್ನು ಶುದ್ಧಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಹಾಗಲಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯ ಹುಣ್ಣು ಮೊದಲಾದವುಗಳನ್ನು ನಿವಾರಣೆ ಯಾಗುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ತಲೆ ಕೂದಲು ಹೊಳಪಾಗಿಸಲು ಹಾಗಲಕಾಯಿ ಬಳಸಬಹುದು, ಹಾಗಲಕಾಯಿ ರಸ ಹಾಗೂ ಮೊಸರು ಸೇರಿಸಿ ಬಳಸಬಹುದು. ಅಸ್ತಮಾ ಮತ್ತು ಶ್ವಾಸನಾಳಗಳ ಒಳಪೊರೆಯ ಉರಿಯೂತವನ್ನು ನಿಯಂತ್ರಣದಲ್ಲಿಡು ಸಹಾಯಕಾರಿ.


easy tips, removing bitterness, bitter gourd, 
ಹಾಗಲಕಾಯಿ ಕಹಿ ಕಡಿಮೆ, ಟಿಪ್ಸ್,

ಗಮನಿಸಿ. ಹಾಗಲಕಾಯಿಯನ್ನು ಪ್ರತಿ ದಿನ ಸೇವನೆ ಮಾಡಬಾರದು. ಇದು ನರಗಳ ದೌರ್ಬಲ್ಯತೆ ಕಾರಣವಾಗಬಹುದು. ಹಾಗಾಗಿ ಎಚ್ಚರ ವಹಿಸಿ.
ಹಾಗಲಕಾಯಿ ಮಿಟಮಿನ್ ಗಳಿಂದ ಸಮೃದ್ಧವಾಗಿದೆ. ಹಾಗಲಕಾಯಿಗಳಲ್ಲಿ ಜೀವಸತ್ವಗಳನ್ನು ಕಾಣಬಹುದು. ಖನಿಜ. ಮ್ಯಾಂಗನೀಸ್ , ಸತು. ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೇರಳವಾಗಿ ದೊರೆಯುತ್ತದೆ.

ಕ್ಯಾನ್ಸರ್ ರೋಗವನ್ನು ಹಾಗಲಕಾಯಿ ತಡೆಗಟ್ಟುತ್ತದೆ.ಕ್ಯಾನ್ಸರ್ ಅಪಾಯಕಾರಿ ಜೀವಕೋಶಗಳನ್ನು ಬೆಳೆಯದಂತೆ ತಡೆಗಟ್ಟುತ್ತದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ತಗ್ಗಿಸುತ್ತದೆ. ಬೆಳಿಗ್ಗೆ ಒಂದು ಲೋಟ ಹಾಗಲಕಾಯಿ ರಸವನ್ನು ಖಾಲಿಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆ ಅಂಶ ಮೂರೇ ದಿನದಲ್ಲಿ ಕಂಟ್ರೋಲ್ ಗೆ ಬರುತ್ತದೆ.ದೇಹದಲ್ಲಿ ಇನ್ಸುಲಿನ್ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.

ಕಣ್ಣಿನ ದೃಷ್ಟಿಗೂ ಇದು ಉತ್ತಮವಾದದ್ದು. ವಿಟಮಿನ್ ಎ ಪೋಷಕಾಂಶ ಇದರಲ್ಲಿ ಹೇರಳವಾಗಿರುವುದರಿಂದ ಕಣ್ಣಿಗೆ ಅಗತ್ಯವಾದ ಪೋಷಕಾಂಶಗಳು ದೊರೆಯುವುದರಿಂದ ಕಣ್ಣಿನ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಗಳು ಕಣ್ಣಿನ ದೃಷ್ಟಿಯ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ.

ಹಾಗಲಕಾಯಿ ರಕ್ತವನ್ನು ಶುದ್ಧಿಕರಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ತಿನ್ನುವುದರಿಂದ ರಕ್ತ ಶುದ್ಧಿಕರಿಸಿ ಚರ್ಮದ ವಿವಿಧ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮೊಡವೆಗಳ ನಿವಾರಣೆಗೆ ಹಾಗಲಕಾಯಿ ಸೇವನೆ ಮಾಡಬೇಕು. ಆಳವಾದ ಚರ್ಮದ ಸೋಂಕುಗಳಿಗೆ ಶಮನಕಾರಿಯಾಗಿದೆ. ಹಾಗಲಕಾಯಿಯ ರಸವನ್ನು ನಿಂಬೆಹಣ್ಣಿನ ರಸದ ಜತೆ; ಬೆರೆಸಿ, ಪ್ರತಿ ದಿನ ಖಾಲಿ ಹೊಟ್ಟೆಗೆ ೬ ತಿಂಗಳಗಳ ಕಾಲ ಸೇವಿಸಿರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ