ಧೂಳಿನ ಅಲರ್ಜಿ ಸಮಸ್ಯೆಗೆ ಪರಿಹಾರ..! – (Tips to Relieve Dust Allergies )

  • by

ಪ್ರತಿಯೊಬ್ಬರು ಧೂಳಿನಿಂದ ರಕ್ಷಿಸಿಕೊಳ್ಳಲು ಬಯಸುತ್ತಾರೆ. ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಅನೇಕ ಕಾಯಿಲೆಗಳು ಅಪಾಯ ತಂದೊಡ್ಡಬಹುದು. ಮಾಲಿನ್ಯ ಗಂಭೀರ ಸಮಸ್ಯೆಯಾಗಿದ್ದು, ಅನೇಕ ಜನರು ಧೂಳಿನ ಅಲರ್ಜಿಗೆ ಗುರಿಯಾಗುತ್ತಿದ್ದಾರೆ. ಅಲರ್ಜಿ ಹಲವು ಕಾರಣಗಳಿಂದ ಉಂಟಾಗಬಹುದು. ಧೂಳಿನಿಂದಲೂ ಉಂಟಾಗಬಹುದು. ಜತೆಗೆ ನಿಮ್ಮ ಸುತ್ತಮುತ್ತಲಿನ ಕೆಲವು ವಿಷಯಗಳು ಕಾರಣವಾಗಬಹುದು. ಧೂಳಿನ ಅಲರ್ಜಿಯನ್ನು ನಿವಾರಿಸುವುದು ಹೇಗೆ , ಮನೆ ಮದ್ದುಗಳೇನು. ಇಲ್ಲಿದೆ ಕಂಪ್ಲೀಡ್ ಡಿಟೇಲ್ಸ್.


Dust Allergy, Causes, Treatment, ಧೂಳಿನ ಅಲರ್ಜಿ, ಚಿಕಿತ್ಸೆ

ಧೂಳಿನ ಅಲರ್ಜಿಯ ಲಕ್ಷಣಗಳು

ಸೀನು
ಆಗಾಗ್ಗೆ ಮೂಗು ಸೋರುವುದು
ಆಯಾಸ ಮತ್ತು ದೌರ್ಬಲ್ಯ
ಕೆಮ್ಮು, ಮೂಗು, ಗಂಟಲು ತುರಿಕೆ
ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಗಳು
ಅಸ್ತಮಾ ಲಕ್ಷಣಗಳು
ನೋಯುತ್ತಿರುವ ಗಂಟಲು
ಆಯಾಸ ಮತ್ತು ಕಿರಿ ಕಿರಿ
ತಲೆನೋವು
ಚರ್ಮದಲ್ಲಿ ದದ್ದುಗಳು, ಗುಳ್ಳೆಗಳು

ಧೂಳಿನ ಅಲರ್ಜಿಗೆ ಚಿಕಿತ್ಸೆ..!

ಧೂಳಿನ ಅರಲರ್ಜಿಯನ್ನು ಕೆಲವೇ ದಿನಗಳಲ್ಲಿ ಗುಣಪಡಿಸಬಹುದು. ಕೆಮ್ಮು ಅಥವಾ ದೀರ್ಘಕಾಲದವರೆಗೆ ಉಸಿರಾಡಲು ತೊಂದರೆಯಾದರೆ, ಧೂಳಿನ ಅಲರ್ಜಿಗೆ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಬೇಕು. ಅವರ್ಜಿಯ ಪ್ರಕಾರವನ್ನು ಅವಲಂಬಿಸಿ ವೈದ್ಯರು ಔಷಧಿಗಳನ್ನು , ಕ್ರೀಮ್ ಗಳನ್ನು ಹಾಗೂ ಲೋಷನ್ ಗಳನ್ನು ನೀಡಬಹುದು.

ಅಲರ್ಜಿ ನಿವಾರಿಸುವ ಕ್ರಮಗಳು

ಮನೆಯ ಕಿಟಕಿಗಳನ್ನು ಹಾಗೂ ಬಾಗಿಲನ್ನು ತೆರೆಯಬೇಡಿ.
ಮೆತ್ತನೆಯ ಹಾಗೂ ಫೈಬರ್ ಕಂಬಳಿಗಳನ್ನು ಬಳಸುವುದನ್ನು ಅವೈಡ್ ಮಾಡಿ
ಕಾರ್ಪೆಟ್ ನ್ನು ಮನೆಯಲ್ಲಿ ಇರಿಸಿದರೆ ನಂತರ ಅದನ್ನು ನಿಯಮಿತವಾಗಿ ತೊಳೆಯಿರಿ.
ಮನೆಯಲ್ಲಿರುವ ಧೂಳನ್ನು ಸ್ವಚ್ಛಗೊಳಿಸಲು ಒದ್ದೆ ಮಾಡಿರುವ ಬಟ್ಟೆಯನ್ನು ಬಳಸಿ
ಧೂಳಿನ ಅಲರ್ಜಿಯನ್ನು ತಡೆಗಟ್ಟಲು ಮನೆಮದ್ದುಗಳು


Dust Allergy, Causes, Treatment, ಧೂಳಿನ ಅಲರ್ಜಿ, ಚಿಕಿತ್ಸೆ

ಜೇನುತುಪ್ಪ

ಜೇನುತುಪ್ಪ ಅಲರ್ಜಿಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶೀತ ಮತ್ತು ಸೀನುಗಳಿಂದ ನಿಮಗೆ ಪರಿಹಾರ ನೀಡುತ್ತದೆ. ನೋಯುತ್ತಿರುವ ಗಂಟಲು ಮತ್ತು ಉಸಿರಾಟದ ಪ್ರದೇಶದ ಉರಿಯೂತವನ್ನು ಸರಿಪಡಿಸುತ್ತದೆ. ನೋವು ಹಾಗೂ ಕೆಮ್ಮನ್ನು ಗುಣಪಡಿಸಲು ಲೂಬ್ರಿಕಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ನಿಮದೆ ಧೂಳಿನ ಅಲರ್ಜಿ ಇದ್ದರೆ 1 ಚಮಚಾ ಜೇನುತುಪ್ಪವನ್ನು ಕುಡಿಯಿರಿ. ಇದರ ನಂತರ ನೀರು ಕುಡಿಯಬೇಡಿ.ಪ್ರತಿರಕ್ಷಣಾ ವ್ಯವಸ್ಥೆಯ ಅಸಮತೋಲನದಿಂದ ಅಲರ್ಜಿ ಉಂಟಾಗುತ್ತದೆ. ಇದಕ್ಕಾಗಿ ಪ್ರೋಬಯಾಟಿಕ್ ಅಲರ್ಜಿಯನ್ನು ನಿವಾರಿಸಲು ಕೆಲಸ ಮಾಡುತ್ತವೆ.

ಆಪಲ್ ವಿನೆಗರ್

1 ಟೀ ಸ್ಪೂನ್ ಆಪಲ್ ವಿನೆಗರ್ ಅನ್ನು 1 ಲೋಟ ನೀರಿನಲ್ಲಿ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿ. ಈ ಪಾನೀಯವು ಕಫದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಧೂಳಿನ ಅಲರ್ಜಿಗೆ ಚಿಕಿತ್ಸೆ ನೀಡುವ ಅತ್ಯಂತ ಪರಿಣಾಮಕಾರಿ ಮತ್ತು ಖಚಿತವಾದ ಮಾರ್ಗವೆಂದರೆ ಹಬೆ ನೀಡುವುದು. ಕನಿಷ್ಠ 10 ನಿಮಿಷಗಳ ಕಾಲ ಹಬೆ ತೆಗೆದುಕೊಳ್ಳಿ. ಇದು ನಿಮ್ಮ ಮೂಗಿನ ಸೋರಿಕೆಯನ್ನು ನಿವಾರಿಸುತ್ತದೆ.

ವಿಟಮಿನ್ ಸಿ ಅಲರ್ಜಿಗೆ ಪರಿಹಾರವೆಂದೇ ಹೇಳಬಹುದು. ಇದಕ್ಕೆ ಸರಳವಾದ ಹಾಗೂ ಸುಲಭವಾದ ಪರಿಹಾರ ವೆಂದರೆ, ಸಿಟ್ರಸ್ ಹಣ್ಣುಗಳಾದ ಕಿತ್ತಳೆ ಮತ್ತು ಸಿಹಿ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇದು ಬಿಳಿ ರಕ್ತ ಕಣಗಳಿಂದ ಉತ್ಪತ್ತಿಯಾಗುವ ಹಿಸ್ಟಮೈನ್ ಸ್ರವಿಸುವಿಕೆಯನ್ನು ತಡೆಯುತ್ತದೆ. ವಿಟಮಿನ್ ಸಿ ಮೂಗಿನ ಸೋರುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.ಅಲರ್ಜಿಯನ್ನು ತಡೆಗಟ್ಟಲು ತುಂಬಾ ಮೆಡಿಸಿನ್ ತೆಗೆದುಕೊಳ್ಳುವುದು ಸರಿಯಲ್ಲ. ಇದರಿಂದ ಕೆಲಮೊಮ್ಮೆ ಅಡ್ಡಪರಿಣಾಮಗಳು ಎದುರಾಗಬಹುದು.

ಧೂಳಿನ ಅಲರ್ಜಿಯಿಂದ ದೂರವಿರುವುದು ಹೇಗೆ..?

ಮನೆಯಲ್ಲಿ ಏರ್ ಫಿಲ್ಟರ್ ಅನ್ನು ಬದಲಾಯಿಸುವುದರಿಂದ ಸ್ವಲ್ಪ ಪರಿಹಾರ ಸೀಗಬಹುದು. ಮನೆಯಲ್ಲಿ ಕಿಟಕಿ, ಹಾಗೂ ಬಾಗಿಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮನೆಯಲ್ಲಿರುವ ಧೂಳನ್ನು ಇಲ್ಲವಾಗಿಸಿ. ನೀವು ಧೂಳಿನ ಅಲರ್ಜಿಯನ್ನು ಹೊಂದಿದ್ದರೆ, ಮನೆಯಿಂದ ಸ್ವಲ್ಪ ಹೊತ್ತು ಹೊರಗೆ ಸಮಯ ಕಳಿಯಿರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ