ತ್ವಚೆ ಹೊಳೆಯಲು ಇವುಗಳನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ!

  • by


ಹೊಳೆಪಾದ ತ್ವಚೆ ಹೊಂದಲು ಎಲ್ಲರೂ ಇಚ್ಛೆ ಹೊಂದಿರುತ್ತಾರೆ.ಆದರೆ ಕೆಲವರು ಡಲ್ ಸ್ಕಿನ್ ನಿಂದ ತ್ವಚೆಯ ಹೊಳಪನ್ನು ಕಳೆದುಕೊಳ್ಳುತ್ತಾರೆ. ಆದ್ರೆ ನಿಮಗೆ ಗೊತ್ತಾ… ನೀರಿನ ಕೊರತೆಯಿಂದಾಗಿಯೂ ನಿಮ್ಮ ತ್ವಚೆ ಹಾಳಾಗುವುದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು. ನೀರಿನ ಕೊರತೆಯಿಂದಾಗಿ ಡಿಹೈಡ್ರೇಷನ್ ಸಮಸ್ಯೆ ಎದುರಾಗಬಹುದು. ಇದರ ನೇರ ಪರಿಣಾಮ ಮುಖದ ಮೇಲೆ ಆಗುತ್ತದೆ. ಆದ್ದರಿಂದ ನಿಮ್ಮ ತ್ವಚೆ ಹೈಡ್ರೇಟ್ ಆಗಲು, ಮುಖದ ಕಾಂತಿ ಹೆಚ್ಚಲು ಈ ವಿಧಾನಗಳನ್ನು ಅನುಸರಿಸಬಹುದು.

drink with water, glowing-skin, ,ನೀರಿನ ಜತೆ ಸೇವಿಸಿ, ಹೊಳೆಯುವ ಚರ್ಮಕ್ಕಾಗಿ,

ಚೀಯಾ ಬೀಜಗಳು

ಚೀಯಾ ಬೀಜಗಳನ್ನು ಸೂಪರ್ ಫುಡ್ ಎಂದು ಹೇಳಲಾಗುತ್ತದೆ. ಇವು ಒಮೆಗಾ 3 ಫ್ಯಾಟಿ ಆ್ಯಸಿಡ್ ಹಾಗೂ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿದೆ. ಇದರ ಸೇವನೆಯಿಂದ ಮುಖದ ಕಾಂತಿ ಹೆಚ್ಚುತ್ತದೆ.

ದಾಲ್ಚಿನಿ ನೀರು

ದಾಲ್ಚಿನಿ ಆಹಾರದಲ್ಲಿ ಬಳಸುವ ಮಸಾಲೆ ಪದಾರ್ಥ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದ್ರೆ ದಾಲ್ಚಿನಿ ನಿಮ್ಮ ಚರ್ಮದ ಸೌಂದರ್ಯಕ್ಕೆ ಬಳಸಿದ್ದೀರಾ. ದಾಲ್ಚಿನಿ ಪುಡಿಯನ್ನು ಕುದಿಯುವ ನೀರಿನಲ್ಲಿ ಇದರ ಜತೆಗೆ ತುಂಡು ಸೇಬನ್ನು ಒಟ್ಟಿಗೆ ಹಾಕಿ. ಇದನ್ನು ಫಿಲ್ಟರ್ ಮಾಡಿ ಕುಡಿಯಿರಿ. ಹೀಗೆ ಮಾಡುವುದರಿಂದ ಹೊಟ್ಟೆ ಆರೋಗ್ಯಕರವಾಗಿರುತ್ತದೆ. ಮತ್ತು ಗುಳ್ಳೆಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ. ನೀರಿನಲ್ಲಿ ದಾಲ್ಚಿನಿ ಸೇರಿಸಿ, ಇದರ ಜತೆಗೆ ಸೇಬಿನ ಒಂದು ತುಂಡನ್ನು ಸೇರಿಸಿ ಕುದಿಸಬೇಕು. ಇದರ ನೀರನ್ನು ಕುಡಿಯುವುದರಿಂದ ದೇಹದಲ್ಲಿ ರಕ್ತದ ಕೊರತೆ ನಿವಾರಿಸುವುದಲ್ಲದೇ, ರಕ್ತಸಂಚಾರ ಸರಿಯಾಗಿ ಆಗುತ್ತದೆ. ಇದ್ರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಸ್ರ್ಟಾಬರಿ

ನೀರಿನಲ್ಲಿ ಸ್ರ್ಬಾಬರಿ ರಸ ಬೆರೆಸಿ ಸೇವಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮುಖದ ಮೇಲಿರುವ ದದ್ದು, ಮೊಡವೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಜೇನುತುಪ್ಪ

ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಆರೋಗ್ಯವಾಗಿರಬಹುದು. ಅಲ್ಲದೇ, ಇದು ಮುಖದ ಸೌಂದರ್ಯ ಹೆಚ್ಚಿಸುತ್ತದೆ. ಅಲ್ಲದೇ ತೂಕವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಆರೋಗ್ಯ ಹಾಗೂ ಸೌಂದರ್ಯಕ್ಕೆ ಇದು ಉತ್ತಮವಾದ್ದದು ಎಂದು ಹೇಳಲಾಗುತ್ತದೆ. ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ದೇಹದೊಳಗೆ ಉತ್ಪತ್ತಿಯಾಗುವ ಕೊಳೆಯನ್ನು ತೆಗೆದು ಹಾಕುತ್ತದೆ. ಹಾಗೇ ಸ್ಥೂಲಕಾಯ ತ್ವರಿತವಾಗಿ ನಿವಾರಣೆ ಮಾಡುತ್ತದೆ.


drink with water, glowing-skin, ,ನೀರಿನ ಜತೆ ಸೇವಿಸಿ, ಹೊಳೆಯುವ ಚರ್ಮಕ್ಕಾಗಿ,

ಪುದೀನಾ ಎಲೆ

ಪ್ರತಿ ದಿನ ಬೆಳಿಗ್ಗೆ ಪುದೀನಾ ಎಲೆಗಳನ್ನು ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೇ, ತ್ವಚೆ ಹೊಳಪಾಗುತ್ತದೆ. ಪುದೀನಾ ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ. ಹಾಗೆಯೇ ಮುಖದ ಮೇಲಿನ ಹೊಳೆಪನ್ನು ಹೆಚ್ಚಿಸುತ್ತದೆ. ಬೇಸಿಗೆಯ ದಿನಗಳಲ್ಲಿ ಆಹಾರದಲ್ಲಿ ಬಳಸಬಹುದು, ನೀವು ಬೆಚ್ಚಗಿನ ಪುದೀನಾ ಸೇರಿಸಿ, ಅಥವಾ ಪುದೀನಾ ಎಲೆಗಳನ್ನು ಕುದಿಸಿ ಅದರ ನೀರನ್ನು ಬೆಳಿಗ್ಗೆ ಕುಡಿಯಬಹುದು.

ಹೊಳೆಯುವ ಚರ್ಮಕ್ಕಾಗಿ ನಿಂಬೆ ನೀರು

ಬಹುತೇಕ ಎಲ್ಲರೂ ನಿಂಬೆ ಪಾನಕವನ್ನು ಬಳಸುತ್ತಾರೆ. ಇದು ಆರೋಗ್ಯಕ್ಕೂ ಹಾಗೂ ಚರ್ಮಕ್ಕೂ ಎರಡಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಪ್ರತಿ ದಿನ ಬೆಳಿಗ್ಗೆ ಬೆಚ್ಚಗಿನ ನೀರು ಅಥವಾ ಸಾಮಾನ್ಯ ನೀರಿನೊಂದಿಗೆ ಬೆರೆಸಿದ ನಿಂಬೆ ರಸವನ್ನು ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಆರೋಗ್ಯವಾಗಿರಿಸುತ್ತದೆ. ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ.

ಇನ್ನು ನಿಮ್ಮ ಚರ್ಮವನ್ನು ಆಕರ್ಷಕಾಗಿ, ಹೊಳೆಯುವಂತೆ ಮಾಡಲು, ಚರ್ಮದ ಶುಷ್ಕತೆಯನ್ನು ತೆಗೆದು ಹಾಕಲು ಕೆಲ ನೈಸರ್ಗಿಕ ಟಿಪ್ಸ್ ಗಳನ್ನು ತಿಳಿಸಲಾಗಿದೆ.

ಪಪ್ಪಾಯಿ ಸಿಪ್ಪೆ ಸೌಂದರ್ಯವನ್ನು ಹೆಚ್ಚಿಸುತ್ತದೆ. ಚರ್ಮದ ಮೇಲೆ ಹಚ್ಪುವ ಮೂಲಕ ಶುಷ್ಕತೆಯನ್ನು ತೆಗೆದು ಹಾಕುತ್ತದೆ. ಪಪ್ಪಾಯಿ ಹಚ್ಚುವ ಮೂಲಕ ಶುಷ್ಕತೆಯನ್ನು ತೆಗೆಯಬಹುದು. ಪಪ್ಪಾಯಿ ಸಿಪ್ಪೆಯಲ್ಲಿ ಅಲ್ಫಾ ಹೈಡ್ರಾಕ್ಸಿ ಆಮ್ಲಗಳಿವೆ. ಇದನ್ನು ಪ್ರತಿ ದಿನ ಮುಖಕ್ಕೆ ಹಚ್ಚುವುದರಿಂದ ಚರ್ಮದ ಟೋನ್ ಸಮಸ್ಯೆ ನಿವಾರಣೆಯಾಗುತ್ತದೆ. ಚರ್ಮದಲ್ಲಿ ತೇವಾಂಶ ಕಾಪಾಡಿಕೊಳ್ಳಬಹುದು. ಇದರ ಜತೆಗೆ ಪಪ್ಪಾಯಿ ಸಿಪ್ಪೆಯಲ್ಲಿ ಪಪೈನ್ ಎಂಬ ಅಂಶವಿದ್ದು, ಇದು ಮುಖವನ್ನು ಸ್ವಚ್ಚಗೊಳಿಸುತ್ತದೆ. ಪಪ್ಪಾಯಿ ಪುಡಿಯನ್ನು ತೆಂಗಿನ ಎಣ್ಣೆಯಲ್ಲಿ ಬೆರೆಸಿ ಮುಖದ ಮೇಲೆ ಸ್ಕ್ರಬ್ ಮಾಡಿ. ಸ್ವಲ್ಪ ಸಮಯದ ನಂತರ ಮುಖವನ್ನು ನೀರಿನಿಂದ ಸ್ವಚ್ಛ ಮಾಡಿ. ಕೆಲವೇ ದಿನಗಳಲ್ಲಿ ಮುಖದ ಬಣ್ಣ ಹೊಂಬಣ್ಣವಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ