ಶಿಶುಗಳಿಗೆ ಅಜೀರ್ಣ ಉಂಟಾಗದಿರಲು ಏನು ಮಾಡಬೇಕು?

  • by

ಅಮ್ಮಂದಿರು ನವಜಾತ ಶಿಶುಗಳನ್ನು ಸಭಾಳಿಸುವುದು ಸುಲಭದ ಕೆಲಸವಲ್ಲ. ಅದರಲ್ಲೂ ಬಹಳಷ್ಚು ಅಮ್ಮಂದಿರು ಆಗಾಗ್ಗೆ ಶಿಶುಗಳ  ಅಜೀರ್ಣ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅಂಥ ಸಮಯದಲ್ಲಿ ಪ್ರತಿಯೊಬ್ಬ ತಾಯಿ ಮಗುವಿನ ಅಜೀರ್ಣದ ಬಗ್ಗೆ ಚಿಂತೆಗೀಡಾಗುವುದು ಸಹಜ.. ಶಿಶುಗಳಲ್ಲಿ  ಅಜೀರ್ಣ ಸಮಸ್ಯೆ , ಭೇದಿ, ವಾಂತಿ , ಹೀಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಗ ವೈದ್ಯರ ಬಳಿ ಧಿಡೀರ್ ಆಗಿ ಹೋಗಲು ಸಾಧ್ಯವಾಗುವುದಿಲ್ಲ.. ಸರಳವಾಗಿ ಮನೆ ಮದ್ದು ಉಪಯೋಗಿಸಿ, ಮಗುವಿನ ಅಜೀರ್ಣ ಸಮಸ್ಯೆ ಪರಿಹರಿಸಬಹುದು.  

ಅಜೀರ್ಣ ಸಮಸ್ಯೆ ಏಕೆ..?

ಶಿಶುಗಳಲ್ಲಿ  ಈಸೋಫ್ಯಾಗಲ್ ಸ್ಪಿಂಕ್ಟರ್ ಎಂಬ ವಾಲ್ಟ್ ಹೊಟ್ಟೆಯಿಂದ ಅನ್ನನಾಳಕ್ಕೆ ಆಹಾರ ತಿರುಗಿ ಹೋಗದಂತೆ ನೋಡಿಕೊಳ್ಳುತ್ತದೆ. ಮಗುವಿನಲ್ಲಿ ವಾಲ್ಟ್ ಬೆಳವಣಿಗೆ ಹಂತದಲ್ಲಿರುತ್ತದೆ. ಹಾಗಾಗಿ ಸಂಪೂರ್ಣವಾಗಿ ಬೆಳೆಯಲು 1 ವರ್ಷ ಸಮಯ ಬೇಕಾಗುತ್ತದೆ. ಇದು ಮಕ್ಕಳಲ್ಲಿ ಜೀರ್ಣ ಕ್ರಿಯೆ ಸರಿಯಾಗಿ ಆಗದಿರಲು ಪ್ರಮುಖ ಸಮಸ್ಯೆ ಎನ್ನಬಹುದು. 

ಮಕ್ಕಳಲ್ಲಿ ಇದರಿದಲೇ ಆ್ಯಸಿಡ್ ರಿಫ್ಲೆಕ್ಸ್ ಆಗುವ ಸಂಭವ ಹೆಚ್ಚು.  ಆಗಾಗ ಅಜೀರ್ಣ ಸಮಸ್ಯೆಯು ಮಕ್ಕಳಲ್ಲಿ ಎದೆ ಉರಿ ಕಾಣಿಸಿಕೊಳ್ಳುತ್ತದೆ. ನಾಲ್ಕು ತಿಂಗಳೊಳಗೆ ಸುಮಾರು ಶೇ ೫೦ ರಷ್ಟು ಶಿಶುಗಳು ಎದೆಯುರಿ ರೋಗ ಲಕ್ಷಣಗಳನ್ನು ಎದುರಿಸುತ್ತವೆ. ಇನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿನ ಶಾಲಾ ಮಕ್ಕಳು ಅಜೀರ್ಣ ಸಮಸ್ಯೆಯನ್ನು ಹೊಂದಿರುತ್ತಾರೆ. 

ಶಿಶುಗಳಲ್ಲಿ ಸಮಸ್ಯೆ ವಿವಿಧ ಕಾರಣಗಳಿಂದಾಗಿ ಉಂಟಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಅವುಗಳಲ್ಲಿ ಹೆಚ್ಚಿನವು ಸಾಮಾನ್ಯ ಕಾರಣಗಳು ಕಂಡು ಬರುತ್ತದೆ. 

babies ,indigestion ,health t,ips 
  ಶಿಶು, ಅಜೀರ್ಣ, ಸಮಸ್ಯೆ , ಆರೋಗ್ಯ ಟಿಪ್ಸ್

.1 ಸಾಕಷ್ಟು ನಿದ್ರೆ ಮಾಡದಿರುವುದು

2. ಅಧಿಕ ತೂಕ 

3. ತುಂಬಾ ವೇಗವಾಗಿ ತಿನ್ನುವುದು ಮತ್ತು ಕುಡಿಯುವುದು ಅಥವಾ ತಿನ್ನುವಾಗ ಓಡಿ ಹೋಗುವುದು.

4 ತುಂಬಾ ಮಸಾಲೆಯುಕ್ತ ಮತ್ತು ಘನವಾದ ಆಹಾರ, ವಿಶೇಷವಾಗಿ ಮಗುವಿಗೆ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ, 

5. ಕಾರ್ಬೋನೇಟೆಡ್ ಪಾನೀಯಗಳ ಅತಿಯಾದ ಸೇವನೆ

ಮನೆ ಮದ್ದುಗಳೇನು? 

ನಿಮ್ಮ ಮಗುವಿನ ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಮನೆ ಮದ್ದು ಬಳಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

1. ತಾಯಿಯ ಎದೆ ಹಾಲು

ನಿಮ್ಮ ಮಗುವಿಗೆ ಆರು ತಿಂಗಳವರೆಗೆ ಎದೆ ಹಾಲು ನೀಡಲು ಪ್ರಯತ್ನಿಸಿ. ಎದೆ ಹಾಲನ್ನು ಆರು ತಿಂಗಳವರೆಗೆ ನೀಡಿದ ನಂತರ ಮಗುವಿಗೆ ಘನ ಆಹಾರವನ್ನು ನೀಡಬೇಕಾಗುತ್ತದೆ. ನಿಮ್ಮ ಮಗುವಿನ ಜೀರ್ಣಕ್ರಿಯೆಗೆ ತಾಯಿಯ ಎದೆ ಹಾಲು ಪ್ರಮುಖ ಪಾತ್ರ ವಹಿಸುತ್ತದೆ. 

2. ಹಾಲು ಕುಡಿಸುವ ಪೋಸಿಶನ್ ಸರಿ ಇರಲಿ

ಎದೆಹಾಲು ಕುಡಿಸುವಾಗ ಪೊಸಿಶನ್ ಸರಿ ಇದ್ದರೆ ಆ್ಯಸಿಡ್ ರಿಪ್ಲೆಕ್ಸ್ ಕಡಿಮೆ ಮಾಡಬಹುದು.  ಮಗುವನ್ನು ತೊಡೆ ಮೇಲೆ ಮಲಗಿಸಿಕೊಂಡು ಹಾಲು ಕುಡಿಸುವ ಬದಲು,. ಮಗುವಿನ ತಲೆ ಸ್ವಲ್ಪ ಮೇಲಿದ್ದು, ದೇಹ ಕೆಳಗಿರುವಂತೆ ಹಿಡಿದುಕೊಳ್ಳಿ.  ಆಗ ಕುಡಿದ ಹಾಲು ತಿರುಗಿ ಬಾಯಿಗೆ ಬರುವುದಿಲ್ಲ. ಹಾಲು ಕುಡಿದಾದ ಬಳಿಕ ೧-೨ ನಿಮಿಷಗಳವರೆಗೆ ಮೆಲ್ಲನೆ ಬೆನ್ನಿಗೆ ತಟ್ಟಬೇಕು. ಆಗ ಮಗು ತೇಗುತ್ತದೆ. ಈ ರೀತಿ ಮಾಡಿದರೆ ಮಗುವಿನಲ್ಲಿ ಗ್ಯಾಸ್ ಸಮಸ್ಯೆ ಕಾಣಿಸುವುದಿಲ್ಲ. ಕಕ್ಕುವುದು ಕಡಿಮೆಯಾಗುತ್ತದೆ. 

babies ,indigestion ,health t,ips 
  ಶಿಶು, ಅಜೀರ್ಣ, ಸಮಸ್ಯೆ , ಆರೋಗ್ಯ ಟಿಪ್ಸ್

3.ಮಸಾಜ್ ಮಾಡಿ

ಮಗುವಿನ ಅಜೀರ್ಣ ಸಮಸ್ಯೆಗೆ ಮಸಾಜ್ ಸಹಕಾರಿಯಾಗುತ್ತದೆ. ಹೊಟ್ಟೆಯ ಸುತ್ತಲೂ ನಿಮ್ಮ ಮಗುವಿಗೆ ಮಸಾಜ್ ಮಾಡಲು ಪ್ರಾರಂಭಿಸಿ. ಮತ್ತು ಕೈಗಳನ್ನು ಪ್ರದಕ್ಷಿಣಾಕಾರವಾಗಿ ಕೆಳಕ್ಕೆ ಸರಿಸಿ. ಅಂತೆಯೇ ಮಗುವಿನ ಕಾಲುಗಳನ್ನು ಸಮತೋಲಿತ ರೀತಿಯಲ್ಲಿ ಮಸಾಜ್ ಮಾಡಿ

ಒಂದು ವರ್ಷ ಮಕ್ಕಳ ಅಜೀರ್ಣತೆಗೆ ಮನೆ ಮದ್ದು..

1 ಗ್ಲಾಸ್ ನಲ್ಲಿ ಹಾಲು ಕುಡಿಸಲು ಪ್ರಯತ್ನಿಸಿ

ಹಲವು ಸಂದರ್ಭಗಳಲ್ಲಿ ಕೇವಲ ಒಂದು ಲೋಟ ಹಾಲು ಕನಿಷ್ಠ  ಅಜೀರ್ಣ ಸಮಸ್ಯೆಯನ್ನು ತೊಡಧು ಹಾಕಲು ಸಹಕಾರಿ. ನಿಮ್ಮ ಮಕ್ಕಳು ೧ ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಅವರಿಗೆ ಹಸುವಿನ ಹಾಲು ಕೊಡುವುದು ಉತ್ತಮ. 

2. ಚಿಕ್ಕ ಮಕ್ಕಳಲ್ಲಿ ಹೊಟ್ಟೆಯ ಸಮಸ್ಯೆ ಉಂಟಾದಾಗ, ಮನೆ ಮದ್ದಾಗಿರುವ ಅಜ್ವೆನಾ ಅಥವಾ ಜೀರಿಗೆಯ ನೀರನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ

3 ಮೊಸರು 

ನಿಮ್ಮ ಮಗು 6 ತಿಂಗಳು ದಾಟಿದ್ದರೆ ಆಗಾಗ್ಗೆ ಜೀರ್ಣ ಸಮಸ್ಯೆ ಕಂಡು ಬಂದರೆ. ಸ್ವಲ್ಪ ಮೊಸರಿಗೆ ಚೂರು ನೀರು ಸೇರಿಸಿಕೊಂಡು ಕುಡಿಸಿ. 

babies ,indigestion ,health t,ips 
  ಶಿಶು, ಅಜೀರ್ಣ, ಸಮಸ್ಯೆ , ಆರೋಗ್ಯ ಟಿಪ್ಸ್

4 ದಾಲ್ಛಿನಿ

ದಾಲ್ಛಿನಿ ಎದೆ ಉರಿಯನ್ನು ಹಾಗೂ ಅಜೀರ್ಣ ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. 1 ಲೋಟ ನೀರು ತೆಗೆದುಕೊಂಡು 1 ಟೀ ಚಮಚಾ ದಾಲ್ಚಿನಿ ಪೌಡರ್ ಸೇರಿಸಿ. ನಿಮ್ಮ ಮಗುವಿಗೆ ಕುಡಿಸಿ. 

babies ,indigestion ,health t,ips 
  ಶಿಶು, ಅಜೀರ್ಣ, ಸಮಸ್ಯೆ , ಆರೋಗ್ಯ ಟಿಪ್ಸ್

5. ಫೈಬರ್ ಆರೋಗ್ಯಕ್ಕೆ ಒಳ್ಳೆಯದು.

ನಿಮ್ಮ  ಮಕ್ಕಳಿಗೆ ಎಷ್ಟು ಫೈಬರ್ ಬೇಕು ಎಂದು ತಿಳಿಯುವುದು ಉತ್ತಮ. 3-4 ಫೈಬರ್ ಯುಕ್ತ ಆಹಾರಗಳನ್ನು ಮಕ್ಕಳಿಗೆ ನೀಡುವಂತೆ ಆಹಾರ ತಜ್ಞರು ಸಲಹೆ ನೀಡುತ್ತಾರೆ. ನಿಮ್ಮ ಮಕ್ಕಳ ಜೀರ್ಣಶಕ್ತಿಯನ್ನು ಸುಧಾರಿಸಲು  1 ರಿಂದ 3 ವರ್ಷದ ಮಕ್ಕಳಿಗೆ  19 ಗ್ರಾಂ ಫೈಬರ್ ಹಾಗೂ 4 ರಿಂದ 8 ವಯಸ್ಸಿನ ಮಕ್ಕಳಿಗೆ 25 ಗ್ರಾಂ ಫೈಬರ್ ನೀಡುವುದು ಉತ್ತಮ.  ಪಪ್ಪಾಯಿ, ಅನಾನಸ್, ಕಿತ್ತಳೆ, ಮತ್ತು ಬಾಳೆಹಣ್ಣಿನಂತಹ ಹಣ್ಣುಗಳು ಸಾಕಷ್ಟು ಪ್ರಮಾಣದ ಫೈಬರ್ ಹೊಂದಿವೆ.  ಇವು ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ