ಖಿನ್ನತೆಯನ್ನು ಹೇಗೆ ಎದುರಿಸುವುದು? ಯೋಚಿಸಬೇಡಿ.. ಪರಿಹಾರ ಇಲ್ಲಿದೆ! ( How To Deal With Depression? The Solution is here)

  • by

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಖಿನ್ನತೆ ಬಾಧಿಸುತ್ತಿದೆ. ಖಿನ್ನತೆಯು ಈಗ ಸಾಮಾನ್ಯ ಕಾಯಿಲೆಯಾಗಿ ಮಾರ್ಪಟ್ಟಿದೆ. ಖಿನ್ನತೆಯನ್ನು ಇತ್ತೀಚೆಗೆ “common cold of mental illness” (ಮಾನಸಿಕ ಅಸ್ವಸ್ಥತೆಯ ಸಾಮಾನ್ಯ ಶೀತ) ಎಂದು ವ್ಯಾಖ್ಯಾನಿಸಲಾಗುತ್ತದೆ. ನೀವು ಸಹ ಖಿನ್ನತೆಗೆ ಒಳಗಾಗಿದ್ದರೆ? ಯೋಚಿಸಬೇಕಿಲ್ಲ! ಪರಿಹಾರ ಇಲ್ಲಿದೆ.

ಖಿನ್ನತೆ ಎಂದರೇನು?

ಎಲ್ಲರ ಜೀವನದಲ್ಲಿ ಕೆಲವು ಏರಿಳಿತಗಳು ಕಂಡು ಬರುತ್ತವೆ. ದೈನಂದಿನ ಬದುಕಿನಲ್ಲಿ ನಮ್ಮ ಸುತ್ತಲೂ ದುಃಖದ ಘಟನೆಗಳು ನಡೆಯುತ್ತವೆ. ಕೆಲಮೊಮ್ಮೆ ಜೀವನದಲ್ಲಿ ನಡೆಯುವ ಆಘಾತಗಳು, ಜೀವನದ ಘಟನೆಗಳು, ವ್ಯಕ್ತಿಯ ಮನೋಭಾವ, ಧೋರಣೆ ಮತ್ತು ಆತನ ಪರಿಸರ ಖಿನ್ನತೆಯನ್ನು ಪ್ರಚೋದಿಸುತ್ತವೆ. ಉದಾಹರಣೆಗೆ ನೀರಿಕ್ಷಿಸಲಾರದ ಕಷ್ಟ- ನಷ್ಟ. ಸೋಲು, ನಿರಾಶೆಗಳು, ಅಗಲಿಕೆ, ಗುರಿ- ಉದ್ದೇಶಗಳು ಈಡೇರದೇ ಇದ್ದಾಗ ಖಿನ್ನತೆ ಕಾಡಲು ಪ್ರಾರಂಭವಾಗುತ್ತದೆ. ಬರುಬರುತ್ತಾ ದೀರ್ಘಕಾಲ ಕಾಡಲು ಶುರುವಾಗುತ್ತವೆ. ಇದರ ತೀವ್ರತೆ ಹೆಚ್ಚಾದಾಗ, ಖಿನ್ನತೆ ಕಾಡಲು ಶುರುಮಾಡುತ್ತದೆ. ಕೆಲಮೊಮ್ಮೆ ಯಾವುದೇ ಕಷ್ಟ ನಷ್ಟಗಳಿಲ್ಲದಿದ್ದರೂ, ಮಿದುಳಿನಲ್ಲಾಗುವ ರಾಸಾಯನಿಕ ಬದಲಾವಣೆಯಿಂದ ತೀವ್ರ ಖಿನ್ನತೆ ಕಾಣಿಸಿಕೊಳ್ಳಬಹುದು. ಇದಕ್ಕೆ ಎಂಡೋಜಿನಸ್ ಡಿಪ್ರೆಶನ್ ಎನ್ನುತ್ತಾರೆ.

Depression, Solution, expert tips, ಖಿನ್ನತೆ, ಪರಿಹಾರ, ಎಕ್ಸ್ ಪರ್ಟ್ ಟಿಪ್ಸ್

ಖಿನ್ನತೆಯ ಲಕ್ಷಣಗಳು

ನಿದ್ರೆ ಕಡಿಮೆ ಅಥವಾ ನಿದ್ರೆ ಹೆಚ್ಚು ಮಾಡುವುದು
ಏಕಾಗ್ರತೆಯ ಕೊರತೆ
ಹತಾಶೆ ಭಾವನೆ
ನಕಾರಾತ್ಮಕ ಆಲೋಚನೆಗಳು
ಹಸಿವಿನ ಕೊರತೆ, ಅಥವಾ ಹೆಚ್ಚು ತಿನ್ನುವುದು
ವರ್ತನೆಯಲ್ಲಿ ಬದಲಾವಣೆ, ಬೇಗ ಕಿರಿಕಿರಿ, ಕೋಪಗೊಳ್ಳುವುದು
ಹೆಚ್ಚು ಅಲ್ಕೋಹಾಲ್ ಸೇವನೆ ಮಾಡುವುದು

ಖಿನ್ನತೆಗೆ ಕಾರಣಗಳೇನು?

ಮಿದುಳಿನಲ್ಲಾಗುವ ರಾಸಾಯನಿಕ ಅಸಮತೋಲನ ಅಲ್ಲದೇ, ಖಿನ್ನತೆ ಮಾನಸಿಕ ಹಾಗೂ ಸಾಮಾಜಿಕ ಕಾರಣಗಳಿಂದಲೂ ಉದ್ಭವಿಸಬಹುದು. ಸರಳವಾಗಿ ಹೇಳುವುದಾದರೆ, ನೀವು ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತೀರಿ..? ಎಂಬುದರ ಮೇಲೆ ಅವಲಂಬಿತವಾಗಿದೆ. ಆದರೆ ಕೆಲವು ಅಂಶಗಳು ಖಿನ್ನತೆಗೆ ಕಾರಣವಾಗಬಹುದು.

ಒಂಟಿತನ
ಸಾಮಾಜಿಕ ಬೆಂಬಲದ ಕೊರತೆ
ಹಣಕಾಸಿನ ತೊಂದರೆಗಳು
ಇತ್ತೀಚಿನ ಒತ್ತಡದ ಅನುಭವಗಳು
ವೈವಾಹಿಕ ಹಾಗೂ ಸಂಬಂಧಗಳಲ್ಲಿ ದುಃಖ
ಬಾಲ್ಯದ ಘಟನೆಗಳು
ಅಲ್ಕೋಹಾಲ್ ಇತರ ಮಾದಕ ದ್ರವ್ಯ
ನಿರುದ್ಯೋಗ
ಕೆಲಸದ ಒತ್ತಡ

Depression, Solution, expert tips, ಖಿನ್ನತೆ, ಪರಿಹಾರ, ಎಕ್ಸ್ ಪರ್ಟ್ ಟಿಪ್ಸ್

ಖಿನ್ನತೆಗೆ ನಿಖರವಾದ ಕಾರಣವನ್ನು ಅರ್ಥಮಾಡಿಕೊಂಡು ಚಿಕಿತ್ಸೆಯನ್ನು ನೀಡುವುದು ಸುಲಭವಾಗುತ್ತದೆ. ಯಾರಾದ್ರೂ ಖಿನ್ನತೆಗೆ ಒಳಗಾಗುತ್ತಿದ್ದರೆ, ಕೆಲಸದ ಬಗ್ಗೆ ಅಸಮಾಧಾನ, ಬೇಸರ ಗೊಂಡಿದ್ದರೆ, ಖಂಡಿತ ಅಂಥವರ ಸಮಸ್ಯೆ ನಿವಾರಣೆಗೆ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ನೀಡಬಹುದು.

ಚಿಕಿತ್ಸೆಗಳೇನು..?
ಆಪ್ತ ಸಲಹೆ ಸಮಾಧಾನ

ಖಿನ್ನತೆಯ ಬಗ್ಗೆ ಆಪ್ತ ಸಲಹೆಗಾರರು ಚಿಕಿತ್ಸೆ ನೀಡುತ್ತಾರೆ. ರೋಗಿಯ ಜತೆ ಮಾತನಾಡಿ,ಆಕೆ ಅಥವಾ ಆತನ ಕಷ್ಟ-ಸುಖ ಸಮಸ್ಯೆಗಳನ್ನು ವಿಚಾರಿಸಿ, ಪರೀಕ್ಷಿಸುತ್ತಾರೆ. ವ್ಯಕ್ತಿಯಲ್ಲಿರುವ ಕೀಳರಿಮೆ ಹೋಗಲಾಡಿಸಿ ಆತ್ಮವಿಶ್ವಾಸ ಮೂಡಿಸುತ್ತಾರೆ. ಇನ್ನು ಕೆಲವು ತೀವ್ರ ಪ್ರಕರಣಗಳಲ್ಲಿ ಖಿನ್ನತೆಗೆ ವಿದ್ಯುತ್ ಕಂಪನ ಚಿಕಿತ್ಸೆ ಸಹ ನೀಡಲಾಗುತ್ತದೆ. (E.C.T). ಯಾವುದೇ ಸಮಸ್ಯೆಯನ್ನು ನಿವಾರಿಸುವುದು ನಿಮ್ಮ ಕೈಯಲ್ಲೇ ಇದೆ. ನೀವು ಸಹ ಒಬ್ಬಂಟಿಯಾಗಿ ಖಿನ್ನತೆಯಿಂದ ಹೊರಬರಲಾರದೇ, ಸಮಸ್ಯೆ ಎದುರಿಸುತ್ತಿದ್ದರೆ, ಕೌನ್ಸಲರ್, ಸಹಾಯ ಪಡೆಯಿರಿ. ನಿಮ್ಮ ಸಮಸ್ಯೆಗಳ ಕುರಿತು ಆಪ್ತ ಸಮಾಲೋಚಕರ ಜತೆ ಮಾತನಾಡಿ ಪರಿಹರಿಸಿಕೊಳ್ಳಬಹುದು.

ನಮ್ಮ Spark.Live ಎಕ್ಸ್ ಪರ್ಟ್, ಖ್ಯಾತ ಮನಃಶಾಸ್ತ್ರಜ್ಞೆ ಡಾ. ಹೇಮಾ ಸಂಪತ್ ಅವರೊಂದಿಗೆ ಸಮಗ್ರ ಆರೋಗ್ಯದ ಬಗ್ಗೆ ಮಾಹಿತಿ, ಸಲಹೆ ಪಡೆಯಿರಿ. ಪ್ರತಿದಿನ: ಸಮಯ, ಬೆಳಿಗ್ಗೆ 10.30 ರಿಂದ, ಮಧ್ಯಾಹ್ನ 2 ಗಂಟೆಯವೆರೆಗೆ, ಸಂಜೆ 4.30ರಿಂದ 7ಗಂಟೆಯವರೆಗೆ ವೈದ್ಯರನ್ನು ಸಂಪರ್ಕಿಸಬಹುದು. Spark.Live.ನಲ್ಲಿ ಸೆಷನ್ ಬುಕ್ ಮಾಡಿ, ಡಾ ಹೇಮಾ ಅವರ ಜತೆ ಮಾತನಾಡಬಹುದು.

ವೈದ್ಯರ ಬಗ್ಗೆ ಪರಿಚಯ
ಡಾ.ಹೇಮಾ ಸಂಪತ್
ಮನಃಶಾಸ್ತ್ರಜ್ಞೆ,

ಡಾ. ಹೇಮಾ ಸಂಪತ್ ಅವರು, ತಮ್ಮ ವೃತ್ತಿಯಲ್ಲಿ 15 ವರ್ಷಗಳ ಅನುಭವ ಹೊಂದಿದ್ದಾರೆ. ಡಾ. ಹೇಮಾ ಸಂಪತ್ ಆತಂಕ ಮತ್ತು ಖಿನ್ನತೆ, ಸಂಬಂಧಗಳ ಪರಿಹಾರಗಳ ಬಗ್ಗೆ ಸಲಹೆ ನೀಡುತ್ತಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ