ಮೆಹಂದಿ ಬಣ್ಣ ಕೆಂಪಗಾಗಲೂ.. ಸಿಂಪಲ್ಸ್ ಟಿಪ್ಸ್!

  • by

ಕೈಗೆ ಮೆಹಂದಿ ಹಚ್ಚಿಕೊಳ್ಳುವುದೆಂದರೆ ಮಹಿಳೆಯರಿಗೆ ಎಲ್ಲಿಲ್ಲದ ಖುಷಿ..  ಅನಾದಿ ಕಾಲದಿಂದಲೂ ಮಹಿಳೆಯರು ಮೆಹಂದಿ ಹಚ್ಚಿಕೊಂಡು ಬರುತ್ತಿದ್ದಾರೆ. ಮದರಂಗಿ ಕೈಗಳ ಸೌಂದರ್ಯ ಹೆಚ್ಚಿಸುವುದಲ್ಲದೇ, ಮೆರಗು ಹೆಚ್ಚಿಸುತ್ತದೆ. ಡಿಸೈನ್ ಡಿಸೈನ್ ಮೆಹಂದಿಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ. ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರು ಮೆಹಂದಿಗೆ ಮನಸೋತಿದ್ದಾರೆ.  

ಗೋರಂಟಿಯ ಎಲೆಗಳನ್ನು ಬಹಳ ಹಿಂದಿನ ಕಾಲದಿಂದಲೂ ಭಾರತ ಮತ್ತು ಮಧ್ಯಪ್ರಾಚ್ಯಗಳಲ್ಲಿ ಅಂಗೈ , ಅಂಗಾಲು ಹಾಗೂ ಕೈ ಬೆರಳಿನ ಉಗುರುಗಳಿಗೆ ಬಣ್ಣ ಹಾಕಲು ಉಪಯೋಗಿಸುತ್ತಾರೆ. ಹಿಂದಿನಿಂದಲಬ ರೇಷ್ಮೆ ಹಾಗೂ ಉಣ್ಣೆ ಬಟ್ಟೆಗಳಿಗೆ ಬಣ್ಣ ಹಾಕಲು ಗೋರಂಟಿಯನ್ನು ಬಳಸುತ್ತಿದ್ದಾರೆ. 


Darker mehndi, colour 
ಮೆಹಂದಿ ಬಣ್ಣ, ಡಾರ್ಕ್. ಸಿಂಪಲ್ಸ್ ಟಿಪ್ಸ್,

ಎಲ್ಲರೂ ಮೆಹಂದಿ ಹಾಕಿಕೊಳ್ಳುವುದು ಸಾಮಾನ್ಯ. ಆದ್ರೆ ಮೆಹಂದಿ ಹಾಕಿಕೊಂಡಾಗ ಅದರ ಕಲರ್ ಚೆನ್ನಾಗಿ ಬರಿಲಿಲ್ಲ ಅಂದ್ರೆ ಬೇಸರವಾಗಬಹುದು. ಇದಕ್ಕಾಗಿ ನೀವು ಯೋಚಿಸಬೇಕಾಗಿಲ್ಲ. ಕೆಲ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. 

ಮೆಹಂದಿ ಮದುವೆಯ ಸಂದರ್ಭದಲ್ಲಿ ಮದುಮಗಳ ಕೈಗೆ ಹಚ್ಚುವ ಬಣ್ಣ . ಇದು ನಿಸರ್ಗದ ಒಂದು ಗಿಡವಾಗಿದೆ. ಔಷಧೀಯ ಗುಣವುಳ್ಳ ಗಿಡವಾಗಿದ್ದು, ಇದರ ಸೊಪ್ಪನ್ನು ಔಷಧಕ್ಕೆ ಬಳಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕೈಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುವ ರೂಢಿ ಇದೆ. 

ಮದರಂಗಿ ತಯಾರಿಕೆ. 

ಮದರಂಗಿಯನ್ನು ಕೈಗಳಿಗೆ ಹಚ್ಚಿಕೊಳ್ಳುವುದಾದರೆ. ಮದರಂಗಿಯ ಸೊಪ್ಪು, ನಿಂಬೆಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಅರೆದುಕೊಳ್ಳಬೇಕು. ಕೈಗಳಿಗೆ ಹಚ್ಚಬೇಕು. ವಿಜ್ಞಾನ ಮುಂದುವರಿದ ಹಾಗೇ ಜನರು ಮದರಂಗಿಯನ್ನು ಬೇರೆ ವಿಧಾನದಲ್ಲಿ ಸುಲಭವಾಗಿ ಬಳಸಿಕೊಳ್ಳಲು ದಾರಿ ಕಂಡುಕೊಂಡಿದ್ದಾರೆ. 


Darker mehndi, colour 
ಮೆಹಂದಿ ಬಣ್ಣ, ಡಾರ್ಕ್. ಸಿಂಪಲ್ಸ್ ಟಿಪ್ಸ್,

ಮೆಹಂದಿಯನ್ನು ರಂಗಾಗಿಸಲು ಕೆಲವು ವಿಧಾನಳಿವೆ. 

ಸ್ವಲ್ಪ ಏಲಕ್ಕಿಯನ್ನು ಹುರಿದು ಅದರ ಶಾಖ ಕೊಡಬೇಕು. 

ಎರಡನೇ ವಿಧಾನ – ನಿಂಬೆಹಣ್ಣಿನ ರಸವನ್ನು ಹಚ್ಚಬೇಕು. 

ಮೂರನೇ ವಿಧಾನ- ಸ್ವಲ್ಪ ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ, ಆ ನೀರನ್ನು ಹಚ್ಚಬೇಕು. 

ಅಲ್ಲದೇ, ಮೆಹಂದಿ ರಂಗೇರಲು ಈ ರೀತಿಯಾಗಿಯೂ ಮಾಡಬಹುದು. 

ಮೆಹಂದಿ ಹಚ್ಚುವ ಮುನ್ನ ಕೈಕಾಲು ಚೆನ್ನಾಗಿ ತೊಳೆಯಿರಿ. ಹಾಗೆ ಮೆಹಂದಿ ಹಚ್ಚಿದ ನಂತರ 7-8 ಗಂಟೆಗಳ ಕಾಲ ಇಟ್ಟರೆ ಅದರ ಬಣ್ಣ ಹೆಚ್ಚಾಗುತ್ತದೆ. ಮೆಹಂದಿ ಕೈಯಲ್ಲಿ ಒಣಗಿದ ನಂತರ ನಿಂಬೆರಸ ಮತ್ತು ಸಕ್ಕರೆ ಮಿಶ್ರಣವನ್ನು ಸ್ವಲ್ಪ ಪ್ರಮಾಣದಲ್ಲಿ ಚುಮುಕಿಸಿ. ತುಂಬಾ ಹಾಕಬೇಡಿ. 

ಗ್ಯಾಸ್ ಮೇಲೆ ತವಾ ಇಟ್ಟು ಅದರ ಮೇಲೆ ವಿಳ್ಯದೆಲೆ ಹಾಕಿ. ವಿಳ್ಯದೆಲೆ ಮೇಲೆ 4-5 ಲವಂಗ ಹಾಕಿ ಅದರ ಹೊಗೆಗೆ ಕೈಗಳನ್ನು ಹಿಡಿಯುವುದರಿಂದ ಮೆಹಂದಿ ಬಣ್ಣ ಚೆನ್ನಾಗಿ ಬರುತ್ತದೆ. ಮೆಹಂದಿ ತೆಗೆಯುವಾಗ ನೀರು ಅಥವಾ ಸೋಪಿನಿಂದ ತೆಗೆಯಬಾರದು. ಬದಲಾಗಿ ಅದನ್ನು ಕೈಯಿಂದಲ್ಲೇ ತೆಗೆಯಿರಿ. ನಂತರ 2 ಗಂಟೆಗಳ ಕಾಲ ನೀರನ್ನು ಮುಟ್ಟಬಾರದು. ಹೀಗೆ ಮಾಡಿದರೆ ಮೆಹಂದಿ ಬಣ್ಣ ಡಾರ್ಕ್ ಆಗಿ ಬರುತ್ತದೆ.

ಮೆಹಂದಿ ಹಚ್ಚಿಕೊಳ್ಳುವ ಮುನ್ನ ಕೈಗೆ ನೀಲಗಿರಿ ಎಣ್ಣೆ ಹಚ್ಚಿಕೊಳ್ಳಬೇಕು. ಹೀಗೆ ಮಾಡಿದರೆ ಮೆಹಂದಿ ಬಣ್ಣ ಚೆನ್ನಾಗಿ ಬರುತ್ತದೆ. ನಂತರ ಮೆಹಂದಿ ಹಾಕಿಕೊಂಡಾಗ ಡಾರ್ಕ್ ಬಣ್ಣ ಬರುತ್ತದೆ.


Darker mehndi, colour 
ಮೆಹಂದಿ ಬಣ್ಣ, ಡಾರ್ಕ್. ಸಿಂಪಲ್ಸ್ ಟಿಪ್ಸ್,

ಹೆಚ್ಚು ಬೇಗನೆ ಮೆಹಂದಿ ತೆಗೆಯಬೇಡಿ.. ಮೆಹಂದಿ ಹಚ್ಚಿ ಬೇಗನೆ ತೆಗೆಯಬೇಡಿ. ಅದು ಸಂಪೂರ್ಣವಾಗಿ ಒಣಗಿದ ಮೇಲೆ ಮೆಹಂದಿಯನ್ನು ತೊಳೆಯಿರಿ. ಇದ್ರಿಂದ ಮೆಹಂದಿ ಕೈಗೆ ಚೆನ್ನಾಗಿ ಹಿಡಿಯುತ್ತದೆ. ಆದ್ದರಿಂದ ಇದನ್ನು ಹಚ್ಚುವಾಗ ಸ್ವಲ್ಪ ಪುರುಸೋತ್ತು ಮಾಡಿಕೊಂಡು ಹಚ್ಚುವುದು ಮುಖ್ಯ.

ಮೆಹಂದಿ ತೆಗೆದ ಬಳಿಕ 

ಮೆಹಂದಿಯನ್ನು ತೆಗೆದ ಬಳಿಕ 2 ಗಂಟೆಗಳವರೆಗೆ ಅದನ್ನು ತೆಗೆಯಬೇಡಿ. ನಂತರ ಮೆಹಂದಿಯನ್ನು ಮೊದಲು ಕೈಯಿಂದ ಕೆರೆದು ತೆಗೆದ ನಂತಪ ತೆಂಗಿನೆಣ್ಣೆ ಹಚ್ಚಿ. 

ಮೆಹಂದಿಯನ್ನು ತೆಗೆಯಲು ನೀರು ಉಪಯೋಗಿಸಬೇಡಿ. 10-12 ಗಂಟೆಗಳ ಕಾಲ ನೀರಿನಿಂದ ದೂರ ಇರುವುದು ಒಳ್ಳೆಯದು. ಸೋಪ್ ಬಳಕೆ ಬೇಡವೇ ಬೇಡ. ಸಾಸಿವೆ ಎಣ್ಣೆ ಯಿಂದ ಕೈತೊಳೆಯುವುದು ಉತ್ತಮ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ