ಕಣ್ಣಿನ ಸುತ್ತ ಕಪ್ಪು ಕಲೆಗಳಿಗೆ ಹೇಳಿ ಗುಡ್ ಬೈ..!

  • by

ಹುಡುಗಿಯರ ತ್ವಚೆಗೆ ಕಣ್ಣುಗಳ ಕೆಳಗಿರುವ ಕಪ್ಪು ಕಲೆಗಳು ಅಡ್ಡಿಪಡಿಸುತ್ತಿರುತ್ತವೆ. ಕಣ್ಣುಗಳ ಕೆಳಗೆ ಕಪ್ಪು ಕಲೆಗಳನ್ನು ಹಲವು ಕಾರಣಗಳಿರಬಹುದು. ಉದಾಹರಣೆಗೆ ತಡರಾತ್ರಿಯವರೆಗೂ ಎಚ್ಚರದಿಂದ ಇರುವುದು. ಫೋನ್ ಬಳಸುವುದು. ಅತಿಯಾಗಿ ಆಲೋಚನೆ ಮಾಡುವುದರಿಂದ ಕಣ್ಣುಗಳ ಕೆಳಗೆ ಕಪ್ಪು ಕಲೆಗಳು ಉಂಟಾಗಬಹುದು. ಇದ್ರಿಂದ ಬರು ಬರುತ್ತಾ ಮುಖದ ಸೌಂದರ್ಯ ಕಡಿಮೆಯಾಗುತ್ತದೆ. ನೀವು ಸಹ ಈ ಸಮಸ್ಯೆ ಎದುರಿಸುತ್ತಿದ್ದರೆ. ನಿಮ್ಮ ಜೀವನಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಕಣ್ಣುಗಳ ಕೆಳಗಿರುವ ಡಾರ್ಕ್ ಸರ್ಕಲ್ ಗಳನ್ನು ಶಾಶ್ವತವಾಗಿ ನಿವಾರಿಸಲು ಟಿಪ್ಸ್ ಇಲ್ಲಿದೆ.

ಗಿಡಮೂಲಿಕೆಗಳ ಫೇಸ್ ಪ್ಯಾಕ್…!

ಅರ್ಧ ಟೀ ಚಮಚ ಬಾದಾಮಿ ಎಣ್ಣೆ, ಮೂರು ಹನಿ ಶುದ್ಧ ಕಿತ್ತಳೆ ಎಣ್ಣೆ ಮತ್ತು 2 ಹನಿ ಜೇನುತುಪ್ಪ ಎಲ್ಲವನ್ನು ಒಟ್ಟಿಗೆ ಬೆರೆಸಿ ನಂತರ ಈ ಮಿಶ್ರಣವನ್ನು ತೋರು ಬೆರಳಿನಲ್ಲಿ ಕಣ್ಣುಗಳ ಸುತ್ತ ವೃತ್ತಾಕಾರವಾಗಿ ಕೈಯಿಂದ ನಿಧಾನವಾಗಿ ಮಸಾಜ್ ಮಾಡಬೇಕು. ಇದು ಶೀರ್ಘದಲ್ಲೇ ನಿಮ್ಮಲ್ಲಿ ಬದಲಾವಣೆ ಯನ್ನುಂಟು ಮಾಡುತ್ತದೆ.

ಐಸ್ ಕ್ಯೂಬ್!

ನಿಮ್ಮ ಕಣ್ಣುಗಳ ಕೆಳಗಿರುವ ಕಪ್ಪು ಕಲೆಗಳನ್ನು ನಿವಾರಿಸಲು ಆದಷ್ಟು ಬೇಗ ಈ ಸಮಸ್ಯೆ ನಿವಾರಿಸಲು ಐಸ್ ಅನ್ನು ಹತ್ತಿ ಬಟ್ಟೆಯಲ್ಲಿ ಅಥವಾ ಕರವಸ್ತ್ರದಲ್ಲಿ ಇರಿಸಿ ಮತ್ತು ಅದನ್ನು ನಿಮ್ಮ ಕಣ್ಣಿನ ಮೇಲೆ ಕೈಗಳಿಂದ ಉಜ್ಜಿಕೊಳ್ಳಿ. ಮುಚ್ಚಿದ ಕಣ್ಣಿನ ಮೇಲೆ ಇರಿಸುವ ಮೂಲಕ ಕೆಲ ಸೆಕೆಂಡುಗಳ ಕಾಲ ಇರಿಸಬಹುದು.

ಅದೇ ರೀತಿ ಹತ್ತಿಯನ್ನು ತಣ್ಣನೇಯ ಹಾಲಿನಲ್ಲಿ ನೆನೆಸಿ, 5 ರಿಂದ 10 ನಿಮಿಷಗಳ ಕಾಲ , ನಿಮ್ಮ ಕಣ್ಣುಗಳ ಮೇಲೆ ಇರಿಸಿ. ಅದು ಮುಖವನ್ನು ತಾಜಾವಾಗಿ ಕಾಣುವಂತೆ ಮಾಡುತ್ತದೆ. ಮತ್ತು ಕಣ್ಣುಗಳ ಕೆಳಗಿರುವ ಕಪ್ಪು ಕಲೆ ನಿವಾರಣೆಯಾಗುತ್ತದೆ. ಮುಖದ ಸೌಂದರ್ಯವನ್ನು ಕಾಪಾಡಲು ಪೂರ್ಣ ನಿದ್ರೆ ಮಾಡುವುದು ಉಪಯುಕ್ತ.

ಸಾಕಷ್ಟು ನೀರು ಕುಡಿಯಿರಿ.. !

ಕೆಲವೊಮ್ಮೆ ದೇಹದಲ್ಲಿರುವ ವಿಷವು ಉರಿಯೂತವನ್ನು ಹೆಚ್ಚಿಸುತ್ತವೆ. ಆದ್ದರಿಂದ ಪ್ರತಿ ದಿನ 8ರಿಂದ 10 ಲೋಟ ನೀರು ಕುಡಿಯುವ ಅಭ್ಯಾಸ ಮಾಡುವುದು ಮುಖ್ಯ. ಇದು ಕಣ್ಣುಗಳಿಗೆ ತೊಂದರೆ ಯನ್ನುಂಟು ಮಾಡುವುದಿಲ್ಲ.

ಸೌತೆಕಾಯಿ..!

ಡಾರ್ಕ್ ಸರ್ಕಲ್ ನಿವಾರಿಸಲು ಸೌತೆಕಾಯಿ ಉತ್ತಮವಾಗಿದೆ. ಸೌತೆಕಾಯಿ ಕಣ್ಣುಗಳ ಸುತ್ತ ಇಟ್ಟರೆ ದಣಿದ ಕಣ್ಣುಗಳಿಗೆ ರಿಲ್ಯಾಕ್ಸ್ ಸೀಗುತ್ತದೆ. ತಣ್ಣನೇಯ ಸೌತೆಕಾಯಿಯ ಎರಡು ಹೋಳುಗಳನ್ನು ತೆಗೆದುಕೊಂಡು ಅದನ್ನು 25 ರಿಂದ 30 ನಿಮಿಷ ಗಳ ಕಾಲ ಕಣ್ಣುಗಳ ಮೇಲೆ ಇರಿಸಿ.

ವಿಟಮಿನ್ ಕೆ ಇರುವ ಕ್ರೀಮ್

ಕೆಲವರಿಗೆ ವಂಶಪಾರಂಪರ್ಯವಾಗಿ ಕಣ್ಣಿನ ಸುತ್ತ ಕಲೆಗಳು ಕಂಡು ಬರುತ್ತವೆ. ವಯ್ಯಸಾಗುತ್ತಿದ್ದಂತೆ ಈ ಸಮಸ್ಯೆ ಕಾಡಬಹುದು. ಅಂತವರು ಕ್ರೀಮ್ ಉಪಯೋಗಿಸುವಾಗ ವಿಟಮಿನ್ ಕೆ ಕ್ರೀಮ್ ಗಳನ್ನು ಉಪಯೋಗಿಸಿ.

ಅರಶಿಣ- ಪೈನಾಪಲ್ ರಸ

ಪೈನಾಪಲ್ ಜ್ಯೂಸ್ ಹಾಗೂ ಅರಶಿಣ ಜತೆ ಮಿಶ್ರಣ ಮಾಡಿ, ಕಣ್ಣಿನ ಸುತ್ತಾ ಹಚ್ಚಿ ಅರ್ಧ ಗಂಟೆ ನಂತರ ಮುಖ ತೊಳಿದರೆ ಕಣ್ಣಿನ ಸುತ್ತ ಉಂಟಾಗಿರುವ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯನ್ನು ಪ್ರತಿ ದಿನ ಕಣ್ಣಿನ ಸುತ್ತ ಹಚ್ಚುತ್ತಾ ಬಂದರೆ ಕಪ್ಪು ಕಲೆ ಸಮಸ್ಯೆ ನಿವಾರಣೆಯಾಗುತ್ತದೆ. ಬಾದಾಮಿಯ ಸಿಪ್ಪೆ ಅರೆದು ಅದನ್ನು ಪೇಸ್ಟ್ ರೀತಿಯಲ್ಲಿ ಮಾಡಿ ಕಣ್ಣಿನ ಸುತ್ತ ಹಚ್ಚಿದರೆ, ಕಪ್ಪು ಕಲೆ ನಿವಾರಣೆಯಾಗುತ್ತದೆ.

ಟೀ ಬ್ಯಾಗ್ ಗಳು

ಕಣ್ಣುಗಳ ಸುತ್ತ ಕಪ್ಪು ಕಲೆಯನ್ನು ನಿವಾರಿಸಲು ಟೀ ಬ್ಯಾಗ್ ನೆರವಾಗುತ್ತದೆ. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ. ಮತ್ತು 2 ಟೀ ಬ್ಯಾಗ್ ಗಳನ್ನು ಅದರಲ್ಲಿ ಇರಿಸಿ. ಈ ನೀರು ತಣ್ಣಗಾದಾಗ, ಟೀ ಬ್ಯಾಗ್ ಗಳನ್ನು ತೆಗೆದುಕೊಂಡು 3 ರಿಂದ 4 ನಿಮಿಷ ಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ.

ರೋಸ್ ವಾಟರ್

ದಣಿದ ಕಣ್ಣುಗಳಿಗೆ ರೋಸ್ ವಾಟರ್ ನೈಸರ್ಗಿಕ ವಿಶ್ರಾಂತಿ ನೀಡುತ್ತದೆ. ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಗಳನ್ನು ಸಹ ಕಡಿಮೆ ಮಾಡುತ್ತದೆ. ಇದ್ರಿಂದ ಚರ್ಮ ಮೃದುವಾಗುತ್ತದೆ. ಮತ್ತೊಂದೆಡೆ ರೋಸ್ ವಾಟರ್ ಅನ್ನು ಪ್ರತಿ ದಿನ ಬಳಸುವುದರಿಂದ ಕಣ್ಣುಗಳಲ್ಲಿ ತೇವಾಂಶ ಹೆಚ್ಚುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ