ಮದುವೆಯ ವೆಚ್ಚಕ್ಕೆ ಇರಲಿ ನಿಯಂತ್ರಣ..!

  • by

ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು ಎಂಬ ಮಾತಿದೆ. ಎಲ್ಲರ ಮನೆಯಲ್ಲೂ  ಪೋಷಕರು ತಮ್ಮ ಮಕ್ಕಳ ಮದುವೆ ಮಾಡಬೇಕು ಎಂಬ ಯೋಚನೆಯಲ್ಲಿರುತ್ತಾರೆ. ಎಲ್ಲರ ಮನಸ್ಸಿನಲ್ಲಿ ಉಳಿಯುವಂತೆ ಮ್ಯಾರೇಜ್ ಮಾಡಬೇಕು ಅಂತಾ ಹಿರಿಯರ ಆಸೆ. ಆದ್ರೆ ಮನೆಯಲ್ಲಿ ಮದುವೆ ಸಮಾರಂಭ ಇದ್ದರಂತೂ ಮದುವೆ ಖರ್ಚು , ವೆಚ್ಚ ತುಸು ಜಾಸ್ತಿನೇ ಇರುತ್ತೆ.. ಆದ್ರೆ ಮದುವೆಯ ಖರ್ಚು ಭವಿಷ್ಯಕ್ಕೆ ಅಡಿಪಡಿಸದಂತಿರಬೇಕು ಎಂಬುದು ನೆನಪಿನಲ್ಲಿರಲಿ. ಅನೇಕ ಸಂದರ್ಭದಲ್ಲಿ ಮದುವೆಯ ಆತಂಕದಲ್ಲಿ ನಮ್ಮ ಉಳಿತಾಯದ ಹಣವನ್ನು ಖಾಲಿ ಮಾಡಿ ಬಿಡುತ್ತೇವೆ. ಬಟ್ಟೆ- ಬರೆ, ಆಭರಣ, ವರದಕ್ಷಿಣೆ ಹೀಗೆ ಯಾವುದಕ್ಕೂ ತೊಂದರೆ ಆಗಬಾರದು ಎಂಬ  ಯೋಚನೆ ಮಾಡುತ್ತೇವೆ. ದುಬಾರಿ ಮದುವೆ ಮಾಡಿ, ಉಳಿತಾಯದ ಹಣ ಸಂಪೂರ್ಣ ಖಾಲಿ ಮಾಡುವ ಅವಶ್ಯಕತೆ ಇಲ್ಲ. ಮದುವೆ ಹೇಗಿರಬೇಕು? ಇಲ್ಲಿದೆ ಸಲಹೆ.

cut down, wedding costs , 
ಮದುವೆಯ ವೆಚ್ಚ, ಇರಲಿ ಟಿಪ್ಸ್,

ಸಾಲ ಮಾಡಬೇಡಿ..!

ನಿಮಗೆ ತುರ್ತಾಗಿ ಹಣ ಬೇಕಿದ್ದರೆ ಸಾಲ ಪಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಬೇರೆ ದಾರಿ ಕಾಣದಿದ್ದಾಗ ಸಾಲ ಅನಿವಾರ್ಯವಾಗಬಹುದು. ಆದ್ರೆ ಮದುವೆ ಎಂಬುದು ಸಂಪತ್ತು ಖರ್ಚು ಮಾಡುವ ಸಂಭ್ರಮವಲ್ಲ. ಸಾಲ ಮಾಡಿಯಾದರೂ ಮದುವೆ ಮಾಡಬೇಕೆಂಬ ಅನಿವಾರ್ಯತೆ ಇಲ್ಲ. ಸಾಲದ ಮಾಡುವುದರಿಂದ ನಿಮಗೆ ನಷ್ಟವೇ ಹೊರೆತು. ಉಪಯೋಗವಿಲ್ಲ. ಇನ್ನು ಸಾಲ ತೆಗೆದುಕೊಂಡ ಮೇಲೆ ಅದರ ಬಡ್ಡಿ ಪಾವತಿಸಬೇಕಾದ ಅನಿವಾರ್ಯತೆ ನಿಮಗೆ ಎದುರಾಬಹುದು. ಹಾಗಾಗಿ ನಿಮ್ಮ ಹತ್ತಿರ ಇದ್ದ ಹಣದಲ್ಲಿಯೇ, ಅದೇ ಬಜೆಟ್ ನಲ್ಲಿಯೇ ಮದುವೆ ಸಮಾರಂಭ ಏರ್ಪಡಿಸುವುದು ಉತ್ತಮ.

ಹಗಲು ಹೊತ್ತಲ್ಲೇ ಮದುವೆ ಆಯ್ಕೆ ಮಾಡಿಕೊಳ್ಳಿ

ಕೆಲವರು ಸಂಜೆ ಹೊತ್ತಲ್ಲಿ ಮದುವೆ, ಸಮಾರಂಭ ಏರ್ಪಡಿಸಿರುತ್ತಾರೆ. ಆದ್ರೆ ರಾತ್ರಿ ಹೊತ್ತು ಮದುವೆ ಮಾಡುವುಜರಿಂದ ವೆಚ್ಚ ಹೆಚ್ಚಾಗಬಹುದು. ದೀಪದ ಅಲಂಕಾರ, ಊಟ, ತಿಂಡಿ ಹೀಗೆ ಸಂಜೆ ನಡೆಯುವ ಮದುವೆ ಸಮಾರಂಭಗಳು ದುಬಾರಿಯಾಗಿರುತ್ತವೆ. ಆದ್ದರಿಂದ ಹಗಲಿನಲ್ಲಿ ಮದುವೆ ಮಾಡುವುದರಿಂದ ದುಬಾರಿ ವೆಚ್ಚವನ್ನು ತಗ್ಗಿಸಬಹುದು.

cut down, wedding costs , 
ಮದುವೆಯ ವೆಚ್ಚ, ಇರಲಿ ಟಿಪ್ಸ್,

ಮದುವೆಗೆ ಇರಲಿ ಪ್ಲ್ಯಾನ್

ಮದುವೆ ಎಂದರೆ ಹತ್ತು ಹಲವು ಕೆಲಸಗಳಿರುತ್ತವೆ. ಮದುವೆಗೆ ಛತ್ರ ಅಥವಾ ಕಲ್ಯಾಣ ಮಂಟಪ ಕಾಯ್ದಿರಿಸುವುದನ್ನು ಎಲ್ಲರೂ ಮಾಡುತ್ತಾರೆ. ಮ್ಯಾರೇಜ್ ಗೆ ಪ್ರತಿಷ್ಟಿತ ಆಭರಣ ಖರೀದಿಸುವುದಕ್ಕಿಂತ, ಸಾಮಾನ್ಯ ಮಳಿಗೆಗಳಲ್ಲಿ ಖರೀದಿಸುವುದು ಉತ್ತಮ. ಸಾಮಾನ್ಯ ಮಳಿಗೆಗಳಲ್ಲಿ ಹಾಲ್ ಮಾರ್ಕ್ ಹೊಂದಿದ ಆಭರಣಗಳನ್ನು ಖರೀದಿಸುವ ಮೂಲಕ ಹಣ ಉಳಿತಾಯ ಮಾಡಬಹುದು. ಉಡುಪುಗಳ ವಿಚಾರದಲ್ಲಿ ಯೋಚಿಸಿ ಖರ್ಚು ಮಾಡಿ. ಕಡಿಮೆ ಬೆಲೆಬಾಳುವ ಹಾಗೂ ಉತ್ತಮ ಗುಣಮಟ್ಟದ ಎಲ್ಲಾ ರೀತಿಯ ಸೀರೆಗಳು ಲಭ್ಯವರುತ್ತವೆ. ಅಲ್ಲದೇ ಮದುವೆಗೆ ದುಬಾರಿ ವೆಚ್ಚದ ಸೀರೆಗಳನ್ನು ಖರೀದಿ ಮಾಡುವ ಬದಲು, ಬಾಡಿಗೆ ರೂಪದಲ್ಲಿ ತರಬಹುದು.

ಆಮಂತ್ರಣ ಪತ್ರಿಕೆ ಹೇಗಿರಬೇಕು?

ಮದುವೆ ಸಮಾರಂಭ ಅಂದಮೇಲೆ ನಮ್ಮ ಸ್ನೇಹಿತರಿಗೆ, ಬಾಂಧವರಿಗೆ ಹಾಗೂ ಕುಟುಂಬದವರಿಗೆ ಆಮಂತ್ರಣ ಪತ್ರಿಕೆ ಕೊಡಲು ಬೇಕು.

ಇಂದಿನ ದಿನಗಳಲ್ಲಿ ಆಮಂತ್ರಣ ಪತ್ರಿಕೆ ತಯಾರಿಸಲು ಹೆಚ್ಚಾಗಿ ವೆಚ್ಚವಾಗುತ್ತದೆ. ಆದ್ರೆ ನಿಮ್ಮ ಬಜೆಟ್ ಗೆ ಸರಿಹೊಂದುವಷ್ಟು ಆಮಂತ್ರಣ ಪತ್ರಿಕೆ ಮಾಡಿಸಿ. ಆಮಂತ್ರಣ ಪತ್ರಿಕೆ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಮನೆಗೆ ಆಮಂತ್ರಣ ಪತ್ರಿಕೆ ಕೊಟ್ಟು ಬಂದರೆ, ಎಲ್ಲರೂ ಮದುವೆಗೆ ಬಂದೇ ಬರುತ್ತಾರೆ. ನೀವು ಸಂಬಂಧಿಕರನ್ನು, ಸ್ನೇಹಿತರನ್ನು ಮೆಚ್ಚಿಸುವುದಕ್ಕಾಗಿ ದುಬಾರಿ ಬೆಲೆಯ ಲಗ್ನ ಪತ್ರಿಕೆ ಮಾಡಿಸುವುದು 

ಸರಿಯಲ್ಲ. ಇನ್ನು ಇಂದಿನ ದಿನದಲ್ಲಿ ಡಿಜಿಟಲ್ ಮಾಧ್ಯಮದಲ್ಲಿ ಆಮಂತ್ರಣ ಪತ್ರಿಕೆ ಕಳುಹಿಸುವುದು ಉತ್ತಮ

cut down, wedding costs , 
ಮದುವೆಯ ವೆಚ್ಚ, ಇರಲಿ ಟಿಪ್ಸ್,

ವೆಚ್ಚ ತಗ್ಗಿಸವ ಮತ್ತೊಂದು ಉಪಾಯ 

ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ಮಾಡಬೇಕು ಎಂಬ ಆಸೆ ಇದ್ದರೆ, ಕಡಿಮೆ ಬೆಲೆಯ ಛತ್ರದಲ್ಲಿ ಅಥವಾ ಸಮುದಾಯ ಭವನದಲ್ಲಿ ಮದುವೆಯಾಗಬಹುದು. ಇಲ್ಲದೇ, ಹಣವನ್ನು ಉಳಿಸುವ ಮತ್ತೊಂದು ಮಾರ್ಗವೆಂದರೆ, ಉಪನೋಂದಣಿ ಕಚೇರಿಯಲ್ಲಿ ಮದುವೆ ಯಾಗುವುದು,ಇದಾದ ಬಳಿಕ ಛತ್ರದಲ್ಲಿ ಮದುವೆ ಹಮ್ಮಿಕೊಂಡು ಸಂಬಂಧಿಕರನ್ನು ಸ್ನೇಹಿತರನ್ನು ಆಹ್ವಾನಿಸುವುದು. 

ವೆರೈಟಿ ತಿಂಡಿಗಳು ಬೇಡ..!

ಕೆಲವು ಮದುವೆ ಸಮಾರಂಭಗಳಲ್ಲಿ ಬೆಳಿಗ್ಗೆ ಉಪಹಾರಕ್ಕೆ ನಾಲ್ಕೈದು ಬಗೆಯ ತಿಂಡಿಗಳನ್ನು ನೋಡುತ್ತೇವೆ. ಮಧ್ಯಾಹ್ನದ ಊಟಕ್ಕೆ ಹತ್ತೆಂಟು ತಿಂಡಿಗಳನ್ನು ಮಾಡಿರುತ್ತಾರೆ. ವೆರೈಟಿ, ವೆರೈಟಿ ಯಾಗಿ ಆಹಾರದ ಪಟ್ಟಿ ತಯಾರಿಸಿರುತ್ತಾರೆ. ಆದ್ರೆ ತಯಾರಿಸುವ ಅಡುಗೆ ಅನಾವಶ್ಯಕವಾಿ ಪೋಲಾಗುವ ಸಾಥ್ಯತೆ ಹೆಚ್ಚು. ಹೀಗಾಗಿ ಇದನ್ನು ತಪ್ಪಿಸುವುದು ಪೋಷಕರ ಕೈಯಲ್ಲಿರುತ್ತದೆ. ನೆನಪಿರಲಿ.. ಸಣ್ಣ ಪುಟ್ಟ ಬದಲಾವಣೆ ಮಾಡುವುದರಿಂದ ಮದುವೆ ವೆಚ್ಚ ಕಡಿಮೆ ಮಾಡಬಹುದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ