ತಿಳಿಯಿರಿ..ಆರೋಗ್ಯವಾಗಿರಲು ಸೀತಾಫಲ ಎಷ್ಟು ಮುಖ್ಯ!

  • by

ಸೀತಾಫಲ ಹಣ್ಣು ಭಾರತದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಹಣ್ಣು. ಈ ಫಲ ಕೇವಲ ತಿನ್ನಲಿಕ್ಕೆ ರುಚಿ ಹೆಚ್ಚಿಸಲ್ಲ. ನಾನಾ ರೀತಿಯ ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಈ ಹಣ್ಣಿನಲ್ಲಿ ಪೋಷಕಾಂಶಗಳು ಅಧಿಕವಾಗಿದ್ದು. ನಿಯಮಿತವಾಗಿ ಸೀತಾಫಲ ಸೇವನೆಯಿಂದ ಶ್ವಾಸನಾಳಗಳ ಆರೋಗ್ಯ ಹೆಚ್ಚಳವಾಗುತ್ತದೆ.

1. ಹೃದಯದ ಆರೋಗ್ಯ ಕಾಪಾಡುತ್ತದೆ

ಸಾಮಾನ್ಯವಾಗಿ ಸೀತಾಫಲ ಹಣ್ಣಿನಲ್ಲಿ ಅತಿ ಹೆಚ್ಚು ಪೋಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಅಂಶ ಹೆಚ್ಚಾಗಿರುವುದರಿಂದ ಇದು ನಿಮ್ಮ ಹೃದಯದ ಆರೋಗ್ಯಕರವಾಗಿರುಸುತ್ತದೆ. ಕಸ್ಟರ್ಡ್ ಸೇಬಿನಲ್ಲಿ (ಸೀತಾಫಲ) ಹಣ್ಣು ಹೃದಯದ ಕಾಯಿಲೆಗಳನ್ನು ದೂರವಿರುಸುತ್ತದೆ. ವಿಟಮಿನ್ ಬಿ ೬ ಮತ್ತು ಫೈಬರ್, ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಇದರಿಂದ ಹಾರ್ಟ್ ಅಟ್ಯಾತ್ ಮತ್ತು ಇತರ ಕಾಯಿಲೆಗಳು ಗಣನೀಯವಾಗಿ ಕಡಿಮೆಯಗಲು ಸಹಾಯ ಮಾಡುತ್ತದೆ.

2. ಅಸ್ತಮಾ ನಿವಾರಣೆ

ಅಸ್ತಮಾವನ್ನು ಸೀತಾಫಲ ಹಣ್ಣು ನಿವಾರಿಸುವಲ್ಲಿ ಸಹಾಯಕಾರಿಯಾಗಬಲ್ಲದ್ದು, ಇದರಲ್ಲಿ ವಿಟಮಿನ್ ಬಿ ೬ ಹೆಚ್ಚಾಗಿರುವುದರಿಂದ ದೇಹಕ್ಕೆ ರಕ್ಷಣೆ ಒದಗಿಸುತ್ತದೆ. ಶ್ವಾಸನಾಳದ ಉರಿಯೂತ ಅಸ್ತಮಾಗೆ ಕಾರಣವಾಗಬಹುದು. ಆದ್ದರಿಂದ ಶ್ವಾಸನಾಳದ ಉರಿಯೂತದಿಂದ ರಕ್ಷಿಸುತ್ತದೆ.

3. ಮಧುಮೇಹವನ್ನು ತಡೆಯುತ್ತದೆ

ಕಸ್ಟರ್ಡ್ ಸೇಬು ಸೇವನೆಯಿಂದ ವಿಟಮಿನ್ ಸಿ, ಪೊಟ್ಯಾಶಿಯಂ , ಕಬ್ಬಿಣ, ಮೇಗ್ನೇಶಿಯಂ ಮತ್ತು ನಾರಿನ ಅಂಶ ಸಮೃದ್ಧವಾಗಿ ದೊರೆಯುತ್ತದೆ. ಟೈಪ್ -೨ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ.

4. ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ

ಸೀತಾಫಲ ಹಣ್ಣು ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಈ ಫಲ ಹೆಚ್ಚಿನ ಕ್ಯಾಲೋರಿ ಹೊಂದಿರುವುದರಿಂದ ಕಡಿಮೆ ತೂಕ ಹೊಂದಿರುವ ಜನರಿಗೆ ತೂಕ ಹೆಚ್ಚಿಸಿಕೊಳ್ಳಲು ಇದು ಸಹಾಯಕಾರಿಯಾಗಬಲ್ಲದ್ದು.

5. ಗರ್ಭಿಣಿ ಮಹಿಳೆಯರಿಗೆ ಪರಿಪೂರ್ಣ

ಸೀತಾಫಲ ಹಣ್ಣಿ ಗರ್ಭಿಣಿ ಮಹಿಳೆಯರಿಗೆ ಅದ್ಭುತ ಹಣ್ಣಿದಂತೆ. ಇದರಲ್ಲಿ ಫೈಬರ್, ತಾಮ್ರ, ಮತ್ತು ವಿಟಮಿನ್ ಬಿ ೬ ಸಮೃದ್ಧವಾಗಿದ್ದು, ಗರ್ಭಣಿ ಮಹಿಳೆಯರಲ್ಲಿ ಮಲಬದ್ಧತೆ ಮತ್ತು ಬೆಳಿಗ್ಗೆ ಗರ್ಭಣಿ ಮಹಿಳೆಯರಿಗೆ ಕಾಡುವ ವಾಕರಿಕೆ ಲಕ್ಷಣಗಳನ್ನು ನಿವಾರಿಸಲು ಈ ಹಣ್ಣು ಸಹಕಾರಿ. ಗರ್ಭಾವಸ್ಥೆಯಲ್ಲಿ ನಿಯಮಿತವಾಗಿ ಹಣ್ಣನ್ನು ಸೇವಿಸಿದರೆ, ಹೆಚ್ಚು ಎದೆ ಹಾಲು ಹೊಂದಲು ಸಹಾಯಕಾರಿಯಾಗಿದೆ.

6. ಸಂಧಿವಾತದಂತಹ ಹಲವು ಸಮಸ್ಯೆಗಳನ್ನು ಸೀತಾಫಲ ಹಣ್ಣು ನಿವಾರಿಸುತ್ತದೆ. ಮೆದುಳಿನ ಬೆಳವಣಿಗೆ, ನರಮಂಡಲ, ಮತ್ತು ಭ್ರೂಣದ ಪ್ರತಿರಕ್ಷಣಾ ವ್ಯವಸ್ಥೆಯಲ್ಲೂ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

7 . ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ

ಸೀತಾಫಲ ಹಣ್ಣಿನಲ್ಲಿ ರೋಗ ನಿರೋಧಕ ಸಮೃದ್ಧವಾಗಿರುವುದರಿಂದ, ಇದು ಹಾನಿಕಾರಕ ಧೂಳಿನಿಂದ ಚರ್ಮವನ್ನು ರಕ್ಷಿಸುತ್ತದೆ. ಚರ್ಮವು ವಯಸ್ಸಾದಂತೆ ಕಾಣುವುದು, ಮುಖದಲ್ಲಿ ಮೊಡವೆಗಳು, ಸೋರಿಯಾಸಿಸ್ ಗೆ ಒಳಗಾಗುವುದನ್ನು ತಡೆಗಟ್ಟುತ್ತದೆ. ಇದು ಪ್ರೋಟೀನ್ ಹೆಚ್ಚಿಸುತ್ತದೆ. ಚರ್ಮದ ತಾರುಣ್ಯವನ್ನು ಹೆಚ್ಚಿಸಿ, ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ತಡೆಗಟ್ಟುತ್ತದೆ.

8. ಅಲ್ಲದೇ ಇದು ನೈಸರ್ಗಿಕ ಮಾಯಿಶ್ಚರೈಸರ್ ನಂತೆ ಕಾರ್ಯ ನಿರ್ವಹಿಸುತ್ತದೆ. ಚರ್ಮವನ್ನು ಹಾನಿಕಾರಕ ಜೀವಾಣುಗಳಿಂದ ಹೊರ ಹಾಕುವ ಮೂಲಕ ಚರ್ಮವನ್ನು ಹೈಡ್ರೀಕರಿಸುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ