ಸೋಂಕಿನ ವಿರುದ್ಧ ಹೋರಾಡಲು ಈ ಆಹಾರ ಸೇವಿಸಿ..!

  • by

ಸೋಂಕಿನ ವಿರುದ್ಧ ಹೋರಾಡಲು ಭಾರತದಲ್ಲಿ ಅನೇಕ ರೋಗ ನಿರೋಧಕ ವರ್ಧಕ ಆಹಾರಗಳಿವೆ. ನೈಸರ್ಗಿಕಾವಾಗಿ ರೋಗನಿರೋಧಕ ಹೆಚ್ಚಿಸಬಲ್ಲ ಆಹಾರಗಳು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಕೊರೊನಾ ವೈರಸ್ ಪ್ರಪಚಂದಾದ್ಯಂತ ತನ್ನ ಅಟ್ಟಹಾಸ ಮೆರೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿರದ ಹಾಗೂ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುವ ಜನರ ಮೇಲೆ ವೈರಸ್ ಹೆಚ್ಚು ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಅನಾರೋಗ್ಯಕ್ಕೆ ಒಳಾಗಾಗಿದರೆ , ಕಾಳಜಿ ವಹಿಸಬೇಕು. ಭಾರತದಲ್ಲಿ ಅನೇಕ ರೋಗ ನಿರೋಧಕ ವರ್ಧಕ ಆಹಾರಗಳಿವೆ. ಇವು ನಿಮಗೆ ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.

crucial-foods-fighting-infection-coronavirus-ಕೊರೊನಾ ವೈರಸ್. ಸೋಂಕಿನ ವಿರುದ್ಧ, ಆಹಾರಗಳು

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ..?

ನೀವು ಆರೋಗ್ಯಕರ ಆಹಾರವನ್ನು ಸೇವಿಸುವುದು ಮಾತ್ರವಲ್ಲದೇ ನಿಮಗೆ ಉತ್ತಮ ನೈರ್ಮಲ್ಯದ ಅಗತ್ಯವಿದೆ. ಎಂದು ಖಚಿತಪಡಿಸಿಕೊಳ್ಳಿ. ನಂಜು ನಿರೋಧಕ ಸೋಪಿನಿಂದ ಕೈ ತೊಳೆಯುವುದು, ಪ್ರಯಾಣ ಮಾಡುವಾಗ ಸ್ಯಾನಿಟೈಸರ್ ಬಳಸುವುದು ಮುಖ್ಯ. ಇದಕ್ಕೆ ಹೆಚ್ಚುವರಿಯಾಗಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ಇಮ್ಯೂನಿಟಿ ಬೂಸ್ಟರ್ ಆಹಾರಗಳು ಮೊಟ್ಟೆ, ಹಣ್ಣುಗಳು, ಹಸಿರು ತರಕಾರಿಗಳು , ನೈಸರ್ಗಿಕ ರೋಗನಿರೋಧಕ ವರ್ಧಕ ಆಹಾರಗಳ ವರ್ಗಕ್ಕೆ ಸೇರುವ ಇನ್ನು ಅನೇಕ ವಸ್ತುಗಳಿವೆ. ಕೆಲವು ರೋಗನಿರೋಧಕ ವರ್ಧಕ ಆಹಾರಗಳನ್ನು ನೋಡೋಣ.

ಭಾರತದಲ್ಲಿ ರೋಗನಿರೋಧಕ ಹೆಚ್ಚಿಸುವ ಆಹಾರಗಳು

ರೋಗನಿರೋಧಕ ಆಹಾರಗಳಲ್ಲಿ ಜೀವಸತ್ವಗಳು ಹಾಗೂ ಖನಿಜಗಳು ಸಮೃದ್ಧವಾಗಿರುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಆಹಾರಗಳಲ್ಲಿ ಪ್ರೋಟೀನ್, ಕೊಬ್ಬುಗಳನ್ನು ಒಳಗೊಂಡಿರುವ ಮ್ಯಾಕ್ರೋನ್ಯೂಟ್ರಿಯಂಟ್ ಗಳಿವೆ.

ಕೋಸುಗಡ್ಡೆ , ಹೂಕೋಸು

ಹೂಕೋಸು ರೋಗ ನಿರೋಧಕಗಳನ್ನು ಹೆಚ್ಚಾಗಿ ಕಂಡು ಬರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಹೂಕೋಸು ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತದೆ.

crucial-foods-fighting-infection-coronavirus-ಕೊರೊನಾ ವೈರಸ್. ಸೋಂಕಿನ ವಿರುದ್ಧ, ಆಹಾರಗಳು

ಪಪ್ಪಾಯ ಹಣ್ಣು

ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಎ ಬಿ, ಸಿ ಮತ್ತು ಕೆ ಉತ್ತಮ ಮೂಲವಾಗಿದೆ. ಇದನ್ನು ಅತ್ಯುತ್ತಮ ರೋಗನಿರೋಧಕ ವರ್ಧಕ ಎಂದು ಹೇಳಲಾಗುತ್ತದೆ. ಕೂದಲು ಹಾಗೂ ಚರ್ಮ ಸೇರಿದಂತೆ ದೇಹದ ಅಂಗಾಂಶಗಳ ಬೆಳವಣಿಗೆ ಇದು ಅದ್ಫುತ ಎಂದು ಕರೆಯಲಾಗುತತ್ದೆ. ಪ್ರೋಟೀನ್ ಕಾಲಜನ್ ಅನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಇದರಲ್ಲಿ ಜೀವಸತ್ವಗಳು ದ್ವಿಗುಣವಾಗಿವೆ.

crucial-foods-fighting-infection-coronavirus-ಕೊರೊನಾ ವೈರಸ್. ಸೋಂಕಿನ ವಿರುದ್ಧ, ಆಹಾರಗಳು

ಅಮೃತಬಳ್ಳಿ

ಇದು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಬ್ಯಾಕ್ಟೇರಿಯಾ ಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಬೆಳಿಗ್ಗೆ 1 ಚಮಚ ಅಮೃತ ಬಳ್ಳಿಯ ಪುಡಿಯೊಂದಿಗೆ ಬೆಚ್ಚಗಿನ ನೀರನ್ನು ಸೇವಿಸುವುದು ಪರಿಣಾಮಕಾರಿ. ಇದು ಅತ್ಯಂತ ಶಕ್ತಿಶಾಲಿ ಆಯುರ್ವೇದ ಗಿಡಮೂಲಿಕೆಗಳಲ್ಲಿ ಒಂದಾಗಿದೆ.

ನೆಲ್ಲಿಕಾಯಿ

ಹಿಂದಿಯಲ್ಲಿ ಇದನ್ನು ಆಮ್ಲಾ ಎಂದು ಕರೆಯಲಾಗುತ್ತದೆ. ನೆಲ್ಲಿಕಾಯಿ ಅತ್ಯುತ್ತಮ ನೈಸರ್ಗಿಕ ರೋಗನಿರೋಧಕ ವರ್ಧಕ ಆಹಾರವಾಗಿದೆ. ಇದು ವಿಟಮಿನ್ ಸಿ ಯನ್ನು ಹೊಂದಿರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವರದಿ ಪ್ರಕಾರ, 1 ಆಮ್ಲಾ ದಲ್ಲಿನ ವಿಟಮಿನ್ ಸಿ ಪ್ರಮಾಣ 20 ಕಿತ್ತಳೆ ಹಣ್ಣುಗಳಿಗಿಂತ ಸಮಾನವಾಗಿರುತ್ತದೆ. ನೀವು ಇದನ್ನು ರಸ ರೂಪದಲ್ಲಿ ಅಥವಾ ಕಚ್ಚಾ ಸೇವಿಸಬಹುದು.

crucial-foods-fighting-infection-coronavirus-ಕೊರೊನಾ ವೈರಸ್. ಸೋಂಕಿನ ವಿರುದ್ಧ, ಆಹಾರಗಳು

ಸೇಬುಹಣ್ಣು

ದಿನಕ್ಕೆ 1 ಸೇಬುಹಣ್ಣು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂದು ಹೇಳಲಾಗುತ್ತದೆ. ರೋಗ ನಿರೋಧಕ ಹೆಚ್ಚಿಸಲು ಈ ಹಣ್ಣು ಸಹಾಯ ಮಾಡುತ್ತದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ನೈಸರ್ಗಿಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಲ್ಲಿ ಒಂದು. 2015 ಅಧ್ಯಯನದ ಪ್ರಕಾರ, ಪ್ರತಿ ದಿನ ಸೇಬನ್ನು ತಿನ್ನುವ ಜನರು ಕಡಿಮೆ ಔಷಧಿಗಳನ್ನು ಬಳಸುತ್ತಾರೆ. ಮತ್ತು ನಿಯಮಿತವಾಗಿ ಸೇಬುಗಳನ್ನು ತಿನ್ನುವ ಜನರಲ್ಲಿ ಅಸ್ತಾಮಾ ಕಡಿಮೆ ಇರುತ್ತದೆ. ಸೇಬಿನಲ್ಲಿ ಹೆಚ್ಚು ಫೈಬರ್ ಅನ್ನು ಹೊಂದಿರುತ್ತವೆ. ಇದು ಸೋಂಕಿನ ಸಮಯದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೆಂಗಿನ ಕಾಯಿ

ಕಚ್ಚಾ ತೆಂಗಿನಕಾಯಿ ನೈಸರ್ಗಿಕ ರೋಗ ನಿರೋಧಕ ಹೆಚ್ಚಿಸುವ ಆಹಾರಗಳಲ್ಲಿ ಒಂದು. ಕಚ್ಚಾ ತೆಂಗಿನಕಾಯಿ ಮಾತ್ರವಲ್ಲ, ತೆಂಗಿನ ನೀರು ಮತ್ತು ಶುದ್ಧ ಎಣ್ಣೆಯೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ