ಪ್ಲಾಸ್ಮಾ ಟ್ರೀಟ್ಮೆಂಟ್ ನಿಂದ ಕೊರೊನಾ ವೈರಸ್ ಗುಣಪಡಿಸಬಹುದೇ..? -( Will Plasma therapy cure corona virus?

  • by

ಪ್ಲಾಸ್ಮಾ ಚಿಕಿತ್ಸೆಯಿಂದ ಅಮೇರಿಕಾದಲ್ಲಿ ಕೋವಿಡ್ -19 ರೋಗಿಗಳನ್ನು ಗುಣಪಡಿಸಲಾಗಿದೆ. ಈ ತಂತ್ರವನ್ನು ಭಾರತದಲ್ಲಿಯೂ ಬಳಸಲಾಗುತ್ತದೆ. ಮೂವರು ಭಾರತೀಯ-ಅಮೇರಿಕನ್ನರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಹೂಸ್ಟೇನನ ಸೇಂಟ್ ಲೂಕ್ಸ್ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಆಸ್ಪತ್ರೆ ಮಾಹಿತಿಯ ಪ್ರಕಾರ, ಪ್ಲಾಸ್ಮಾ ವರ್ಗಾವಣೆಯ ಸಹಾಯದಿಂದ ರಕ್ತವನ್ನು ನೀಡಿದ ನಂತರ ಶೀರ್ಘದಲ್ಲೇ ರೋಗಿಗಳು ಚೇತರಿಸಿಕೊಂಡಿದ್ದಾರಂತೆ.


COVID-19, plasma treatment, ಪ್ಲಾಸ್ಮಾ ಥರಪಿ, ಕೋವಿಡ್ -19

ಕೋವಿಡ್ -19 ರೋಗಿಗಳಿಗೆ ಪ್ಲಾಸ್ಮಾ ವರ್ಗಾವಣೆ

ಕೊರೊನಾ ವೈರಸ್ ಸೋಂಕಿನಿಂದಾಗಿ ಮೂವರು ಭಾರತೀಯ ಮೂಲದ ಹಾಗೂ ಅಮೆರಿಕಾದ ನಿವಾಸಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರೆಲ್ಲರೂ ಪ್ಲಾಸ್ಮಾ ಚಿಕಿತ್ಸೆಯಿಂದಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದುವರೆಗೂ ಕೊರೊನಾ ವೈರಸ್ ತಡೆಗಟ್ಟಲು ಯಾವುದೇ ವ್ಯಾಕ್ಸಿನ್ ಕಂಡು ಹಿಡಿಯಲಾಗಿಲ್ಲ. ದಿನದಿಂದ ದಿನಕ್ಕೆ ಮಾರಕ ಕೋವಿಡ್ -19 ಹೆಚ್ಚುತ್ತಲೇ ಇದೆ. ಯುಎಸ್ ನ ಹಲವು ವೈದ್ಯರು ಹಳೆಯ ತಂತ್ರಗಳ ಸಹಾಯದಿಂದ ಕೋವಿಡ್-19 ಸೋಂಕಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದಾಗ್ಯೂ, ಅದರ ಸಂಪೂರ್ಣ ವ್ಯಾಕ್ಸಿನ್ ಯಾವುದು ಎಂಬುದರ ಬಗ್ಗೆ ಖಚಿತವಾಗಿಲ್ಲ.ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಸ್ಪ್ಯಾನಿಷ್ ಜ್ವರ ಹೊಂದಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿತ್ತು.

ಪ್ಲಾಸ್ಮಾ ಚಿಕಿತ್ಸೆಯ ವಿಧಾನ ಹೇಗಿರುತ್ತದೆ?

ಕೋವಿಡ್ -19 ಸೋಂಕಿನಿಂದ ಗುಣಮುಖಗೊಂಡ ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಕಣಗಳನ್ನು ತೆಗೆದು, ರೋಗದಿಂದ ಬಳಲುತ್ತಿರುವ ಮತ್ತೊಬ್ಬ ವ್ಯಕ್ತಿಗೆ ಸೇರಿಸುವ ವಿಧಾನವೇ ಪ್ಲಾಸ್ಮಾ ಚಿಕಿತ್ಸೆ.ಸೋಂಕಿತ ವ್ಯಕ್ತಿ ಚೇತರಿಸಿಕೊಳ್ಳಲು 3-4 ದಿನ ಬೇಕಾಗುತ್ತದೆ. ಸಾಮಾನ್ಯವಾಗಿ ಸೋಂಕಿನ ವಿರುದ್ಧ ಹೋರಾಡಲು ವ್ಯಕ್ತಿಯ ರೋಗ ನಿರೋಧಕ ಶಕ್ತಿ ಹೆಚ್ಚಾಗಿರಬೇಕು. ಆದ್ರೆ ಕಡಿಮೆ ಇದ್ದಾಗ, ಇಂಥ ಸಮಯದಲ್ಲಿ ಆ ವ್ಯಕ್ತಿಯ ಪ್ರತಿ ರಕ್ಷಣಾ ಕೋಶಗಳಲ್ಲಿ ಕಂಡು ಬರುವ ಪ್ಲಾಸ್ಮಾವನ್ನು ಇನ್ನೊಬ್ಬ ವ್ಯಕ್ತಿಯ ದೇಹಕ್ಕೆ ನೀಡಲಾಗುತ್ತದೆ. ತಜ್ಞರ ಪ್ರಕಾರ, ಕೋವಿಡ್ -19 ಸೋಂಕಿಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ಉತ್ತಮ ಚಿಕಿತ್ಸೆ ಎಂದೇ ಪರಿಗಣಿಸಲಾಗಿದೆ.

ಭಾರತದಲ್ಲೂ ಪ್ಲಾಸ್ಮಾ ಥೆರಪಿ..!

ಅಮೇರಿಕಾದಂತೆ, ಭಾರತದಲ್ಲೂ ಕೋವಿಡ್-19 ಸೋಂಕು ಹೊಂದಿರುವ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುವ ಪ್ರಯತ್ನ ನಡೆದಿದೆ. ಕೇರಳದಲ್ಲಿ ಕೂಡಾ ಈ ಚಿಕಿತ್ಸೆ ಯಶಸ್ವಿಯಾಗಿದೆ. ಪ್ಲಾಸ್ಮಾ ಥೆರಪಿ ಈಗಾಗ್ಲೇ ಪರಿಣಾಮಕಾರಿ ಚಿಕಿತ್ಸೆ ಎಂಬುದು ಸಾಬೀತಾಗಿದೆ ಎಂದು ಟರ್ಕಿ ರೆಡ್ ಕ್ರಸೆಂಟ್ ಅಧ್ಯಕ್ಷ ಡಾ. ಕೆರಮ್ ಕಿನಿಕ್ ತಿಳಿಸಿದ್ದಾರೆ. ಇನ್ನು ಕೋವಿಡ್-19 ಚಿಕಿತ್ಸೆ ಕಲ್ಪಿಸಲು ಪ್ಲಾಸ್ಮಾ ಥೆರಪಿ ಅತ್ಯಂತ ಪರಿಣಾಮಕಾರಿ ಎಂದು ಹಲವಾರು ತಜ್ಞರು ಸ್ಪಷ್ಟಪಡಿಸಿದ್ದಾರೆ. ಒಬ್ಬ ಪ್ಲಾಸ್ಮಾ ದಾನಿ ಮೂವರು ಕೊರೊನಾ ವೈರಸ್ ರೋಗಿಗಳಿಗೆ ನೆರವಾಗಬಹುದು.ಟರ್ಕಿ ವೈದ್ಯರ ಪ್ರಕಾರ, ಮೊದಲ ರಕ್ತದ ಪ್ಲಾಸ್ಮಾವನ್ನು ಐದು ದಿನದಹಿಂದೆ ಕೋವಿಡ್ ರೋಗಿಯೊಬ್ಬರಿಗೆ ವರ್ಗಾಯಿಸಿದ್ದಾರೆ. ಈ ಥೆರಪಿಯಿಂದ ರೋಗಿಯ ಮೇಲೆ ಪರಿಣಾಮಕಾರಿ ಬದಲಾವಣೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲೂ ಕೇರಳದ ಸಂಸ್ಥೆಯೊಂದು ಈ ಪ್ರಯೋಗಕ್ಕೆ ಮುಂದಾಗಿದ್ದು, ಕೇರಳ ಸರ್ಕಾರವು ಇದಕ್ಕೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆದಿದೆ. ಈ ಥೆರಪಿಯನ್ನು ಪ್ರಾಯೋಗಿಕವಾಗಿ ನಡೆಸಲು ಅಗತ್ಯವಿರುವ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಕೇರಳದ ಎಸ್ ಸಿಟಿಐಎಂಎಸ್ ಟಿ ಸಂಸ್ಥೆಯು ಪ್ಲಾಸ್ಮಾ ಥೆರಪಿಯ ಕ್ಲಿನಿಕಲ್ ಟೆಸ್ಟ್ ಗೆ ಸಿದ್ಧತೆ ನಡೆಸಿದೆ. ನಿಯಮಾವಳಿಗಳ ರಚನೆ ನಂತರ, ಡ್ರಗ್ ಕಂಟ್ರೋಲರ್ ಜನರ್ಲ ಆಫ್ ಇಂಡಿಯಾ ಅನುಮತಿ ನೀಡಿದ ನಂತರವಷ್ಟೇ ಕ್ಲಿನಿಕಲ್ ಟೆಸ್ಟ್ ನಡೆಸಬಹುದು. ಕ್ಲಿನಿಕಲ್ ಟೆಸ್ಟ್ ಫಲಿತಾಂಶ ಬಂದು, ಸಕಾರಾತ್ಮಕವಾಗಿದ್ದರೆ ಈ ಥೆರಪಿಯನ್ನು ಬಳಸಲು ಅನುಮತಿ ದೊರೆಯುತ್ತದೆ.ಕೋವಿಡ್ -19 ರೋಗದಿಂದ ಸಂಪೂರ್ಣ ಗುಣಮುಖರಾಗಿ ಬೇರೆ ಯಾವುದೇ ರೋಗ ಇಲ್ಲದಿದ್ದರೆ ಮಾತ್ರ ಅಂತಹವರಿಂದ ಪ್ರತಿರೋಧ ಕಣಗಳನ್ನು ಪಡೆಯಲಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ