ಕೊರೊನಾ ಬಿಕ್ಕಟ್ಟು: ಮನೆಯಲ್ಲೇ ಇದ್ದು, ಆನ್ ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸಿ..!? – coronavirus, why it is essential to stay at home & consult doctors online)

  • by

ಕೋವಿಡ್-19 ಮಹಾಮಾರಿ ಇಡೀ ಪ್ರಪಂಚವನ್ನೇ ಆವರಿಸಿಕೊಂಡಿದೆ. ಕೊರೊನಾ ವೈರಸ್ ಸೋಂಕಿನಿಂದ ವಿಶ್ವದಾಂದ್ಯತ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಇಂಥ ಬಿಕ್ಕಟ್ಟಿನ ಸಯಮದಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಸರ್ಕಾರಗಳು ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ ಎಂದು ಸಾರ್ವಜನಿಕರಿಗೆ ಸಲಹೆ ನೀಡುತ್ತಿದ್ದಾರೆ. ಕೊರೊನಾ ವೈರಸ್ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಕಡೆಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಜನರು ತಮ್ಮ ಮನೆಗಳಲ್ಲಿಯೇ ಇದ್ದು, ಲಾಕ್ ಡೌನ್ ಆದೇಶ ಪಾಲಿಸುತ್ತಿದ್ದಾರೆ. ಇಟಲಿ, ಅಮೇರಿಕಾ, ಲಂಡನ್ ಮುಂತಾದ ರಾಷ್ಟ್ರಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಕ್ ಡೌನ್ ಮಾಡಿವೆ.ಲಾಕ್ ಡೌನ್ ಎನ್ನುವುದು ತುರ್ತು ವ್ಯವಸ್ಥೆಯಾಗಿದ್ದು, ಇದನ್ನು ಸಾಂಕ್ರಾಮಿಕ ಅಥವಾ ವಿಪತ್ತಿನ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಿಸಲಾಗುತ್ತದೆ. ಅಗತ್ಯ ವಸ್ತುಗಳಿಗೆ ಮಾತ್ರ ಹೊರಬರಲು ಅನುವು ಮಾಡಿಕೊಡಲಾಗಿದೆ.

coronavirus, stay at home, consult doctors online, ಆನ್ ಲೈನ್ ವೈದ್ಯರ ಸಂಪರ್ಕ, ಕೊರೊನಾ ವೈರಸ್, ಸ್ಟೇ ಹೋಮ್

ಸಾಮಾಜಿಕ ಅಂತರ, ಮನೆಯಲ್ಲಿರುವುದು ಏಕೆ ಮುಖ್ಯ..?


ಕೊರೊನೊ ವೈರಸ್ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಮನೆಯಲ್ಲಿರುವುದು ನಮ್ಮ ಹಾಗೂ ಕುಟುಂಬದವರ ಸುರಕ್ಷತೆ ತುಂಬಾ ಮುಖ್ಯವಾಗುತ್ತದೆ. ಯಾವುದೇ ರೋಗವನ್ನು ಹೊಡೆದೊಡಿಸಲು ಸರಿಯಾದ ಜ್ಞಾನ, ಸಕಾರಾತ್ಮಕ ಆಲೋಚನೆ ಹಾಗೂ ಆರೋಗ್ಯಯಕರ ಜೀವನ ಪದ್ಧತಿ ಮುಖ್ಯವಾಗುತ್ತದೆ. ದೈಹಿಕ ದೌರ್ಬಲ್ಯ ,ಒತ್ತಡ , ಅಸ್ಥಿರತೆ ಯಿಂದಾಗಿ ಹೆಚ್ಚಿನ ರೋಗಗಳು ಉಂಟಾಗುತ್ತವೆ.ಇಡೀ ಜಗತ್ತನ್ನೇ ಕೊರೊನಾ ಆವರಿಸಿರುವಾಗ, ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸರ್ಕಾರದ ಆದೇಶ ಪಾಲಿಸವುದು ಕರ್ತವ್ಯವಾಗಿದೆ.

ಕೊರೊನಾ ವೈರಸ್ ಇಡೀ ಜಗತ್ತಿನಾದ್ಯಂತ ಬಹುತೇಕ ಲಾಕ್ ಡೌನ್ ಆಗಿದೆ. ರಾಷ್ಟ್ರ ವ್ಯಾಪ್ತಿ ಲಾಕ್ ಡೌನ್ ಮಾಡಲಾಗಿದೆ. ಇಂಥ ಸಮಯದಲ್ಲಿ ಜನರು ತಮ್ಮ ಮನೆಗಳಲ್ಲಿ ನೆಲೆಸಿದ್ದಾರೆ. ಆದರೆ ದೀರ್ಘಕಾಲ ಲಾಕ್ ಆಗುವುದರಿಂದ ಬೇಸರ, ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದಂತೆ ನಿಮ್ಮನ್ನು ಕಾಡುವ ಆತಂಕ ಮೂಡಿಸುವ ಸುದ್ದಿಗಳನ್ನು ಓದುವುದು, ನೋಡುವುದನ್ನು ಅವೈಡ್ ಮಾಡಬೇಕಾಗುತ್ತದೆ. ಕೊರೊನಾಗೆ ಸಂಬಂಧಿಸಿದ ಮಾಹಿತಿ ದಿನಕ್ಕೆ ಎರಡು ಬಾರಿ ಕೇಳಿದರೆ ಉತ್ತಮ ಎಂದು ಹೇಳಲಾಗುತ್ತದೆ. ಇದ್ರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯ.

ಮನೋವಿಶ್ಲೇಷರ ಪ್ರಕಾರ, ಒತ್ತಡವನ್ನು ನಿವಾರಿಸುವ ಅತ್ಯುತ್ತಮ ಮಾರ್ಗವೆಂದರೆ ಸದ್ಯದ ಪರಿಸ್ಥಿತಿ ಹಾಗೂ ಸಂದರ್ಭಗಳನ್ನು ಒಪ್ಪಿಕೊಳ್ಳುವುದು. ಕೊರೊನಾ ದಂತಹ ತುರ್ತು ಪರಿಸ್ಥಿತಿಯಲ್ಲಿ ಹಲವು ಜನರು ಮಾನಸಿಕ ಹಾಗೂ ದೈಹಿಕ ತೊಂದರೆಗಳ ಜತೆಗೆ ಆರ್ಥಿಕ ನಷ್ಟದಿಂದ ಬಳಲುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಜೀವನವಿದ್ದರೆ ಜಗತ್ತು ಇದೆ ಎಂಬ ಮಾತನ್ನು ನೆನಪಿನಲ್ಲಿಡಬೇಕು. ಬಹುಶಃ ಕೆಲವು ಜನರು ಈ ಸನ್ನಿವೇಶಗಳನ್ನು ಸರಳವೆಂದು ತಿಳಿದುಕೊಳ್ಳಬಹುದು, ಮತ್ತೆ ಕೆಲವರು ತುಂಬಾ ಕಠಿಣ ಪರಿಸ್ಥಿತಿ ಎಂದು ಭಾವಿಸಬಹುದು. ಆದ್ರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಬೇರೆ ಆಯ್ಕೆಗಳಿಲ್ಲ. ಹಣಕಾಸಿನ ನಷ್ಟದಿಂದಾಗಿ ಭಯ, ಆತಂಕ ಕಾಡುವುದು ಸಹಜವಾದರೂ, ಭಯ ನಿಯಂತ್ರಣಕ್ಕೆ ತರಲು ಪ್ರಯತ್ನಿಸಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ವಿಶ್ರಾಂತಿ ಮತ್ತು ಧ್ಯಾನದಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದು ಹೇಳಬಹುದು.


coronavirus, stay at home, consult doctors online , ಕೊರೊನಾ ವೈರಸ್ , ಆನ್ ಲೈನ್ ವೈದ್ಯರು

ಈ ಸಂದರ್ಭದಲ್ಲಿ, ಮನೆಗಳಲ್ಲಿ ಮಕ್ಕಳನ್ನು ಹೊಂದಿರುವವರು ವಿಶೇಷ ಕಾಳಜಿ ವಹಿಸುವುದು ಅಗತ್ಯ. ಪೋಷಕರು ನಿರಂತರ ಕಿರುಕುಳದ ಪರಿಣಾಮ ಮಕ್ಕಳ ಮೇಲೆ ಬಹು ಬೇಗನೆ ಆಗುತ್ತದೆ. ಇದು ಕೆಟ್ಟದಾಗಿ ಪರಿಣಾಮ ಬೀರಬಲ್ಲದ್ದು. ಕೊರೊನಾ ವೈರಸ್ ಬಗ್ಗೆ ಮಕ್ಕಳೊಂದಿಗೆ ಮಾತನಾಡಿ ಜಾಗೃತಿ ಮೂಡಿಸಬೇಕಾದದ್ದು ಪೋಷಕರ ಜವಾಬ್ದಾರಿ. ಇದ್ರಿಂದ ಮನೆಯಲ್ಲಿ ಮತ್ತು ಹೊರಗಿನ ಪರಿಸರ ಏಕೆ ಬದಲಾಗಿದೆ ಎಂದು ಮಕ್ಕಳ ಅರಿವಿಗೆ ಬರುತ್ತದೆ.

ಮನಃಶಾಸ್ತ್ರಜ್ಞರ ಪ್ರಕಾರ, ಉತ್ತಮ ನಿದ್ರೆ, ಪೌಷ್ಟಿಕ ಆಹಾರ, ಮತ್ತು ಸ್ವಚ್ಛ ವಾತಾವರಣ. ವ್ಯಾಯಾಮ ಮತ್ತು ಜನರ ಜತೆಗೆ ಸಾಮಾಜಿಕ ಸಂವಹನ ಮನುಷ್ಯನ ಮೂಲಭೂತ ಅಗತ್ಯಗಳಾಗಿವೆ. ಆದ್ದರಿಂದ ಇದಕ್ಕೆಲ್ಲಾ ಪರ್ಯಾಯ ಮಾರ್ಗಗಳನ್ನು ಕಂಡು ಹಿಡಿಯುವ ಅವಶ್ಯಕತೆ ಇದೆ. ಉದಾಹರಣೆಗೆ ನಿಮ್ಮ ಕುಟುಂಬ ಸದಸ್ಯರು ಹಾಗೂ ಅಥವಾ ಸ್ನೇಹಿತರೊಂದಿಗೆ ನಿರಂತರ ಫೋನ್ ಸಂಪರ್ಕ ಅಥವಾ ವೀಡಿಯೋ ಚಾಟ್ ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಆಹಾರವನ್ನು ನೀವೇ ತಯಾರಿಸಿಕೊಳ್ಳಬಹುದು. ಕೆಲಸದ ದಿನಗಳಲ್ಲಿ ಸಮಯದ ಅಭಾವದಿಂದ ಆರೋಗ್ಯದ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವವವರು, ಈಗಿನ ಸಯಮವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ದಿನಗಳಲ್ಲಿ ವ್ಯಾಯಾಮ , ಯೋಗ, ಮತ್ತು ಪ್ರಾಣಾಯಾಮ ಇತ್ಯಾದಿಗಳನ್ನು ಅಳವಡಿಸಿಕೊಳ್ಳಬಹುದು.. ಇದು ಆರೋಗ್ಯಕ್ಕೂ ಹಾಗೂ ಒತ್ತಡವನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಕೊರೊನಾ ವೈರಸ್ ಕ್ಷೀಣಿಸಲು ಇನ್ನು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಮನೆಯಲ್ಲಿಯೇ ಇರುವ ಸ್ಥಿತಿ ಮುಂದಿನ 2 ರಿಂದ 3 ವಾರಗಳವರೆಗೆ ಮುಂದುವರಿಯಬಹುದು.

ಸಂಗೀತ, ವಾದ್ಯ ಹೊಸ ಭಾಷೆ ಕಲಿಯಿರಿ..!

ಈ ಸಮಯದಲ್ಲಿ ಸಂಗೀತ ಆಲಿಸುವುದು, ಹೊಸ ಭಾಷೆ ಕಲಿಯುವುದು ಬಾಕ್ಸಿಂಗ್ ನಂತಹ ಕೌಶಲ್ಯವನ್ನು ಕಲಿಯಬಹುದು. ಇದು ನಿಮ್ಮನ್ನು ಕಾರ್ಯಗತಗೊಳಿಸುತ್ತದೆ. ಯ್ಯೂಟ್ಯೂಬ್ ಆನ್ ಲೈನ್ ತರಬೇತಿಗಳು ಸಹಾಯ ಮಾಡಬಲ್ಲವು. ಇವೆಲ್ಲದರ ಹೊರತಾಗಿ ಚಿತ್ರಕಲೆ, ಬರವಣಿಗೆ ಅಡುಗೆ ಅಥವಾ ಹೊಲಿಗೆಯಂತಹ ಎಲ್ಲಾ ಹವ್ಯಾಸಗಳನ್ನು ಪೂರೈಸಿಕೊಳ್ಳಲು ಇದು ಉತ್ತಮ ಸಮಯ ಎಂದು ಹೇಳಬಹುದು.
ಅಷ್ಟೇ ಅಲ್ಲದೇ, ಪುಸ್ತಕಗಳು, ಅಂತರ್ಜಾಲದಲ್ಲಿ ಜ್ಞಾನದ ನಿಧಿ, ಅಮೆಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್ ನಂತಹ ವೇದಿಕೆಗಳಲ್ಲಿನ ಉತ್ತಮ ವಿಷಯವು ಸಮಯವನ್ನು ಕಳೆಯಲು ಉತ್ತಮ ಮಾರ್ಗವಾಗಿದೆ. ಈ ಸಂದರ್ಭದಲ್ಲಿ ಹಲವಾರು ದಿನಗಳವರೆಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದರೆ, ಚಲನಚಿತ್ರಗಳನ್ನು ನೋಡುವುದು, ಪುಸ್ತಕಗಳನ್ನು ಓದುವುದು ಒಳ್ಳೆಯದು. ಇದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಕೊರೊನಾ ಭೀತಿಯ ಮಧ್ಯೆ ಆರೋಗ್ಯದ ಬಗ್ಗೆ ಎಲ್ಲರಿಗೂ ಆತಂಕ ಇದ್ದೇ ಇರುತ್ತದೆ. ಇಂಥ ಸಂದರ್ಭದಲ್ಲಿ ವೈದರನ್ನು ಸಂಪರ್ಕಿಸುವುದು ಹೇಗೆ ಎಂಬ ಪ್ರಶ್ನೆ ಸಂದೇಹ ಹಲವರನ್ನು ಕಾಡುತ್ತಿದೆ. ಹೀಗಾಗಿ ಆನ್ ಲೈನ ಮೂಲಕ ನೀವು ವೈದ್ಯರ ಜತೆ ಸಮಾಲೋಚನೆ ನಡೆಸಬಹುದು. ರೋಗಿಗಳ
ವಿಡಿಯೋ ಕಾನ್ಫೆರೆನ್ಸ್ ಮೂಲಕ ಸ್ಕೈಪೆ ಅಥವಾ ಜೂಮ್ ಮೂಲಕ ವೈದ್ಯರ ಜತೆ ಸಮಾಲೋಚನೆ ನಡೆಸಬಹುದು.

ವಾಟ್ಸ್ ಅಪ್, ಮೊಬೈಲ್, ಆನ್ ಲೈನ್ ಮೂಲಕ ಡಾಕ್ಟರ್ ಸಂಪರ್ಕ ಮಾಡಬಹುದು. ಆಸ್ಪತ್ರೆ, ಲ್ಯಾಬ್ ಔಷಧಿ, ಅಂಗಡಿಗಳ ಬಗ್ಗೆ ಗೂಗಲ್ ಮ್ಯಾಪ್ ಕೆಲಸ ಮಾಡುತ್ತದೆ. ಆನ್ ಲೈನ್ ಮೂಲಕ ರೋಗಿಗಳು ತಮಗೆ ಬೇಕಾದ ವೈದ್ಯರನ್ನು ಆಯ್ಕೆ ಮಾಡಿಕೊಳ್ಳಬಹುದು. ಆನ್ ಲೈನ್ ಮೂಲಕ ವೈದ್ಯರ ಅಪಾಯಿಂಟ್ಮೆಂಟ್ ಪಡೆಯಬಹುದಾಗಿದೆ. ಈ ಮೂಲಕ ವೈದ್ಯರು ಏನು ಓದಿದ್ದಾರೆ.. ?ವೈದ್ಯರ ಅನುಭವೇನು..? ಚಿಕಿತ್ಸೆಗೆ ಬೆಲೆ ಎಷ್ಟು ..?ಎಂಬುದನ್ನು ತಿಳಿದುಕೊಳ್ಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ