‘ಕೊರೊನಾ ವೈರಸ್ ತಡೆಗಟ್ಟಲು ಆಹಾರ ಪದ್ಥತಿ, ಯೋಗಾ, ಧ್ಯಾನ ಉಪಯುಕ್ತ ‘- ರವಿಶಂಕರ್ ಗುರೂಜಿ

  • by

ಇಡೀ ಜಗತ್ತು ಕೊರೊನಾ ವೈರಸ್ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ , ಪ್ರತಿಯೊಬ್ಬರು ಶಾಂತವಾಗಿರಬೇಕು ಮತ್ತು ಸರಳ ಜೀವನ ಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು, ಇದು ಸೋಂಕು ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಜನರ ಯೋಗಕ್ಷೇಮಕ್ಕೆ ಸಂಬಂಧಪಟ್ಟಂತೆ ಅಗತ್ಯ ಸೇವೆಗಳನ್ನು ಒದಗಿಸಲು ದಣಿವರಿಯಿಲ್ಲದೇ ಕೆಲಸ ಮಾಡುತ್ತಿರುವವರನ್ನು ಶ್ಲಾಘಿಸಬೇಕು ಎಂದು ಆಧ್ಯಾತ್ಮ ಗುರು ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಗುರೂಜೀ ಸಲಹೆಗಳು…!

1.ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಿ ( ಬಿಳಿ ಸಕ್ಕರೆ, ಬಿಳಿ ಹಿಟ್ಟನ್ನು ಅವೈಡ್ ಮಾಡಿ)
2. ಉಸಿರಾಟಕ್ಕೆ ಸಂಬಂಧಿಸಿದ ಯೋಗಾ ಮಾಡುವುದು
3. ನಿಮ್ಮ ಆಹಾರದಲ್ಲಿ ಅರಶಿಣ ಸೇರಿಸಿ,
4. ಉಸಿರಾಟದ ತೊಂದರೆಗಳು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆತಂಕವನ್ನು ಕಡಿಮೆ ಮಾಡಲು ಧ್ಯಾನ ಒಂದೇ ಮಾರ್ಗದರ್ಶಿ ಉಪಾಯಗಳಲ್ಲಿ ಒಂದು ಹೇಳಿದ್ದಾರೆ.

ಸೃಜನಶೀಲತೆಯನ್ನು ಅನ್ವೇಷಿಸಲು ಉತ್ತಮ ಅವಕಾಶ- ಗುರೂಜೀ

ಕೊರೊನಾ ವೈರಸ್ ತಡೆಗಟ್ಟಲು ಅದರ ವಿರುದ್ಧ ಹೋರಾಡಲು ಜನರು ತಮ್ಮ ಸೃಜನಶೀಲತೆಯನ್ನು ಅನ್ವೇಷಿಸಲು ಉತ್ತಮ ಅವಕಾಶ ಎಂದು ಆಧ್ಯಾತ್ಮ ಗುರು ಹಾಗೂ ಆರ್ಟ್ ಆಫ್ ಲಿವೀಂಗ್ ಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.

ಪ್ರತಿಯೊಬ್ಬರು ತಮ್ಮೊಳಗಿನ ಗಮನವನ್ನು ಬದಲಾಯಿಸಿಕೊಳ್ಳುವುದು ಹಾಗೂ ಸೃಜನಶೀಲ ಸಂಗತಿಗಳೊಂದಿಗೆ ಹೊರ ಬರಬೇಕು. ಮಾನಸಿಕ ಆರೋಗ್ಯವನ್ನು ಬಲಪಡಿಸುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದ್ದಾರೆ. ಜನರು ಭಯಭೀತರಾಗದಂತೆ ಅವರು ಸಲಹೆ ನೀಡಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು. ಅಜಾಗರೂಕತೆಯಿಂದ ಅನೇಕ ಜನರಿಗೆ ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮ ಆಹಾರ ಪದ್ಥತಿಯನ್ನು ಬದಲಾಯಿಸುವ ಮೂಲಕ, ಯೋಗಾ ಹಾಗೂ ಧ್ಯಾನವುವನ್ನು ಅಭ್ಯಾಸ ಮಾಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ