ಕೊರೋನಾ ವೈರಸ್ , ಆಯುರ್ವೇದ ವೈದ್ಯರ ಪ್ರಕಾರ, ನಿಮ್ಮನ್ನು ರಕ್ಷಿಸಿಕೊಳ್ಳುವ ಮಾರ್ಗಗಳು ಇಲ್ಲಿವೆ!

  • by

ಚೀನಾ ಸೇರಿದಂತೆ ವಿಶ್ವದಲ್ಲೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ವೈರಸ್ ಹರಡದಂತೆ ತಡೆಯುವನ ನಿಟ್ಟಿನಲ್ಲಿ ಹಾಗೂ ವೈರಸ್ ಬಾಧಿಸುವವಿರೆಗ ಔಷಧಿ ಕಂಡು ಹಿಡಿಯುವಲ್ಲಿ ಇಡೀ ವೈದ್ಯ ಲೋಕವೇ ಪ್ರಯತ್ನ ಪಡುತ್ತಿದೆ. ಮೊದಲ ಪ್ರಕರಣವನ್ನು ಖಟಿತ ಪಡಿಸಿದ ನಂತರ ರಾಜಧಾನಿ ಆತಂಕದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದ್ದು,  ಜಾಗತಿಕ ಮಟ್ಟದಲ್ಲಿ ಸಾವಿನ ಸಂಖ್ಯೆ ೩೦೦೦ ಕ್ಕೂ ಅಧಿಕ ದಾಟಿದೆ. 

ಕರೋನಾ ವೈರಸ್ ನಿಂದ ನಿಮ್ಮನ್ನು ಸುರಕ್ಷಿತವಾಗಿಡಲು ಸಲಹೆಗಳು!

ಮಾರಣಾಂತಿಕ ಸೋಂಕನ್ನು ಹಿಡಿಯದಂತೆ ನಿಮ್ಮನ್ನು ಉಳಿಸಿಕೊಳ್ಳಲು ಸುಲಭವಾದ ಮಾರ್ಗವೆಂದರೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕಿನ ಅಪಾಯವನ್ನು ತಡೆಗಟ್ಟಲು ಈ ಮಾರ್ಗಗಳು ಸಹಾಯ ಕಾರಿಯಾಗಬಲ್ಲವು. 

ಆರೋಗ್ಯ ಕಾಪಾಡಿಕೊಳ್ಳಿ.!

ನಿಮ್ಮ ಆಹಾರದಲ್ಲಿ ಬೆಣ್ಣೆ, ಮೊಸರು ನಂತಹ ಆಹಾರಗಳು ಕರುಳಿನ ಸೂಕ್ಷ್ಮ ಜೀವಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ನಿಮ್ಮನ್ನು ಆರೋಗ್ಯವಾಗಿರಿಸುತ್ತವೆ. ಕರಿಮೆಣಸು, ಕೊತ್ತಂಬರಿ ಬೀಜ. ಬೆಳ್ಳುಳ್ಳಿ, ಶುಂಠಿ. ಕಿತ್ತಳೆ, ಕೋಸುಗಡ್ಡೆ . ಮೊಳಕೆ ಕಾಳುಗಳು. ನಿಂಬೆಹಣ್ಣು, ಹಾಗೂ ಸ್ರ್ಟಾಬೆರಿಗಳಂತಹ ಆಹಾರ ಪದಾರ್ಥಗಳನ್ನು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. 

ಪ್ರತಿ ನಿತ್ಯ ನಿಮ್ಮನ್ನು ನೀವು ಮಸಾಜ್ ಮಾಡಿಕೊಳ್ಳಿ!

ಸ್ವಯಂ ಮಸಾಜ್ ನರಮಂಡಲ ವನ್ನು ಶಾಂತಗೊಳಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಸಾಜ್ ಮಾಡಲು ನೀವು ಎಳ್ಳಿನ ಎಣ್ಣೆಯನ್ನು ಬಳಸಬಹುದು. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ತೈಲ ನೆರವಾಗುತ್ತದೆ. 

ಯೋಗಾ ಮಾಡಿ.. ತಲೆಕೆಳಗಾದ ಯೋಗ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ನಿಮ್ಮ ದೇಹದಿಂದ ಸೂಕ್ಷ್ಮ ಜೀವಿಗಳನ್ನು ಹೊರಹಾಕುತ್ತದೆ. ಉತ್ತಮಾಸನ ಅಥವಾ ಸರ್ವಾಂಗಾಸನ ಹೆಚ್ಚು ಉಪಯುಕ್ತ ಎಂದು ಹೇಳಬಹುದು. ನೀವು ನೇರವಾಗಿ ಕುಳಿತು ಕೆಳಗೆ ಇಡೀ ದೇಹವನ್ನು ಬೆಂಡ್ ಮಾಡು ಆಸನ ಇದಾಗಿದೆ. 

ಕೋಲ್ಡ್, ಸ್ವೀಟ್ ಹಾಗೂ ಫ್ರೈ ಫುಡ್ ಅವೈಡ್ ಮಾಡಿ..!

ಕೋಲ್ಡ್ ಆಗಿರುವ ಆಹಾರಗಳನ್ನು ಸೇವಿಸಬೇಡಿ. ಅದೇ ರೀತಿ ಕೋಲ್ಡ್ , ಸ್ವೀಟ್ ನ್ನು ಹೆಚ್ಚು ಬಳಸಬಾರದು. ಇದು ನಿಮ್ಮ ಅಜೀರ್ಣತೆನ್ನು ಹೆಚ್ಚಿಸಬಹುದು. ಫ್ರೈ ಹಾಗೂ ಸ್ವೀಟ್ ಫುಡ್ ಗಳು ಹೆಚ್ಚು ಅಜೀರ್ಣ ಉಂಟು ಮಾಡುತ್ತವೆ. ಹಾಗಾಗಿ ಇವುಗಳನ್ನು ಅವೈಡ್ ಮಾಡಿ. ತರಕಾರಿ , ಸೂಪ್ಸ್ ಸೇವಿಸಬಹುದು. 

ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.. 

ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಸಾರಭೂತ ತೈಲಗಳಿಂದ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬಹುದು. ಶುಂಠಿ, ಏಲಕ್ಕಿ, ನೀಲಗಿರಿ, ರೋಸ್ಮರಿ, ದಾಲ್ಚಿನಿ, ತುಳಸಿ , ಮುಂತಾದ ಸಾರಭೂತ ತೈಲಗಳೊಂದಿಗೆ ಸ್ನಾನ ಮಾಡಬಹುದು. 

ಚೆನ್ನಾಗಿ ನಿದ್ರೆ ಮಾಡಿ

ನಿಮ್ಮ ದೇಹಕ್ಕೆ ನೀವು ಮಾಡುತ್ತಿರುವ ಅತ್ಯಂತ ಹಾನಿಕಾರಕ ಕೆಲಸವೆಂದರೆ , ಕಡಿಮೆ ನಿದ್ರೆ ಮಾಡುವುದು. ನೀವು ನಿದ್ದೆ ಮಾಡುವಾಗ, ನಿಮ್ಮ ದೇಹವು ಸೈಟೊಕಿನ್ಸ್ ಎಂಬ ಅಗತ್ಯವಾದ ಇಮ್ಯೂನ್ ಪ್ರೋಟೀನ್ ಗಳನ್ನು ಉತ್ಪಾದಿಸುತ್ತದೆ. ಇದು ದೇಹವನ್ನು ಆರೋಗ್ಯರವಾಗಿಡಲು ಅಗತ್ಯವಾದ ಸೋಂಕು ನಿರೋಧಕ ಪ್ರತಿ ಕಾಯಗಳಾಗಿ ಕಾರ್ಯ ನಿರ್ವಹಿಸುತ್ತದೆ. 

ಮೆಡಿಟೇಶನ್ ಮಾಡುವುದು 

ಧ್ಯಾನವು ಮನಸ್ಸನ್ನು ಶಾಂತವಾಗಿಡಲು ನೆರವಾಗುತ್ತದೆ. ಕೆಟ್ಟ ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಹಲವಾರು ಅಪಾಯಕಾರಿ ಅಂಶಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಕಡಿಮೆ ರಕ್ತದೋತ್ತಡ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಧ್ಯಾನ ಮಾಡುವುದರಿಂದ ಮನಸ್ಸು ಹಾಗೂ ದೇಹ ರಿಲ್ಯಾಕ್ಸ್ ಆಗುತ್ತದೆ. ಇದು ಆಕ್ಸಿಡೇಟಿವ್ ವಿರುದ್ಧ ಹೋರಾಡಲು ನೆರವಾಗುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ