‘ಮನೆಯಲ್ಲೇ ಇರಿ, ಜೀವಗಳನ್ನು ಉಳಿಸಿ,’ ಕೋವಿಡ್ -19 ಮಾಸ್ಕ್ ಬಗ್ಗೆ ಜಾಗೃತಿ..! – ‘Stay home,save lives’,Awareness about face masks

  • by
social distancing

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಕಡ್ಡಾಯ ಮಾಸ್ಕ್ ಧರಿಸುವಂತೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಸಚಿವಾಲಯವು ಕೂಡಾ ಜನರಿಗೆ ಮಾಡಬೇಕಾದ ಹಾಗೂ ಮಾಡಬಾರದ ಕೆಲವು ನಿಯಮಗಳನ್ನು ಪಾಲಿಸುವಂತೆ ಗೈಡ್ ಲೈನ್ಸ್ ಹೊರಡಿಸಿದೆ. ಈ ಮಧ್ಯೆ ಅನೇಕರು ಮಾಸ್ಕ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅದರಂತೆ ಮಂಗಳೂರಿನಲ್ಲಿ ಕಲಾವಿದ ಶರಣಬಸಪ್ಪಾ ಎಂಬುವವರು ಜಾಗೃತಿ ಮೂಡಿಸುತ್ತಿರುವ ದೃಶ್ಯ ದಕ್ಷಿಣ ಕನ್ನಡ ಜಿಲ್ಲೆಯ ಛಾಯಾಗ್ರಾಹಕ ಅಪುಲ್ ಆಳ್ವಾ ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ.

coronavirus-mask-guidelines-ಕೊರೊನಾ ವೈರಸ್ , ಮಾಸ್ಕ್ , ಜಾಗೃತಿ

ಮಾಸ್ಕ್ ಯಾವಾಗ ಬಳಸಬೇಕು..?

1.ಕೆಮ್ಮುತ್ತಿದ್ದರೆ ಅಥವಾ ಸೀನುವಾಗ ಮಾಸ್ಕ್ ಧರಿಸಿ
2.ಹೊರಗಡೆ ಹೋಗುವಾಗ ಕಡ್ಡಾವಯವಾಗಿ ಮಾಸ್ಕ್ ಧರಿಸಬೇಕು.
3.ಮಾಸ್ಕ್ ಧರಿಸುವಾಗ ಅಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಅಥವಾ
4.ಸೋಪ್ ನಿಂದ ಕೈಗಳನ್ನು ಸ್ವಚ್ಛ ಮಾಡಿಕೊಂಡು ಮಾಸ್ಕ್ ಧರಿಸುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
5.ನೀವು ಮಾಸ್ಕ್ ಧರಿಸುವಾಗ ಹೇಗೆ ಅದನ್ನು ಬಳಸಬೇಕು.
6.ಹಾಗೂ ಹೇಗೆ ವಿಲೇವಾರಿ ಮಾಡಬೇಕು ಗೊತ್ತಿರಬೇಕು.
7.ಮಾಸ್ಕ್ ಒದ್ದೆಯಾದ ತಕ್ಷಣ ಹೊಸ ಮಾಸ್ಕ್ ಧರಿಸಿ.
8.ಬಳಸಿದ ಮಾಸ್ಕ್ ನ್ನೇ ಪದೇ ಪದೇ ಬಳಸುವುದನ್ನು ತಪ್ಪಿಸಿ.
9.ಮಾಸ್ಕ್ ತೆಗೆಯುವಾಗ ಹಿಂದಿನಿಂದ ತೆಗೆದು ಹಾಕುವಾಗ ಮಾಸ್ಕ್ ನ ಮುಂಭಾಗವನ್ನು ಮುಟ್ಟಬೇಡಿ.
10.ಅಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಹಾಗೂ ಅಥವಾ ಸೋಪ್ ಹಾಗೂ ನೀರಿನಿಂದ ಕೈಗಳನ್ನು ಪದೇ ಪದೇ ಸ್ವಚ್ಛಗೊಳಿಸಿ.
11.ವೈರಸ್ ಹರಡುವುದನ್ನು ತಪ್ಪಿಸಲು ಸಾರ್ವಜನಿಕ ಪ್ರದೇಶಗಳಲ್ಲಿ ಅನಗತ್ಯವಾಗಿ ಓಡಾಡಬೇಡಿ. ಹೊರಗೆ ಹೋದಾಗ ಅನಾವಶ್ಯಕ ವಸ್ತುಗಳನ್ನು ಮುಟ್ಟಬೇಡಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ..?

1.ಮನೆಯ ಮೇಲೆ ಛಾವಣಿ ಅಥವಾ ಕಟ್ಟಡ, ಬಾಲ್ಕನಿ ಮೇಲೆ ಸೂರ್ಯನ ಬೆಳಕಿಗೆ ಕೆಲ ಸಮಯ ಕಳೆಯಿರಿ. ದೇಹವು ಸೋಂಕಿನ ವಿರುದ್ಧ ಹೋರಾಡಲು ಸೂರ್ಯನ ಕಿರಣಗಳು ಶಕ್ತಿ ನೀಡುತ್ತವೆ.

2.ಧ್ಯಾನವು ಮನಸ್ಸನ್ನು ಶಾಂತವಾಗಿರಿಸುತ್ತದೆ. ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿದಿನ ಧ್ಯಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಧ್ಯಾನವು ಒತ್ತಡವನ್ನು ನಿವಾರಿಸುತ್ತೆದೆ. ವೈರಸ್ ವಿರುದ್ಧ ಹೋರಾಡಲು ನೆರವಾಗುತ್ತದೆ.

3.ಹಲವು ಅಧ್ಯಯನಗಳ ಪ್ರಕಾರ, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಕೆಮ್ಮು ಮತ್ತು ಶೀತದ ಅಪಾಯವು ಶೇ 50 ರಷ್ಟು ಪ್ರತಿಶತದಷ್ಟು ಕಡಿಮೆ ಮಾಡಬಹುದು. ವ್ಯಾಯಾಮವು ಪ್ರತಿರೋಧ ವ್ಯವಸ್ಥೆಯನ್ನು ಬಲಪಡಿಸುತ್ತ

4. ಮತ್ತೊಂದು ಮುಖ್ಯವಾದ ಅಂಶವೆಂದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಕಷ್ಟು ನಿದ್ರೆ ಮಾಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ