ಕೊರೋನಾ ವೈರಸ್ ಬಗ್ಗೆ ಭಯ ಬೇಡ.. ಇರಲಿ ಮುಂಜಾಗ್ರತೆ!

  • by

ಚೀನಾದಲ್ಲಿ ಮಾರಣ ಹೋಮಕ್ಕೆ ಕಾರಣವಾಗಿರುವ ಕೊರೋನ ವೈರಸ್ ನಿಂದಾಗಿ ಚೀನಾ ದೇಶ ಆತಂಕಗೊಂಡಿದೆ. ಈ ಸೋಂಕಿನಿಂದ ಈಗಾಗ್ಲೇ ಹಲವು ಜನರು ಮೃತಪಟ್ಟಿದ್ದಾರೆ. ಕೊರೋನಾ ವೈರಸ್ ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. 

ಕೊರೋನಾ ವೈರಸ್ ಎಂದರೆ ಏನು?

ಕೊರೋನಾ ವೈರಸ್ (ತೀರ್ವ ಉಸಿರಾಟದ ಸಿಂಡ್ರೋಮ್ – ಎಸ್ಎಆರ್ ಎಸ್ ) ಆಗಿದ್ದು, ನ್ಯೂಮೊನಿಯಾ ಮತ್ತಿತರ ಉಸಿರಾಟದ ತೊಂದರೆಗಳು ಉಂಟಾಗುತ್ತವೆ. ಇದೇ ರೀತಿಯ ವೈರಸ್ ನಿಂದ ಚೀನಾದ ವುಹಾನ್ ನಲ್ಲಿ ಈ ತಿಂಗಳಲ್ಲಿ 22 ಜನರು ಮೃತಪಟ್ಟಿದ್ದಾರೆ. 

ಕೊರೋನಾ ವೈರಸ್ ಹೇಗೆ ಬರುತ್ತದೆ.?

ಕೊರೋನಾ ವೈರಸ್ ಸಾಮಾನ್ಯವಾಗಿ ನಾಯಿ, ಬೆಕ್ಕುಗಳ ರೀತಿಯ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಸಮುದ್ರದ ಪ್ರಾಣಿಗಳನ್ನು ಮಾರಾಟ ಮಾಡಲಾಗುವ ಹ್ಯೂನಾನ್ ಸಮುದ್ರದ ಆಹಾರ ಮಾರ್ಕೆಟ್ ನಿಂದ ಪ್ರಸ್ತುತ ಈ ಸೋಂಕು ಹರಡುತ್ತಿದೆ ಎಂದು ಎಲ್ಲರೂ ನಂಬಿದ್ದಾರೆ. ಹಾಗಾಗಿ ನ್ಯೂ ಇಯರ್ ನಿಂದಲೂ ಈ ಮಾರುಕಟ್ಟೆ ರದ್ದುಗೊಂಡಿದೆ. 

ಚೀನಾದ ವಿವಿಧ ಪ್ರಾಂತ್ಯಗಳಲ್ಲಿ ಮಾತ್ರವಲ್ಲದೇ, ಅಂತರಾಷ್ಟ್ರೀಯವಾಗಿಯೂ ಈ ಸೋಂಕು ಹರಡುತ್ತಿದೆ. ಥೈಲ್ಯಾಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲೂ ಕೊರೋನಾ ವೈರಸ್ ಪ್ರಕರಣಗಳು ಕಂಡು ಬಂದಿದೆ. 

ಇನ್ನು ಚೀನಾಜ ಆಡಳಿತ ಸಂಸ್ಥೆಗಳ ಪ್ರಕಾರ, ಜನವರಿ 21 ರಂದು 217 ಪ್ರಕರಣಗಳು ಕಂಡು ಬಂದಿದೆ. ಈ ಹಿಂದೆ ಅದಕ್ೂ ದುಪ್ಪಟ್ಟು ಸಂಖ್ಯೆಯಲ್ಲಿತ್ತು ಎನ್ನಲಾಗ್ತಿದೆ. ಒಟ್ಟಾರೆ 1 ಸಾವಿರ0 394 ಜನರು ವೈದ್ಯಕೀಯ ನಿಗಾದಲ್ಲಿದ್ದು, 765 ಮಂದಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. 

ವೈರಸ್ ನ ಲಕ್ಷಣಗಳೇನು..

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಈ ಸೋಂಕು ತಗುಲಿದವರಲ್ಲಿ ಜ್ವರ, ಕೆಮ್ಮು , ಗಂಟಲು ಕೆರೆತ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. 

ಕೊರೋನಾ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು. ಸುಮಾರು ಶೇ. 35 ರಷ್ಟು ಜನರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ 

ಚಿಕಿತ್ಸೆಗಳೇನು

ಕೊರೋನಾ ತಡೆಗಾಗಿ ಈವರೆಗೂ ಎಲ್ಲಿಯೂ ಚಿಕಿತ್ಸೆ ದೊರೆತಿಲಲ್. ಎಂಇಆರ್ ಎಸ್ ಚಿಕಿತ್ಸೆ ನೀಡಲಾಗುತ್ತದೆ. ಇದು ಒಂದಿಷ್ಟು ಸಮಯ ಸೋಂಕು ಹರಡದಂತೆ ತಡೆಯುವ ನಿರೀಕ್ಷೆಯಿದೆ. ಈ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಉತ್ತಮ ಮಾರ್ಗವೆಂದರೆ ಮುಂಜಾಗ್ರತೆ ವಹಿಸುವುದು. ಮೂಗು ಹಾಗೂ ತುಟಿಯನ್ನು ಮಾಸ್ಕ್ ನಿಂದ ಮುಚ್ಚಿಕೊಳ್ಳಬೇಕು. ಜನ ದಟ್ಟಣೆಯ ಪ್ರದೇಶಗಳಿಗೆ ಭೇಟಿ ನೀಡಬಾರದು. 

ಮಹಾಮಾರಿ ಕೋರೋನಾ ವೈರಸ್ ಗೆ ಕೋವಿಡ್ ೧೯ ಎಂದು ವಿಶ್ವ ಆರೋಗ್ಯ ಸಂಸ್ಥೆ ವಾಮಕರಣ ಮಾಡಿದೆ. ಈ ಮಧ್ಯೆ ಮಾರಕ ಕೊರೋನಾ ವೈರಸ್ ಚೀನಾದಲ್ಲಿ ಮತ್ತಷ್ಟು ವ್ಯಾಪಿಸಿದ್ದು, ಸೋಮವಾರ ಒಂದೇ ದಿನ ೧೦೮ ಮಂದಿಯನ್ನು ಬಲಿ ಪಡೆದುಕೊಂಡಿದೆ. ಈ ಮೂಲಕ ಸಾವಿನ ಸಂಖ್ಯೆ ೧,೦೦೦ ಕ್ಕೂ ಏರಿದೆ. ಕೊರೋನಾ ವೈರಸ್ ಸೋಂಕಿಗೆ ಔಷಧಿ ಕಂಡು ಹಿಡಿಯುವುದಾಗಿ ಬ್ರಿಟಿಷ್ ವಿಜ್ಞಾನಿಗಳ ತಂಡವೊಂದು ಹೇಳಿಕೊಂಡಿದ್ದು, ಶ್ವಾಸಕೋಶದ ತೊಂದರೆಯನ್ನುಂಟು ಮಾಡುವ ವೈರಾಣು ರೋಗಗಳಿಗೆ ಔಷಧಿ ಕಂಡು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ಈ ವರ್ಷಾಂತ್ಯಕ್ಕೆ ಯಶಸ್ವಿಯಾಗಿ ಪ್ರಯೋಗ ಹಂತಗಳನ್ನು ಮುಗಿಸುವ ಪ್ರಯತ್ನದಲ್ಲಿದ್ದೇವೆ ಎಂದು ಲಂಡನ್ ನ ಇಂಪೀರಿಯಲ್ ಕಾಲೇಜಿನ ಸಂಶೋಧಕರು ಹೇಳಿಕೊಂಡಿದ್ದಾರೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ