ಕೊರೊನಾ ವೈರಸ್ ಭೀತಿ: ಪರಿಣಾಮಕಾರಿಯಾದ ಮಾಸ್ಕ್ ಯಾವುದು..?

  • by

ಕರೋನಾ ವೈರಸ್ ವಿಶ್ವದಾಂದ್ಯತ ತೀವ್ರ ಆತಂಕ ಮೂಡಿಸಿದ್ದು, ಇದೀಗ ಭಾರತದಲ್ಲೂ ಕೊರೊನಾ ಭೀತಿ ಕಾಣಿಸಿಕೊಂಡಿದೆ. ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಇದುವರೆಗೂ ಕೊರೊನಾ ವೈರಸ್ 60ಕ್ಕೂ ಅಧಿಕ ದೇಶಗಳಿಗೆ ಹರಡಿದೆ. ಈ ವೈರಸ್ ಸೋಂಕಿನ ಅಪಾಯ ಹೆಚ್ಚಿರುವುದರಿಂದ ಇದು ಹರಡದಂತೆ ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಹಾಗೂ ನ್ಯಾಷನಲ್ ಹೆಲ್ತ್ ಸರ್ವೀಸ್ ಕೊರೊನಾ ವೈರಸ್ ತಡೆಗಟ್ಟುವ ಮಾರ್ಗಗಳನ್ನು ಹಾಗೂ ಮುಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ.Coronavirus,  effective mask protection,
ಕೊರೊನಾ ವೈರಸ್, ಮಾಸ್ಕ್ ಬಳಕೆ,

ಮುಜಾಗ್ರತೆ ಕ್ರಮಗಳೇನು..?

ಕೈಗಳನ್ನು ಪದೇ ಪದೇ ಸಾಬೂನು ಹಾಗೂ ನೀರಿನಿಂದ ಕೈ ತೊಳೊದುಕೊಳ್ಳಿ. ಸ್ಯಾನಿಟೈಸರ್ ನ್ನು ಬಳಸಬಹುದು, ಬಳಕೆ ಮಾಡಿರುವ ಟಿಶ್ಯೂಗಳನ್ನು ಮರು ಬಳಕೆ ಮಾಡಬೇ.ಕೈ ತೊಳೆಯದೇ ನಿಮ್ಮ ಕಣ್ಣು, ಮೂಗು, ಹಾಗೂ ಬಾಯಿಯನ್ನು ಮುಟ್ಟಬೇಡಿ.ಕಾಯಿಲೆಯಿಂದ ನರುಳುತ್ತಿರುವ ವ್ಯಕ್ತಿಗಳಿಂದ ದೂರವಿರಿ. ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಕೆಮ್ಮುವಾಗ ಹಾಗೂ ಸೀನುವಾಗ ನಿಮ್ಮ ಬಾಯಿಯನ್ನು ಮುಚ್ಚಬೇಕು

ಯಾವ ಮಸ್ಕ್ ಕೊರೊನಾ ವೈರಸ್ ಗೆ ಪರಿಣಾಮಕಾರಿ?
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಕೆಮ್ಮು, ಸೀನುವಾಗ, ಮಾತನಾಡುವ ಸಮಯದಲ್ಲಿ ವ್ಯಕ್ತಿಯಿಂದ ಬಾಯಿಯಿಂದ ಹೊರಹಾಕುವ ವೈರಾಣುಗಳ ಮೂಲಕ ಈ ರೋಗ ಹರಡಬಹುದು. ಆದ್ದರಿಂದ ಕೊರೊನಾ ವೈರಸ್ ತಡೆಗಟ್ಟುವ ಸಾಧನವಾಗಿ ಮುಖವಾಡವನ್ನು ಖರೀದಿಸಲು ನೀವು ಸಹ ಯೋಚಿಸುತ್ತಿದ್ದರೆ, ಇದರ ಕಡೆ ಗಮನ ಹರಿಸಬೇಕಾಗುತ್ತದೆ. ಇದೀಗ ಹೆಚ್ಚು ಹೆಚ್ಚು ಜನರು ಮಾಸ್ಕ್ ಗಳನ್ನು ಧರಿಸುತ್ತಿದ್ದಾರೆ. ಖರೀದಿಸಲು ಮುಂದಾಗುತ್ತಿದ್ದಾರೆ. ನಿಜಕ್ಕೂ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಗಳಿಂದ ಪ್ರಯೋಜನವಿದೆಯೇ ಅಥವಾ ಇಲ್ಲವೇ? ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಕೊರೊನಾ ವೈರಸ್ ನಿಂದ ವಿಶ್ವದಾಂದ್ಯತ ಭಯ ಹೆಚ್ಚುತ್ತಿದೆ. ಮಾಂಸಹಾರ ಮತ್ತು ಸಸ್ಯಹಾರ ಸೇವಿಸುವ ಜನರು ಆತಂಕದಲ್ಲಿದಾರೆ. ಜನರು ಸಾರ್ವಜನಿಕ ಸ್ಥಳಕ್ಕೆ ಹೋಗಲು ಭಯ ಪಡುತ್ತಿದ್ದಾರೆ.Coronavirus,  effective mask protection,
ಕೊರೊನಾ ವೈರಸ್, ಮಾಸ್ಕ್ ಬಳಕೆ,

ಮಾಸ್ಕ್ ಹಾಕೋದ್ರಿಂದ ಏನಾಗುತ್ತೆ..?
ನೀವು ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದರೆ , ರೋಗ ಹರಡುವುದನ್ನು ತಡೆಗಟ್ಟಲು ಮಾಸ್ಕ್ ಹೆಚ್ಚು ಉತ್ತಮ ಮಾರ್ಗವಾಗಿದೆ. ಆದ್ರೆ ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್ ವಿರುದ್ಧ ರಕ್ಷಣೆ ಒದಗಿಸುತ್ತದೆ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಯಾಕೆಂದರೆ ಹೆಚ್ಚಿನ ಜನರು ಇದನ್ನು ಸರಿಯಾಗಿ ಧರಿಸುವುದು ಹೇಗೆ.. ಎಂದು ಪರಿಗಣಿಸಬೇಕಾಗುತ್ತದೆ. ದಿನಕ್ಕೆ ಊಟ ಮಾಡುವಾಗ ಹಾಗೂ ನೀರು ಕುಡಿಯುವಾಗ ಮಾಸ್ಕ್ ತೆಗೆಯಬೇಕಾಗುತ್ತದೆ. ಹಾಗಾಗಿ ಯಾವ ರೀತಿಯ ಮಾಸ್ಕ್ ಗಳು ಧರಿಸಬೇಕು ಇಲ್ಲಿ ತಿಳಿಸಲಾಗಿದೆ.

ಮಾಸ್ಕ್ ಹೇಗೆ ಬಳಸಬೇಕು..?
ಯೂಸ್ ಆ್ಯಂಡ್ ಥ್ರೋ ,ಮಾಸ್ಕ್ ಗಳು ಸರ್ಜಿಕಲ್ ಫೇಸ್ ಮಾಸ್ಕ್ ಗಳಿದ್ದಂತೆ. ಗಾಳಿಯಲ್ಲಿನ ಸಣ್ಣ ಸಣ್ಣ ಕಣಗಳನ್ನು ನಿರ್ಬಂಧಿಸಲು ಇವುಗಳನ್ನು ತಯಾರಿಸಲಾಗಿದೆ. ಹಾಗಾಗಿ ಈ ಮಾಸ್ಕ್ ಗಳನ್ನು 3 ರಿಂದ 8 ಗಂಟೆಯವರೆಗೂ ಹೆಚ್ಚು ಗಂಟೆಯವರೆಗೆ ಬಳಸಬಾರದು. ಎನ್ 95 ಮಾಸ್ಕ್ ಗಳು ಹೆಚ್ಚು ಗುಣಮಟ್ಟದ ಮಾಸ್ಕ್ ಎಂದು ಹೇಳಲಾಗಿದೆ.Coronavirus,  effective mask protection,
ಕೊರೊನಾ ವೈರಸ್, ಮಾಸ್ಕ್ ಬಳಕೆ,

ವೈದ್ಯರು ಏನು ಹೇಳುತ್ತಾರೆ..?
ವೈರಸ್ ತಡೆಗಟ್ಟಲು ಮಾಸ್ಕ್ ಗಳು ಎಷ್ಟು ಪರಿಣಾಮಕಾರಿ ಬಗ್ಗೆ ವೈದ್ಯರ ಪ್ರಕಾರ, ದೊಡ್ಡ ಪ್ರಮಾಣದಲ್ಲಿ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಸಹಾಯಕಾರಿಯಾದರೂ, ವೈರಸ್ ವಿರುದ್ಧ ತಡೆಗಟ್ಟಲು ಮಾಸ್ಕ್ ಉಪಯೋಗವಾಗಲಿದೆ ಎಂಬ ಬಗ್ಗೆ ವೈದ್ಯರು ಖಚಿತತೆ ವ್ಯಕ್ಯಪಡಿಸಿಲ್ಲ. ಆದ್ರೆ ಮಾಸ್ಕ್ ನ್ನು ಸರಿಯಾದ ಸಮಯ ಹಾಗೂ ಜಾಗದಲ್ಲಿ ಬಳಸಬೇಕು ಎಂದು ವೈದ್ಯರ ಅಭಿಪ್ರಾಯವಾಗಿದೆ.
ಆಸ್ಪತ್ರೆಯಲ್ಲಿ ರೋಗಿಯ ಕುಟುಂಬಸ್ಥರು, ವೈದ್ಯರು ಹಾಗೂ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಮಾಸ್ಕ್ ಧರಿಸಬಹುದು. ಇವರನ್ನು ವೈರಸ್ ವಿರುದ್ಧ ರಕ್ಷಿಸುವಲ್ಲಿ ಮಾಸ್ಕ್ ಪ್ರಮುಖ ಪಾತ್ರ ವಹಿಸುತ್ತದೆ.


ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ