ಕೊರೊನಾ ವೈರಸ್ ಬಗ್ಗೆ ಚಿಕಿತ್ಸೆ, ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆಗಳು..!

  • by

ಮಾರಕ ಕೊರೊನಾ ವೈರಸ್ ದೇಶದೆಲ್ಲಡೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ವೈರಸ್ ಶಂಕಿತ ವ್ಯಕ್ತಿಗಳ ಪತ್ತೆ ಹಾಗೂ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದ ತಕ್ಷಣ ಸಂಪರ್ಕಿಸಲು ಮತ್ತು ಅದರ ಬಗ್ಗೆ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಸಹಾಯವಾಣಿ ಆರಂಭಿಸಿದೆ. 104 ಸಂಖ್ಯೆಗೆ ಜನರು ಕರೆ ಮಾಡಿ ಕೊರೊನಾ ವೈರಸ್ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ಹೊಸ ಕೋವಿಡ್ -19 ಸಹಾಯವಾಣಿಗಳಾಗಿ 080-46848600 ಮತ್ತು 080- 66692000 ಕಾರ್ಯ ನಿರ್ವಹಿಸಲಿದ್ದು, ಆರೋಗ್ಯ ಇಲಾಖೆ 104 ಹೆಲ್ಪ್ ಲೈನ್ ಜತೆಗೆ ಕೊರೊನಾ ಬಗ್ಗೆ ಸಲಹೆ ಹಾಗೂ ಮಾಹಿತಿ ಗಳನ್ನು ನೀಡಲಿದೆ.

ವಾಟ್ಸ್ ಅಪ್ ಹಾಗೂ ಹೆಲ್ಪ್ ಲೈನ್ ನಂಬರ್ ಬಿಡುಗಡೆ

ಕೇಂದ್ರ ಆರೋಗ್ಯ ಇಲಾಖೆ ಕೂಡಾ ಕೊರೊನಾ ವೈರಸ್ ಸಹಾಯವಾಣಿ ಬಿಡುಗಡೆ ಮಾಡಿದೆ. 1075, ಅಥವಾ 1800- 112-545 ಹಾಗೂ 011-23978046 ಸಹಾಯವಾಣಿಗಳಿಕೆ ಕರೆ ಮಾಡಬಹುದು. ಜತೆಗೆ ವಾಟ್ಸ್ ಅಪ್ ನಂಬರ ಕೂಡಾ ಹೆಲ್ಪ್ ಲೈನ್ ನಂಬರ್ ಕಾರ್ಯ ನಿರ್ವಹಿಸುತ್ತಿದೆ. 91-9013151515 ನಂಬರ್ ಗೆ ಮೆಸೇಜ್ ಕಳುಹಿಸಿ ಮಾಹಿತಿ ಪಡೆದುಕೊಳ್ಳಲು ಅನುವು ಮಾಡಿಕೊಡಲಾಗಿದೆ.
ಕೊರೊನಾ ಬಗ್ಗೆ ಭೀತಿಯುಳ್ಳವರು, ಈ ವೈರಾಣು ಕಾಯಿವೆ ಬಗ್ಗೆ ತಿಳಿದುಕೊಳ್ಳಲು ಹಾಗೂ ಸೋಂಕಿತರು , ಚಿಕಿತ್ಸೆ ಬಗ್ಗೆ ಅಗತ್ಯ ಮಾಹಿತಿ ಪಡೆಯಲು ಇಚ್ಛಿಸುವವರು 91-11-23978046 ನಂಬರ್ ಗೆ ಕರೆ ಮಾಡಿ, ಮಾಹಿತಿ ಪಡೆದುಕೊಳ್ಳಬಹುದು. ಇದು 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ. ಪ್ರತ್ಯೇಕ ಇ-ಮೇಲ್ ncov2019@gmail.comಗೂ ಸಂಪರ್ಕ ಮಾಡಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ