ಕೊರೊನಾ ಎಫೆಕ್ಟ್ ಕಡಿಮೆ ಮಾಡುತ್ತಾ ವಿಟಮಿನ್ ಸಿ.!?

  • by

ಕೊರೊನಾ ಎಂಬ ರಾಕ್ಷಸ ಇಡೀ ವಿಶ್ವವನ್ನೇ ಅಲುಗಾಡಿಸುತ್ತಿದೆ. ಈ ವೈರಸ್ ವಿರುದ್ಧ ಹೋರಾಡಲು ಇಡೀ ವಿಶ್ವವೇ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದುವರೆಗೂ ಔಷಧಿ ಪತ್ತೆಯಾಗಿಲ್ಲ. ಹೀಗಾಗಿ ವಿಟಮಿನ್ ಸಿ ವೈರಸ್ ವಿರುದ್ಧ ಹೋರಾಡಲು ನಿಜಕ್ಕೂ ನೆರವಾಗುತ್ತದೆಯೇ.. ಎಂಬ ಬಗ್ಗೆ ಪ್ರಶ್ನೆ ಮೂಡುವುದು ಸಹಜ. ಆದ್ರೆ ಆಹಾರದಲ್ಲಿ ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ಕೊರೊನೊ ವೈರಸ್ ನ್ನು ತಡೆಗಟ್ಟಬಹುದು. ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಸಹ ಬಳಸಬೇಕಾಗುತ್ತದೆ. ಕರೊನಾ ವೈರಸ್ ಪೀಡಿತ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಬೇಕು. ನೀವು ಕಚ್ಚಾ ಆಹಾರ ಮತ್ತು ಸಮುದ್ರದ ಆಹಾರವನ್ನು ತಿನ್ನುವುದನ್ನು ನಿಲ್ಲಿಸಬೇಕಾಗುತ್ತದೆ. ಇದ್ರಿಂದ ಕೊರೊನಾ ಅಪಾಯವನ್ನು ತಡೆಗಟ್ಟಬಹುದಾಗಿದೆ.

Corona Attack, vitamin C, reduce virus,, ವಿಟಮಿನ್ ಸಿ, ಆಹಾರ, ಕೊರೊನಾ ವೈರಸ್

ವಿಟಮಿನ್ ಸಿ ಇರುವ ಆಹಾರಗಳೆಂದರೆ..
ಕಿತ್ತಳೆ
ಪೇರಲೆ ಹಣ್ಣು
ಸ್ಟ್ರಾಬರಿ,
ಪಪ್ಪಾಯಿ
ನೆಲ್ಲಿಕಾಯಿ
ನಿಂಬೆ
ಸಾರ್ವಜನಿಕ ಸ್ಥಳಗಳಿಗೆ ಹೋಗುವುದನ್ನು ಆದಷ್ಟು ತಪ್ಪಿಸಬೇಕು. ಮುಖವನ್ನು ಸ್ಪರ್ಶಿಸುವುದನ್ನು ಅವೈಡ್ ಮಾಡಿ. ಮೊದಲನೆಯದಾಗಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಅನುಮಾನಗಳಿದ್ದರೆ ಅದರಿಂದ ದೂರವಿರಿ.ಬೇಯಿಸಿದ ಸಸ್ಯಾಹಾರ ಹಾಗೂ ಮನೆಯಲ್ಲೇ ತಯಾರಿಸಿದ ಆಹಾರವನ್ನೇ ಸೇವಿಸಿ. ನಿಮ್ಮ ಹಾಗೂ ಕುಟುಂಬದವರ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲಸ ಮಾಡಿ. ಒಟ್ಟಿಗೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ.

ವಿಟಮಿನ್ ಸಿ ಸೇವನೆಯಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗಿ ಜೀವಕೋಶಗಳಿಗೆ ಹಾನಿಯನ್ನು ತಡೆಗಟ್ಟುತ್ತದೆ. ಹಲವಾರು ಹಣ್ಣು ಮತ್ತು ತರಕಾರಿ ಸೇವನೆಯಿಂದ ವಿಟಮಿನ್ ಸಿ ಕೊರತೆ ಯನ್ನು ನೀಗಿಸಬಹುದಾಗಿದೆ.

ಪೇರಲೆ ಹಣ್ಣು…

ಸೀಬೆ ಹಣ್ಣಿನಲ್ಲಿ ಶೇ 628 ರಷ್ಟು ವಿಟಮಿನ್ ಸಿ ಇರುವುದರಿಂದ ಪ್ರತಿ ದಿನ ಈ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾಗಿರುವ ವಿಟಮಿನ್ ದೊರೆಯುತ್ತದೆ. ಹಳದಿ ಹಾಗೂ ಕೆಂಪು ಕ್ಯಾಪ್ಸಿಕಂ ಇವುಗಳಲ್ಲಿ ವಿಟಮಿನ್ ಸಿ ಹೆಚ್ಚಾಗಿದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Corona Attack, vitamin C, reduce virus,, ವಿಟಮಿನ್ ಸಿ, ಆಹಾರ, ಕೊರೊನಾ ವೈರಸ್

ಕೊತ್ತಂಬರಿ ಸೊಪ್ಪು…

ಕೊತ್ತಂಬರಿ ಸೊಪ್ಪು ಶೇ 33ರಷ್ಟು ವಿಟಮಿನ್ ಸಿ ಇದೆ. ಪೈನಾಪಲ್, ಸ್ಟ್ರಾಬರಿ, ಲಿಚಿ ಹಣ್ಣು, ಕಿತ್ತಳೆ, ಇದರಲ್ಲಿ ವಿಟಮಿನ್ ಸಿ ಯತೇಚ್ಛವಾಗಿ ದೊರೆಯುತ್ತದೆ. ಪ್ರತಿ ದಿನ ಆಹಾರದಲ್ಲಿ ಸೇವಿಸುವುದರಿಂದ ಹಲವಾರು ಕಾಯಿಲೆಗಳಿಂದ ದೂರವಿರಬಹುದು.

ಕೆಂಪು ದೊಣ್ಣೆ ಮೆಣಸು

ಕೆಂಪು ದೊಣ್ಣೆ ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಸಮೃದ್ದವಾಗಿದೆ. ವಿಟಮಿನ್ ಗಳು ಖನಿಜಾಂಶಗಳಿವೆ. ಇದು ಪ್ರತಿರೋಧಕ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ.

ಕಿವಿ ಹಣ್ಣು

ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ದೊರೆಯುತ್ತದೆ. ಈ ಹಣ್ಣು ಸ್ವಲ್ಪ ಹುಳಿ ಹಾಗೂ ಸಿಹಿಯಾಗಿದ್ದು, ತುಂಬಾ ಮೃದುವಾಗಿ ಈ ಹಣ್ಣು ವಿಟಮಿನ್ ಎ ಆಹಾರದ ನಾರಿನಾಂಶ , ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳು ಇವೆ.

ಕೋಸುಗಡ್ಡೆ

ಕೋಸುಗಡ್ಡೆ ತುಂಬಾ ಆರೋಗ್ಯಕಾರಿ ತರಕಾರಿಗಳಲ್ಲಿ ಒಂದು. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಒಂದು ಕಪ್ ಕೋಸುಗಡ್ಡೆಯಲ್ಲಿ 135 ಶೇ ವಿಟಮಿನ್ ಸಿ ಇದೆ.

ಲಿಜೆ ಹಣ್ಣು

ಲಿಚೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಅದ್ಭುತ ರುಚಿ ಮತ್ತು ಆರೋಗ್ಯಕ್ಕೂ ಹೆಚ್ಚು ಸೂಕ್ತ. ಈ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ಮತ್ತು ಆರೋಗ್ಯಕಾರಿ ಕೊಬ್ಬು ಉತ್ಪನ್ನ ಮಟ್ಟದಲ್ಲಿವೆ.

ಕಿತ್ತಳೆ

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಕಿತ್ತಳೆ ಹಣ್ಣಿನಲ್ಲಿ 163 ಶೇ ವಿಟಮಿನ್ ಸಿ ಇದ್ದು, ಸಲಾಡ್, ಜ್ಯೂಸ್ ರೀತಿಯಲ್ಲಿ ಇದನ್ನು ಬಳಸಲಾಗುತ್ತದೆ. ಇನ್ನೂ ನಿಂಬೆ ಹಣ್ಣಿನಲ್ಲಿಯೂ ವಿಟಮಿನ್ ಸಿ ಅಧಿಕವಾಗಿದೆ. ಇದು ಕ್ಯಾಲರಿ ಹಾಗೂ ಕೊಲೆಸ್ಟ್ರಾಲ್ ಹೆಚ್ಚಲು ನೆರವಾಗುತ್ತದೆ.

ಸ್ರ್ಟಾಬರಿ

ಸ್ರ್ಟಾಬರಿಯಲ್ಲಿ ವಿಟಮಿನ್ ಸಿ ಹೆಚ್ಚಳವಾಗಿದ್ದು. ಪ್ರೋಟೀನ್ ಹಾಗೂ ನಾರಿನಾಂಶಗಳನ್ನು ಇದು ಒಳಗೊಂಡಿದೆ. ಈ ರುಚಿಕರ ತಿನಿಸು ಸಲಾಡ್, ಸ್ಮೂಥಿಗಳಲ್ಲಿ ಬಳಸಲಾಗುತ್ತದೆ.

ಪೈನಾಪಲ್

ಪೈನಾಪಲ್ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅನಾನಸ್ ಹಣ್ಣಿನಲ್ಲಿ ಉನ್ನತ ವಿಟಮಿನ್ ಇ, ಕ್ಯಾಲ್ಸಿಯಂ ಹಾಗೂ ಪೊಟ್ಯಾಶಿಯಂ ಮತ್ತು ನಾರಿನಾಂಶವಿದೆ.

ಹೂಕೋಸು

ಹೂಕೇಸು ತರಕಾರಿಯಲ್ಲಿ ಹೆಚ್ಚಾಗಿ ವಿಟಮಿನ್ ಸಿ ಕಂಡು ಬರುತ್ತದೆ. ಹೂಕೋಸು ತರಕಾರಿಯಲ್ಲಿ ಕ್ಯಾಲ್ಸಿಯಂ , ವಿಟಮಿನ್ ಕೆ, ಪೊಟ್ಯಾಶಿಯಂ ಮತ್ತು ಪ್ರೋಸ್ಪರಸ್ ಸಮೃದ್ಧವಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ