ಹಲವು ರೋಗಗಳಿಗೆ ರಾಮಬಾಣ ಕೊತ್ತಂಬರಿ ಸೊಪ್ಪು!

  • by

ಸಾಮಾನ್ಯವಾಗಿ ಕೊತ್ತಂಬರಿಯನ್ನು ಎಲ್ಲಾ ಅಡುಗೆಗಳಲ್ಲಿ ಕಡ್ಡಾಯವಾಗಿ ಬಳಸಲಾಗುತ್ತದೆ. ಕೊತ್ತಂಬರಿ ಇಲ್ಲದೇ, ಅಡುಗೆ ಖಾದ್ಯಗಳು ರುಚಿ ನೀಡುವುದಿಲ್ಲ. ಅಡುಗೆಗೆ ಬಳಸಲಾಗುವ ಮಸಾಲಾ ಪದಾರ್ಥ ಗಳಲ್ಲಿ ಕೊತ್ತಂಬರಿ ಕೂಡಾ ಒಂದು. ಇದನ್ನೂ ಧನಿಯಾ ಅಂತಲೂ ಕರೆಯಲಾಗುತ್ತದೆ. ಉತ್ತಮ ಪರಿಮಳ ಹಾಗೂ ರುಚಿಯನ್ನು ಹೊಂದಿರುವ ಕೊತ್ತಂಬರಿ ವಿಶ್ವದಾಂದ್ಯಂತ ಎಲ್ಲಾ ಅಡುಗೆಯಲ್ಲೂ ಬಳಸಲಾಗುತ್ತದೆ. 


Coriander Leaves , health benefits, 
ಕೊತ್ತಂಬರಿ ಸೊಪ್ಪು, ಆರೋಗ್ಯ ಪ್ರಯೋಜನಗಳು

ಕೊತ್ತಂಬರಿಯ ವಿಶಿಷ್ಟ ಗುಣಗಳೇನು..?

ಪೋಷಕಾಂಶಗಳು ಕೊತ್ತಂಬರಿ ಬೀಜಗಳಲ್ಲಿ ಹಾಗೂ ಪುಡಿಯಲ್ಲಿ ಅಧಿಕ ಪೋಷಕಾಂಶಗಳಿರುತ್ತವೆ. ಕೊತ್ತಂಬರಿ ಬೀಜ ಹಾಗೂ ಪುಡಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ, ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.ನಮ್ಮ ದೇಹದಲ್ಲಿ ಸಂಗ್ರಹವಾಗುವ ಅನಪೇಕ್ಷಿತ ಲವಣಗಳನ್ನು ಹಾಗೂ ಸೂಕ್ಷ್ಮಜೀವಿಗಳನ್ನು ತನ್ನಲ್ಲಿ ತಡೆ ಹಿಡಿದು ಆರೋಗ್ಯ ರಕ್ಷಣೆ ಮಾಡುತ್ತದೆ. 

ಕೊತ್ತಂಬರಿ ಸೊಪ್ಪಿನ ಪ್ರಯೋಜನಗಳು!

ತೊಳೆದ ಕೊತ್ತಂಬರಿಯ ಕಟ್ಟನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ ಒಂದು ತಪ್ಪಲೆಯಲ್ಲಿ ಹಾಕಿ ಶುದ್ಧ ನೀರಿನಲ್ಲಿ ಬಿಸಿ ಮಾಡಬೇಕು. ನಂತರ 10 ನಿಮಿಷ ಬಕುದಿಸಿದ ನಂತರ ಅದನ್ನು ಸೋಸಿ, ಸ್ವಚ್ಛವಾದ ಉತ್ತಮ ದರ್ಜೆಯ ಬಾಟಲಿ ಅಥವಾ ಪಾತ್ರೆಯಲ್ಲಿ ಹಾಕಿಟ್ಟು, ಫ್ರಿಡ್ಜ್ ನಲ್ಲಿಡಬೇಕು. 

ದಿನಂಪ್ರತಿ 1 ಲೋಟ ತಯಾರಿಸಿದ ಕೊತ್ತಂಬರಿ ಪಾನಿಯವನ್ನು ರಾತ್ರಿ ಮಲಗುವ ಮುನ್ನ ಸೇವಿಸಬೇಕು. ಮೂತ್ರ ವಿಸರ್ಜನೆ ವೇಳೆ ದೇಹದಲ್ಲಾಗುವ ಅನಪೇಕ್ಷಿತ ಲವಣಗಳನ್ನು ಹಾಗೂ ಸಂಗ್ರಹವಾಗಿರುವ ಅಶುದ್ಧ ಹೊರಹೋಗುತ್ತವೆ. 

ಇನ್ನು ಕೊತ್ತಂಬರಿ ಸೊಪ್ಪನ್ನು ಜಗಿಯುತ್ತಿದ್ದರೆ ದಂತ ಸಮಸ್ಯೆ ನಿವಾರಣೆಯಾಗುತ್ತದೆ. 

ವಸಡುಗಳು ಊದಿಕೊಂಡು ಹಲ್ಲು ನೋವು ಉಂಟಾದಾಗ, ಹತ್ತಿಯನ್ನು ಜೇನುತುಪ್ಪದಲ್ಲಿ ಅದ್ದಿ ದಿನಕ್ಕೆ ನಾಲ್ಕೈದು ಬಾರಿ ಇಟ್ಟುಕೊಳ್ಳುತ್ತಿದ್ದರೆ. ಹಲ್ಲು ನೋವು ವಸಡಿನ ಸಮಸ್ಯೆ ನಿವಾರಣೆಯಾಗುತ್ತದೆ. 

ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲು ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವು 1 ಸಲ ಸೇವಿಸಿದರೆ ಎದೆ ನೋವು ಕಡಿಮೆಯಾಗುತ್ತದೆ. ಕೊತ್ತಂಬರಿ ಜೀವನ್ನು ಕುಟ್ಟಿ ಪುಡಿ ಮಾಡಿ ಅದನ್ನು ನೀರಿನಲ್ಲಿ ನೆನೆ ಹಾಕಿ, ಬಳಿಕ ಚೆನ್ನಾಗಿ ಕಿವುಚಿ ಸೋಸಬೇಕು. ಈ ಕಷಾಯಕ್ಕೆ ಹಾಲು , ಸಕ್ಕರೆ ಬೆರೆಸಿ ಸೇವಿಸಿದರೆ ಆಗಾಗ ಕಾಡುವ ಎದೆ ನೋವು ಕಡಿಮೆಯಾಗುತ್ತದೆ. 

ಕೂದಲು ಬೆಳವಣಿಗೆ ಹೆಚ್ಚಿಸುತ್ತದೆ !

ಕೊತ್ತಂಬರಿ ಬೀಜವನ್ನು ಅಡುಗೆಯಲ್ಲಿ ಎಲ್ಲರೂ ಉಪಯೋಗಿಸುತ್ತಾರೆ. ಇದರಿಂದ ಕೂದಲು ಬುಡಕ್ಕೆ ಹೆಚ್ಚಿನ ಬಲ ದೊರೆಯುತ್ತದೆ. ಹಾಗೂ ಕೂದಲು ಉದುರುವುದನ್ನು. ಕಡಿಮೆಗೊಳಿಸುತ್ತದೆ. 


Coriander Leaves , health benefits, 
ಕೊತ್ತಂಬರಿ ಸೊಪ್ಪು, ಆರೋಗ್ಯ ಪ್ರಯೋಜನಗಳು

ಶೀತ ಮತ್ತು ಜ್ವರ ನಿವಾರಣೆ..

ಕೊತ್ತಂಬರಿ ಪುಡಿಯಲ್ಲಿ ವಿಟಮಿನ್ ಎ, ಸಿ ಬೀಟಾ ಕ್ಯಾರೋಟಿನ್ ಹಾಗೂ ಪೋಲಿಕ್ ಆಮ್ಲಗಳಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಅದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಸಾಮಾನ್ಯ ಶೀತ ಮತ್ತು ಫ್ಲೂ ಜ್ವರವನ್ನು ಸಮರ್ಥವಾಗಿಸುತ್ತವೆ.

ಕೊತ್ತಂಬರಿ ಬೀಜ ಮಧುಮೇಹಕ್ಕೆ ಒಳ್ಳೆಯದು!

ಕೊತ್ತಂಬರಿ ಬೀಜ ಸೇವನೆಯಿಂಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಾಮಾನ್ಯ ಮಟ್ಟದಲ್ಲಿರುತ್ತದೆ. ಕೆಟ್ಟ ಕೊಲೆಸ್ಚ್ಪಾಲ್ ನಿವಾರಿಸುವಲ್ಲಿ ಕೊತ್ತಂಬರಿ ಬೀಜ ಸಹಕಾರಿಯಾಗಿದೆ. ಅಲ್ಲದೇ ಇದು ಜೀರ್ಣಕ್ರಿಯೆಗೆ ಉತ್ತಮವಾದದ್ದು. ಕೊತ್ತಂಬರಿ ಪುಡಿಯಲ್ಲಿರುವ ಪೋಷಕಾಂಶಗಳು ಹೆಚ್ಚಿನ ಜೀರ್ಣರಸವನ್ನು ಉತ್ಪತ್ತಿಯಾಗಲು ನೆರವಾಗುತ್ತವೆ. ಈ ಮೂಲಕ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ. 

ಅಲ್ಲದೇ ಚರ್ಮ ವ್ಯಾಧಿಗಳನ್ನು ಕಡಿಮೆಗೊಳಿಸುತ್ತದೆ. ತುರಿಕೆ, ಎಕ್ಸಿಮಾ, ಹುಳಕಡ್ಡಿ, ಕೆಂಪಗಾಗುವುದು, ಉರಿ ಮೊದಲಾದವುಗಳಿಗೆ ಕೊತ್ತಂಬರಿ ಪುಡಿಯನ್ನು ಉಗುರು ಬೆಚ್ಚನೆಯ ನೀರಿನಲ್ಲಿ ನಯವಾದ ಲೇಪನ ತಯಾರಿಸಿ. ಹಚ್ಚಿಕೊಳ್ಳುವ ಮೂಲಕ ಸಮಸ್ಯೆ ನಿವಾರಣೆಯಾಗುತ್ತದೆ. 

ಮಾಸಿಕ ದಿನಗಳನ್ನು ಕ್ರಮಬದ್ಧಗೊಳಿಸುತ್ತದೆ.

ಕೊತ್ತಂಬರಿ ಬೀಜ ಮಾಸಿಕ ಸ್ರಾವ ತೀವ್ರವಾಗಿದ್ದರೆ ನಿಮ್ಮ ಆರಾಹದಲ್ಲಿ ಕೊತ್ತಂಬರಿ ಬೀಜಗಳನ್ನು ಸೇವನೆ ಮಾಡಿ. ಇದು ಮಾಸಿಕ ದಿನಗಳನ್ನು ಕ್ರಮಬದ್ಧವಾಗಿಸಲು ನೆರವಾಗುತ್ತದೆ. ಈ ದಿನಗಳ್ಲಲಿ ಕಾಡುವ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. 

ಸೊಪ್ಪು ಅಷ್ಟೇ ಅಲ್ಲ, ಬಹುಪಯೋಗಿ  ಕೊತ್ತಂಬರಿ ಬೀಜ..!

ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ ಬಳಸುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಮನೆಯಲ್ಲಿಯೇ ಸುಲಭವಾಗಿ ಕೊತ್ತಂಬರಿ ಬೀಜವನ್ನು ನೆನೆಸಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದರಿಂದ ಆರೋಗ್ಯದಲ್ಲಿ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. 

ಅಲ್ಲದೇ, ಆ್ಯಂಟಿ ಆಕ್ಸಿಡೆಂಟ್ ಹೆಚ್ಚಾಗಿರುವುದರಿಂದ ಸಾಮಾನ್ಯ ಶೀತ ಹಾಗೂ ಫೋಲಿಕ್ ಆಮ್ಲಗಳಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಾರಣವಾಗುತ್ತದೆ. 


Coriander leaves, health benefits
ಕೊತ್ತಂಬರಿ ಸೊಪ್ಪು , ಆರೋಗ್ಯ ಪ್ರಯೋಜನಗಳು,

ಕೊತ್ತಂಬರಿ ಬೀಜಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಮತೋಲನದಲ್ಲಿರುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. 

ಇನ್ನು ಕೆಲವು ಮಹಳೆಯರು ಮೈಯಿಂದ ಬಿಳಿ ಹೋಗುವ ಸಮಸ್ಯೆಯನ್ನು  ಎದುರಿಸುತ್ತಾರೆ. ಕೆಲವೊಮ್ಮೆ ಇದು ದುರ್ವಾಸನೆ ಹಾಗೂ ಸೋಂಕಿಗೆ ಕಾರಣವಾಗಬಹುದು. ಕೆಲವರು ಅತಿಯಾದ ಬಿಳಿ ಹೋಗುವುದರ ಪರಿಣಾಮದಿಂದ ತುರಿಕೆ ಹಾಗೂ ದೇಹದಲ್ಲಿ ಶಕ್ತಿಯನ್ನು ಕಳೆದುಕೊಳ್ಳುವವರು. ಅಂತಹವರು ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಸಮಸ್ಯೆಯನ್ನು ನಿಯಂತ್ರಿಸಬಹುದು. 

ಕಣ್ಣು ಕೆಂಪಗಾಗಿದ್ದರೆ ಅಂತಹ ಸಮಸ್ಯೆಗಳನ್ನು ನಿವಾರಿಸಬಹುದು. ಕೊತ್ತಂಬರಿ ಬೀಜದಲ್ಲಿರುವ ಪೋಷಕಾಂಶಗಳು ಹಾಗೂ ಉತ್ಕರ್ಷಣ ನಿರೋಧಕ ಅಂಶಗಳು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಬಹುದು. 

ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿದ್ದರೆ ಕೊತ್ತಂಬರಿ ಬೀಜದಲ್ಲಿ ಇರುವ ಕುಮಿನ್ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಬಳಿಕ ಅಂತಃಸ್ರಾವಕ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಕೊತ್ತಂಬರಿ ಬೀಜವು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲನವಾಗಿಡುತ್ತದೆ. 

ರಕ್ತಹೀನತೆ ನಿವಾರಿಸಲು ಸಹ ಕೊತ್ತಂಬರಿ ಬೀಜ ಉಪಯೋಗಿಸಲಾಗುತ್ತದೆ. ಕೊತ್ತಂಬರಿ ಬೀಜವು ಅತ್ಯುತ್ತಮ ಆರೈಕೆ ಮಾಡುತ್ತದೆ. ಇದು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ