ಕೊರಾನಾ ಸಂಕಟ ಕಾಡದಿರಲಿ, ತರಕಾರಿ ಬೇಯಿಸುವ ವಿಧಾನ ಹೀಗಿರಲಿ…!

  • by

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅನೇಕ ಆಹಾರಗಳಿವೆ. ಅವುಗಳಲ್ಲಿ ತರಕಾರಿಗಳು ತಾಜಾ ಹಣ್ಣುಗಳು ವಿಶೇಷತೆಯನ್ನು ಪಡೆದುಕೊಂಡಿವೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆ ತರಕಾರಿಗಳನ್ನು ಚೆನ್ನಾಗಿ ತೊಳೆದು, ಬಳಸುವಂತೆ ಸಲಹೆ ನೀಡಲಾಗುತ್ತಿದೆ. ಈ ಮಧ್ಯೆ ಸ್ವಚ್ಛಗೊಳಿಸಿದ ತರಕಾರಿ ಬೇಯಿಸುವುದು ಸರಿಯಾದ ಕ್ರಮದಲ್ಲಿ ಇರಬೇಕು. ಹೀಗೆ ಮಾಡಿದ್ರೆ ಮಾತ್ರ ಉತ್ತಮ ಪೋಷಕಾಂಶ ದೊರೆಯಲು ಸಾಧ್ಯ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತರಕಾರಿಯನ್ನು ಹೇಗೆ ಬೇಯಿಸುವುದು..? ಆರೋಗ್ಯಕರ ವಿಧಾನಗಳ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲಾಗಿದೆ.


cooking-tips-during-coronavirus-ಕೊರೊನಾ ವೈರಸ್, ಅಡುಗೆ ಬೇಯಿಸುವ ವಿಧಾನ

ಸಸ್ಯಾಹಾರಗಳನ್ನು ಬೇಯಿಸುವ ವಿಧಾನಗಳು..!

ವೈರಸ್ ನಿಮ್ಮ ದೇಹವನ್ನು ಯಾವುದೇ ರೀತಿಯಲ್ಲಾದರೂ ಪ್ರವೇಶಿಸಬಹುದು. ಹಾಗಾಗಿ ನೀವು ಹಾಗೂ ನಿಮ್ಮ ಕುಟುಂಬವನ್ನು ಸ್ವಚ್ಛವಾಗಿರಿಸಿಕೊಳ್ಳಿ. ನೀವು ಅಡುಗೆ ಮಾಡುವ ಮುನ್ನ ಆಹಾರವನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ಇದು ನಿಮ್ಮನ್ನು ಅನೇಕ ವೈರಸ್ ಹಾಗೂ ಸೋಂಕುಗಳಿಂದ ರಕ್ಷಿಸುತ್ತದೆ. ಕೋವಿಡ್ -19 ಸಮಯದಲ್ಲಿ ಅಡುಗೆ ತಯಾರಿಸುವಾಗ ಮುನ್ನಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಆಹಾರ ತಯಾರಿಸುವಾಗ ಮಾಸ್ಕ್ ಹಾಕಿಕೊಂಡು ಆಹಾರ ತಯಾರಿಸುವುದು ಮುಖ್ಯ. ಅದರಲ್ಲೂ ವಿಶೇಷವಾಗಿ ಯಾವುದೇ ರೀತಿಯ ಜ್ವರ ಇರುವವರು.

ತರಕಾರಿ ಹಾಗೂ ಬೇಳೆಕಾಳುಗಳನ್ನು ಚೆನ್ನಾಗಿ ತೊಳೆಯಿರಿ. ಅಡುಗೆ ಮಾಡುವ ಮೊದಲು ಬೆಚ್ಚಗಿನ ನೀರಿನಲ್ಲಿ ತರಕಾರಿ ತೊಳೆಯಿರಿ.
ಇದಲ್ಲದೇ, ದೀರ್ಘಕಾಲದವರೆಗೂ ಫ್ರೀಡ್ಜ್ ನಲ್ಲಿಟ್ಟ ಆಹಾರವನ್ನು ತಯಾರಿಸಬಾರದು. ಒಂದು ಫ್ರೀಡ್ಜ್ ನಲ್ಲಿಟ್ಟ ಆಹಾರ ತಯಾರಿಸಲು ಹೋದರೆ, ಮೊದಲು ಬಿಸಿ ನೀರಿನಿಂದ ತರಕಾರಿ ತೊಳೆಯಬೇಕು.

ಯಾವುದೇ ಅಡುಗೆ ತಯಾರಿಸುವ ಮುನ್ನ ಕೈಗಳನ್ನು ಸ್ವಚ್ಛವಾಗಿಸಿಕೊಳ್ಳಿ. ಕೋವಿಡ್ -19 ಬಿಕ್ಕಟ್ಟಿನ ಸಮಯದಲ್ಲಿ ಆರೋಗ್ಯವಾಗಿರಲು ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದು ಹೇಗೆ.. ಅದೇ ರೀತಿ ನೀವು ಹೆಚ್ಚು ಆರೋಗ್ಯಕರ ಹಾಗೂ ಬೇಯಿಸಿದ ಆಹಾರ (ಹಸಿರು ತರಕಾರಿ) ಆರೋಗ್ಯಕ್ಕೆ ಒಳ್ಳೆಯದು. ಈ ದಿನಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು ಅತ್ಯಂತ ಮುಖ್ಯವಾಗಿದೆ. ಬಲವಾದ ರೋಗನಿರೋಧಕ ಶಕ್ತಿಯು ಕೊರೊನಾ ವಿರುದ್ಧ ಹೋರಾಡಲು ನೆರವಾಗುತ್ತದೆ.

ತರಕಾರಿಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಹಸಿರು ತರಕಾರಿಗಳು ಫೈಬರ್, ವಿಟಮಿನ್ , ಖನಿಜಗಳು ಹಾಗೂ ಫೈಟೊನ್ಯೂಟ್ರಿಯೆಂಟ್ಸ್ ಮುಂತಾದ ಅನೇಕ ಪೋಷಕಾಂಶಗಳಿವೆ. ಇವೆಲ್ಲವು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತವೆ. ನೀವು ಹೆಚ್ಚು ತರಕಾರಿಯನ್ನು ಸೇವಿಸಿದರೆ, ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಕೊರೊನಾ ವೈರಸ್ ಸಮಯದಲ್ಲಿ ಹೆಚ್ಚು ಹಸಿರು ತರಕಾರಿಗಳನ್ನು ಸೇವಿಸಬೇಕು.


cooking-tips-during-coronavirus-ಕೊರೊನಾ ವೈರಸ್, ಅಡುಗೆ ಬೇಯಿಸುವ ವಿಧಾನ

ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನುವಾಗ ಅವು ಸುಲಭವಾಗಿ ಜೀರ್ಣವಾಗುತ್ತದೆ. ದೀರ್ಘಕಾಲದವರೆಗೆ ಹೆಚ್ಚಿನ ಶಾಖದಲ್ಲಿ ತರಕಾರಿಗಳನ್ನು ಬೇಯಿಸುವುದು ಅಥವಾ ಹೆಚ್ಚಿನ ನೀರನ್ನು ಸೇರಿಸುವ ಮೂಲಕ, ಅವುಗಳಲ್ಲಿ ಪೋಷಕಾಂಶಗಳು ನಾಶವಾಗುತ್ತವೆ. ಹಾಗಾಗಿ ಹೀಗೆ ಮಾಡುವುದನ್ನು ಅವೈಡ್ ಮಾಡಿ. ಹೆಚ್ಚಿನ ಪ್ರಮಾಣದ ಕರಗುವ ವಿಟಮಿನ್ ಗಳಾದ ವಿಟಮಿನ್ ಸಿ, ಬಿ1, ಬಿ2 ಹಾಗೂ ಬಿ3 ಮತ್ತು ಫೊಲೇಟ್ ಹೊಂದಿರುವ ತರಕಾರಿಗಳನ್ನು ಬೇಯಿಸುವಾಗ ಇದನ್ನು ನೆನಪಿನಲ್ಲಿಡಿ. ಖನಿಜಗಳಾದ ಕ್ಯಾಲ್ಸಿಯಂ, ಪೊಟ್ಯಾಶಿಯಂ , ಕಬ್ಬಿಣ, ಸತು ಇತ್ಯಾದಿಗಳು ನೀರಿನಲ್ಲಿ ಕರಗುವುದಿಲ್ಲ. ಹೆಚ್ಚು ಹೊತ್ತು ಬೇಯಿಸುವುದನ್ನು ಅವೈಡ್ ಮಾಡಿ. ಏಕೆಂದರೆ ಹೆಚ್ಚು ಹೊತ್ತು ಬೇಯಿಸಿದರೆ ಈ ಪೋಷಕಾಂಶಗಳು ಇರುವುದಿಲ್ಲ.

ಸಸ್ಯಹಾರವನ್ನು ಬೇಯಿಸುವ ಮಾರ್ಗಗಳು!

ಈರುಳ್ಳಿ, ಪಾಲಕ್ ಸೊಪ್ಪು, ಬೆರಿಹಣ್ಣುಗಳು , ಸೇಬುಗಳು, ಎಲೆಕೋಸು , ಮೊಳಕೆಕಾಳುಗಳು, ಎಲೆಕೋಸು, ಹೂಕೋಸು, ತರಾಕಾರಿಗಳಲ್ಲಿರುವ ನೀರಿನಂಶ ಕಾಪಾಡಿಕೊಳ್ಳಲು, ಫ್ರೈ, ಅಥವಾ ಮೈಕ್ರೋವೇವ್ ನಲ್ಲಿ ಬೇಯಿಸುವುದು ಉತ್ತಮ. ಇನ್ನು ಸ್ಟಿಮಿಂಗ್ ಸಹ ತರಕಾರಿಗಳಲ್ಲಿರುವ ಪೌಷ್ಟಿಕಾಂಶವನ್ನು ಸಂರಕ್ಷಿಸುತ್ತದೆ. ತರಕಾರಿಗಳು ಅತಿಯಾಗಿ ಅತಿಯಾಗಿ ಬೇಯಿವುದಿಲ್ಲ ಎಂಬುದು ನಿಮಗೆ ತಿಳಿಯುತ್ತದೆ. ಸ್ಟಿಮಿಂಗ್ ಮಾಡುವುದರಿಂದ ತರಕಾರಿಗಳಲ್ಲಿರುವ ಪೌಷ್ಟಿಕ ಅಂಶಗಳನ್ನು ಸಂರಕ್ಷಿಸುತ್ತವೆ. ಆದರೆ ಅತಿಯಾಗಿ ಬೇಯುವುದಿಲ್ಲ. ಲೋಹದ ಓವನ್, ಪ್ಯಾನ್ ಓವನ್ ಬಾಲ್ ಇದರಲ್ಲಿ ತರಕಾರಿಗಳನ್ನು ಬೇಯಿಸುವುದರಿಂದ ಅವುಗಳಲ್ಲಿ ಹೆಚ್ಚು ನೀರಿನ ಅಂಶದ ಜತೆಗೆ ಜೀವಸತ್ವಗಳನ್ನು ಕಾಪಾಡಬಹುದು.

ಅಲ್ಲದೇ ನೀವು ತರಕಾರಿಗಳನ್ನು ಬೇಯಿಸುವ ಬದಲು ಹುರಿದು ಸೇವಿಸಬಹುದು. ಬಾಣಲೆಗೆ ಸ್ವಲ್ಪ ಆಲಿವ್ ಎಣ್ಣೆಯನ್ನು ಸೇರಿಸಿ. ಹೆಚ್ಚಿನ ಶಾಖದಲ್ಲಿ ಸ್ವಲ್ಪ ಸಮಯದವರೆಗೆ ಫ್ರೈ ಮಾಡಿ, ಹೀಗೆ ಮಾಡುವುದರಿಂದ ಪೋಷಕಾಂಶಗಳು ಇರುತ್ತವೆ. ತರಕಾರಿ ತೊಳೆದ ನಂತರ ತರಕಾರಿಗಳನ್ನು ಕಟ್ ಮಾಡಬೇಕು. ಕತ್ತರಿಸಿದ ನಂತರ ತರಕಾರಿಗಳನ್ನು ತೊಳೆದರೆ ಹೆಚ್ಚಿನ ಪೋಷಕಾಂಶಗಳು ನಾಶವಾಗುತ್ತವೆ. ಆಲುಗಡ್ಡೆ, ಸಿಹಿ ಆಲುಗಡ್ಡೆ ಹಾಗೂ ಕ್ಯಾರೆಟ್ ನಂತಹ ತರಕಾರಿಗಳನ್ನು ಕುದಿಸಲು ಬಯಸಿದರೆ, ನಂತರ ಸಿಪ್ಪೆ ಸುಲಿಯದೇ ಕುದಿಸಿ. ಹೀಗೆ ಮಾಡುವುದರಿಂದ ಪೋಷಕಾಂಶಗಳು ನಾಶವಾಗುವುದಿಲ್ಲ. ತರಕಾರಿಯಲ್ಲಿರುವ ಸಿಪ್ಪೆಯೂ ಸಹ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.

ತರಕಾರಿ ತಯಾರಿಸುವಾಗ ಮಾತ್ರ ಕಟ್ ಮಾಡಬೇಕು. ತರಕಾರಿಗಳನ್ನು ಉಪಯೋಗ ಮಾಡುವುದಕ್ಕಿಂತ ಮೊದಲು ಕತ್ತರಿಸಿದರೆ, ಗಾಳಿ ಹಾಗೂ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಬೇಗನೆ ಪೋಷಕಾಂಶಗಳು ನಾಶವಾಗುತ್ತವೆ. ಉದ್ಯೋಗಸ್ಥ ಮಹಿಳೆಯರು ರಾತ್ರಿ ಮಾತ್ರ ತರಕಾರಿಗಳನ್ನು ಕತ್ತರಿಸುತ್ತಾರೆ. ಇದರಿಂದ ಸಮಯ ಉಳಿತಾಯವಾಗುತ್ತದೆ ಎಂದು ಭಾವಿಸಿರುತ್ತಾರೆ. ಆದ್ರೆ ರಾತ್ರಿ ಹೊತ್ತು ಕಟ್ ಮಾಡಿದ ತರಕಾರಿಯಲ್ಲಿ ಪೋಷಕಾಂಶಗಳು ಇರುವುದಿಲ್ಲ. ಹಾಗಾಗಿ ಮುಂಜಾನೆ ಆಫೀಸ್ ಗೆ ಹೋಗುವಾಗಲೇ ತರಕಾರಿ ಕಟ್ ಮಾಡಿ, ಪಲ್ಯ ಹಾಗೂ ನಿಮಗೆ ಬೇಕಾದ ಖಾದ್ಯಗಳನ್ನು ತಯಾರಿಸಬಹುದು.

ಬೀನ್ಸ್ ತಯಾರಿಸುವಾಗ ನೀವು ಸೋಡಾವನ್ನು ಬಳಸಬೇಡಿ. ಸೋಡಾ ಬಳಸಿದರೆ ವಿಟಮಿನ್ ಸಿ ಹಾಗೂ ಅಗತ್ಯ ಖನಿಜಗಳು ನಾಶವಾಗುತ್ತವೆ.
ತರಕಾರಿ ಕತ್ತರಿಸಿದಾಗಲೆಲ್ಲಾ ದೊಡ್ಡ ತುಂಡುಗಳನ್ನಾಗಿ ಕತ್ತರಿಸಿ. ಸಣ್ಣ ತುಂಡುಗಳನ್ನು ಕತ್ತರಿಸಿದರೆ ಪೋಷಕಾಂಶಗಳು ನಾಶವಾಗುವ ಸಾಧ್ಯತೆ ಹೆಚ್ಚಿರುತ್ತದೆ. ತರಕಾರಿ ಬೇಯಿಸುವಾಗ ಸೀಮಿತ ಪ್ರಮಾಣದಲ್ಲಿ ನೀರನ್ನು ಬಳಸಬೇಕು. ತರಕಾರಿಗಳನ್ನು ಹೆಚ್ಚಿನ ನೀರಿನಲ್ಲಿ ಬೇಯಿಸುವುದರಿಂದ ಪೋಷಕಾಂಶಗಳನ್ನು ಇಲ್ಲವಾಗುತ್ತವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ