ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಮನೆಮದ್ದು..!

  • by

ಆರೋಗ್ಯ ಸಮಸ್ಯೆಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕೂಡಾ ಒಂದು. ಉದರದಲ್ಲಿ ಯಾವುದೇ ಸಮಸ್ಯೆ ಕಂಡುಬರಹುದು. ಆದ್ರೆ ಇದನ್ನೇ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಹೇಳುವುದು ಸರಿಯಲ್ಲ. ಗ್ರೀಕ್ ಭಾಷೆಯಲ್ಲಿ ಗ್ಯಾಸ್ಟರ್ ಎಂದರೆ ಜಠರ. ಗ್ಯಾಸ್ರ್ಟಿಕ್ ಎಂದರೆ ಜಠರದ ಎಂದು ಹೇಳಲಾಗುತ್ತದೆ. ಜಠರದ ಅಲ್ಸರ್ ರೋಗಲಕ್ಷಣಗಳು ಬೇರೆ ಬೇರೆಯಾಗಿರುತ್ತವೆ. ಹಸಿವಾಗದಿರುವುದು, ಹೊಟ್ಟೆ ಉಬ್ಬರಿಸುವಿಕೆ, ತೇಗು ಬರುವುದು. 

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯುವುದು ಹೇಗೆ..?

ಉದರದ ಸಮಸ್ಯೆಗಳು ಕಾಣಿಸಿಕೊಂಡಾಗಲೆಲ್ಲಾ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ನಿರ್ಲಕ್ಷಿಸಿದರೆ ಪರಿಹಾರ ಸಾಧ್ಯವಾಗದೇ ಇರಬಹುದು. ಪಿತ್ತಕೋಶದ ಕಲ್ಲು, ಕರುಳಿನ ಹುಣ್ಣು ಇತ್ಯಾದಿ. ಉದರ ರೋಗ ಕಾಣಿಸಿಕೊಂಡಾಗ ನಿರ್ಲಕ್ಷ್ಯವಹಿಸದೇ, ವೈದ್ಯರನ್ನು ಕಾಣಬೇಕು. ತಜ್ಞರ ಸಲಹೆ ಪಡೆಯಬೇಕು. ಸಾಕಷ್ಟು ದಿನಗಳಿಂದ ಉದರ ಸಮಸ್ಯೆಯಿಂದ ನರಳುತ್ತಿರುವ ರೋಗಿಗಳಿಗೆ ಎಂಡೋಸ್ಕೋಪಿ, ಸಿ.ಟಿ ಸ್ಕ್ಯಾನ್ , ಇತ್ಯಾದಿ ತಪಾಸಣೆ ಮಾಡಿಸಬಹುದು. ಇನ್ನು ಯಾವುದೇ ತಪಾಸಣೆಯಲ್ಲಿಯೂ ಯಾವುದೇ ರೋಗ ಕಂಡು ಬರುವುದಿಲ್ಲ. ಇಂತಹ ರೋಗಿಗಳನ್ನು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಎಂದು ಹೇಳಬಹುದು.

ಆಹಾರದಲ್ಲಿ ಮೊಸರನ್ನ ಹಾಗೂ ಮಜ್ಜಿಗೆ ಯನ್ನು ಬಳಸುವುದರಿಂದ ಜೀರ್ಣಾಂಗದ ಆರೋಗ್ಯಕ್ಕೆ ಉತ್ತಮವಾದದ್ದು, ಭಾರತೀಯ ಸಂಸ್ಕೃತಿಯಲ್ಲಿ ಊಟದ ನಂತರ ಕೊನೆಯಲ್ಲಿ ಮಜ್ಜಿಗೆಯನ್ನು ಸೇವಿಸುತ್ತಾರೆ. ಇನ್ನು ಪ್ರಕೃತಿದತ್ತವಾದ ಸೊಪ್ಪು, ತರಕಾರಿ, ಸಾಂಬಾರ ಪದಾರ್ಥಗಳು ಜೀರ್ಣಾಂಗದ ಸಮಸ್ಯೆಯನ್ನು ನಿವಾರಿಸಲು ಸಹಕರಿಸುತ್ತದೆ. 

ಇದಕ್ಕೂ ಹೃದಯಕ್ಕೂ ಸಂಬಂಧವಿದೆಯೇ..

ಕೆಲ ಸಂದಂರ್ಭಗಳಲ್ಲಿ ಎದೆ ಉರಿ ಬಂದಾಗ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಬಂದೇ ಬಿಟ್ಟಿತೇನೋ ಎಂಬಂತೆ ಚಿಂತಿಸುತ್ತೇವೆ. ಇದು ತಪ್ಪು ಕಲ್ಪನೆ . ಇದಕ್ಕೂ ಹೃದಯಾಘಾತಕ್ಕೂ ಯಾವುದೇ ಲಿಂಕ್ ಇಲ್ಲ. ಜೀರ್ಣಾಂಗ ಪ್ರಕ್ರಿಯೆಗೆ ಅಗತ್ಯವಾದ ಪ್ರಮಾಣಕ್ಕಿಂತ ಗ್ಯಾಸ್ಟ್ರಿಕ್ ಗ್ರಂಥಿಗಳು ಹೆಚ್ಚಿನ ಪ್ರಮಾಣದ ಆಮ್ಲವನ್ನು ಉತ್ಪಾದಿಸಿದಾಗಲೂ ಎದೆಯೂರಿ ಬರುತ್ತದೆ. 

ಇವೆರೆಡಕ್ಕೂ ಸಂಬಂಧವಿಲ್ಲದಿದ್ದರೂ, ಕೆಲ ಸಂದರ್ಭದಲ್ಲಿ ಪರಸ್ಪರ ವ್ಯತಿರಿಕ್ತ ಪರಿಣಾಮ ಬೀರಬಹುದು.. ಎದೆ ನೋವು, ಗ್ಯಾಸ್ಟ್ರಿಕ್ ಎರಡು ಕೂಡಾ ಜೀರ್ಣಕ್ರಿಯೆಗೆ ಸಂಬಂಧಿಸಿದರೂ, ಬೇರೆ ರೀತಿಯ ಹಾನಿಯನ್ನುಂಟು ಮಾಡುತ್ತದೆ. ಕೆಲವೊಮ್ಮೆ ಅನ್ನನಾಳದ ಉರಿಯೂತ, ಹಣ್ಣುಗಳು , ನುಂಗುವಾಗ ತೊಂದರೆ ಅಥವಾ ನೋವಿನ ರೂಪದಲ್ಲಿ ಅನ್ನನಾಳಕ್ಕೆ ಹಾನಿಯನ್ನುಂಟು ಮಾಡುತ್ತದೆ. 

ಸೂಕ್ತ ಜಿೀವನ ಶೈಲಿ ಅನುಸರಿಸದರೆ, ಯಾವುದೇ ತೊಂದರೆ ಎದುರಾಗುವುದಿಲ್ಲ. 

ಆಹಾರ ಹೇಗಿರಬೇಕು..?

ಮಸಾಲೆಯುಕ್ತ ಆಹಾರಗಳನ್ನು ಸೇವಿಸಬಾರದು, ಭಾರವಾದ, ಕೊಬ್ಬು ಇರುವ ಆಹಾರ, ಮಸಾಲೆಯುಕ್ತ ಆಹಾರ ಸೇವನೆ, ಬೊಜ್ಜು , ಗರ್ಭದಾರಣೆ, ಈರುಳ್ಳಿ. ಕೊಬ್ಬಿನ ಅಥವಾ ಉರಿದ ಆಹಾರದ ಸೇವನೆ , ಧೂಮಪಾನ ತ್ಯಜಿಸಬೇಕು. ಕಾರ್ಬೋನೇಟೆಡ್ ಪಾನಿಯಗಳ ಸೇವನೆ ಸಂದರ್ಭದಲ್ಲಿ ಎದೆ ಉರಿ ಕಾಣಿಸಿಕೊಳ್ಳಬಹುದು. 

ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಮದ್ದುಗಳೇನು..?

ರಾತ್ರಿ ಕೊತ್ತಂಬರಿ ಹಾಗೂ ಮೆಂತ್ಯಾವನ್ನು ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎದೆಯುರಿ, ಹುಳಿ ತೇಗು ನಿವಾರಣೆಯಾಗುತ್ತದೆ. 

ಆಹಾರ ಪಚನವಾಗದೇ ಹೋದರೆ, ಜೀರಿಗೆ, ಒಣದ್ರಾಕ್ಷಿ ಓಮ ಕಾಳು ಜಜ್ಜಿ ಸೇವಿಸಿ. 

ನೆಲ್ಲಿಕಾಯಿ ಪುಡಿ ಮಜ್ಜಿಗೆಯಲ್ಲಿ ಸೇರಿಸಿ ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. 

ಹೇಗೆ ಎಚ್ಚರ ವಹಿಸಬೇಕು,?

ವಿನೇಗರ್ ಹಾಗೂ ವಿನೇಗರ್ ಬಳಸಿ ತಯಾರಿಸಿದ ಆಹಾರ ಸೇವಿಸಬೇಡಿ. 

ಕೆಫಿನ್ , ಆಲ್ಕೋಹಾಲ್ , ಸಿಟ್ರಿಕ್ ಆಸಿಡ್ ಇರುವ ಪಾನೀಯಗಳನ್ನು ಸೇವನೆಗೆ ಫುಲ್ ಸ್ಟಾಪ್ ಇಡಿ.

ಉಪ್ಪಿನಕಾಯಿ ತಿನ್ನುವುದನ್ನು ಬಿಟ್ಟುಬಿಡಿ. 

ನಿಯಮಿತವಾಗಿ ಆಹಾರ ಸೇವನೆ ಮಾಡಬೇಕು

ಶುಚಿಯಾದ ಆಹಾರ ಮತ್ತು ನೀರಿನ ಸೇವನೆ ಮಾಡಬೇಕು, 

ಊಟವಾದ ಕೂಡಲೇ ಭಾರ ಎತ್ತುವುದು ಹಾಗೂ ಮಲಗುವುದು ಮಾಡಬಾರದಪ. ನೀರು , ಎಳೆನೀರನ್ನು ತಥೇಚ್ಛವಾಗಿ ಸೇವಿಸಬೇಕು. ಕರಿದ, ಕರಕಲು ತಿಂಡಿಗಳನ್ನು , ಸೋಡಾ ಮುಂತಾದವುಗಳನ್ನು ಆಹಾರದಲ್ಲಿ ಕಡಿಮೆ ಮಾಡಿ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ