ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಂಡು ನಿದ್ದೆ ಮಾಡಿದ್ರೆ ದೃಷ್ಟಿ ಕಳೆದುಕೊಳ್ಳಬಹುದು.. ಎಚ್ಚರ!

  • by

ದೇಹದ ಅಂಗಾಂಗಳಲ್ಲಿ ಕಣ್ಣು ತುಂಬಾ ಸೂಕ್ಷ್ಮವಾದದ್ದು. ಕಣ್ಣಿಗೂ ಸ್ಪೆಷ್ಪಲ್ ಕೇರ್ ಮಾಡುವುದು ಅಗತ್ಯ. ಕೆಲವರಿಗೆ ಕನ್ನಡಕ ಹಾಕಲು ಇಷ್ಟವಿರಲ್ಲ. ಹೆಚ್ಚಾಗಿ ಲೆನ್ಸ್ ಗಳನ್ನು ಹಾಕಲು ಇಷ್ಟಪಡುತ್ತಾರೆ. ಕಣ್ಣಿಗೆ ಲೆನ್ಸ್ ಹಾಕಿ ಆರಮವಾಗಿ ಓಡಾಡಿಕೊಂಡು ಇರಬಹುದು. ಕನ್ನಡಕ ಬದಲು ಕಾಂಟ್ಯಾಕ್ಟ್ ಲೆನ್ಸ್ ಹಾಕುವ ಬದಲು ಈ ಸಲಹೆಗಳನ್ನು ಅನುಸರಿಸಿ. ಕೆಲವೊಮ್ಮೆ ಕಾಂಟಾಕ್ಟ್ ಲೆನ್ಸ್ ಹಾಕಿದಾಗ ನಿದ್ರೆ ಮಾಡಬಾರದು. ಎಚ್ಚರದಿಂದ ಇರಬೇಕು. ಈ ಅಭ್ಯಾಸಗಳು ನಿಮ್ಮ ಕಣ್ಣಿಗಳಿಗೆ ಅಪಾಯವನ್ನುಂಟು ಮಾಡಬಹುದು. ತೊಂದರೆಗಳಿಗೆ ಕಾರಣವಾಗಬಹುದು. 

ಕೆಲಮೊಮ್ಮೆ ಕಣ್ಣುಗಳಲ್ಲಿ ಮಸೂರು ಗಳನ್ನು ಧರಿಸುವುದರಿಂದ ಅಡ್ಡಪರಿಣಾಮಗಳೆಂದರೆ ಕಣ್ಣಿನ ಶುಷ್ಕತೆ , ಕಣ್ಣಿನಲ್ಲಿ ಕೊರತೆ ಇದ್ದಾಗ ಈ ಸ್ಥಿತಿ ಉಂಟಾಗುತ್ತದೆ. ಮೃದು ಮತ್ತು ಗಟ್ಟಿಯಾದ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. 

contact lenses , Is it safe to sleep, 
ಕಾಂಟಾಕ್ಟ್ ಲೆನ್ಸ್,  ನಿದ್ದೆ , ಟಿಪ್ಸ್,

ಕಾರ್ನಿಯಾ ಸಮಸ್ಯೆಗೆ ಕಾರಣವಾಗಬಹುದು. ಕಾಂಟಾಕ್ಟ್ ಲೆನ್ಸ್ ಬಳಕೆ ಮಾಡುವುದರಿಂದ ಕೆಲಮೊಮ್ಮೆ ಕಾರ್ನಿಯಾ ಸಮಸ್ಯೆಗೆ ಕಾರಣವಾಗಬಹುದು. ಇದ್ರಿಂದ ಕಾರ್ನಿಯಾಗೆ ಧಕ್ಕೆಯಾಗಿ ದೃಷ್ಟಿ ದೋಷ ಉಂಟಾಗುತ್ತದೆ. ಸಾಮಾನ್ಯವಾಗಿ ಇದು ಕಣ್ಣಿನ ಸಮಸ್ಯೆಗೆ ಕಾರಣವಾಗಬಹುದು. ಕಾಂಟ್ಯಾಕ್ಟ್ ಲೆನ್ಸ್ ಬಳಕೆ ಮಾಡಿಯೇ ನಿದ್ರಿಸುವುದು. ಲೆನ್ಸ್ ಗಳ ಅಧಿಕ ಬಳಖೆ ಸ್ವಚ್ಛತೆ ಇಲ್ಲದಿರುವುದು, ಮರು ಬಳಕೆ ಮಾಡುವ ಸಮಯದಲ್ಲಿ ಎಚ್ಚರವಹಿಸಿ. 

ಇನ್ನು ಕಾಂಟಾಕ್ಟ್ ಲೆನ್ಸ್ ಗಳಿಂದ ಕಣ್ಣಿಗೆ ಸೋಂಕು ತಗುಲಿರುವ ಸೂಚನೆ ಎಂದರೆ, ದೃಷ್ಟಿ ಮಬ್ಬಗಾಗುತ್ತದೆ. ನೀರು ತುಂಬುವುದು . ನೀರು ಕಣ್ಣಿನಂದ ಹೊರ ಬರುವುದು. ಕಣ್ಣು ಕೆಂಪಗಾಗುವುದು , ಹೀಗಾಗಿ ಕಾಂಟಾಕ್ಟ್ ಲೆನ್ಸ್ ಬಳಸುವ ಮುನ್ನ ಎಚ್ಚರವಹಿಸಿ. 

ಕಾಂಟ್ಯಾಕ್ಟ್ ಲೆನ್ಸ್ ಪ್ರಕಾರಗಳು..!

ಸಾಫ್ಟ್ ಲೆನ್ಸ್ ,

ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಜಲ್ ನಂತೆ ಕಂಡುಬರುತ್ತವೆ. ಹೈಡ್ರೋಜಲ್ ನಿಂದ ತಯಾರಿಸಲ್ಪಡುತ್ತವೆ. ಈ ಲೆನ್ಸ್ ತುಂಬಾ ತೆಳುವಾಗಿ ಇರುತ್ತವೆ. 

ಸಿಲಿಕಾನ್ ಹೈಡ್ರೋಜಲ್ ಲೆನ್ಸ್ 

ಸಾಫ್ಟ್ ಕಾಂಟಾಕ್ಟ್ ಲೆನ್ಸ್ ಮಟೇರಿಯಲ್ ನಿಂದ ಇವುಗಳು ಮಾಡಲ್ಪಟ್ಟಿವೆ. ಕಣ್ಣಿಗೆ ಆಕ್ಸಿಜನ್ ಒದಗಿಸಲು ಸಹಾಯ ಮಾಡುತ್ತವೆ. ಸಿಲಿಕಾನ್ ಹೈಡ್ರೋಜನ್ ಕಾಂಟ್ಯಾಕ್ಟ್ ಲೆನ್ಸ್ ಪ್ರಖ್ಯಾತ ಪಡೆದುಕೊಂಡಿವೆ. 

ಹೈಬ್ರೀಡ್ ಕಾಂಟಾಕ್ಟ್ ಲೆನ್ಸ್.. ಹಾಗೂ ರಿಜಿಡ್ ಮಸೂರಗಳು , ಕಾಸ್ಮೇಟಿಕ್ ಕಾಂಟ್ಯಾಕ್ಟ್ ಲೆನ್ಸ್ ಗಳನ್್ನು ಪಕಾರಗಳಾಗಿ ಕಾಣಬಹುದು.

contact lenses , Is it safe to sleep, 
ಕಾಂಟಾಕ್ಟ್ ಲೆನ್ಸ್,  ನಿದ್ದೆ , ಟಿಪ್ಸ್,

ಕಾಂಟ್ಯಾಕ್ಟ್ ಲೆನ್ಸ್ ಬಳಸುವುದು ಹೇಗೆ..? 

ಎಲ್ಲಾ ಸಂದರ್ಭದಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಬಳಸುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಚಗೊಳಿಸಿಕೊಳ್ಳಿ. ಶಿಫಾರಸು ಮಾಡಲಾದ ಸಲ್ಯೂಷನ್ ಬಳಕೆ ಮಾಡಿ. ಪ್ರತಿ ಬಾರಿ ಕಾಂಟ್ಯಾಕ್ಟ್ ಲೆನ್ಸ್ ಬಳಸುವ ಮೊದಲು ಲೆನ್ಸ್ ಗಳನ್ನು ಶುಚಿಗೊಳಿಸುವುದು ಉತ್ತಮ.  ಪ್ರತಿ ತಿಂಗಳಿಗೊಮ್ಮೆ ಲೆನ್ಸ್ ಕೇಸ್ ಬದಲಿಸಬೇಕು. ಮೇಕಪ್ ಮಾಡುವ ಮೊದಲು ಲೆನ್ಸ್ ಹಾಕಿಕೊಳ್ಳಬೇಕು.. 

ಆದರೆ ಕಾಂಟಾಕ್ಟ್ ಲೆನ್ಸ್ ಬಳಕೆ ಮಾಡುವಾಗ ಮಲಗಬೇಡಿ. ನೀರು ಬಳಸಿ ಲೆನ್ಸ್ ಸ್ವಚ್ಛಗೊಳಿಸಬೇಡಿ. ಒಮ್ಮೆ ನೆಲಕ್ಕೆ ಲೆನ್ಸ್ ಬಿದ್ದಾಗ, ಸ್ವಚ್ಛಗೊಳಿಸದೇ ನೇರವಾಗಿ ಧರಿಸಬೇಡಿ. ಲೆನ್ಸ್ ಧರಿಸುವಾಗ ಬಿಸಿಲು ಹಾಗೂ ಬೆಂಕಿಗೆ ನೇರವಾಗಿ ನಿಲ್ಲಬೇಡಿ. ಇದು ಲೆನ್ಸ್ ಕರಗಲು ಕಾರಣವಾಗಬಹುದು. 

ಕಾಂಟಾಕ್ಟ್ ಲೆನ್ಸ್ ಗಳಲ್ಲಿ ಕಲರ್ ಲೆನ್ಸ್ ಬಳಸುವುದನ್ನು ನಿಲ್ಲಿಸಬೇಕು. ಕಲರ್ ಲೆನ್ಸ್ ಬಳಸುವುದು ಕಣ್ಣಿಗೆ ಒಳ್ಳೆಯದಲ್ಲ ಎಂದು ಹೇಳಲಾಗಿದೆ. ಏಕೆಂದರೆ ಕಲರ್ ಲೆನ್ಸ್ ಕಣ್ಣಿನ ಅಕ್ಷಿಪಟಲಕ್ಕೆ ಆಮ್ಲಜನಕ ಪೂರೈಕೆಗೆ ತಡೆಯೊಡ್ಡುತ್ತದೆ. ಇದ್ರಿಂದ ಕಣ್ಣಿನ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಲೆನ್ಸ್ ಸರಿಯಾದ ದ್ರಾವಣದಲ್ಲಿ ಹಾಕಿ ಇಡಬೇಕು. 

ಪ್ರತಿ ಬಾರಿ ಹೊಸ ದ್ರಾವಣದಲ್ಲಿ ಹಾಕಿಡಬೇಕು. ಲೆನ್ಸ್ ಅನ್ನು ಸೌಂದರ್ಯವರ್ಧಕ ಮತ್ತು ಸುಗಂಧ ದ್ರವ್ಯಗಳಿಂದ ದೂರವಿಡಿ. ಇದರಲ್ಲಿರುವ ರಾಸಾಯನಿಕಗಳು ಲೆನ್ಸ್ ಗಳು ಹಾನಿ ಮಾಡಿ, ಕಣ್ಣಿನ ಸಮಸ್ಯೆಯನ್ನು ಉಂಟು ಮಾಡುತ್ತವೆ. 

ಕಣ್ಣಿನ ಮೇಕಪ್ ಮಾಡಿದ ಮೇಲೆ ಮೇಕಪ್ ಮುಗಿದ ಮೇಲೆ ಲೆನ್ಸ್ ಧರಿಸಬೇಕು. ಲೆನ್ಸ್ ನ್ನು ವಾರಕ್ಕೆ ಒಮ್ಮೆ ಸ್ವಚ್ಛಗೊಳಿಸಬೇಕು. ಕೈಗಳನ್ನು ತೊಳೆಯಲು ತುಂಬಾ ಪರಿಮಣವಿರುವ ಸೋಪ್ ಬಳಸಬಾರದು. ಧೂಳು , ಹೊಗೆ ಇರುವ ಜಾಗದಲ್ಲಿ ಲೆನ್ಸ್ ಹಾಕಬಾರದು. ಇಂತಹ ಜಾಗದಲ್ಲಿ ಲೆನ್ಸ್ ಧರಿಸಿದರೆ ಕಣ್ಣಿನಲ್ಲಿ ಅಲರ್ಜಿ ಉಂಟು ಮಾಡಬಹುದು. 

ಕಣ್ಣುಗಳು ಕೆಂಪಗಾಗುವುದೇಕೆ? 

ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ದೈನಂದಿನ ಬಳಕೆಯಾಗಿ ಹೋದರೆ, ಇದು ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅದರಲ್ಲಿ ಕಣ್ಣುಗಳ ಕೆಂಪು ಬಣ್ಣವು ಒಂದು. ಈ ಅಲರ್ಜಿಯ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ನಂತರ ಅದನ್ನು ನಿರ್ಲಕ್ಷಿಸುತ್ತಾರೆ. ಮತ್ತು ಕಣ್ಣುಗಳಿಗೆ ಅಪಾಯಕಾರಿಯಾದ ಮಸೂರಗಳನ್ನು ಬಳಸುತ್ತಾರೆ. 

ಕನ್ನಡಕ ಸಮಸ್ಯೆಯನ್ನು ತಪ್ಪಿಸಲು, ನಾವು ಮಸೂರಗಳನ್ನು ಆಶ್ರಯಿಸುವುದು ತಪ್ಪಲ್ಲ. ಆದ್ರೆ ಕೆಲಮೊಮ್ಮೆ ಈ ಮಸೂರುಗಳು ಸಹ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕಣ್ಣುಗಳಲ್ಲಿ ಯಾವುದೇ ವಿಳಂಬವಿಲ್ಲದೇ, ವೈದ್ಯರನ್ನು ಸಂಪರ್ಕಿಸಬೇಕು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ