ಶೀತ, ಕೆಮ್ಮಿಗೆ ಹೇಳಿ ಬೈ ಬೈ.. ಮನೆಮದ್ದು ಇಲ್ಲಿವೆ..!

  • by


ಭಾರತೀಯ ಕುಟುಂಬದಲ್ಲಿ ಮನೆಮದ್ದುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಮನೆ ಮದ್ದುಗಳನ್ನು ಈಗಲೂ ನಂಬುವರಿದ್ದಾರೆ. ನೆಗಡಿ ಹಾಗೂ ಕೆಮ್ಮನ್ನು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವಲ್ಲಿ, ಯಾವುದೇ ಅಡ್ಡಪರಿಣಾಮಗಳಿಲ್ಲದೇ, ಕಾಯಿಲೆ ಗುಣಪಡಿಸುವಲ್ಲಿ ಮನೆಮದ್ದುಗಳು ಸಹಾಯ ಮಾಡುತ್ತವೆ. ನೆಗೆಡಿ ಹಾಗೂ ಕೆಮ್ಮಿಗೆ ಚಿಕಿತ್ಸೆ ನೀಡಲು ನಾವು ಮನೆಮದ್ದುಗಳ ಉಪಯೋಗಗಳ ಬಗ್ಗೆ ಮಾಹಿತಿ ಇಲ್ಲಿದೆ.


 cold, cough ,home remedies, ನೆಗಡಿ, ಕಫ, ಕೆಮ್ಮು , ಮನೆ ಮದ್ದುಗಳು

ಶುಂಠಿ ಚಹಾ

ಶುಂಠಿ ಚಹಾ ಉತ್ತಮ ರುಚಿ ಮಾತ್ರವಲ್ಲದೇ, ನೆಗಡಿ ಹಾಗೂ ಕೆಮ್ಮಿಗೆ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ. ಚಹಾವು ಕಫವನ್ನು ಉಸಿರಾಟಕ್ಕೆ ಅಡ್ಡಿಯಾಗುವುದನ್ನು ನಿವಾರಿಸುತ್ತದೆ. ಶುಂಠಿಯ ವಿವಿಧ ಆರೋಗ್ಯ ಪ್ರಯೋಜನಗಳ ಪೈಕಿ, ಇದು ನೆಗಡಿಯನ್ನು ಶಮನ ಗೊಳಿಸಲು ಉಪಯುಕ್ತಕಾರಿ ಎಂದು ಹೇಳಬಹುದು.

ನಿಂಬೆ , ದಾಲ್ಚಿನ್ನಿ, ಮತ್ತು ಜೇನುತುಪ್ಪ

ನೆಗಡಿ ಹಾಗೂ ಕೆಮ್ಮಿಗೆ ಮತ್ತೊಂದು ಪರಿಣಾಮಕಾರಿ ಮನೆ ಮದ್ದು ಎಂದರೆ, ನಿಂಬೆ, ದಾಲ್ಚಿನ್ನಿ, ಹಾಗೂ ಜೇನುತುಪ್ಪ ಮಿಶ್ರಣ. ಈ ಸಿರಪ್ ಶೀತ ಹಾಗು ಕೆಮ್ಮನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ.
ಸಿರಪ್ ತಯಾರಿಸುವುದು ಹೇಗೆ…ಅರ್ಧ ಚಮಚ ಜೇನುತುಪ್ಪದಲ್ಲಿ ಕೆಲವು ಹನಿ ನಿಂಬೆ ರಸ ಮತ್ತು ಒಂದು ಪಿಂಚ್ ದಾಲ್ಚಿನ್ನಿ ಸೇರಿಸಿ, ತಯಾರಿಸಿ. ನೆಗಡಿ ಮತ್ತು ಕೆಮ್ಮನ್ನು ಗುಣಪಡಿಸಲುದಿನಕ್ಕೆ 2 ಬಾರಿ ಈ ಸಿರಪ್ ಸೇವಿಸಬೇಕು.


 cold, cough ,home remedies, ನೆಗಡಿ, ಕಫ, ಕೆಮ್ಮು , ಮನೆ ಮದ್ದುಗಳು

ಬೆಚ್ಚಗಿನ ನೀರು

ನೆಗಡಿ ಹಾಗೂ ನೋಯುತ್ತಿರುವ ಗಂಟಲಿನ ಸಮಸ್ಯೆಗೆ ಬೆಚ್ಚಗಿನ ನೀರು ಸರಾಯ ಮಾಡಬಲ್ಲದ್ದು, ಗಂಟಲಿನ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಹಾಗೂ ದೇಹದಿಂದ ದ್ರವಗಳು ಮತ್ತು ಸೋಂಕನ್ನು ನಿವಾರಿಸಲು ನೆರವಾಗುತ್ತದೆ.

ಹಾಲು ಮತ್ತು ಅರಶಿಣ

ಬಹುತೇಕ ಎಲ್ಲಾ ಭಾರತೀಯರ ಅಡುಗೆ ಮನೆಗಳಲ್ಲಿ ಅರಶಿಣ ಹಾಗೂ ಹಾಲು ಕಂಡು ಬರುವ ಪದಾರ್ಥ. ಅರಶಿಣದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳಿವೆ. ಬೆಚ್ಚಗಿನ ಹಾಲಿನಲ್ಲಿ ಬೆರೆಸಿದ, ಅರಶಿಣವು ಶೀತ ಹಾಗೂ ಕೆಮ್ಮಿನ ವಿರುದ್ಧ ಹೋರಾಡಲು ಪರಿಣಾಮಕಾರಿ ಮಾರ್ಗವಾಗಿದೆ.
1 ಲೋಟ ಬೆಚ್ಚಗಿನ ಅರಶಿಣ ಹಾಲನ್ನು ಕುಡಿಯುವುದರಿಂದ ಶೀತ ಮತ್ತು ಕೆಮ್ಮಿನಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.


 cold, cough ,home remedies, ನೆಗಡಿ, ಕಫ, ಕೆಮ್ಮು , ಮನೆ ಮದ್ದುಗಳು

ಮಸಾಲೆಯುಕ್ತ ಚಹಾ

ನಿಮ್ಮ ಚಹಾದಲ್ಲಿ ಮೆಣಸು, ತುಳಸಿ, ಶುಂಠಿ ಹಾಗೂ ಕರಿಮೆಣಸು ಸೇರಿಸಿ ಮಸಾಲೆಯುಕ್ತ ಚಹಾ ತಯಾರಿಸಬಹುದು. ನೆಗಡಿ ಹಾಗೂ ಕೆಮ್ಮಿನ ವಿರುದ್ಧ ಹೋರಾಡುವಲ್ಲಿ ಈ ಮೂರು ಪದಾರ್ಥ ಗಳು ಪ್ರಮುಖ ಪಾತ್ರ ವಹಿಸುತ್ತವೆ.

ಜೇನುತುಪ್ಪ ನಿಂಬೆ ನೀರು

ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಮತ್ತು ರಕ್ತಪರಿಚಲನಾ ವ್ಯವಸ್ಥೆಗೆ ಇದು ಪರಿಪೂರ್ಣ ಮದ್ದಾಗಿದೆ. ನಿಂಬೆ ನೀರಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ನೆಗಡಿ, ಕೆಮ್ಮು ನಿಯಂತ್ರಿಸಬಹುದು.

ಆಮ್ಲಾ

ದಿನಕ್ಕೊಂದು ಆಮ್ಲಾ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಕಾಣಬಹುದು. ಏಕೆಂದರೆ ಯಕೃತ್ತಿನ ಸರಿಯಾದ ಕಾರ್ಯನಿರ್ವಹಣೆಗೆ ಸುಧಾರಿಸಲು ಇದು ಸಹಾಯ ಮಾಡುತ್ತದೆ.

ಶೀತ ಹಾಗೂ ಕೆಮ್ಮಿಗಾಗಿ ಅಗಸೆ ಬೀಜ

ಅಗಸೆ ಬೀಜಗಳು ನೆಗಡಿ ಮತ್ತು ಕೆಮ್ಮನ್ನು ಗುಣಪಡಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ. ಅಗಸೆ ಬೀಜಗಳು ಕುದಿಸಿ ನಿಂಬೆ ರಸ, ಜೆೇನುತುಪ್ಪ ಸೇರಿಸಿ ಸೇವಿಸಬಹುದು..

ಶುಂಠಿ ಮತ್ತು ಉಪ್ಪು

ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಉಪ್ಪು ಸೇರಿಸಿ. ಶೀತ , ಕೆಮ್ಮು ಮತ್ತು ನೋಯುತ್ತಿರುವ ಗಂಟಲಿನ ವಿರುದ್ಧ ಹೋರಾಡಲು ಇದು ನೆರವಾಗುತ್ತದೆ.

ಬೆಲ್ಲದ ದ್ರಾವಣ

ಕರಿಮೆಣಸು, ಜೀರಿಗೆ ಹಾಗೂ ಬೆಲ್ಲದೊಂದಿಗೆ ನೀರನ್ನು ಕುದಿಸಿ, ಬೆಚ್ಚಗಿರುವಾಗ ಈ ದ್ರಾವಣವನ್ನು ಸೇವಿಸಿದರೆ. ಪರಿಹಾರ ದೊರೆಯುತ್ತದೆ.

ಕ್ಯಾರೆಟ್ ರಸ

ನೆಗಡಿ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಕ್ಯಾರೆಟ್ ರಸ ಅದ್ಭುತ ಮನೆ ಮದ್ದುಗಳಲ್ಲಿ ಒಂದು.. ಈ ಪಾನೀಯ ನೆಗಡಿ ಹಾಗೂ ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಸ್ಟಿಮ್

ವೈರಲ್ ಫೀವರ್, ಮೂಗು ಹಾಗೂ ಗಂಟಲಿನ ಕಿರಿ ಕಿರಿಯನ್ನು ಸ್ಟಿಮ್ ತೆಗೆದುಕೊಳ್ಳುವುದರಿಂದ ನಿವಾರಣೆಯಾಗುತ್ತದೆ. ಇದು ಶೀತವನ್ನು ತ್ವರಿತವಾಗಿ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಿಸಿ ನೀರಿನ ಹಬೆ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ