ತೆಂಗಿನಕಾಯಿ ಯ ಹಲವು ಆರೋಗ್ಯ ಪ್ರಯೋಜನಗಳು !

  • by

ವಿವಿಧ ಖಾದ್ಯಗಳಲ್ಲಿ ತೆಂಗಿನಕಾಯಿಯನ್ನು ರುಚಿ ಹೆಚ್ಚಿಸಲು, ಸಿಹಿ ಪಾಕ ವಿಧಾನಗಳಲ್ಲಿ ಬಳಸಲಾಗುತ್ತದೆ. ಆಹ್ಲಾದಕರ ಸುವಾಸನೆ ಭರಿತ ಹಾಗೂ ಉತ್ತಮ ರುಚಿಗಾಗಿ ಆಹಾರ ಪದಾರ್ಥಗಲ್ಲಿ ತೆಂಗಿನಕಾಯಿ ಉಪಯೋಗಿಸಲಾಗಪತ್ತದೆ. ತೆಂಗಿನಕಾಯಿಯನ್ನು ಅನೇಕ ರೀತಿಯಲ್ಲಿ ಬಳಸಬಹುದು. ತಾಜಾ ತೆಂಗಿನಕಾಯಿ, ಕ್ರೀಮ್, ಎಣ್ಣೆ. ಹಾಲಿನ ರೂಪದಲ್ಲಿ ಬಳಸಬಹುದಾಗಿದೆ. ತೆಂಗಿನಕಾಯಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದನ್ನು ಸೇವನೆ ಮಾಡುವುದಿರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. 

ಎನರ್ಜಿ ಹೆಚ್ಚಿಸುತ್ತದೆ. ತೆಂಗಿನಕಾಯಿ ತಿನ್ನುವುದರಿಂದ ಎನರ್ಜಿ ಹೆಚ್ಚುತ್ತದೆ. ದೇಹದ ಕೊಬ್ಬನ್ನು ನಿವಾರಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಇದ್ರಿಂದ ನಿಮಗೆ ಚೈತನ್ಯ ಹೆಚ್ಚುತ್ತದೆ. ದೇಹವನ್ನು ಉತ್ತಮ ರೀತಿಯಲ್ಲಿ ಹೈಡ್ರೇಟ್ ಮಾಡುತ್ತದೆ. ತೆಂಗಿನ ನೀರನ್ನು ಕುಡಿಯುವುದರಿಂದ ನಿಮ್ಮ ದೇಹ ಹೈಡ್ರೇಟ್ ಆಗುತ್ತದೆ. ತೆಂಗಿನ ನೀರು ಹೆಚ್ಚು ಪೋಷಕಾಂಶಗಳಿಂದ ಕೂಡಿದ್ದು, ಕುಡಿಯಲು ರುಚಿಕರವಾಗಿರುತ್ತದೆ. 

coconut health benefits,  ತೆಂಗಿನಕಾಯಿ , ಆರೋಗ್ಯ ಪ್ರಯೋಜನಗಳು

ಕ್ಯಾನ್ಸರ್ ಗುಣಪಡಿಸಲು..!

ತೆಂಗಿನ ಕಾಯಿಯಲ್ಲಿ ಕ್ಯಾನ್ಸರ್ ಗುಣಪಡಿಸುವ ಅಂಶವಿದೆ. ಸ್ತನ ಕ್ಯಾನ್ಸರ್ ನಂತಹ ಕೆಲವು ಕಾಯಿಲೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ದೇಹದಲ್ಲಿ ಕೆಂಪು ರಕ್ತಕಣಗಳ ಹೆಚ್ಚಳ!

ತೆಂಗಿನ ಕಾಯಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ತೆಂಗಿನಕಾಯಿಯಲ್ಲಿ ಕಬ್ಬಿಣ ಅಂಶ ಹೆಚ್ಚಾಗಿದ್ದು, ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ. 

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಟೈಪ್ -2 ಮಧುಮೇಹವವ್ನು ತೆಂಗಿನಕಾಯಿ ತಡೆಗಟ್ಟುತ್ತದೆ. ತೆಂಗಿನ ನೀರು ಮೆಗ್ನೇಶಿಯಂ ನಿಂದ ಕೂಡಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಕಚ್ಚಾ ತೆಂಗಿನಕಾಯಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಬಹುದು. 

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ತೆಂಗಿನ ಎಣ್ಣೆಯು ನೈಸರ್ಗಿಕ ಕೊಬ್ಬಿನಿಂದ ಸಮೃದ್ಧವಾಗಿದೆ. ನಮ್ಮ ದೇಹದ ರಕ್ತ ಸಂಚಾರ ಸುಗುಮವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಹೃದ್ರೋಗದ ಅಪಾಯವನ್ನು ತಡೆಗಟ್ಟುತ್ತದೆ. ಪಿತ್ತಜಂನಕಾಂಗವನ್ನು ರಕ್ಷಿಸುವ ಗುಣ ತೆಂಗಿನಕಾಯಿಯಲ್ಲಿದೆ, ತೂಕ ನಷ್ಟಕ್ಕೆ ಹೆಚ್ಚು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ತೆಂಗಿನಕಾಯಿಯನ್ನು ಬಳಸಿ. ಇದ್ರಿಂದ ಹೊಟ್ಟೆಯ ಭಾಗದಲ್ಲಿರು ಹಠಮಾರಿ ಬೊಜ್ಜನ್ನು ಕಳೆದುಕೊಳ್ಳಬಹುದು. ಹೆಚ್ಚು ಕ್ಯಾಲೋರಿಗಳನ್ನು ಸುಡಲು ಇದು ಸಹಾಯ ಮಾಡುತ್ತದೆ. 

ಪೂಜೆ, ಪುನಸ್ಕಾರಗಳಲ್ಲಿ ತೆಂಗಿನಕಾಯಿ ಏಕೆ ಬಳಸಲಾಗುತ್ತದೆ ಗೊತ್ತಾ

ತೆಂಗಿನಕಾಯಿ ಪೂಜೆ, ಪುನಸ್ಕಾರಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ದೃಷ್ಟ ಶಕ್ತಿಗಳ ದೃಷ್ಟಿ ಬೀಳದಿರಲು ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ತೆಂಗಿನಕಾಯಿಗೆ ಸುತ್ತಿ, ನಿಮ್ಮ ತಲೆಗೆ ಏಳು ಬಾರಿ ಸುತ್ತಿ ಹರಿವ ನೀರಿನಲ್ಲಿ ಬಿಡಬೇಕು. ಇದ್ರಿಂದ ಕೆಟ್ಟ ದೃಷ್ಟಿಯ ನಿವಾರಣೆಯಾಗುತ್ತದೆ. ಈ ಪರಿಹಾರವನ್ನು ಏಳು ಮಂಗಳವಾರ ಮಾಡಬಹುದು. 

coconut health benefits,  ತೆಂಗಿನಕಾಯಿ , ಆರೋಗ್ಯ ಪ್ರಯೋಜನಗಳು

ಕೇಸ್ ನಲ್ಲಿ ಜಯ ಗಳಿಸಲು ತೆಂಗಿನಕಾಯಿ ಬಳಕೆ

ನೀವು ಕೋರ್ಟ್ , ಕಚೇರಿ ಅಂತಾ ಅಲೆಯುತ್ತಿದ್ದರೆ ತೆಂಗಿನಕಾಯಿ ಅತ್ಯುತ್ತಮ ಪರಿಹಾರ ಎಂದೇ ಹೇಳಬಹುದು. ತೆಂಗಿನಕಾಯಿನ್ನಿಟ್ಟುಕೊಂಡು ಪೂಜೆ ಮಾಡಿ, ಅದರ ಮೇಲೆ ಕೆಂಪುಬಣ್ಣದ ಹೂವನ್ನಿಟ್ಟು, ನಂತರ ಮನೆಯಿಂದ ಹೊರ ಹೋಗುವಾಗ ಆ ಹೂವನ್ನು ನಿಮ್ಮ ಬಳಿ ಇಟ್ಟಿಕೊಳ್ಳಿ. ಖಂಡಿತವಾಗಿಯೂ ನಿಮಗೆ ಜಯ ಸೀಗುತ್ತದೆ. 

ಇನ್ನು ಕೆಲಸದಲ್ಲಿ ಯಶಸ್ವಿಗೊಳ್ಳಲು ತೆಂಗಿನಕಾಯಿ ಬಳಸಲಾಗುತ್ತದೆ. ನಿಮ್ಮ ತಲೆಯ ಹತ್ತಿರದಲ್ಲಿ ತೆಂಗಿನಕಾಯಿಯನ್ನು ಇಟ್ಟುಕೊಳ್ಳಿ. ಮರು ದಿನ ತೆಂಗಿನಕಾಯಿಯೊಂದಿಗೆ ದಕ್ಷಿಣೆಯನ್ನು ಇರಿಸಿ. ನಂತರ ಗಣೇಶನ ದೇವಸ್ಧಾನಕ್ಕೆ ನೀಡಬೇಕು. 

ಶನಿ ದೇವರನ್ನು ಶಾಂತಗೊಳಿಸಲು..!

ನಿಮ್ಮ ರಾಶಿಯಲ್ಲಿ ಶನಿ ದುರ್ಬಲನಾಗಿದ್ದಲ್ಲಿ, ಪ್ರತಿ ಶನಿವಾರ 1 ತೆಂಗಿನಕಾಯಿಯನ್ನು ಗಂಗಾಜಲದಲ್ಲಿ ಮುಳುಗಿಸಿ, ಇದನ್ನು ಮಾಡುವಾಗ ಓಂ ರಾಮದೂತಾಯ ನಮಃ ಎಂಬ ಮಂತ್ರವನ್ನು ಪಠಿಸಿ, ಈ ವಿಧಿಯನ್ನು ಏಳು ಬಾರಿ ತಪ್ಪದೇ, ಮಾಡಿದ್ದಲ್ಲಿ, ಶನಿದೆಸೆಯಿಂದ ಉಂಟಾಗುವ ಸಮಸ್ಯೆಗಳು ನಿವಾರಣೆಯಾಗುತ್ತವೆ. 

ವ್ಯವಹಾರದಲ್ಲಿ ನಷ್ಟವಾಗಿದ್ದರೆ ತೆಂಗಿನಕಾಯಿ ಬಳಕೆ.

ವ್ಯವಹಾರದಲ್ಲಿ ನಷ್ಟ ಉಂಟಾದರೆ ತೆಂಗಿನಕಾಯಿಯನ್ನು ಒಂದುವರೆ ಮೀಟರ್ ಅಳತೆಯ ಹಳದಿ ಬಣ್ಣದ ಬಟ್ಟೆಯಲ್ಲಿ ಸುತ್ತಿ, ಜತೆಗೆ ಒಂದಿಷ್ಟು ಹಳದಿ ಬಣ್ಣದ ಸಿಹಿಯನ್ನು ಇರಿಸಿ, ವಿಷ್ಣುವಿನ ದೇವಸ್ಥಾನಕ್ಕೆ ನೀಡಿದರೆ, ವ್ಯವಹಾರದಲ್ಲಿ ನಷ್ಟ ಉಂಟಾಗುತ್ತಿದ್ದರೆ ತಡೆಯಬಹುದು.

ಬಡತನ ನಿವಾರಣೆಗೆ!

ಮನೆಯಲ್ಲಿ ಬಡತನ ಹೆಚ್ಚಾಗಿದ್ದರೆ, ತೆಂಗಿನಕಾಯಿ ಉಪಯೋಗಕ್ಕೆ ಬರುತ್ತದೆ. ತೆಂಗಿನಕಾಯಿಯನ್ನು ತೆಗೆದುಕೊಂಡು ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ, ನಂತರ ಆ ತೆಂಗಿನಕಾಯಿಯನ್ನು ಲಾಕರ್ ನಲ್ಲಿಡಬೇಕು. ಹೀಗೆ ಮಾಡುವುದರಿಂದ ಬಡತನವು ನಿವಾರಣೆಯಾಗುವುದು. 

ನಿರಂತರವಾಗಿ ಸಮಸ್ಯೆ ಎದುರಿಸುತ್ತಿದ್ದರೆ, ಒಂದು ತೆಂಗಿನಕಾಯಿ ತೆಗೆದುಕೊಂಡು ಕೆಂಪು ದುಪ್ಪಟ್ಟಾ, ಕೆಂಪು ಹೂವು , ಹಾಗೂ ಒಂದಷ್ಟು ಕರ್ಪೂರದ ತುಂಡುಗಳನ್ನು ದುರ್ಗಾ ಮಾತೆಯ ಎದುರಿಗಿಟ್ಟು, ಪ್ರತಿದಿನವು ಪ್ರಾರ್ಥನೆ ಮಾಡಬೇಕು. ಈ ರೀತಿ ಮಾಡುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. 

ಮಹಿಳೆಯರು ತೆಂಗಿನಕಾಯಿ ಒಡೆಯಬಾರದೇಕೆ…?

ಮನೆಗಳಲ್ಲಿ ಮಹಿಳೆಯರು ತೆಂಗಿನಕಾಯಿ ಒಡೆಯಬಾರದು ಎಂದು ಹೇಳಲಾಗುತ್ತದೆ. ದೇವಸ್ಥಾನಗಳಲ್ಲೂ ಮಹಿಳೆಯರು ತೆಂಗಿನಕಾಯಿ ಒಡೆಯಬಾರದು. ಅದರಲ್ಲೂ ಗರ್ಭಿಣಿ ಮಹಿಳೆಯರಂತೂ ಒಡಯಲೇಬಾರದು. ಏಕೆಂದ್ರೆ ಕಲ್ಪವೃಕ್ಷವಾದ ತೆಂಗಿನ ಮರದಿಂದ ಬೀಳುವ ತೆಂಗಿನಕಾಯಿಯು ತಾಯಿಯ ಗರ್ಭದಿಂದ ಬೀಳುವ ಬೀಜದಂತೆ. ಆದ್ದರಿಂದ ಒಂಭತ್ತು ತಿಂಗಳ ಕಾಲ ತನ್ನ ಗರ್ಭದಲ್ಲಿ ಬೀಜವನ್ನು ಅಂದರೆ ಭ್ರೂಣವನ್ನು ಹೊರುವ ಮಹಿಳೆ ತೆಂಗಿನಕಾಯಿ ಒಡೆಯಬಾರದು. ತೆಂಗಿನಕಾಯಿ ಹೊರಭಾಗದಲ್ಲಿ ಗಟ್ಟಿಯಾಗಿದೆ. 

ಒಳಭಾಗದಲ್ಲಿ ಮೃದುವಾಗಿದೆ. ಹೀಗಾಗಿ ದೇವರ ಮುಂದೆ ತೆಂಗಿನಕಾಯಿ ಒಡೆಯುವಾಗ ತೆಂಗಿನಕಾಯಿಯೊಳಗಿರುವ ನೀರು ದೇವರ ಪಾದದ ಮೇಲೆ ಬೀಳಬೇಕು ಎಂಬ ನಂಬಿಕೆ ಇದೆ. 

ತೆಂಗಿನಕಾಯಿ ಕೊಳೆತರೇ ಏನರ್ಥ..?

ಪೂಜೆ, ಪುನಸ್ಕಾರದ ವೇಳೆ ಹಲವು ಮಂದಿ ತೆಂಗಿನಕಾಯಿ ತೆಗೆದುಕೊಂಡು ಬರುತ್ತಾರೆ. 

ತೆಂಗಿನಕಾಯಿ ಒಡೆಯುವಾಗ ಬಿಳಿ ಶುಭ್ರ ಬಣ್ಣ ಹಾಗೂ ನೀರು ಸಿಹಿಯಾಗಿದ್ದರೆ ಒಳ್ಳೆಯದು ಎಂಬ ನಂಬಿಕೆ ಇದೆ. ಇನ್ನು ತೆಂಗಿನಕಾಯಿ ಕೆಟ್ಟು ಹೋಗಿದ್ದರೆ ಅನರ್ಥ ಸಂಭವಿಸಬಹುದು ಎಂಬ ಗಾಬರಿಯಾಗುವವವರು ಇದ್ದಾರೆ. ಆದ್ರೆ ಕಾಯಿ ಕೆಟ್ಟು ಹೋಗಿರಬಹುದು ಭಕ್ತಿಯಲ್ಲ. ತೆಂಗಿನಕಾಯಿ ಒಡೆದು ಹೋಗಿದ್ದರೆ, ಅದನ್ನು ಸ್ವಚ್ಛಗೊಳಿಸಿ ನೀವು ಕೈ ಕಾಲು ತೊಳೆದುಕೊಳ್ಳಬೇಕು. ಇದರಿಂದ ಅನರ್ಥ ಸಂಭವಿಸುವುದಿಲ್ಲ.

ಇನ್ನು ವಾಹನಕ್ಕೆ ತೆಂಗಿನಕಾಯಿ ಒಡೆಯುವಾಗ. ತೆಂಗು ಹಾಳಾಗಿದ್ದರೆ ಕೆಟ್ಟ ದೃಷ್ಟಿಯ ನಿವಾರಣೆಯಾಗಿದೆ ಎಂದರ್ಥ. ಇನ್ನು ಕೆಲವರ ನಂಬಿಕೆ ಪ್ರಕಾರ, ಮುಂದಿನ ದಿನದ ಶುಭ ಸೂಚನೆಯಾಗಿರಬಹುದು. ಅಲ್ಲದೇ, ತೆಂಗು ಸಮನಾಗಿ ಒಡೆದರೆ, ಮನಸ್ಸಿನಲ್ಲಿರುವ ಆಸೆಗಳು ಸಮನಾಗಿ ನೆರವೇರುತ್ತವೆ. ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಸೂಚನೆ ಸಿಕ್ಕದಂತೆ. ಆದ್ರೆ ಭಕ್ತಿಯಿಂದ ದೇವರಿಗೆ ಅರ್ಪಿಸುವ ಎಲ್ಲಾ ವಸ್ತುಗಳು ಹೇಗಿದ್ದರೂ ಸರಿ. ಭಕ್ತಿ ಮುಖ್ಯವಾಗುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ