ಮೆಣಸಿನಕಾಯಿಯ ಅದ್ಭುತ ಆರೋಗ್ಯ ಪ್ರಯೋಜನಗಳು..!

  • by

ಎಲ್ಲರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಮೆಣಸಿನಕಾಯಿ ಕಾಣಸೀಗುತ್ತದೆ. ರುಚಿ ಹೆಚ್ಚಿಸುವಲ್ಲಿ ಕೆಂಪು ಮೆಣಸಿನಕಾಯಿ ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲಾ ಅಡುಗೆಗಳಿಗೆ ಮೆಣಸಿನಕಾಯಿಯನ್ನು ಬಳಸುವುದರಿಂದ ಇದು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ದೈಹಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. 

green chilies ,health benefits,ಹಸಿ ಮೆಣಸಿನಕಾಯಿ ಪ್ರಯೋಜನಗಳು,

ಕೆಂಮೆಣಸಿನಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದುಕೊಳ್ಳೋಣ. ಭಾರತೀಯ ಆಹಾರ ಪದ್ಧತಿಯಲ್ಲಿ ಮೆಣಸಿನಕಾಯಿ ಹೊಸತೇನಲ್ಲ. ಇದನ್ನು ಹಸಿ ಹಸಿಯಾಗಿ ತಿನ್ನುವುದರಿಂದ ಹಿಡಿದು ಬೋಂಡಾ , ಗೊಜ್ಜು, ತಡ್ಕಾ ಮುಂತಾದವುದಕ್ಕೆ ಬಳಸುವವರಿಗೆ ಎ್ಲಲಕ್ಕೂ ತನ್ನ ಫ್ಲೇವರ್ ಆ್ಯಡ್ ಮಾಡುವಷ್ಟು ಸ್ವಂತಿಕೆ ಹೊಂದಿದೆ. 

  1. ತೂಕ ಇಳಿಸಿಕೊಳ್ಳುವುದಕ್ಕೆ ಸಹಾಯ 

2 . ಹಸಿ ಮೆಣಸಿನಕಾಯಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್ ಡಯಟರಿ ಫೈಬರ್ಸ್ , ವಿಟಮಿ್ ಎ , ಪೊಟ್ಯಾಶಿಯಂ ಹಾಗೂ ಐರನ್ ಬಹಳಷ್ಟಿದೆ.

3. ಡಯೆಟ್ ಗೆ ಹಸಿರು ಮೆಣಸಿನಕಾಯಿ ಸೇರಿಸುವುದರಿಂದ ಮತ್ತಷ್ಟು ಫ್ಯಾಟ್ ಕರಗಿಸಲು ಸಾಧ್ಯವಾಗುತ್ತದೆ. ಏಕೆಂದರೆ ಖಾರವು ತಿಂದ ಮೂರು ಗಂಟೆಗಳ ಕಾಲ ಮೆಟಾಬಾಲಿಸಂ ನ್ನು ವೇಗಗೊಳಿಸುತ್ತದೆ.  

4. ಸ್ಪೈಸಿ ಆಹಾರ ಬೇಗ ಹೊಟ್ಟೆ ತುಂಬಿದ ಫೀಲಿಂಗ್ ನೀಡುತ್ತದೆ ಹಾಗಾಗಿ ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಅತಿಯಾಗಿ ತಿನ್ನುವುದು ತಪ್ಪುತ್ತದೆ. 

green chilies ,health benefits,ಹಸಿ ಮೆಣಸಿನಕಾಯಿ ಪ್ರಯೋಜನಗಳು,

5. ಹಸಿ ಮೆಣಸಿನಲ್ಲಿರುವ ಕ್ಯಾಪೆಸೈನಿನ್ ಮೆಂಬ್ರೇನ್ ನಲ್ಲಿ ರಕ್ತದ ಹರಿವನ್ನು ಹೆಚ್ಚಿಸಿ, ಮ್ಯೂಕಸ್ ಉತ್ಪತ್ತಿ ತೆಳುವಾಗುವಂತೆ ಮಾಡುತ್ತದೆ. ಬೀಟಾ ಕೆರೋಟಿನ್ ಹಾಗೂ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜತೆಗೆ ಚರ್ಮಕ್ಕೆ ಕಾಂತಿ ನೀಡುತ್ತದೆ. 

6. ಡಯೆಟ್ ನ್ಲಲಿ ಹಸಿ ಮೆಣಸಿನಕಾಯಿ ಬಳಸುವುದರಿಂದ ಗ್ರೇವಿಗಳು, ಸಾಂಬಾರ್ ಮತ್ತು ಸಾರು ಚಟ್ನಿ ದಾಲ್, ಪರೋಟಾ , ಮಸಾಲೆ ದೋಸೆ, ಪಲ್ಯಗಳು ಎಲ್ಲದರಲ್ಲೂ ಹಸಿಮೆಣಸು ಬಳಕೆ ಮಾಡಬಹುದು. ಹಸಿಮೆಣಸಿನ ಉಪ್ಪಿನಕಾಯಿ ಕೂಡಾ ರುಚಿ ರುಚಿಯಾಗಿದ್ದು, ನಾಲಿಗೆಯನ್ನು ನೀರೂರಿಸುತ್ತದೆ. 

7. ಮಧುಮೇಹಿಗಳು ತಮ್ಮ ಮೈ ತೂಕ ಕಡಿಮೆ ಮಾಡಲು ಹಾಗೂ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಆಹಾರದಲ್ಲಿ ಹಸಿ ಮೆಣಸಿನಕಾಯಿ ಬಳಸುವುದು ಒಳ್ಳೆಯದು. ಇದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುತ್ತದೆ. ತೂಕ ಕಡಿಮೆ ಮಾಡಲು ಸಬಾಯ ಮಾಡುತ್ತದೆ. 

green chilies ,health benefits,ಹಸಿ ಮೆಣಸಿನಕಾಯಿ ಪ್ರಯೋಜನಗಳು,

8. ಇತರ ಆರೋಗ್ಯಕರ ಲಾಭಗಳು ಹಸಿ ಮೆಣಸಿವಕಾಯಿಯಲ್ಲಿ ವಿಟಮಿನ್ ಸಿ , ವಿಟಮಿನ್ ಬಿ ೬ ಹಾಗೂ ವಿಟಮಿನ್ ಎ , ಕಬ್ಬಿಣದಂತಹ , ಸತು, ಪೋಟ್ಯಾಶಿಯಂ , ಕಾರ್ಬೋಹೈಡ್ರೇಟ್ಸ್ ಅಂಶವಿದೆ. 

9. ಹಸಿ ಮೆಣಸಿನಕಾಯಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುವುದು. ರಕ್ತ ಹೆಪ್ಪು ಗಟ್ಟುವುದನ್ನು ತಡೆಗಟ್ಟುತ್ತದೆ. ಸಂಧಿವಾತ , ಉರಿಯೂತ ಸಮಸ್ಯೆ ಇರುವವರು ಹಸಿ ಮೆಣಸಿನಕಾಯಿ ತಿಂದರೆ ಇದರಲ್ಲಿರುವ ಕ್ಯಾಪ್ಸಿಯಾಸಿನ್ ಅಂಶ ಸಂಧಿವಾತ ಕಡಿಮೆ ಮಾಡುತ್ತದೆ. ಹಸಿ ಮೆಣಸಿನಕಾಯಿ ಸೇವಿಸುವುದರಿಂದ ಕಡಿಮೆಯಾಗುತ್ತದೆ. ಆಹಾರದಲ್ಲಿ ಹಸಿ ಮೆಣಸಿನಕಾಯಿ ತಿನ್ನುವುದರಿಂದ  ಹಲವು ಆರೋಗ್ಯಕರ ಪ್ರಯೋಜನಗಳನ್ನು ಕಾಣಬಹುದು. 

10. ಕ್ಯಾಲೋರಿ ಗಳನ್ನು ಬರ್ನ್ ಮಾಡುವಲ್ಲಿ ಹಸಿ ಮೆಣಸಿನಕಾಯಿ ಮಹತ್ವದ ಪಾತ್ರ ವಹಿಸುತ್ತದೆ. ಹಸಿ ಮೆಣಸಿನಕಾಯಿಯಲ್ಲಿ ಸಿಲಿಕಾನ್ಸ್ ಅಂಶವಿದ್ದು, ತಲೆಬುಡದಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆಯುವಂತೆ ಮಾಡುತ್ತದೆ. 

11. ಅಸ್ತಮಾ, ಕೆಮ್ಮು, ಶೀತ ಈ ಸಮಸ್ಯೆ ಕಡಿಮೆ ಮಾಡುವಲ್ಲಿ ಹಸಿ ಮೆಣಸಿನಕಾಯಿ ಹಾಕಿದ ಆಹಾರ ಪರಿಣಾಮ ಕಾರಿಯಾಗಿದೆ. ಖಾರದ ಪುಡಿ ಬದಲಿಗೆ ಹಸಿ ಮೆಣಸಿನಕಾಯಿ ಬಳಕೆ ಹೆಚ್ಚು ಮಾಡಿ. ಖಾರದ ಪುಡಿಗೆ ಹೋಲಿಸಿದರೆ ಹಸಿ ಮೆಣಸಿನಕಾಯಿ ಹೆಚ್ಚು ಆರೋಗ್ಯಕರವಾಗಿದೆ. 

12. ಇದರಲ್ಲಿರುವ ಬ್ಯಾಕ್ಟೇರಿಯಾ ಕಣಗಳು ನಿಮಗೆ ಚರ್ಮ ರೋಗ ಬರದಂತೆ ತಡೆಯುತ್ತವೆ. ದೇಹದಲ್ಲಿ ಗೊತ್ತಿಲ್ಲದ. ಅನೇಕ ಕೊಬ್ಬು ಸಂಗ್ರಹಣೆಯಾಗಿರುತ್ತವೆ. ಕೊಬ್ಬು ಹೆಚ್ಚಾದರೆ ಹೃದಯಾಘಾತ ಹೆಚ್ಚಾಗುವ ಸಂಭವ ಹೆಚ್ಚಾಗಿರುತ್ತದೆ. ಈ ಕೊಬ್ಬನ್ನು ಕರಗಿಸಲು ನಾವು ಸಾಕಷ್ಟು ವಿಧವಾದ ಪ್ರಯತ್ನಗಳನ್ನು ಮಾಡುತ್ತೇವೆ.  ಎಲ್ಲಾ ಪ್ರಯತ್ನಗಳಿಗಿಂತ ಹೆಚ್ಚಾಗಿ ಹಸಿ ಮೆಣಸಿನ ಕಾಯಿಯ ಮತ್ತು ಅದರಲ್ಲಿರುವ ಸಣ್ಣ ಸಣ್ಣ ಬೀಜಗಳನ್ನು ತಿನ್ನುವುದರಿಂದ ಫ್ಲೈ ಟೋ ಸ್ಟೇರೊಯ್ಡ್ ಎಂಬ ಉತ್ತಮವಾದ ಶಕ್ತಿ ಅದರಲ್ಲಿರುತ್ತದೆ. 

13. ಹಸಿ ಮೆಣಸಿನಕಾಯಿಯನ್ನು  ನಾವು ತಿನ್ನುವ ಪ್ರತಿ ನಿತ್ಯ ಕಾಳಿನ ಜತೆ ಬೆರೆಸಿ ತಿನ್ನುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಅತ್ಯುತ್ತಮವಾಗಿರುತ್ತದೆ. ಯಾವುದೇ ರೀತಿಯ ಜೀರ್ಣಶಕ್ತಿಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಬರುವುದಿಲ್ಲ. 

14. ಕೆಂಪು ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ೬ ಹಾಗೂ ವಿಟಮಿನ್ ಕೆ೧ ಹಾಗೂ ಪೋಟ್ಯಾಶಿಯಂ ಹಾಗೂ ವಿಟಮಿನ್ ಎ ಹೆಚ್ಚಾಗಿರುತ್ತದೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ