ಗುಡ್ ಟಚ್ ಮತ್ತು ಬ್ಯಾಡ್ ಟಚ್.. ಮಕ್ಕಳಿಗೆ ಅರಿವು ಮೂಡಿಸುವುದು ಹೇಗೆ..?

  • by

ಮಕ್ಕಳಿಗೆ ಪೋಷಕರು ತಿನ್ನುವುದನ್ನು, ಡ್ರೆಸ್ಸಿಂಗ್ ಮಾಡುವುದನ್ನು , ಹಲ್ಲುಜ್ಜುವುದನ್ನು ಎಲ್ಲದರ ಮಹತ್ವವನ್ನು ಕಲಿಸುತ್ತಾರೆ. ಹಾಗೇ ಅವರಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆಯೂ ಹೇಳವುದು ಅವಶ್ಯಕ. ಹೆಚ್ಚುತ್ತಿರುವ ಕಿರುಕುಳ ಪ್ರಕರಣದಿಂದ ಮಕ್ಕಳನ್ನು ರಕ್ಷಿಸುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ.good touch,bad touch, child care tips, ಗುಡ್ ಟಚ್, ಬ್ಯಾಡ್ ಟಚ್. ಮಕ್ಕಳ ಆರೈಕೆ,

ಇಂದಿನ ದಿನಗಳಲ್ಲಿ ಯಾರನ್ನೂ ನಂಬುವುದು ಕಷ್ಟ. ಇತ್ತೀಚಿನ ದಿನಗಳಲ್ಲಿ ಮಕ್ಕಳೊಂದಿಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸಾಮಾನ್ಯವಾಗಿ ಬಿಟ್ಟಿವೆ. ನಮ್ಮ ಮಗು ನಿಜಕ್ಕೂ ಸುರಕ್ಷಿತವಾಗಿದೇಯೇ ಎಂಬುದನ್ನು ಪೋಷಕರಿಗೆ ತಿಳಿದಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮಗುವಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ತಿಳಿಸುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ. ಇದ್ರಿಂದ ನಿಮ್ಮ ಮುಗ್ಧ ಮಗ ಅಥವಾ ಮಗಳಿಗೆ ಏನು ನಡೆಯುತ್ತಿದೆ. ಇದು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ತಿಳಿಯುತ್ತದೆ.

ಮಕ್ಕಳು ಬಹಳ ಉತ್ಸಾಹದಿಂದ ಕಥೆಗಳನ್ನು ಕೇಳುತ್ತಾರೆ. ನಿಮ್ಮ ಯಾವುದೇ ವಿಷಯದ ಬಗ್ಗೆ ಕಥೆ ಹೇಳಿ . ಚೆನ್ನಾಗಿ ವಿವರಿಸಬಹುದು. ಗುಡ್ ಟಚ್ ಅಥವಾ ಬ್ಯಾಡ್ ಟಚ್ ಎಂದರೇನು..? ಹದಿಹರೆಯದ ಮಕ್ಕಳಿಗೆ ಈ ಬಗ್ಗೆ ಪೋಷಕರು ಹೇಗೆ ತಿಳಿ ಹೇಳಬೇಕು ಎಂಬ ಬಗ್ಗೆ ಸಲಹೆ ಇಲ್ಲಿದೆ.

ಮಕ್ಕಳಿಗೆ ಯಾವುದು ಒಳ್ಳೆಯದು, ಕೆಟ್ಟದ್ದು ಎಂಬ ಬಗ್ಗೆ ಅರಿವಿರುವುದಿಲ್ಲ. ಅಂತಹ ಸಂಧರ್ಭದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ತಿಳಿಸಬೇಕಾಗುತ್ತದೆ.good touch,bad touch, child care tips, ಗುಡ್ ಟಚ್, ಬ್ಯಾಡ್ ಟಚ್. ಮಕ್ಕಳ ಆರೈಕೆ,

ನಿಮ್ಮ ಮಗುವಿಗೆ ತಾಯಿಯಾಗಿರದೇ, ಸ್ನೇಹಿತೆಯಾಗಿರಿ..!

ನೀವು ಕೇವಲ ತಾಯಿಯಾಗಿದ್ದರಷ್ಟೇ ಸಾಲದು, ನಿಮ್ಮ ಮಗುವಿಗೆ ಒಳ್ಳೆಯ ಸ್ನೇಹಿತೆಯಾಗಿರಬೇಕು.ಇದ್ದರಿಂದ ಮಕ್ಕಳು ಯಾವುದೇ ಭಯ , ಆತಂಕ ವಿಲ್ಲದ ಎಲ್ಲಾ ವಿಷಯಗಳನ್ನು ನಿಮ್ಮ ಮುಂದೆ ಹೇಳುತ್ತಾರೆ. ಮಕ್ಕಳೊಂದಿಗೆ ವಿಶ್ವಾಸದ ಸಂಬಂಧವನ್ನು ಹೊಂದಬೇಕು. ನೀವು ಯಾವಾಗಲೂ ನಿಮ್ಮ ಮಗುವಿನ ಜತೆ ಇರುವುದರಿಂದ ನಂಬಿಕೆ ಭಾವನೆ ಮೂಡಿಸಿ, ನಿಮ್ಮ ಮಕ್ಕಳನ್ನು ಸಂಪೂರ್ಣವಾಗಿ ನಂಬಿದಾಗ, ಅವರು ನಿಮ್ಮ ಜತೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.

ಪ್ರೈವೇಟ್ ಪಾರ್ಟ್ಸ್ ಬಗ್ಗೆ ತಿಳಿಸಿ

ಮಕ್ಕಳಿಗೆ ಅವರ ದೇಹದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ. ದೇಹದ ಭಾಗಗಳನ್ನು ಯಾರು ಮುಟ್ಟಬಾರದು, ಅವರಿಗೆ ಅನುಮತಿಸಬಾರದು ಎಂದು ಹೇಳಿ. ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ವಿಷಯದ ಬಗ್ಗೆ ತಿಳಿಸುವಾಗ, ಮೊದಲು ದೇಹದ ಪ್ರೈವೇಟ್ ಭಾಗಗಳ ಬಗ್ಗೆ ತಿಳಿಸಬೇಕು. ಈ ಭಾಗಗಳಲ್ಲಿ ಯಾರಾದರೂ ನಿಮ್ಮನ್ನು ಸ್ಪರ್ಶಿಸಿದಾಗ ಹೇಗೆ ರಿಯಾಕ್ಟ್ ಮಾಡಬೇಕು ಎಂಬುದನ್ನು ತಿಳಿಸಿ ಹೇಳಿ.good touch,bad touch, child care tips, ಗುಡ್ ಟಚ್, ಬ್ಯಾಡ್ ಟಚ್. ಮಕ್ಕಳ ಆರೈಕೆ,

ಬ್ಯಾಡ್ ಟಚ್ ಬಗ್ಗೆ ತಿಳಿಸಿ..!

ಪ್ರೈವೇಟ್ ಭಾಗಗಳನ್ನು ಸ್ಪರ್ಶಿಸುವುದು, ಯಾವುದಾದರೂ ದೇಹದ ಭಾಗ ಮುಟ್ಟುವುದು, ಈ ಬಗ್ಗೆ ತಂದೆ ತಾಯಿಗೆ ಹೇಳದಂತೆ ಮಕ್ಕಳಿಗೆ ಹೆದರಿಸುವುದು ಹೊಡೆಯುವುದು. ಗುತ್ತಿಗೆ ಹಿಡಿದು ಬೆದರಿಕೆ ಒಡ್ಡುವುದು ಇವೆಲ್ಲವು ಬ್ಯಾಡ್ ಟಚ್ ಎಂದು ಹೇಳಲಾಗುತ್ತದೆ.

ಮಕ್ಕಳ ಸ್ವಭಾವವನ್ನು ತಿಳಿಯಿರಿ..!

ಮಕ್ಕಳಿಗೆ ಯಾರಾದರೂ ಶೋಷಣೆ ಮಾಡಿದಾಗ, ಅವರಿಗೆ ಇದು ಚಿಂತೆಗೀಡು ಮಾಡಬಹುದು. ಇದರಿಂದ ಕೆಲ ಮಕ್ಕಳು ಶಾಂತವಾಗಿರುತ್ತಾರೆ. ಹಾಗಾಗಿ ಮಕ್ಕಳ ಜತೆ ಏನಾಗಿದೆ ಎಂಬುದನ್ನು ತಿಳಿಯಲು ಇದು ಸಹಾಯ ವಾಗುತ್ತದೆ.

ಮಗಳಿಗೆ ಅಷ್ಟೇ ಅಲ್ಲ, ಮಗನಿಗೂ ತಿಳಿಸಿ!

ಕೆಟ್ಟ ಜನರಿಗೆ ಹೆಣ್ಣು ಅಥವಾ ಗಂಡು ಎಂಬ ಬಗ್ಗೆ ಯಾವುದೇ ಅಂತರ ವಿರುವುದಿಲ್ಲ. ಹೆಣ್ಣು ಅಥವಾ ಗಂಡು ಮಗು ಇಬ್ಬರಿಗೂ ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ತಿಳಿಸಿ ಹೇಳಬೇಕಾದದ್ದು ಪೋಷಕರ ಕರ್ತವ್ಯವಾಗಿದೆ.

ಸರಿಯಾದ ಭಾಷೆಯನ್ನು ಬಳಸಿ!

ಮಕ್ಕಳಿಗೆ ದೈಹಿಕ ರಚನೆ ಬಗ್ಗೆ ಹೇಳುವಾಗ, ಸರಿಯಾದ ಭಾಷೆ ಯನ್ನು ಬಳಸುವುದು ಮುಖ್ಯ. ಮಹಿಳೆಯರ ಮತ್ತು ಪುರುಷರ ದೇಹದ ನಡುವಿನ ವ್ಯತ್ಯಾಸದ ಬಗ್ಗೆ ವಿವರಿಸಿ. ಯಾವುದೇ ವ್ಯಕ್ತಿ ಸ್ಪರ್ಶಿಸಲು ಪ್ರಯತ್ನಿಸಿದರೆ, ತಕ್ಷಣವೇ ಪೋಷಕರು ಹಾಗೂ ಶಾಲೆಯ ಶಿಕ್ಷಕರಿಗೆ ತಿಳಿಸುವಂತೆ ವಿವರಿಸಿ.

ಸುರಕ್ಷಿತ ಸ್ಪರ್ಶದ ಬಗ್ಗೆ ಮಕ್ಕಳಿಗೆ ಹೇಳಿ..!

ಸುರಕ್ಷಿತ ಸ್ಪರ್ಶದ ಬಗ್ಗೆ ಮಕ್ಕಳಿಗೆ ತಿಳಿಸುವುದು ತುಂಬಾ ಮುಖ್ಯ. ತಾಯಿ, ತಂದೆ ಮಕ್ಕಳ ದೇಹವನ್ನು ಮುಟ್ಟಿದಾಗ ಯಾವುದೇ ಸಮಸ್ಯೆ ಯಾಗುವುದಿಲ್ಲ, ಹಾಗೂ ವೈದ್ಯರು ಸಹ ಮುಟ್ಟಿದಾಗ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಈ ರೀತಿಯ ಸುರಕ್ಷಿತ ಸ್ಪರ್ಶದ ಬಗ್ಗೆ ತಿಳಿಸಿರಿ.
ಭಯ ನಿವಾರಿಸಿ.good touch,bad touch, child care tips, ಗುಡ್ ಟಚ್, ಬ್ಯಾಡ್ ಟಚ್. ಮಕ್ಕಳ ಆರೈಕೆ,

ಮಕ್ಕಳನ್ನು ಯಾರಾದರೂ ಮುಟ್ಟಲು ಪ್ರಯತ್ನಿಸಿದರೆ, ದುರುಪಯೋಗ ಪಡಿಸಿಕೊಳ್ಳಲು ಮುಂದಾದರೆ ಅಂತಹವರಿಗೆ ಹೆದರದಂತೆ ತರಬೇತಿ ನೀಡಿ. ಹಾಗೇ ಮಾಡದಂತೆ ಎಚ್ಚರಿಕೆ ನೀಡುವಂತೆ ಪೋಷಕರು ಮಕ್ಕಳಿಗೆ ಹೇಳುವಂತೆ ಟ್ರೈನಿಂಗ್ ನೀಡಬೇಕು. ಇಲ್ಲವೇ ಯಾರಾದರೂ ಮುಟ್ಟಲು ಪ್ರಯತ್ನಿಸಿದಾಗ, ಜೋರಾಗಿ ಕಿರುಚುವುದು, ಶಬ್ದ ಮಾಡುವಂತೆ ತಿಳಿಸಿ. ಇದ್ರಿಂದ ಸುತ್ತ ಮುತ್ತಲಿನ ಜನರು ಕಿರುಚಾಟವನ್ನು ಕೇಳಬಹುದು.

ಅಸುರಕ್ಷಿತ ಸ್ಥಳಗಳ ಬಗ್ಗೆ ಮಾಹಿತಿ ನೀಡಿ

ಅಸುರಕ್ಷಿತ ಸ್ಥಳಗಳಿಂದ ಸಾಧ್ಯವಾದಷ್ಟು ಬೇಗ ಹೊರ ಬರಲು ಮಕ್ಕಳಿಗೆ ತಿಳಿಸಬೇಕಾದದ್ದು ಪೋಷಕರ ಕರ್ತವ್ಯ. ಮಕ್ಕಳು ಅಸುರುಕ್ಷಿತ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ.

ಸರಿ, ತಪ್ಪುಗಳ ಬಗ್ಗೆ ತಿಳುವಳಿಕೆ ನೀಡಿ.

ಮಕ್ಕಳಿಗೆ ಸರಿ ಯಾವುದೂ ತಪ್ಪು ಯಾವುದು ಎಂದು ತಿಳಿದುಕೊಳ್ಳುವುದು ಮುಖ್ಯ. ಯಾವುದೇ ಸಮಸ್ಯೆ ಬಗ್ಗೆ ಅವರಿಗೆ ಅಪರಾಧ ಪ್ರಜ್ಞೆ ಬರಲು ಬಿಡಬೇಡಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ