ಕರೋನ ವೈರಸ್ ಪರಿವರ್ತನೆಯ ಕಡೆಗೆ..!

 • by
corona virus

ಪ್ಲೇಗ್ ,ಸ್ಮಾಲ್ ಪಾಕ್ಸ್ , ಸಾರ್ಸ್ ,ಎಬೋಲ, ಕಾಲರಾ ಮುಂತಾದ ಮಹಾಮಾರಿ ಗಳನ್ನು ಕಂಡ ಜಗತ್ತು ಹೊಸ ವೈರಾಣುವಿನಿಂದ ತಲ್ಲಣಗೊಂಡಿದೆ. ಅದೇ ಕರೋನಾ ವೈರಸ್. ಚೀನಾದ ವುಹಾನ್ ನಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡ ಮಹಾಮಾರಿ ವೈರಾಣು ಈಗ ಪ್ರಪಂಚದಾದ್ಯಂತ ಹರಡಿದೆ. ಲಕ್ಷಾಂತರ ಕಿಲೋಮೀಟರ್ ದೂರದಲ್ಲಿ ಹುಟ್ಟಿದ ವೈರಾಣು ನಮ್ಮ ಮನೆಯ ಬಾಗಿಲಿಗೆ ಬಂದು ನಿಂತಿದೆ. ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದೆ. ಪ್ರಪಂಚದಲ್ಲಿ 2 .38 ಲಕ್ಷ ಜನ ಬಲಿಯಾಗಿದ್ದಾರೆ , 33 .38 ಲಕ್ಷ ಜನ ಸೋಂಕಿತರಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ನಾವೆಲ್ಲರೂ ಧೈರ್ಯಗೆಡದೆ ಒಟ್ಟಾಗಿ ನಿಂತು ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.

corona virus

ಶ್ವಾಸಕೋಶಕ್ಕೆ ಸೋಂಕು

ಸೋಂಕಿತ ವ್ಯಕ್ತಿಗೆ ಮೊದಲು ಸಾಮಾನ್ಯ ಶೀತ ,ಕೆಮ್ಮು, ನೆಗಡಿ ,ಗಂಟಲು ನೋವು,ತಲೆನೋವು ಜ್ವರ ಕಾಣಿಸಿಕೊಂಡು ತೀವ್ರ ರೀತಿಯ ಉಸಿರಾಟದ ತೊಂದರೆ ಉಂಟಾಗುತ್ತದೆ. ಶ್ವಾಸಕೋಶಕ್ಕೆ ಸೋಂಕು ತಗಲುತ್ತದೆ.ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಹಾಗೂ ವಯಸ್ಸಾದವರಿಗೆ ಬೇಗ ಹರಡುತ್ತದೆ ಎಚ್ಚರ ತಪ್ಪಿದರೆ ಪ್ರಾಣಾಪಾಯವನ್ನೂ ತಂದೊಡ್ಡುತ್ತದೆ.

ಕರೋನ ವೈರಸ್ ಅನ್ನು ದೈಹಿಕ ಪರೀಕ್ಷೆ, ರಕ್ತ ಪರೀಕ್ಷೆ ,ಕಫ ಗಂಟಲೆಲ್ಲ ಸ್ವಾಬ್ ನ ಮಾದರಿ ಮತ್ತು ಇತರ ಉಸಿರಾಟದ ಪರೀಕ್ಷೆಯ ಮೂಲಕ ಪತ್ತೆ ಹಚ್ಚಲಾಗುತ್ತದೆ. ಕರೋನಾವೈರಸ್ ಗೆ ಯಾವುದೇ ರೀತಿಯ ಔಷಧಿ ಇಲ್ಲ ಇದನ್ನು ಹರಡದಂತೆ ತಡೆಯುವುದರ ಮೂಲಕ ಇದರಿಂದ ಆಗುವ ಅಪಾಯವನ್ನು ಕಡಿಮೆ ಮಾಡಬಹುದು.

 • ಸೋಫಾ ತುಂಬಾ ಹ್ಯಾಂಡ್ ವಾಶ್ ನಿಂದ ಕೈ ತೊಳೆಯಬೇಕು
 • ಮುಖಮುಖ ಬಾಯಿಯನ್ನು ಮುಟ್ಟಬಾರದು
 • ಅನಾರೋಗ್ಯ ವ್ಯಕ್ತಿಯಿಂದ ದೂರವಿರಬೇಕು
 • ಕೆಮ್ಮು ಸೀನು ಬಂದಾಗ ಕರವಸ್ತ್ರವನ್ನು ಅಡ್ಡ ಹಿಡಿದುಕೊಳ್ಳಬೇಕು
 • ಮುಖಕ್ಕೆ ಮಾಸ್ಕ್ ಧರಿಸಬೇಕು
 • ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು
 • ಸಾಧ್ಯವಾದಷ್ಟು ಬಿಸಿನೀರನ್ನು ಕುಡಿಯಬೇಕು
 • ಉಪ್ಪಿನ ನೀರಿನಿಂದ ಬಾಯಿ ಮತ್ತು ಗಂಟಲನ್ನು ತೊಳೆಯಬೇಕು
 • ಹಾಲಿಗೆ ಅರಿಶಿನ ಹಾಕಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
 • ತುಳಸಿ ಶುಂಠಿ ಅರಿಶಿಣ ಹಾಕಿ ಕುದಿಸಿದ ನೀರು ಕುಡಿಯುವುದರಿಂದ ಶೀತದಂತಹ ಕಾಯಿಲೆಯ


ಸಂಬಂಧಿತ ಲೇಖನ – ಊಟ ಮಾಡಿದ ನಂತರ ಈ ಕೆಲಸಗಳನ್ನು ಮಾಡಬೇಡಿ..!- (Things You Should Never Do After Eating)

ಗುಣಮುಖವಾಗುತ್ತದೆ

ಕರೋನದಿಂದಾಗಿ ಲಾಕ್ ಡೌನ್, ಕ್ವಾರಂಟೈನಿಂದ ಜಗತ್ತಿನ ಆರ್ಥಿಕತೆಗೆ ಸೋಂಕು ತಗಲಿದಂತಾಗಿದೆ. ಷೇರು ಮಾರುಕಟ್ಟೆಯು ಹಿಂದೆಂದು ಕಾಣದ ಹಿನ್ನಡೆ ಕಂಡಿದೆ ಎಷ್ಟೋ ಜನರು ನಿರುದ್ಯೋಗಿಗಳಾಗಿದ್ದಾರೆ. ದಿನಗೂಲಿ ನೌಕರರ ಕಷ್ಟವಂತೂ ಹೇಳತೀರದಂತಾಗಿದೆ. ಪ್ರತಿಯೊಂದು ಉದ್ಯಮ ಕ್ಷೇತ್ರವು ನಷ್ಟದ ಹಾದಯನ್ನು ಹಿಡಿದಿದೆ. ಹೆಚ್ಚಿನ ಜನರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಸೈಬರ್ ಕ್ರೈಮ್ ಹೆಚ್ಚಾಗಿದೆ.ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಸಂಸ್ಥೆಯು ಸೈಬರ್ ಅಪರಾಧಗಳ ಅಂಕಿಅಂಶದ ವರದಿಯನ್ನು ನೀಡಿದೆ. ಆತಂಕದ ವಿಷಯವೆಂದರೆ ಅಪರಾಧವು ನಾಲ್ಕು ಪಟ್ಟು ಹೆಚ್ಚಾಗಿದೆ. ನಕಲಿ ಜಾಲತಾಣವನ್ನು ನಿರ್ಮಿಸಿದ ಜನರನ್ನು ವಂಚಿಸುತ್ತಿದ್ದಾರೆ.

ವಿಧಿಯ ವಿಪರೀತವನ್ನು ತಿಳಿಸುತ್ತಾ
ಶಾಶ್ವತವಲ್ಲದ ಸಮಯವ ಸವೆಸುತ್ತಾ
ಶಾಶ್ವತವಾದ ಪಾಠವನ್ನು ಕಲಿಸುತ್ತಾ
ನಿಲ್ಲದೇ ಓಡುತ್ತಿದೆ ಕಾಲ

Food which build immunity

ನೋವನ್ನು ಮರೆಸುತ್ತೆ
ಗುವನ್ನು ಪಸರಿಸುತ್ತಾ
ಪರಿವರ್ತನೆಯ ಭಾವ ಮೂಡಿಸುತ್ತಾ
ಸರಿಯುತಿದೆ ಕಾಲ

ಇಷ್ಟೆಲ್ಲಾ ಋಣಾತ್ಮಕ ಅಂಶದಲ್ಲೂ ಧನಾತ್ಮಕ ಚಿಂತನೆಯನ್ನು ಮೂಡಿಸಿದೆ.ಮಾರಣಾಂತಿಕ ಪಿಡುಗುಗಳು ಮನುಕುಲದ ಪುನರುತ್ಥಾನಕ್ಕೆ ಹಾಗೂ ಜಗತ್ತಿನ ಮಹತ್ವದ ಬದಲಾವಣೆಗೆ ಕಾರಣವಾಗಿದೆ.ಆಧುನಿಕತೆಯ ಬಡವರ ಜೀವನದಲ್ಲಿ ಮೈಮರೆತ ಮನುಷ್ಯನಿಗೆ ಸರಳ ಜೀವನದ ಪಾಠವನ್ನು ಕಲಿಸುತ್ತಿದೆ, ಕೊಳ್ಳುಬಾಕತನವನ್ನು ಮೊಟಕುಗೊಳಿಸಿದೆ.ಯಾಂತ್ರಿಕ ಬದುಕಿನಲ್ಲಿ ಸದಾ ಕೆಲಸ ,ಪಾರ್ಟಿ, ಪ್ರವಾಸ ಎಂದು ಸುತ್ತುತ್ತಿದ್ದವರು ಇಂದು ಮನೆಯಲ್ಲಿ ತಮ್ಮ ಕುಟುಂಬದವರ ಜೊತೆಯಲ್ಲಿ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಂತಾಗಿದೆ. ಆನ್ಲೈನ್ ಮೂಲಕ ಬರುತ್ತಿದ್ದ ತಿನಿಸುಗಳು ಇಂದು ನಮ್ಮ ಮನೆಯ ಅಡುಗೆ ಮನೆಯಲ್ಲಿ ತಯಾರಾಗುತ್ತಿದೆ. ಪುಸ್ತಕದ ಹುಳುವಾಗಿ ಇದ್ದ ಮಕ್ಕಳು ತಮ್ಮ ಪಠ್ಯತರ ಹವ್ಯಾಸಗಳತ್ತ ಗಮನ ಹರಿಸುತ್ತಿದ್ದಾರೆ.ಇಂದು ಕಲಿತ ಸಂಗೀತ ಚಿತ್ರಕಲೆ ಕಸೂತಿ ಗಳು ಹೊರಬಂದಿವೆ ಪ್ರತಿಮನೆಯಲ್ಲೂ ಒಬ್ಬ ಕಲಾವಿದ ಹುಟ್ಟಿಕೊಂಡಿದ್ದಾನೆ ಹುಟ್ಟಿಕೊಳ್ಳುವಂತೆ ಮಾಡಿದೆ.

ಸಂಬಂಧಿತ ಲೇಖನ – ಚರ್ಮದ ಹೊಳಪು ಹೆಚ್ಚಿಸುವ ಜ್ಯೂಸ್ ಗಳು..!

ಒಮ್ಮೆ ಯೋಚಿಸಿ

ಮಾನಸಿಕ ಖಿನ್ನತೆಗೆ ಒಳಗಾಗಲು ಉತ್ತಮ ಗುಣಮಟ್ಟದ ಸಮಯವನ್ನು ಕುಟುಂಬದೊಂದಿಗೆ ಕಳೆಯಿರಿ.ಸಂತೋಷವನ್ನು ಕೊಳ್ಳಲು ಸಾಧ್ಯವಿಲ್ಲ ಹಂಚಿಕೊಳ್ಳಬೇಕು ಎಂಬ ಪಾಠವನ್ನು ಅರ್ಥ ಮಾಡಿಸಿದೆ. ಮೇಲು ಎಂಬುದೆಲ್ಲ ಕೆಳಗಾಗಿ ಕೀಳು ಎಂಬುದೆಲ್ಲ ಮೇಲಾಗಿ ಪ್ರಕೃತಿಯ ಮುಂದೆ ಶರಣಾಗಿ ಉರುಳುತ್ತಾ ಸಾಗುತ್ತಿದೆ ಕಾಲ ಕರೋನ ವಿರುದ್ಧ ಹೋರಾಟ ಮಾಡಿ ನಮ್ಮನ್ನು ರಕ್ಷಿಸುತ್ತಿರುವ ವಾರಿಯರ್ಸ್ ಆದ ಸ್ವೀಪರ್ಸ್,ನರ್ಸ್ ಡಾಕ್ಟರ್ಸ್ ,ಮುಂತಾದವರಿಗೆ ಕೃತಜ್ಞತೆ ಸಲ್ಲಿಸೋಣ.

ಮನೆಯಲ್ಲೇ ಇರಿ ಸುರಕ್ಷಿತವಾಗಿರಿ!!!!

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ