ಕೆಂಪು ಮೆಣಸಿನಕಾಯಿಯ ಪ್ರಯೋಜನಗಳು..!

  • by

ಭಕ್ಷ್ಯಗಳ ಪರಿಮಳ ಹಾಗೂ ರುಚಿ ಹೆಚ್ಚಿಸಲು ಮಸಾಲೆಯುಕ್ತ ಪದಾರ್ಥಗಳಲ್ಲಿ ಕೆಂಪು ಮೆಣಸಿನಕಾಯಿ ಕೂಡಾ ಒಂದು. ಪಾಕಪದ್ಧತಿಯಲ್ಲಿ ಮೆಣಸಿನಕಾಯಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕೆಂಪು ಮೆಣಸಿನಕಾಯಿ ಔಷಧಿಯಾಗಿ ಬಳಸಲಾಗುತ್ತದೆ ಎಂದು ತಿಳಿದ್ರೆ, ನಿಮಗೆ ಆಶ್ಚರ್ಯವಾಗಬಹುದು. ಕೆಂಪು ಮೆಣಸಿನಕಾಯಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.


 Cayenne Pepper, Health Benefits ,Side Effects , ಕೆಂಪು ಮೆಣಸಿನಕಾಯಿ, ಆರೋಗ್ಯ ಲಾಭಗಳು, ಆರೋಗ್ಯ ಟಿಪ್ಸ್

ಪೋಷಕಾಂಶಗಳ ಆಗರ ಕೆಂಪು ಮೆಣಸಿನಕಾಯಿ!

ಪ್ರಪಂಚದಾದ್ಯಂತ ವಿವಿಧ ರೀತಿಯ ಮೆಣಸಿನಕಾಯಿ ಕಂಡು ಬರುತ್ತದೆ. ಅವುಗಳಲ್ಲಿ ಕೆಂಪು ಮೆಣಸಿನಕಾಯಿ ಕೂಡಾ ಒಂದು. ಮೆಣಸಿನಕಾಯಿ ಸುಮಾರು 10 ರಿಂದ 25 ಸೆ.ಮೀ ಉತ್ತ ಹಾಗೂ ಸಾಮಾನ್ಯವಾಗಿ ತೆಳ್ಳಗಿರುತ್ತದೆ. ಇದು ರುಚಿಯಲ್ಲಿ ಹಾಟ್ ಆಗಿದ್ದರು, ಟೇಸ್ಟಿಯಾಗಿರುತ್ತದೆ. ಕೆಂಪು ಮೆಣಸಿನಕಾಯಿ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ಕೆಂಪು ಮೆಣಸಿನಕಾಯಿಯ ಪ್ರಯೋಜನಗಳು…!

ಚಯಾಪಚ ಕ್ರಿಯೆ ಹೆಚ್ಚಿಸಲು

ಚಯಾಪಚಯ ಕ್ರಿಯೆ ಹೆಚ್ಚಿಸಲು ಕೆಂಪು ಮೆಣಸಿನಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಹಲವರು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂಥವರು ಕೆಂಪು ಮೆಣಸಿನಕಾಯಿ ಸೇವನೆ ಮಾಡುವುದು ಉತ್ತಮ. ಅಲ್ಲದೇ ಕೆಂಪು ಮೆಣಸಿನಕಾಯಿ ರಕ್ತದೋತ್ತಡವನ್ನು ಕಡಿಮೆ ಮಾಡುತ್ತದೆ. ಅಧಿಕ ರಕ್ತದೋತ್ತಡ ತೀವ್ರವಾದಾಗ, ವಿಳಂಬ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು.

ನೋವು ನಿವಾರಕ

ಕೆಂಪು ಮೆಣಸಿನಕಾಯಿ ದವಡೆ ನೋವು, ಬೆನ್ನು ನೋವು , ಹೀಗೆ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ಕೆಂಪು ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಎಂಬ ವಿಶೇಷ ಅಂಶವಿದ್ದು, ಇದನ್ನು ಮನೆ ಮದ್ದಾಗಿ ಬಳಸಲಾಗುತ್ತದೆ.


 Cayenne Pepper, Health Benefits ,Side Effects , ಕೆಂಪು ಮೆಣಸಿನಕಾಯಿ, ಆರೋಗ್ಯ ಲಾಭಗಳು, ಆರೋಗ್ಯ ಟಿಪ್ಸ್

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಕೆಂಪು ಮೆಣಸು ಕ್ಯಾನ್ಸರ್ ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ಬೆಳೆಯಲು ಕಾರಣವಾಗುವ ಕೋಶಗಳನ್ನು ತಡೆಯಲು ಸಹಾಯ ಮಾಡುತ್ತದೆ. ಸಹಜವಾಗಿ ಕೆಂಪು ಮೆಣಸಿನಕಾಯಿ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

ಹೃದಯಕ್ಕೆ ರಕ್ಷಣೆ ನೀಡುತ್ತದೆ.

ಆರೋಗ್ಯಕರ ದೇಹಕ್ಕೆ ಆರೋಗ್ಯಕರ ಹೃದಯ ಕೂಡಾ ಅಷ್ಟೇ ಮುಖ್ಯ. ಹೃದಯವನ್ನು ಆರೋಗ್ಯವಾಗಿಡಲು ಕೆಂಪು ಮೆಣಸಿನಕಾಯಿ ಪ್ರಯೋಜನಕಾರಿಯಾಗಬಲ್ಲದ್ದು.

ಸೋರಿಯಾಸೀಸ್ ನಂತಹ ಸಮಸ್ಯೆ ನಿವಾರಣೆ

ಸೋರಿಯಾಸಿಸ್ ನಂತಹ ಅನೇಕ ಸಮಸ್ಯೆಗಳನ್ನು ಇದು ತಡೆಗಟ್ಟುತ್ತದೆ. ಇದರಲ್ಲಿ ಕೆಂಪು ಮೆಣಸಿನಕಾಯಿ ಸಹಾಯ ಮಾಡುತ್ತದೆ. ಇದಕ್ಕಾಗಿ ಕ್ಯಾಪ್ಸಿಸಿನ್ ಹೊಂದಿರುವ ಕ್ರೀಮ್ ಗಳು ಅಥವಾ ಲೋಷನ್ ಗಳು ಬಳಸಬಹುದು.

ಕೀಲು ನೋವು ನಿವಾರಣೆ

ಕೀಲು ನೋವಿಗೆ ಗಿಡಮೂಲಿಕೆಗಳ ಔಷಧಿಯಾಗಿ ಕೆಂಪು ಮೆಣಸಿನಕಾಯಿಯನ್ನು ಸೇರಿಸಬಹುದು. ಅಸ್ಥಿಸಂಧಿವಾತದಿಂದ ಕೀಲು ನೋವು ಸಂಭವಿಸಬಹುದು. ಸಣ್ಣ ಪುಟ್ಟ ಗಾಯಗಳು ಮೂಳೆ ಮುರಿತಗಳಿಗೆ ಕಾರಣವಾಗಬಹುದು.

ಕೆಂಪು ಮೆಣಸಿನಕಾಯಿ ಪೌಷ್ಟಿಕಾಂಶದ ಮೌಲ್ಯ..?

1 ಟೀ ಚಮಚ ಕೆಂಪುಮೆಣಸಿನಕಾಯಿಯಲ್ಲಿರುವ ಪೌಷ್ಟಿಕಾಂಶ
ನೀರು 0.145 ಗ್ರಾಂ
ಎನರ್ಜಿ- 5.72 ಕೆ.ಸಿ.ಎಲ್
ಪ್ರೋಟೀನ್ – 0.216 ಗ್ರಾಂ
ಕೊಬ್ಬು – 0.311 ಗ್ರಾಂ
ಕಾರ್ಬೋಹೈಡ್ರೇಟ್ – 1.86 ಗ್ರಾಂ
ಫೈಬರ್ – 0.49 ಗ್ರಾಂ
ಸಕ್ಕರೆ – 0.186 ಗ್ರಾಂ
ಕ್ಯಾಲ್ಸಿಯಂ – ಸಿಎ 2.66 ಗ್ರಾಂ
ಕಬ್ಬಿಣ – 0.14 ಮಿ.ಗ್ರಾಂ
ರಂಜಕ – 5.27 ಮಿ.ಗ್ರಾಂ
ಪೊಟ್ಯಾಶಿಯಂ – 36 .3 ಗ್ರಾಂ
ಸೋಡಿಯಂ – 0.54 ಮಿ.ಗ್ರಾಂ
ಸತು – 0.045 ಮಿ.ಗ್ರಾಂ
ವಿಟಮಿನ್ ಸಿ – 1.38 ಮಿ.ಗ್ರಾಂ
ಥಯಾಮಿನ್ – 0.017 ಮಿ.ಗ್ರಾಂ
ನಿಯಾಸಿನ್ – 0.157 ಮಿ.ಗ್ರಾಂ
ವಿಟಮಿನ್ ಬಿ6- 0.044 ಮಿ.ಗ್ರಾಂ
ಫೋಲೇಟ್ – 1.91 ಗ್ರಾಂ
ವಿಟಮಿನ್ ಎ- 37.5 ಗ್ರಾಂ
ಕೊಬ್ಬಿನಾಮ್ಲ – 0.059 ಗ್ರಾಂ

 Cayenne Pepper, Health Benefits ,Side Effects , ಕೆಂಪು ಮೆಣಸಿನಕಾಯಿ, ಆರೋಗ್ಯ ಲಾಭಗಳು, ಆರೋಗ್ಯ ಟಿಪ್ಸ್

ಕೆಂಪು ಮೆಣಸಿನಕಾಯಿ ಹೇಗೆ ಬಳಸಬೇಕು?

ತರಕಾರಿಗಳಲ್ಲಿ ಸಲಾಡ್, ಪಲ್ಯಾ, ಅನೇಕ ಭಕ್ಷ್ಯಗಳಲ್ಲಿ ಕೆಂಪು ಮೆಣಸಿನಕಾಯಿಯನ್ನು ಬಳಸಬಹುದು. ಇದನ್ನು ವಿನೆಗರ್ ಜತೆಗೆ ಬೆರೆಸಬಹುದು. ವಿವಿಧ ರೀತಿಯ ಉಪ್ಪಿನಕಾಯಿ ತಯಾರಿಸಲು ಬಳಸಬಹುದು

ಯಾವಾಗ ಸೇವಿಸಬೇಕು?

ರುಚಿಗೆ ಅನುಗುಣವಾಗಿ ಆಹಾರದಲ್ಲಿ ಬಳಸಬಹುದು. ಮಧ್ಯಾಹ್ನ ಅಥವಾ ಸಂಜೆ ಸಮಯದಲ್ಲಿ ಸಲಾಡ್ ತಿನ್ನುವಾಗ ನೀವು ಸ್ವಲ್ಪ ಕೆಂಪು ಮೆಣಸಿನಕಾಯಿ ಸೇರಿಸಬಹುದು.

ಎಷ್ಟು ತಿನ್ನಬೇಕು…?

ಅತಿಯಾದ ಸೇವನೆಯೂ ಬೇಡ. ನಿಮ್ಮಗೆ ಅಗತ್ಯವಿದ್ದಷ್ಟು ಇದನ್ನು ಬಳಸಬಹುದು. ಅತಿಯಾದ ಸೇವನೆಯಿಂದ ಅಡ್ಡಪರಿಣಾಮಗಳು ಆಗುವ ಸಾಧ್ಯತೆ ಗಳುಂಟು.

ಕೆಂಪು ಮೆಣಸಿನಕಾಯಿಯ ಸೈಡ್ ಎಫೆಕ್ಟ್..!

ಕೆಂಪು ಮೆಣಸಿನಕಾಯಿ ಹೆಚ್ಚಾಗಿ ಸೇವಿಸುವುದು ಹೊಟ್ಟೆ ಉಬ್ಬರ, ಅತಿಸಾರ ಹಾಗೂ ಕಿರಿಕಿರಿಯನ್ನುಂಟು ಮಾಡಬಹುದು.
ಇದರ ಬಳಕೆ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದನ್ನು ಬಳಸುವುದರಿಂದ ಕೆಲಮೊಮ್ಮೆ ಅಲರ್ಜಿಯಾಗಬಹುದು.

ಆದ್ರೆ ಕೆಂಪುಮೆಣಸಿನಕಾಯಿ ಸೇವಿಸುವುದರಿಂದ ಅನೇಕ ದೈಹಿಕ ಸಮಸ್ಯೆಗಳನ್ನು ನಿವಾರಿಸಬಹುದು. ಬಳಸುವಾಗ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಸಮಯಕ್ಕೆ ತಕ್ಕಂತೆ ನಿಮ್ಮ ಅಭ್ಯಾಸವನ್ನು ಬದಲಾಯಿಸಿಕೊಳ್ಳಬೇಕು. ಯಾರಾದರೂ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರೆ ಹೆಚ್ಚು ಮೆಣಸಿನಕಾಯಿ ಸೇವಿಸಬಾರದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ