ಕಾಯಿಲೆಗಳಿಂದ ದೂರವಿಡುತ್ತೆ ಹೆಲ್ತಿ ಕ್ಯಾರೆಟ್ ಖೀರ್!

  • by

ಚಳಿಗಾಲದ ಸೀಸನ್ ನಲ್ಲಿ ತರಕಾರಿಗಳನ್ನು ಸವಿದರೆ ಉತ್ತಮ ಎನ್ನಲಾಗುತ್ತದೆ. ತರಕಾರಿಗಳಲ್ಲಿ ಕ್ಯಾರೆಟ್ ಕೂಡಾ ಒಂದು. ಗಜರಿಯನ್ನು ನೀವು ಯಾವುದೇ ರೀತಿಯಲ್ಲಾದರೂ ಸಿಹಿತಿಂಡಿಯನ್ನಾಗಿ ತಯಾರಿಸಬಹುದು. ಸಲಾಡ್, ಜ್ಯೂಸ್, ಪಲ್ಯಾ, ವಿವಿಧ ಬಗೆಯ ಆಹಾರದಲ್ಲಿ ಕ್ಯಾರೆಟ್ ಅನ್ನು ಬಳಸಬಹುದು. 

ಕ್ಯಾರೇಟ್ ನಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು, ಕ್ಯಾರೋಟಿನಾಯ್ಡ್ ಗಳು , ಪೊಟ್ಯಾಶಿಯಂ , ವಿಟಮಿನ್ ಎ ಮತ್ತು ವಿಟಮಿನ್ ಇ ಗಳಿವೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಕ್ಯಾರೆಟ್ ಅನ್ನು ಇಷ್ಟಪಡದೇ ಯಾರು ಇರುವುದಿಲ್ಲ. ಅದರಲ್ಲೂ ಕ್ಯಾರೇಟ್ ಹಲ್ವಾ ಹಾಗೂ ಕ್ಯಾರೇಟ್ ಪಾಯಸ ಎಂದರೆ ಎಲ್ಲರಿಗೂ ಇಷ್ಟವಾಗುವ ತಿನಿಸಾಗಿದೆ ಎಂದರೆ ತಪ್ಪಾಗಲ್ಲ. 

ಕ್ಯಾರೆಟ್ ಖೀರ್,  ಪಾಯಸ, ಪ್ರಯೋಜನಗಳು, Gajar Kheer, Benefits

ಕ್ಯಾರೇಟ್ ಖೀರ ತಯಾರಿಸಲು ಬೇಕಾದ ಪದಾರ್ಥ

ಕ್ಯಾರೇಟ್ – 1/2 KG (ತುರಿದ)

ತುಪ್ಪ-1 ಚಮಚಾ

ಸಕ್ಕರೆ- 1 ಚಮಚಾ

ಒಣದ್ರಾಕ್ಷಿ- 10 ಗ್ರಾಂ

ಗೋಡಂಬಿ –  1/4 ಕಪ್ (ಸಣ್ಣಗೆ ಕತ್ತರಿಸಿ)

ಬಾದಾಮಿ- 1/4 ಕಪ್ (ಸಣ್ಣಗೆ ಕತ್ತರಿಸಿ)

ಹಸಿರು ಏಲಕ್ಕಿ – 2 

ಬಾದಾಮಿ – ಅಲಂಕಿರಸಲು 

ಪಿಸ್ತಾ – ಅಲಂಕರಿಸಲು

ಗೋಡಂಬಿ – ಅಲಂಕರಿಸಲು

ತಯಾರಿಸುವ ವಿಧಾನ

ಮೊದಲು ಕ್ಯಾರೆಟ್ ಅನ್ನು ತೊಳೆದು ಸಿಪ್ಪೆ ತೆಗೆದು ತುರಿ ಮಾಡಿ. ನಂತರ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ನಂತರ ಗೋಡಂಬಿಯನ್ನು ಸೇರಿಸಿ 2-3 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಗೋಡಂಬಿ ಹೋಂಬಣ್ಣ ಬಂದ ಮೇಲೆ 1 ಬೌಲ್ ಗೆ ಹಾಕಿ. ಅದೇ ಬಾಣಲೆಯಲ್ಲಿ ತುರಿದುಕೊಂಡ ಕ್ಯಾರೆಟ್ ಹಾಕಿ 2-3 ನಿಮಿಷಗಳ ಕಾಲ ಹುರಿಯಿರಿ. ಬಳಿಕ ಹಾಲನ್ನು ಸೇರಿಸಿ 8 -10 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಗಜರಿ ಚೆನ್ನಾಗಿ ಬೆಂದ ಬಳಿಕ ದಪ್ಪ ಸ್ಥಿರತೆ ಪಡೆದ ಬಳಿಕ , ಸಕ್ಕರೆ ಮಿಕ್ಸ್ ಮಾಡಿ, ಸಕ್ಕರೆ ಕರಗುವ ತನಕ ಖೀರಗೆ ಕೈಯಾಡಿಸುತ್ತಲೇ ಇರಬೇಕು.

ಹುರಿದಕೊಂಡ ಗೋಡಂಬಿ , ಒಣ ದ್ರಾಕ್ಷಿ, ಏಲಕ್ಕಿಯನ್ನು ಸೇರಿಸಿ, ಚೆನ್ನಾಗಿ ಕುದಿಸಿ, ಈ ಮಿಶ್ರಣವನ್ನ ಚೆನ್ನಾಗಿ ಬೆಂದ ಬಳಿಕ ಉರಿಯನ್ನು ಆರಿಸಿ.

ಧಿಡೀರ್ ಆಗಿ ಮನೆಗೆ ಅತಿಥಿಗಳು ಬಂದಾಗ ಏನು ಸಿಹಿ ಮಾಡ್ಬೇಕು ಗೊತ್ತಾಗಲ್ಲ. ಅಂತಹ ಸಮಯದಲ್ಲಿ ಗಜರಿಯಿಂದ ತಯಾರಿಸಿದ ಬಿಸಿ ಬಿಸಿ ಪಾಯಸ ಅಥವಾ ಗಜರಿ ಖೀರ ತಯಾರಿಸಬಹುದು. ಗಜರಿಯಿಂತ ತಯಾರಿಸಲ್ಪಟ್ಟ ಪಾಯಸ ಅತ್ಯಂತ ರುಚಿಕರವಾಗಿದ್ದು, ಒಮ್ಮೆ ಸವಿದರೆ ನಾಲಿಗೆ ಮತ್ತೆ ಮತ್ತೆ ತಿನ್ನಲು ಬಯಸುತ್ತದೆ. 

ಕ್ಯಾರೆಟ್ ಲಾಭಗಳು

ದಿನವು ಸೇಬು ಹಣ್ಣಿಗಿಂತ ಕ್ಯಾರೆಟ್ ತಿನ್ನಬೇಕು. ಎಂದು ಹೇಳಲಾಗುತ್ತದೆ. ಕ್ಯಾರೆಟ್ ನಲ್ಲಿ ಬೀಟಾ ಕ್ಯಾರೊಟಿನ್ ಅಂಶ ಗಂಡಸರ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಚಳಿಗಾಲದಲ್ಲಿ ಈ ತರಕಾರಿಯನ್ನು ವಾರಕ್ಕೆ ಒಮ್ಮೆಯಾದರೂ ತಿನ್ನಬೇಕು. ಇದು ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮತ್ತು ರೋಗಗಳಿಂದ ದೂರವಿಡುತ್ತದೆ.

ಕ್ಯಾರೆಟ್ ಖೀರ್,  ಪಾಯಸ, ಪ್ರಯೋಜನಗಳು, Gajar Kheer, Benefits

1. ಕ್ಯಾರೆಟ್ ಅನ್ನು ಹಸಿಯಾಗಿ ಸೇವಿಸಿದರೆ ಕಣ್ಣಿಗೆ ಉತ್ತಮ

2. ಕ್ಯಾರೇಟ್ ಅನ್ನು ಅರೆದು ಹಾಲಲ್ಲಿ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ. 

3 ಕ್ಯಾರೆಟ್ ನ್ನು ತುರಿದ ಹಾಲು, ಸಕ್ಕರೆ ಬೆರೆಸಿ ಕುದಿಸಿ ಪಾಯಸದಂತೆ ಸೇವಿಸಿದರೆ ದೇಹಕ್ಕೆ ತಂಪು ಹಾಗೂ ಶಕ್ತಿ ಬರುತ್ತದೆ. 

4. ಕೊಲೆಸ್ಟ್ರಾಲ್ ಮಟ್ಟವನ್ನು ಕ್ಯಾರೆಟ್ ಕಡಿಮೆಗೊಳಿಸುತ್ತದೆ. ಪ್ರತಿ ರಾತ್ರಿ ಊಟದ ನಂತರ ಕ್ಯಾರೆಟ್ ಜ್ಯೂಸ್ ಕುಡಿಯುವುದು ಒಳ್ಳೆಯದು. 

5. ಹೃದಯದ ಆರೋಗ್ಯವನ್ನು ಕ್ಯಾರೆಟ್ ಕಾಪಾಡುತ್ತದೆ. 

6 ಎಲ್ಲಾ ರೀತಿಯ ದಂತ ಸಮಸ್ಯೆಗಳಿಗೆ ಕ್ಯಾರೆಟ್ ಒಳ್ಳೆಯದು. ವಸಡಿನ ಎಲ್ಲಾ ಸಮಸ್ಯೆಗಳಿಗೆ ಕ್ಯಾರೆಟ್ ಗುಣಪಡಿಸುತ್ತದೆ. ಹಾಗೂ ದುರ್ವಾಸನೆಯನ್ನು ತಡೆಗಟ್ಟುತ್ತದೆ

7. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಬಹಳ ಬೇಗ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಕ್ಯಾರೆಟ್ ಗಳ ಸೇವನೆಯಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹಚ್ಚಾಗುತ್ತದೆ. ಕ್ಯಾರೆಟ್ ನ ಒಂದು ಸಣ್ಣ ಚೂರು ಎಂಥಾ ಪರಿಣಾಮ ಬೀರಬಲ್ಲದ್ದು, 

ಕ್ಯಾರೆಟ್ ಖೀರ್,  ಪಾಯಸ, ಪ್ರಯೋಜನಗಳು, Gajar Kheer, Benefits

ಗಮನಿಸಿ- ಮಧುಮೇಹ ಉಳ್ಳವರು ಕ್ಯಾರೆಟ್ ಬಳಸದಿರುವುದೇ ಉತ್ತಮ

ಅನೇಕ ಹೃದಯದ ಕಾಯಿಲೆಯನ್ನು ಇದು ತಡೆಗಟ್ಟುತ್ತದೆ. ರಕ್ತದೋತ್ತಡವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಅಪಾಯವನ್ನು ಸಹ ತಡೆಯುತ್ತದೆ. ದೃಷ್ಠಿ ಸುಧಾರಿಸುತ್ತದೆ ಬಾಯಿಯ ತೊಂದರೆಗಳನ್ನು ಪರಿಹರಿಸುತ್ತದೆ. ಪಾರ್ಶ್ವವಾಯು ಅಪಾಯವನ್ನು ಶೇಕಜಾ 68 ರಷ್ಟು ಕಡಿಮೆ ಮಾಡುತ್ತದೆ. 

ಕ್ಯಾರೆಟ್ ನಲ್ಲಿ ಪೌಷ್ಟಿಕಾಂಶ ಎಷ್ಟಿರುತ್ತೆ?

ಕ್ಯಾರೆಟ್ ನಲ್ಲಿ ನೀರಿನ ಅಂಶ ಶೇ 86-95 ರಷ್ಟಿದೆ. ಕ್ಯಾರೆಟ್ ನಲ್ಲಿ ಬಹಳ ಕಡಿಮೆ ಕೊಬ್ಬು ಮತ್ತು ಪ್ರೋಟೀನ್ ಇರುತ್ತದೆ. 100 ಗ್ರಾಂ ಕಚ್ಚಾ ಕ್ಯಾರೆಟ್ ನಲ್ಲಿ ಪೌಷ್ಟಿಕಾಂಶ ಹೀಗಿರುತ್ತದೆ. 

ಕ್ಯಾಲೋರಿ- 21 

ನೀರಿನಾಂಶ – ಶೇ 88

ಪ್ರೋಟೀನ್ – 0.9 ಗ್ರಾಂ

ಕರ್ಬ್ಸ್ – 9.6 ಗ್ರಾಂ 

ಶುಗರ್ – 4.7 ಗ್ರಾಂ

ಫೈಬರ್ – 2.8 ಗ್ರಾಂ

ಫ್ಯಾಟ್ – 0.2 ಗ್ರಾಂ, ಅರ್ಧ ಕಪ್ ಕ್ಯಾರೆಟ್ ನಲ್ಲಿ 25 ಕ್ಯಾಲೋರಿ, 6 ಗ್ರಾಂ ಕಾರ್ಬೋಹೈಡ್ರೇಟ್, 3 ಗ್ರಾಂ ಸಕ್ಕರೆ, 1 ಗ್ರಾಂ ಪ್ರೋಟಿನ್ ದೊರೆಯುತ್ತದೆ. ಕ್ಯಾರೆಟ್ ನಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ , ಕಬ್ಬಿಣಾಂಶ ನಾರಿನಾಂಶ , ಪೊಟ್ಯಾಶಿಯಂ , ಮೆಗ್ನೇಶಿಯಂ, ಪೊಟಾಶಿಯಂ , ಫೋಲೆಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಸತು ಇರುತ್ತದೆ. ಸಾಮಾನ್ಯಾವಗಿ ಕೇಸರಿ ಬಣ್ಣದಲ್ಲಿ ಮಾತ್ರವಲ್ಲ. ಹಳದಿ, ಬಿಳಿ, ಕೆಂಪು ಮತ್ತು ನೇರಳೆ ಬಣ್ಣದ ಗಜರಿಗಳು ಇವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ