ಒದ್ದೆ ಕೂದಲಿನ ಆರೈಕೆ ಹೇಗಿರಬೇಕು..? ಟಿಪ್ಸ್ ಇಲ್ಲಿದೆ!

  • by

ಪ್ರತಿಯೊಬ್ಬರು ಮಳೆಯಲ್ಲಿ ನೆನೆಯಲು ಇಷ್ಟಪಡುತ್ತಾರೆ., ತಂಪಾದ ಮಳೆ ಬೀಳುವಿಕೆಯು ಮಧ್ಯೆ ಓಡಾಡುವುದು ಖುಷಿ ಪಡುವುದು ಎಲ್ಲರಿಗೂ ಇಷ್ಟ.. ಇದ್ರಿಂದ ಎಲ್ಲಾ ಒತ್ತಡಗಳು ದೂರವಾಗುತ್ತದೆ. ಆದರೆ ಮಳೆಯಲ್ಲಿ ನೆನೆದುಕೊಂಡಾಗ, ಕೂದಲು ಒದ್ದೆಯಾಗುತ್ತದೆ. ಆಗ ಕೂದಲಿನ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ವಾಸ್ತವವಾಗಿ ತಲೆ ತೊಳೆದು ಕೊಂಡಾಗ, ಅಥವಾ ಮಳೆಯಲ್ಲಿ ನೆನೆದಾಗ ಕೂದಲು ಒದ್ದೆಯಾಗುತ್ತದೆ. ಇದ್ರಿಂದ ಕೂದಲು ದುರ್ಬಲಗೊಳ್ಳಬಹುದು, ತೇವವಾದ ಕೂದಲನ್ನು ಹೇಗೆ ರಕ್ಷಿಸಬೇಕು… ಹೇಗೆ ವಿಶೇಷ ಕಾಳಜಿ ವಹಿಸಬೇಕು ಸುಲಭವಾದ ವಿಧಾನಗಳು ಇಲ್ಲಿವೆ. 


Care tips, Wet Hair, 
ಒದ್ದೆ ಕೂದಲಿನ, ಆರೈಕೆ ,

ಒದ್ದೆಯಾದ ಕೂದಲನ್ನು ಹೇಗೆ ಸ್ವಚ್ಛಗೊಳಿಸುವುದು..? 

ಅನೇಕ ಬಾರಿ ಮಳೆಯಲ್ಲಿ ಒದ್ದೆಯಾದ ಕೂದಲಲ್ಲಿ ಹೆಚ್ಚಾಗಿ ಧೂಳು ಹೋಗಿರುತ್ತದೆ. ಕೂದಲನ್ನು ಬಾಚಣಿಕೆ ಮಾಡಿದ್ರೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಆಗ ಶುದ್ಧವಾದ ನೀರಿನಿಂದ ಮುಖ ತೊಳೆಯಿರಿ. ಇದರ ನಂತರ, ಕೂದಲನ್ನು ಸ್ವಚ್ಛ ಗೊಳಿಸಲು ನೈಸರ್ಗಿಕ ಶಾಂಪು ಉಪಯೋಗಿಸಿ. ಶಾಂಪು ಬಳಸುವಾಗ ಮೊದಲು ಶಾಂಪುವನ್ನು ಕೂದಲಿನ ಮೇಲೆ ಕೈಗಳಿಂದ ಉಜ್ಜಿಕೊಳ್ಳಿ. ಇದರೊಂದಿಗೆ ಕೂದಲಿನ ಎಲ್ಲಾ ಕೊಳೆಯನ್ನು ಕ್ರಮೇಣ ಸ್ವಚ್ಛಗೊಳಿಸಲಾಗುತ್ತದೆ. ಇದರ ನಂತರ ಕೂದಲನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ. ಕೂದಲನ್ನು ಶುದ್ಧೀಕರಿಸಿದ ನಂತರ, ಅವುಗಳನ್ನು ಒಳಗಿನಿಂದ ಪೋಷಿಸಲು ಕಂಡೀಷನರ್ ಅನ್ನು ಹಚ್ಚಿಕೊಳ್ಳಬಹುದು. ಇದು ಕೂದಲನ್ನು ಮೃದುವಾಗಿ ಮತ್ತು ರೇಷ್ಮೆಯಂತೆ ಮಾಡುತ್ತದೆ.. ಮತ್ತು ಕೂದಲು ಬಿರುಕು ಆಗುವ ಭಯವಿರುವುದಿಲ್ಲ. ಕಂಡೀಷನರ್ ಹಚ್ಚಿದ ನಂತರ ಅದನ್ನು ಕನಿಷ್ಠ ಮೂರು ನಿಮಿಷಗಳ ಕಾಲ ಬಿಡಿ. ಇದು ಕೂದಲನ್ನು ಚೆನ್ನಾಗಿ ನೆನೆಯಲು ಸಹಾಯ ಮಾಡುತ್ತದೆ. ನಂತರ ಹಚ್ಚಿಕೊಂಡಿರುವ ಕಂಡೀಷನರ್ ಅನ್ನು ತೊಳೆದುಕೊಳ್ಳಬಹುದು. 

ಒದ್ದೆಯಾದ ಕೂದಲನ್ನು ಟವೆಲ್ ನಿಂದ ಒರೆಸಿಕೊಳ್ಳಬೇಡಿ..!

ಒದ್ದೆಯಾದ ಕೂದಲನ್ನು ತುಂಬಾ ಜೋರಾಗಿ ತಿಕ್ಕಿ ಒರೆಸಿಕೊಳ್ಳುವುದರಿಂದ ಕೂದಲು ಉದರುತ್ತದೆ. ಇದ್ರಿಂದ ಹೆಚ್ಚು ಬಿರುಕು ಮೂಡಬಹುದು. ಅನೇಕ ಮಹಿಳೆಯರು ಒದ್ದೆಯಾದ ಕೂದಲನ್ನು ತಕ್ಷಣದಲ್ಲಿ ಒಣಗಿಸಲು ಪ್ರಾರಂಭಿಸುತ್ತಾರೆ. ಇದ್ರಿಂದ ಕೂದಲು ಉದುರುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಟಾವೆಲ್ ನಿಂದ ಕೂದಲನ್ನು ನಿಧಾನವಾಗಿ ಒರೆಸಿಕೊಳ್ಳಬಹುದು. 

ಕೂದಲನ್ನು ನೈಸರ್ಗಿಕವಾಗಿ ಒಣಗಲು ಬಿಡಿ.!

ಮನೆಯಲ್ಲಿರುವ ಗೃಹಿಣಿಯರು, ಆಫೀಸ್ ಗೆ ಹೋಗುವ ಮಹಿಳೆಯರು ಹೆಚ್ಚಾಗಿ ಹೇರ್ ಡ್ರೈಯರ್ ಅನ್ನು ಉಪಯೋಗಿಸುತ್ತಾರೆ. ಇದರಿಂದ ಕೂದಲಿನ ನೈಸರ್ಗಿಕ ಪೋಷಣೆಯನ್ನು ಕಳೆದು ಕೊಳ್ಳಬಹುದು. ಇನ್ನು ಬಿಸಿಲಿನಲ್ಲಿ , ಫ್ಯಾನ್ ಗಾಳಿಯಲ್ಲಿ ಕೂದಲನ್ನು ಒಣಗಿಸಿಕೊಳ್ಳುವುದರಿಂದ ಕೂದಲಿನ ಅನೇಕ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಕೂದಲನ್ನು ನೈಸರ್ಗಿಕ ರೀತಿಯಲ್ಲೇ ಒಣಗಲು ಬಿಡುವುದು ಉತ್ತಮ.  ಬಿಸಿ ಗಾಳಿಯಲ್ಲಿ ಒಣಗಲುಬಿಡಿ ಬಿಸಿ ಗಾಳಿ ನೇರವಾಗಿ ತಲೆಗೆ ತಾಗುವುದರಿಂದ ಕೂದಲಿನ ಬುಡ ಶುಷ್ಕವಾಗಿ ತಲೆಹೊಟ್ಟು ಪ್ರಾರಂಭವಾಗುತ್ತದೆ. 

ಟವೆಲ್ ಕಟ್ಟಬೇಡಿ..!

ಒದ್ದೆ ಕೂದಲಿಗೆ ತುಂಬಾ ಹೊತ್ತು ಟವೆಲ್ ಕಟ್ಟಬೇಡಿ. ಕೂದಲು ಸಹಜವಾಗಿ ಒಣಗುವುದಕ್ಕೆ ಬಿಡಬೇಕು. ಇದರಿಂದ ತೇವಾಂಶವನ್ನು ಹೀರಿಕೊಂಡು ಒಣಗುತ್ತದೆ. 

ಕೂದಲನ್ನು ಮಸಾಜ್ ಮಾಡುವುದು ಹೇಗೆ.. ? 

ಕೂದಲನ್ನು ಪೋಷಿಸಲು ಬಿಸಿ ಎಣ್ಣೆಯಿಂದ ಮಸಾಜ್ ಮಾಡಿದರೆ ತುಂಬಾ ಒಳ್ಳೆಯದು. ಸಾಸಿವೆ ಮತ್ತು ತೆಂಗಿನ ಎಣ್ಣೆಗಳು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಹಾಗಾಗಿ ಕೂದಲಿನ ಬುಡ ಸೇರಿದಂತೆ ಎಲ್ಲಾ ಕಡೆ ಎಣ್ಣೆಯಿಂದ ಮಸಾಜ್ ಮಾಡಬೇಕು. ಇದ್ರಿಂದ ಎಣ್ಣೆಯಲ್ಲಿ ಕೂದಲು ಚೆನ್ನಾಗಿ ನೆನೆಯುತ್ತದೆ. ಕೂದಲಿಗೆ ಎಣ್ಣೆ ಹಚ್ಚಿಕೊಂಡ ಮೇಲೆ ೨ ಗಂಟೆಗಳವರೆಗೂ ಬೀಡಬೇಕು. ಇಲ್ಲದಿದ್ದರೆ ಇಡೀ ದಿನ ಕೂದಲನ್ನು ಹಾಗೆಯೇ ಇರಿಸಿಕೊಳ್ಳಬಹುದು. ಮರುದಿನ ಶಾಂಪು ಬಳಸಿ ತಲೆ ಸ್ನಾನ ಮಾಡಬಹುದು. 


Care tips, Wet Hair, 
ಒದ್ದೆ ಕೂದಲಿನ, ಆರೈಕೆ ,

ಇನ್ನು ಒದ್ದೆ ಕೂದಲನ್ನು ಬಾಚಣಿಕೆ ಮಾಡುವುದು ಒಳ್ಳೆಯದಲ್ಲ. ಹೆಚ್ಚಾಗಿ ಜನರು ಒದ್ದೆ ಕೂದಲನ್ನೇ ಬಾಚಣಿಕೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಅಪಾಯ ಹೆಚ್ಚಾಗಬಹುದು. ಹಾಗಾಗಿ ಜಾಗರೂಕರಾಗಿರಿ. ಏಕೆಂದರೆ ಬಾಚಣಿಗೆ ಕೂದಲು ಒಣಗಿದ ನಂತರವೇ ಮಾಡಬೇಕು. 

ಹೇರ್ ಡ್ರೈಯರ್ ಹೆಚ್ಚಾಗಿ ಬಳಸಬೇಡಿ.. 

ಹಲವು ಜನರು ಹೆಚ್ಚು ಹೇರ್ ಡ್ರೈಯರ್ ಗಳನ್ನು ಬಳಸುವುದುಂಟು. ಇದನ್ನು ಮಾಡಬೇಡಿ. ಹೇರ್ ಡ್ರೈಯರ್ ನಲ್ಲಿರುವ ಉಷ್ಣತೆಯಿಂದ ಕೂದಲು ಉದರಬಹುದು. ಮತ್ತು ಕೂದಲು ದುರ್ಬಲಗೊಳ್ಳುತ್ತದೆ. 

ತಲೆ ಸ್ನಾನಕ್ಕೂ ಮುನ್ನ….! 

ತಲೆ ಸ್ನಾನಕ್ಕೂ ಮುನ್ನ ಕೂದಲನ್ನು ಬಾಚಿಕೊಳ್ಳಿ. ಇದು ಕೂದಲಿಗೆ ಹೆಚ್ಚು ಉಪಯುಕ್ತವಾದದ್ದು. ಕೂದಲು ತೊಳೆಯಲು ತಣ್ಣೀರು ಹಾಗೂ ಹೆಚ್ಚು ಬಿಸಿ ಇರುವ ನೀರನ್ನು ಬಳಕೆ ಮಾಡಬೇಡಿ. ಕೂದಲನ್ನು ಎಣ್ಣೆಯಿಂದ ಮಸಾಜ್ ಮಾಡಿದ ನಂತರ, ಕೂದಲನ್ನು ಬಿಟ್ಟು ಮರುದಿನ ತಲೆ ಸ್ನಾನ ಮಾಡಬಹುದು. ಅಲ್ಲದೇ ತಲೆಹೊಟ್ಟು ನಿವಾರಣೆಗೆ ನಿಂಬೆ ರಸ ಹಾಗೂ ಆಮ್ಲ ರಸ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಬಹುದು. ನಂತರ ತಲೆ ಸ್ನಾನ ಮಾಡಬಹುದು. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ