ಮಧುಮಗಳ ಅಲಂಕಾರಕ್ಕೆ ಮೆರಗು ಹೆಚ್ಚಿಸುವ ಕೆಂಪು ಸೀರೆ

  • by

ಈಗೆಲ್ಲಾ ಬಣ್ಣಗಳ ಪರಿಕಲ್ಪನೆ ಬದಲಾಗಿದೆ. ಮದುಮಗಳ ಉಡುಪಿನ ವಿನ್ಯಾಸ ಕೂಡಾ ಬದಲಾಗಿದೆ. ವಿವಿಧ ರೀತಿಯ ಉಡುಪುಗಳು ಗಮನ ಸೆಳೆಯುತ್ತಿವೆ.. ಕೆಂಪು ಬಣ್ಣದ ಸೀರೆ ಇಂದಿನ ಆಧುನಿಕ ಮದು ಮಗಳ ಟ್ರೆಂಡ್ ಆಗಿ ಬಿಟ್ಟಿದೆ. ಈಗಂತೂ ಕೆಂಪು ಹಾಗೂ ಗುಲಾಬಿ ಬಣ್ಣದ ಸೀರೆಗಳದ್ದೇ ಸದ್ದು. ಈ ಬಣ್ಣಗಳು ಮದುಮಗಳ ವಸ್ತ್ರ ವಿನ್ಯಾಸದಲ್ಲಿ ಬೇಡಿಕೆಯಲ್ಲಿವೆ.  ಕೆಲವು ದಿನಗಳ ಹಿಂದೆ ಮದುಮಗಳು ಇದೇ ಬಣ್ಣದ ಸೀರೆ ಎಂಬ ನಿಯಮ ಕಡ್ಡಾಯವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಮದು ಮಗಳು ಅವರವರ ಆಸೆಗಳಿಗೆ ತಕ್ಕಂತೆ ಸೀರೆ ಆಯ್ಕೆ ಮಾಡಿ, ಸಂಭ್ರಮಿಸುತ್ತಾಳೆ. 

ಉಡಲು ಕಂಫರ್ಟ್ ಟೇಬಲ್ ಫೀಲ್ ನೀಡುವ ವಿಭಿನ್ನ ಸೀರೆಯನ್ನು ಖರೀದಿಸುವ ಮದುಮಗಳು ಅದಕ್ಕೆ ತಕ್ಕಂತೆ ಗ್ರ್ಯಾಂಡ್ ಬ್ಲೌಸ್ ಡಿಸೈನ್ ಮಾಡಿಸುತ್ತಾಳೆ. ರೇಷ್ಮೇ, ಫ್ಯೂರ್ ಸಿಲ್ಕ್, ಸಿಂಧೇರಿ, ಬನಾರಸ್, ಕಾಂಜಿವರಂ ಸೀರೆಗಳಲ್ಲಿ ಕೆಂಪು ಬಣ್ಣದ ಸುಂದರ ಸೀರೆಗಳಿಗೆ ಅದಕ್ಕೊಪ್ಪುವ ಮಿಕ್ಸೆಡ್ ಗ್ರ್ಯಾಂಡ್ ಬ್ಲೌಸ್ ಧರಿಸಲಾಗುತ್ತದೆ. 

ವರ್ಷದಿಂದ ವರ್ಷಕ್ಕೆ ಟ್ರೆಂಡಿ ಔಟ್ ಫಿಟ್ ಗಳು ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತವೆ. ಈಗಂತೂ ಪ್ರತಿ ಮಧುವಿನ ವಾಡ್ರೋಬ್ ನಲ್ಲಿ ಕೆಂಪು ಸೀರೆ ಅಗತ್ಯ. ನೀವು ಮದುವೆಯಾಗುತ್ತಿದ್ದರೆ, ಕೆಂಪು ಬಣ್ಣದ ಸೀರೆ ಆಯ್ಕೆ ಮಾಡಿಕೊಳ್ಳಬಹುದು. ದೀಪಿಕಾ ಪಡುಕೋಣೆಯಿಂದ ಮಾಧುರಿ ದೀಕ್ಷಿತ್ ವರೆಗೆ ಸುಂದುರವಾದ ಕೆಂಪು ಸೀರೆ ಗಳ ನೋಟ ಇಲ್ಲಿದೆ. 

ಮದುವೆಯ ಸಂಭ್ರಮದ ಗಳಿಗೆಗೆ ಸೀರೆಗಳ ಆಯ್ಕೆ ಕಡೆ ಗಮನ ವಿರಲಿ.. 

1. ಮದುವೆ ಅಂದಾಕ್ಷಣ ಕೆಲವರು ಸಿಲ್ಕ್ ಸೀರೆಗೆ ಗಮನ ನೀಡುತ್ತಾರೆ.. ಸಾಂಪ್ರದಾಯಿಕವಾಗಿ ಸಿಲ್ಕ್ ಮತ್ತು ಕಾಟನ್ ಬಟ್ಟೆ ಉತ್ತಮ.. ಮಹಿಳೆಯರಿಗೆ ಹೆಚ್ಚಿನ ಆಯ್ಕೆಗೆ ಅವಕಾಶ ಇದೆ. ಸಿಲ್ಕ್, ಜಾರ್ಜೆಟ್, ಶಿಫಾನ್ , ಸ್ಟಾಟಿನ್ ಇವೇ ಮೊದಲಾದ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 

2. ಸೀರೆಯ ಬಣ್ಣದ ಆಯ್ಕೆ ಕೂಡಾ ಮಹತ್ವದ ಪಾತ್ರ ವಹಿಸುತ್ತದೆ. ಸಾಂಪ್ರದಾಯಿಕವಾಗಿ ಕೆಂಪು ಬಣ್ಣದ ಸೀರೆಗಳಿಗೆ ಮಹತ್ವ ಹೆಚ್ಚು.. ಈಗ ಮಹಿಳೆಯರು ಕೆಂಪು ಬಣ್ಣದ ಸೀರೆಯನ್ನು ಆಯ್ಕೆ ಮಾಡುತ್ತಾದೆ. ನಿಮಗೆ  ಮೈಗೊಪ್ಪುವ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾವಿರಾರು ಬಣ್ಣದ, ಹಲವು ಬಣ್ಣದ ಸೀರೆಗಳು ಮಾರ್ಕೆಟ್ ನಲ್ಲಿ ಲಭ್ಯ. 

3. ಇನ್ನು ಸೀರೆಯ ಸೌಂದರ್ಯವನ್ನು ಅದರಲ್ಲಿರುವ ಸೂಕ್ಷ್ಮ ಕಸೂತಿ ನಿರ್ಧರಿಸುತ್ತವೆ… ಈಗಿನ ಮದುವೆ ಸೀರೆಗಳು ಎಂಬ್ರಾಯಿಡರಿ ವರ್ಕ್, ಸ್ಟೋನ್ , ಮಣಿ , ಮಿರರ್ ವರ್ಕ್ ನಿಂದ ಮಾಡಿದ ವಿನ್ಯಾಸವನ್ನು ಒಳಗೊಂಡಿರುತ್ತವೆ. 

4.ಸ್ಯಾರಿಗೆ ತಕ್ಕಂತೆ ಅಂದ ಹೆಚ್ಚಿಸುವ ಬ್ಲೌಸ್ ಡಿಸೈನ್ ಗಳ ಬಗ್ಗೆ ಗಮನವಿರಲಿ. ಫ್ಯಾಷನ್ ಲೋಕದಲ್ಲಿ ಸ್ಯಾರಿಗೆ ಮತ್ತಷ್ಟು ಅಂದ ಹೆಚ್ಚಿಸುವ ಬ್ಲೌಸ್ ಡಿಸೈನ್ ಲುಕ್ ಗಳು ಇನ್ನಷ್ಟು ಅಂದ ಹೆಚ್ಚಿಸುತ್ತವೆ. 

5. ಸೌಂದರ್ಯ ಪ್ರೀತಿಗೆ ಪೂರಕವಾದ ನೂರಾರು ಸೀರೆಹಳು ಇಂದು ಮದುಮಗಳ ಅಲಂಕಾರ ಹೆಚ್ಚಿಸಿವೆ. ಹೀಗೆ ಇಂದಿನ ಕಾಲಕ್ಕೆ ತಕ್ಕಂತೆ ಮದುಮಗಳ ಅಲಂಕಾರ ಇಂದು ಸಾಕಷ್ಟು ರೀತಿಯಲ್ಲಿ ಬದಲಾವಣೆಯಾಗಿದೆ. ಹೊಸ ವಿನ್ಯಾಗಳಿಗೆ ಮದುಮಗಳು ತೆರೆದುಕೊಳ್ಳುತ್ತಿದ್ದಾಳೆ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ