‘ಇಮ್ಯೂನಿಟಿ ಸ್ಟ್ರಾಂಗ್ ಇದ್ದರೆ, ಕೊರೊನಾ ವೈರಸ್ ನಿಮ್ಮಿಂದ ದೂರವಿರುತ್ತೆ’

  • by


ಚೀನಾದ ವುಹಾನ್ ನಗರದಿಂದ ಹರಡಿರುವ ಕೊರೊನಾ ಎಂಬ ರಾಕ್ಷಸ, ಭಯೋತ್ಪಾದನೆಗಿಂತಲೂ ಹೆಚ್ಚುತ್ತಿದೆ. ಈ ವೈರಸ್ ನಿಂದ ಸೋಂಕಿತ ಜನರ ಸಾವು ಪ್ರಪಂಚದಾಂದ್ಯತ ಭೀತಿ ಸೃಷ್ಟಿಸಿದೆ. ಅಷ್ಟೇ ಅಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ.

boost ,immune system,  avoid colds, coronavirus, food, ಆಹಾರಗಳು, ಇಮ್ಯೂನ್ ಸಿಸ್ಟಮ್, ಕೊರೊನಾ ವೈರಸ್,


ಕೊರೊನಾ ವೈರಸ್ ತಪ್ಪಿಸಲು ಹಲವು ಬಾರಿ ಕೈ ತೊಳೆಯುವಂತೆ, ಮುಖಕ್ಕೆ ಮಾಸ್ಕ್ ಧರಿಸುವಂತೆ ಸರ್ಕಾರ ಸಲಹೆ ನೀಡುತ್ತಿದೆ. ವೈದ್ಯರ ಪ್ರಕಾರ, ಕಾಯಿಲೆ ಬರುವುದಕ್ಕೆ, ರೋಗನಿರೋಧಕ ಶಕ್ತಿಯ ಮೇಲೆ ಅವಲಂಬಿಸಿದೆ. ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವ ಜನರು ಕೊರೊನಾ ಸೋಂಕಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊರೊನಾ ವೈರಸ್ ನಿಮ್ಮಿಂದ ದೂರ ಓಡಿ ಹೋಗಬೇಕಾದರೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ 5 ವಿಷಯಗಳು ನಿಮಗೆ ತಿಳಿದಿರಲೇಬೇಕು.

ನಿಯಮಿತ ವ್ಯಾಯಾಮ

ನಿಯಮಿತ ವ್ಯಾಯಾಮದಿಂದ ಹೃದಯದ ಆರೋಗ್ಯ ಸುಧಾರಿಸಬಹುದು. ಜತೆಗೆ ರಕ್ತದೋತ್ತಡ ಮತ್ತು ವ್ಯಕ್ತಿಯ ತೂಕವನ್ನು ನಿಯಂತ್ರಿಸಬಹುದು. ಮಾತ್ರವಲ್ಲ, ವ್ಯಾಯಾಮ ಮಾಡುವುದರಿಂದ ವ್ಯಕ್ತಿಯ ರೋಗ ನಿರೋಧಕ ಶಕ್ತಿ ಸುಧಾರಿಸುತ್ತದೆ.

boost ,immune system,  avoid colds, coronavirus, food, ಆಹಾರಗಳು, ಇಮ್ಯೂನ್ ಸಿಸ್ಟಮ್, ಕೊರೊನಾ ವೈರಸ್,

ಕಡಿಮೆ ಒತ್ತಡ ಇರಲಿ

ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವ ಜನರು ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದ ಎಂದು ತಿಳಿದರೆ ನಿಮಗೆ ಆಶ್ಚರ್ಯ ವಾಗಬಹುದು. ಹೌದು, ಒತ್ತಡವು ಪ್ರತಿರಕ್ಷಣಾ ವ್ಯವಸ್ಥೆಗೆ ಅಡ್ಡಿಯುಂಟು ಮಾಡುತ್ತದೆ. ಉಸಿರಾಟ ಕಾಯಿಲೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಪೆನ್ಸಿಲ್ವೇನಿಯಾದ ಮೆಲಾನ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ಹೆಚ್ಚು ಒತ್ತಡಕ್ಕೆ ಒಳಗಾಗುವ ಜನರು ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಉತ್ತಮ ನಿದ್ರೆ ಮಾಡಿ

ಉತ್ತಮ ನಿದ್ರೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಜರ್ಮನಿಯ ಟೂಬಿಂಗನ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ ಪ್ರಕಾರ, ಉತ್ತಮ ನಿದ್ರೆ ಹೊಂದಿರುವ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ.

ಆಲ್ಕೋಹಾಲ್ ಸೇವನೆ ಬೇಡ

ಹೆಚ್ಚು ಆಲ್ಕೋಹಾಲ್ ಸೇವಿಸುವ ಜನರು ಉಸಿರಾಟದ ಕಾಯಿಲೆ ಹಾಗೂ ನ್ಯುಮೊನಿಯಾಗೆ ತುತ್ತಾಗುತ್ತಾರೆ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆಲ್ಕೋಹಾಲ್ ಸೇವಿಸುವುದರಿಂದ ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಸೋಂಕನ್ನು ತಡೆಗಟ್ಟುವ ವ್ಯಕ್ತಿಯ ಸಾಮರ್ಥ್ಯವು ಕಡಿಮೆಯಾಗುತ್ತದೆ.

ಸರಿಯಾದ ಆಹಾರ

ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಹಾರ ಬಳಕೆ ಕೂಡಾ ಉತ್ತಮವಾಗಿರಬೇಕು. ಶುಂಠಿ, ಸಿಟ್ರೆಸ್ ಹಣ್ಣು, ಅರಶಿಣದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಹೆಚ್ಚಾಗಿರುತ್ತದೆ.

boost ,immune system,  avoid colds, coronavirus, food, ಆಹಾರಗಳು, ಇಮ್ಯೂನ್ ಸಿಸ್ಟಮ್, ಕೊರೊನಾ ವೈರಸ್,

ನಿಮ್ಮ ಚರ್ಮದ ಸೂಕ್ಷ್ಮಾಜೀವಾಣುಗಳ ಬಗ್ಗೆ ಗಮನ ನೀಡಿ!

ಸೂರ್ಯನ ಕಿರಣಗಳು ಹೆಚ್ಚಿನ ಪ್ರಮಾಣದ ಚರ್ಮದ ಸೂಕ್ಷ್ಮಜೀವಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಕ್ಷಣಾತ್ಮಕ ಕಾರ್ಯವನ್ನು ದುರ್ಬಲಗೊಳಿಸುತ್ತದೆ. ಅಲ್ಲದೇ ಬಲವಾದ ಸಾಬೂನು ಬ್ಯಾಕ್ಟೋರಿಯಾ ವಿರೋಧಿ ಉತ್ಪನ್ನಗಳನ್ನು ಬಳಸದಂತೆ ನೋಡಿಕೊಳ್ಳಿ. ಸುಗಂಧ ದ್ರವ್ಯ ಮತ್ತು ಮಾಯಿಶ್ಚರೈಸರ್ ಗಳು ಸಹ ಪರಿಣಾಮ ಬೀರಬಹುದು. ಆದ್ದರಿಂದ ನೀವು ಸರಿಯಾದ ರೀತಿಯಲ್ಲಿ ಬಳಸಬೇಕು.

ದೈಹಿಕವಾಗಿ ಸಧೃಡವಾಗಿರಿ

ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲದೇ, ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಬಿಳಿ ರಕ್ತಕಣಗಳನ್ನು ಸಜ್ಜುಗೊಳಿಸಲು ಮತ್ತು ಇತರ ಭಾಗಗಳಲ್ಲಿ ಕಣ್ಗಾವಲು ಇಡಲು ವ್ಯಾಯಾಮವು ಸಹಾಯ ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ