ನಿಯಮಿತವಾಗಿ ಬಾಡಿ ಮಸಾಜ್ ಮಾಡುವುದರಿಂದ ಆರೋಗ್ಯಕರ ಲಾಭಗಳು.!

  • by

ಬಾಡಿ ಮಸಾಜ್ ಎಂಬುದು ಕೇವಲ ಟೈಂ ಪಾಸ್ ಗಲ್ಲ.  ಕೇವಲ ಸಮಯ ಕಳೆಯುವುದಕ್ಕೆ ಸಂಬಂಧಿಸಿದಲ್ಲ. ಇದ್ರಿಂದ ಸಾಕಷ್ಟು ಹೆಲ್ತ್ ಬೆನಿಫಿಟ್ಸ್ ಗಳಿವೆ.  ಬಾಡಿ ಮಸಾಜ್ ನಿಂದ ದೇಹದ ಜತೆಗೆ ಮನಸ್ಸು ರಿಲ್ಯಾಕ್ಸ ಆಗುತ್ತದೆ. ಎಲಬುಗಳಿಗೆ ವಿಶ್ರಾಂತಿ ದೊರೆಯುತ್ತದೆ. ಒತ್ತಡ ನಿವಾರಿಸುತ್ತದೆ. ನೋವು ಶಮನಗೊಳ್ಲಲು ಬಾಡಿ ಮಸಾಜ್ ಪ್ರತಿ ದಿನ ಮಾಡಿದರೆ ಸಹಕಾರಿಯಾಗುತ್ತದೆ. 

ಬಾಡಿ ಮಸಾಜ್ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಇದ್ರಿಂದ ದೇಹಕ್ಕೆ ಮಾತ್ರ ಉಪಯೋಗವಿಲ್ಲ. ಮನಸ್ಸಿಗೂ ಕೂಡಾ ಒಳ್ಳೆಯದು. ದೇಹದಲ್ಲಿ ನರಮಂಡಲ ಒಂದಕ್ಕೊಂದು ಸಂಪರ್ಕ ಹೊಂದಿರುತ್ತದೆ. ನೋವಿರುವ ಜಾಗದಲ್ಲಿ ಮಸಾಜ್ ಮಾಡಿದರೆ ಎಲ್ಲಾ ನರಗಳು ಮೊಳೆ ರಿಲ್ಯಾಕ್ಸ್ ಆಗುತ್ತದೆ.

Body massage , benefits ,ಬಾಡಿ ಮಸಾಜ್ , ಆರೋಗ್ಯ ಪ್ರಯೋಜನಗಳು ,

ನೋವಿರುವ ಜಾಗಕ್ಕೆ ಮಸಾಜ್ ಮಾಡಿದರೆ ನೋವನ್ನು ನಿವಾರಿಸಬಹುದಾಗಿದೆ. ಮೆದುಳಿನ ನೊವನ್ನು ಉಪಶಮನ ಮಾಡುತ್ತದೆ. ನರಗಳಿಗೆ ವಿಶ್ರಾಂತಿ ದೊರೆಯುತ್ತದೆ. ಮೂಳೆಗಳ ಸಳೆತ ಸೇರಿದಂತೆ ಮೈ ಕೈ ನೋವು , ಸಂಧಿವಾತ ಹಾಗೂ ನರಗಳಲ್ಲಿ ತೊಂದರೆ ಇವುಗಳಿಂದ ದೂರವಿರಬಹುದು. ಬಾಡಿ ಮಸಾಜ್ ಮಾಡಿಕೊಂಡರೆ ರಕ್ತ ಸಂಚಲನ ಸರಾಗವಾಗಿ ಆಗುತ್ತದೆ. 

ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ರಕ್ತ ಸಂಚಲನ ಜತೆ ಜತೆಗೆ ನರಮಂಡಲ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ದೇಹದ ನಿರ್ಜೀವ ಚರ್ಮ ಹೋಗಿ ಟ್ಯಾನಿಂಗ್ ಕಡಿಮೆಯಾಗಿ ಚರ್ಮ ತಾಜಾ ಮತ್ತು ಹೊಳಯುವ ಚರ್ಮ ನಿಮ್ಮದಾಗುತ್ತದೆ. 

ಇಮ್ಯೂನ್ ಸಿಸ್ಟಮ್ ಹೆಚ್ಚುತ್ತದೆ. ರಕ್ತ ಸಂಚಾರದ ಜತೆಗೆ ಇಮ್ಯೂನ್ ಸಿಸ್ಟಮ್ ಹೆಚ್ಚಾಗುತ್ತದೆ, ಪೂರ್ತಿ ಬಾಡಿ ಮಸಾಜ್ ಹಾಗೂ ಥೆರಪಿಯಿಂದ ಇಮ್ಯೂನ್ ಸಿಸ್ಟಮ್ ಹೆಚ್ಚುತ್ತದೆ. 

ಪ್ರತಿ ದಿನ ಬಾಡಿ ಮಸಾಜ್ ಮಾಡುವುದರಿಂದ  ಹಾರ್ಮೋನ್ ಬ್ಯಾಲೆನ್ಸ್ ದಲ್ಲಿರುತ್ತದೆ. ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ. 

ಅಪಾಯಕಾರಿ ಜೀವಾಣುಗಳನ್ನು ತಡೆಗಟ್ಟುತ್ತದೆ. ರಕ್ತ ಸಂಚಾರ ವೃದ್ಧಿಸುತ್ತದೆ. ಅಗ್ನಿ ಕಿಣ್ವಗಳನ್ನು ಪ್ರಚೋದಿಸುತ್ತದೆ. ದೇಹದ ಅಂಗಾಂಗಳನ್ನು ಉದ್ದೀಪನಹೊಳಿಸುತ್ತದೆ. ವಾರಕ್ಕೊಮ್ಮೆ ಮಸಾಜ್ ಮಾಡಿಸಿಕೊಂಡರೆ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ.

ಆರ್ಯುವೇದದಲ್ಲಿ ಮಸಾಜ್ ಥೆರಪಿ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ದೇಹದ ಯೌವ್ವನ ಕಾಪಾಡಿಕೊಂಡು ಬರಬಹುದು. ಆರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದು. ಚರ್ಮದ ರಂಧ್ರಗಳನ್ನು ತೆರೆದುಕೊಳ್ಳುವುದರಿಂದ ತಲೆನೋವು , ಒತ್ತಡ, ಖಿನ್ನತೆ, ಬಿಗಿಯಾದ ಕುತ್ತಿಗೆ, ಭುಜದ ನೋವು, ,ಸ್ನಾಯು ಸೆಳೆತ ಹಾಗೂ ಅನಾರೋಗ್ಯ ಮೊದಲಾದ ಸಮಸ್ಯೆಗಳಿಗೆ ಅಂಗವರ್ದನ ಚಿಕಿತ್ಸೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. 

ಮಸಾಜ್ ಆಯಿಲ್ ಆಯ್ಕೆ ಮಾಡಿಕೊಳ್ಳಬೇಕು. ಖುತು ಮಾನಕ್ಕನುಗುಣವಾಗಿ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಎಳ್ಳೆಣ್ಣೆ ಮಸಾಜ್ ಮಾಡಿಸಿಕೊಳ್ಳಬೇಕು. ವಿವಿಧ ಬಗೆಯ ಹರ್ಬಲ್ ಗಳಿಂದ ತಯಾರಿಸಿದ ಎಣ್ಣೆ ಮತ್ತು ಬಾಡಿ ಲೋಷನ್ ಗಳನ್ನು ಬಳಕೆ ಮಾಡಬಹುದು. 

Body massage , benefits ,ಬಾಡಿ ಮಸಾಜ್ , ಆರೋಗ್ಯ ಪ್ರಯೋಜನಗಳು ,

ನಿಯಮಿತವಾಗಿ ವ್ಯಾಯಾಮದಲ್ಲಿ ಆಗುವ ಅಪಘಾತಗಳನ್ನು ತಪ್ಪಿಸಿಕೊಳ್ಳುವ ಮೂಲಕ ದೀರ್ಘಾವಧಿಯಲ್ಲಿ ನಿಯಮಿತವಾಗಿ ಮಸಾಜ್ ಹೆಚ್ಚಿನ ಅಪಾಯ ಕಾಪಾಡುತ್ತದೆ. ಮಸಾಜ್ ನ್ನು ಪರಿಣಿತ ವ್ಯಕ್ತಿಯಿಂದ ಮಾಡಿಸಿಕೊಳ್ಳಬೇಕು. ನಿಮ್ಮ ವ್ಯಾಯಾಮದ ಅಗತ್ಯಕ್ಕೆ ತಕ್ಕಂತೆ ಸೂಕ್ತವಾಗಿರುವ ಆಹಾರ ಹಾಗೂ ಅನಾರೋಗ್ಯಕರ ಆಹಾರದಿಂದ ದೂರವಿರಲು ಮನಸ್ಸನ್ನು ಹದ್ದು ಬಸ್ತಿನಲ್ಲಿಡಲು ಮಸಾಜ್ ನೆರವಾಗುತ್ತದೆ. 

ಮಸಾಜ್ ಸೂಕ್ತ ರೀತಿಯಲ್ಲಿ ಮಾಡಿಸಬೇಕು

ತೂಕ ಇಳಿಸುವ ನಿತ್ಯದ ವ್ಯಾಯಾಮ ಹಾಗೂ ಆಹಾರ ಕ್ರಮಗಳಿಗೆ ಮಸಾಜ್ ಸಹಕಾರ ನೀಡುತ್ತದೆ. ಮಸಾಜ್ ನ್ನು ಸೂಕ್ತ ರೀತಿಯಲ್ಲಿ ಅನುಸರಿಸಬೇಕು. ಒಬ್ಬ ಪರಿಣಿತರಲ್ಲಿ ಮಸಾಜ್ ಮಾಡಿಸಿಕೊಳ್ಳಬೇಕು. ಮಸಾಜ್ ಮೂಲಕ ತೂಕ ಇಳಿಸಲು ಸಾಧ್ಯವಾಗುವುದಿಲ್ಲ. ಆದ್ರೆ  ನಿಮ್ಮ ವ್ಯಾಯಾಮ, ಆಹಾರ ಕ್ರಮ ಮತ್ತು ಮಸಾಜ್ ಗಳು ಸರಿಯಾದ ರೀತಿಯಲ್ಲಿಯೇ ಮುಂದುವರೆದರೆ ಯಾವುದೇ ತೊಂದರೆ ಯಾಗುವುದಿಲ್ಲ. 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ