ಬಾಡಿ ಲೋಷನ್ ಮುಖಕ್ಕೆ ಹಚ್ಚುತ್ತಿದ್ದೀರಾ. ಎಚ್ಚರ!

  • by

ಮಾಯಿಶ್ಚರೈಸರ್ ಬಾಡಿ ಲೋಷನ್ ಸಾಮಾನ್ಯವಾಗಿ ಎಲ್ಲರು ಬಳಸುತ್ತಾರೆ. ಶೀತ ಹಾಗೂ ಚಳಿಗಾಲದಲ್ಲಿ ಮುಖದ ತೇವಾಂಶ ಕಾಪಾಡುವುದು ಅತಿ ಮುಖ್ಯವಾಗುತ್ತದೆ.   ಆದ್ರೆ ಲೋಷನ್ ಗಳು ವಾಯಿಶ್ಚರೈಸರ್ ಗಳಿಗಿಂತ ತುಂಬಾ ಭಿನ್ನವಾಗಿರುತ್ತದೆ.  ಕೆಲ ಸಂದರ್ಭಗಳಲ್ಲಿ  ಅವು ಮುಖದ ಮೇಲೆ ಬಳಸಲು ಯೋಗ್ಯವಲ್ಲ . ಹೀಗಾಗಿ ನೀವು ಮುಖದ ಮೇಲೆ ಲೋಷನ್ ಹಚ್ಚುವುದನ್ನು ತಪ್ಪಿಸಬೇಕು.. ಯಾಕೆ ಅಂತಿರಾ!

ಮುಖ ಮತ್ತು ದೇಹದ ಚರ್ಮದಲ್ಲಿ ವ್ಯತ್ಯಾಸವಿರುತ್ತದೆ. ಚರ್ಮದ ವಿನ್ಯಾಸ ಮುಖದ ಚರ್ಮಕ್ಕಿಂತ ಭಿನ್ನವಾಗಿರುತ್ತದೆ. ಮುಖದ ಚರ್ಮವು ಮ ದೇಹದ ಉಳಿದ ಭಾಗಗಳಿಗಿಂತ ಹೆಚ್ಚು ಸೂಕ್ಷ್ಮ ಮತ್ತು ತೆಳ್ಳಗಿರುತ್ತದೆ. ಮುಖದ ಚರ್ಮದ ಮೇಲೆ ಉತ್ಪತ್ತಿಯಾಗುವ ಮೇದೋಗ್ರಂಧಿಗಳ ಸಾವ್ರವು ನಿಮ್ಮ ದೇಹದ ಉಳಿದ ಭಾಗಗಳಿಗಿಂತ ಹೆಚ್ಚಿರುತ್ತದೆ. ಹೀಗಾಗಿ ನಿಮ್ಮ ಮುಖ ಹೆಚ್ಚು ಸೂರ್ಯನ ಹಾನಿಕಾರಕ ಕಿರಣಗಳಿಗೆ ಒಡ್ಡಿಕೊಳ್ಳುತ್ತದೆ. ಈ ವೇಳೆ ಮುಖದ ಆರೈಕೆಯ ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕಾಗುತ್ತದೆ. 

ಮುಖಕ್ಕೆ ಬಾಡಿ ಲೋಷನ್ ಹಚ್ಚಿದ್ದರೆ, ಏನಾಗುತ್ತೆ? 

ಬಾಡಿ ಲೋಷನ್ ಗಳು ಹಾಗೂ ಮಾಯಿಶ್ಚರೈಸರ್ ಗಳನ್ನು ವಿಭಿನ್ನವಾಗಿ ಮಾಡಲ್ಪಟ್ಟಿವೆ. ಯಾಕಂದರೆ, ವಿಭಿನ್ನ ಚರ್ಮದ ವಿನ್ಯಾಸಗಳ ಮೇಲೆ ಪರಿಣಾಮ ಬೀರುತ್ತವೆ. ಬಾಡಿ ಲೋಷನ್ ಗಳಲ್ಲಿ ಹೆಚ್ಚು ರಾಸಾಯನಿಕಗಳಿಂದ ತಯಾರಿಸಲ್ಪಟ್ಟಿದ್ದು ಅದು ಮುಖದ ಚರ್ಮಕ್ಕೆ ಹಾನಿಕಾರಕವಾಗಿದೆ.  ಹೀಗಾಗಿ ಬಾಡಿ ಲೋಷನ್ ಹೆಚ್ಚಾಗಿ ಮುಖಕ್ಕೆ ಹಚ್ಚಬಾರದು. 

ಮುಖದ ಮೇಲೆ ಬಾಡಿ ಲೋಷನ್ ಬಳಸುವುದರಿಂದ ಗುಳ್ಳೆಗಳು, ಬ್ಲ್ಯಾಕ್ ಹೆಡ್ಸ್ ಮತ್ತು ಕಲೆಗಳಂತಹ ಸಮಸ್ಯೆಗಳು ಉಂಟಾಗಬಹುದು. ಬಾಡಿ ಲೋಷನ್ ಹೆಚ್ಚು ಸುಗಂಧ ಮತ್ತು ಹೆಚ್ಚು ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ಮುಖದ ಮೇಲೆ ಬಾಡಿ ಲೋಷನ್ ಬಳಸುವುದರಿಂದ ಅಲರ್ಜಿ ಮತ್ತು ಕಿರಿಕಿರಿ ಉಂಟಾಗುತ್ತದೆ. ಇದಕ್ಕಾಗಿಯೇ ಬಾಡಿ ಲೋಷನ್ ಮುಖದ ಮೇಲೆ ಬಳಸಬಾರದು.

ಬಾಡಿ ಲೋಷನ್ ನಲ್ಲಿ ಬಳಸುವ ಸುವಾಸನೆ ಮುಖದ ತ್ವಚೆಗೆ ಒಳ್ಳೆಯದಲ್ಲ. ಇದರಿದಂ ತ್ವಚೆ ಹಾನಿಯುಂಟಾಗುತ್ತದೆ. ಬಾಡಿ ಲೋಷನ್ ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಜಿಡ್ಡಿನಂಶ ಅಧಿಕವಾಗುತ್ತದೆ.  ಮುಖದ ರಂಧ್ರಗಳು ಹೆಚ್ಚಾಗಬಹುದು. 

ಚರ್ಮದ ಕಾಂತಿ ಹೆಚ್ಚಲು ಟಿಪ್ಸ್ .. 

ಹರಳೆಣ್ಣೆಯಲ್ಲಿ ಹಲವು ರೀತಿಯ ಔಷಧೀಯ ಗುಣಗಳಿದ್ದು, ಇವುಗಳನ್ನು ಸೌಂದರ್ಯದ ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದು ಕಣ್ಣು ಹಾಗೂ ಚರ್ಮಕ್ಕೆ ಒಳ್ಳೆಯ ಮನೆ ಮದ್ದಾಗಿದೆ. ಮೊಡವೆಗಳಿಗೆ ರಕ್ಷಣೆ ನೀಡುವುದು. ಹರಳಣ್ಣೆಯು ಮೊಡವೆ ಮತ್ತು ಚರ್ಮಕ್ಕೆ ಸಂಬಂಧಿತ ಹಲವು ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಮೊಡವೆಯಿಂದಾಗಿ ಊರಿಯೂತ ಉಂಟಾಗಬಹುದು. ಆಗ ಹರಳೆಣ್ಣೆ ಹಚ್ಚುವುದರಿದಂ ಊರಿ ಕಡಿಮೆಯಾಗುತ್ತೆ . ಚರ್ಮಕ್ಕೆ ಆಗುವಂತಹ ಕಿರಿಕಿರಿ ಸಮಸ್ಯೆಯನ್ನು ತಡೆಗಟ್ಟುತ್ತದೆ. 

ಪ್ರತಿಧಿನ ಮಾಯಿಶ್ಚರೈಸರ್ ಬಳಸುವುದರಿಂದ ಚರ್ಮ ನೈಸರ್ಗಿಕ ತೈಲವನ್ನು ಕಳೆದುಕೊಳ್ಳುತ್ತದೆ. ಮತ್ತು ಚಿಕ್ಕವಯಸ್ಸಿನಲ್ಲಿ ಚರ್ಮ ಸುಕ್ಕುಗಟ್ಟಿದಂತಾಗುತ್ತದೆ. ಹಾಗಾಗಿ ಮಾಯಿಶ್ಚರೈಸರ್ ಬಳಸುವುದರಿಂದ ಚರ್ಮ ಮೃದು ಮತ್ತು ತಾಜಾತನ ಕಾಯ್ದುಕೊಳ್ಳುತ್ತದೆ. ಮತ್ತು ಚರ್ಮದಲ್ಲಿ ಆದ್ರತೆಯನ್ನು ಉಳಿಸಿಕೊಳ್ಳುತ್ತದೆ. ತುಂಬಾ ಡ್ರೈ ಅಲ್ಲದ ನಾರ್ಮಲ್ ಸ್ಕಿನ್ ಹೊಂದಿದ್ದರೆ ಹೈಪೋ ಅಲರ್ಜಿಕ್ ಲೋಶನ್ ಬಳಸುವುದು ಉತ್ತಮ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ