ನೀವೂ ಪ್ರೀತಿಯಲ್ಲಿ ಕುರುಡರಾಗಿದ್ದೀರಾ..? ಎಚ್ಚರ!

  • by

ಪ್ರೀತಿ, ಪ್ರೇಮ ಒಂದೇ ಬಳ್ಳಿಯ ಹೂಗಳು.. ಪರಿಶುದ್ಧವಾದ ಪ್ರೀತಿ ಎಲ್ಲಿರುತ್ತೋ ಅಲ್ಲಿ ವಿಶ್ವಾಸ ನಂಬಿಕೆ ಬೇರಿರೂತ್ತೆ. ಪ್ರೇಮ ಎಂದರೇನು ಎಂದು ವ್ಯಾಖ್ಯಾನಿಸುವುದು ಸುಲಭದ ಮಾತಲ್ಲ. ಎರಡು ಜೀವಗಳ ಹೃದಯ ಮಿಲನ ಸೇರಿ ಬಾಂಧವ್ಯ ಬೆಸೆಯುತ್ತದೆ. ನಮಗೆ ಗೊತ್ತಿಲ್ಲದಂತೆ ಮತ್ತೊಬ್ಬರ ಮೇಲೆ ಪ್ರೀತಿ ಮನಸ್ಸಿನಲ್ಲಿ ಚಿಗೊರೆಡುತ್ತದೆ. ಆದ್ರೆ ಕೆಲವು ಸಂದರ್ಭದಲ್ಲಿ ಪ್ರೀತಿ ಕುರುಡು ಅಥವಾ ಪ್ರೀತಿಸುವ ಜನರು ಕುರುಡರಾಗುತ್ತಾರೆ ಎಂಬ ಮಾತಿದೆ. ಆದ್ರೆ ಎಷ್ಟೋ ಸಾರಿ ಇದು ನಿಜವಲ್ಲದೇ ಇರಬಹುದು. ವಾಸ್ತವವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ದೈಹಿಕ ಸಂಬಂಧ ಪ್ರಕರಣಗಳು ಹೆಚ್ಚುತ್ತಿವೆ. ಇದು ನಿಮ್ಮನ್ನು ಕುರುಡರನ್ನಾಗಿ ಮಾಡಬಹುದು. ಇಂತಹ ಸಂಬಂಧಗಳು ನಿಮ್ಮ ಆಲೋಚನಾ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಕೆಲವರು ರಿಲೇಷನ್ ಶಿಪ್ ನಲ್ಲಿರುವಾಗ ತಮ್ಮ ಸಂಗಾತಿ ಜತೆ ಪ್ರೀತಿ ಹೆಸರಲ್ಲಿ ಸುಳ್ಳು ಹೇಳುವರಿದ್ದಾರೆ. ಮೋಸ ಮಾಡುವರನ್ನು ನೋಡಬಹುದು. ಹಾಗಾಗಿ ಕರುಡು ಪ್ರೀತಿ ಗುರುತಿಸುವುದು ಹೇಗೆ..? ಇಲ್ಲಿದೆ ಟಿಪ್ಸ್


blind love, tips relationship, ಪ್ರೀತಿ, ಪ್ರೇಮ, ಕುರುಡು, ದೋಖಾ,

ತಜ್ಞರ ಪ್ರಕಾರ, ಒಬ್ಬರ ಜತೆ ಆತ್ಮೀಯರಾಗಿರಾಗಿರುವುದರಿಂದ ಇದು ಪ್ರೀತಿಯನ್ನು ವ್ಯಕ್ತಪಡಿಸಲು ಸುಂದರ ಮಾರ್ಗ ಅಂತಲೇ ಹೇಳಬಹುದು. ಆದ್ರೆ ಇತ್ತೀಚಿನ ದಿನಗಳಲ್ಲಿ ದೈಹಿಕ ಸಂಬಂಧ ಜನರನ್ನು ಕುರುಡರನ್ನಾಗಿ ಮಾಡುತ್ತಿದೆ ಯೋಚಿಸುವ ಹಾಗೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ಪ್ರಾರಂಭದಲ್ಲಿ ನಿಮಗೆ ಪ್ರೀತಿ ಅನ್ನಿಸಬಹುದು, ಆದ್ರೆ ಬೇರೆ ವಿಷಯವೇ ಇರಬಹುದು.

ಆರಂಭದಲ್ಲಿ ಯಾವ ವ್ಯಕ್ತಿಯನ್ನು ತುಂಬಾ ಹೆಚ್ಚಾಗಿ ಪ್ರೀತಿ ಮಾಡುತ್ತೀರುತ್ತೀರಿ. ನಂತರ ಪ್ರೀತಿಯ ಹೆಸರಲ್ಲಿ ನಿಮ್ಮ ಸಂಗಾತಿ ವರ್ತನೆಯಲ್ಲಿ ಬದಲಾವಣೆಗಳನ್ನು ಕಾಣಬಹುದು, ಸುಳ್ಳು ಹೇಳುವುದು, ಮೋಸ ಮಾಡುವುದು ಈ ವಿಚಾರಗಳು ಪ್ರಾರಂಭವಾಗಬಹುದು. ಆದ್ರೆ ಇದನ್ನು ಪ್ರೀತಿ ಮಾಡುವವರ ಅವರಿವಿಗೆ ಬರುವುದಿಲ್ಲ. ಹಾಗಾಗಿ ತುಂಬಾ ಜನರು ವಿವಿಧ ರೀತಿಯ ತಪ್ಪುಗಳನ್ನು ಮಾಡುವುದಲ್ಲದೇ, ಎಡವುತ್ತಾರೆ.

ನೀವು ಹೇಗೆ ಕುರುಡರಾಗುತ್ತೀರಿ..?

ಕೆಲವು ಜನರು ಆರಂಭಿಕ ಆಕರ್ಷಣೆಯನ್ನೇ, ಶಾಶ್ವತ ಎಂದು ಪರಿಗಣಿಸುತ್ತಾರೆ. ಇದು ಕೆಲ ದಿನಗಳವರೆಗೂ ಆಹ್ಲಾದಕರ ಭಾವನೆ ಮೂಡಿಸುತ್ತದೆ. ಅದರ ಪ್ರಮಾಣ ಹೆಚ್ಚಾದಾಗ ಲೈಂಗಿಕ ಸಂಬಂಧ ಹೊರತುಪಡಿಸಿ ಯಾವುದೂ ಕಣ್ಮುಂದೆ ಕಾಣಿಸುವುದಿಲ್ಲ. ಏಕೆಂದರೆ ನೀವು ಪ್ರೀತಿಯಲ್ಲಿ ಕುರುಡರಾಗಿರುತ್ತೀರಿ.


blind love, tips relationship, ಪ್ರೀತಿ, ಪ್ರೇಮ, ಕುರುಡು, ದೋಖಾ,

ಸರಿಯಾದ ಸಮಯದಲ್ಲಿ ಉತ್ತಮ ಸಂಬಂಧವಿರಲಿ..!

ಸರಿಯಾದ ಸಮಯದಲ್ಲಿ, ಸರಿಯಾದ ಸಂಬಂಧಕ್ಕೆ ಹೆಚ್ಚು ಒತ್ತು ನೀಡಬೇಕು. ಶಾಶ್ವತ ಪ್ರೀತಿಗೆ ಹೆಚ್ಚು ಒತ್ತು ನೀಡಬೇಕು. ಕೆಲವೊಮ್ಮೆ ಆಕರ್ಷಣೆ ಅಥವಾ ಕ್ಷಣಿಕ ಪ್ರೀತಿಗಾಗಿ ಅಂಧರಾಗಬಾರದು.ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ತೊಂದರೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಹೊರಬರುವುದು ತುಂಬಾ ಕಷ್ಟಕರವಾಗುತ್ತದೆ. ಏಕೆಂದರೆ ಅದು ನಿಜವಾದ ಅಥವಾ ರಿಯಲ್ ಪ್ರೀತಿ ಆಗಿರುವುದಿಲ್ಲ ಎಂದು ಅರಿಯಬೇಕಾಗುತ್ತದೆ.

ಎಲ್ಲಾ ಪ್ರೀತಿಯು ಕರುಡಾಗಿಲ್ಲ. ಆದ್ದರಿಂದ ಪ್ರೀತಿಸುವ ಮುನ್ನ ಈ ಕೆಲವು ವಿಚಾರಗಳು ಗಮನ ಹರಿಸುವುದು ಉತ್ತಮ.
ನಿಮ್ಮೊಂದಿಗೆ ಆಳವಾದ ಸಂಪರ್ಕವಿರಲಿ. ಇದರರ್ಥ ನಿಮ್ಮ ಆಂತರಿಕ ಸ್ವಗತಕ್ಕೆ ಕೆಲಸ ಮಾಡಲು ಸಮಯ ನೀಡುವುದು. ಇದ್ರಿಂದ ಬೇರೆಯರನ್ನು ನಿಮ್ಮನ್ನು ನಿಜವಾಗಿ ಪ್ರೀತಿಸುತ್ತೀದ್ದಾರೆ ಎಂಬುದನನ್ನು ಪತ್ತೆ ಹಚ್ಚಬಹುದು.

ಮಿತಿಗಳ ಬಗ್ಗೆ ಅರಿಯಿರಿ..!
ಮಿತಿ ನಿಮಗೆ ಯಾವುದು ಬೇಕು ಅಥವಾ ಬೇಡ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ನಿಮಗೆ ಅನ್ನಿಸಿದ್ದನ್ನು ನಿಮ್ಮ ,ಸಂಗಾತಿ ಗೆ ಹೇಳವುದು, ಬೇಡವಾಗಿದ್ದನ್ನು ನಿಮ್ಮ ಸಂಗಾತಿ ಮುಂದೆ ಸ್ಪಷ್ಟಪಡಿಸಬಹುದು. ಇದ್ರಿಂದ ನಿಮ್ಮ ಯೋಚನಾ ಸಾಮರ್ಥ್ಯ ಹೆಚ್ಚುತ್ತದೆ.
ಬೇರೆಯವರನ್ನು ಪ್ರೀತಿಸುವುದು ಎಂದರೆ ನಿಮ್ಮಲ್ಲಿರುವ ಎಲ್ಲವನ್ನು ತ್ಯಾಗ ಮಾಡುವುದು ಎಂದಲ್ಲ.


blind love, tips relationship, ಪ್ರೀತಿ, ಪ್ರೇಮ, ಕುರುಡು, ದೋಖಾ,

ನಿಮ್ಮ ಲೈಫ್ ಬಗ್ಗೆ ಗಮನವಿರಲಿ, ಜೀವನವನ್ನು ನಿರ್ಲಕ್ಷಿಸಿ ಮುನ್ನುಗ್ಗುವುದು ನಿಮ್ಮ ಆಯ್ಕೆಯಾಗಿರಬಾರದು.

ಒಟ್ಟಿನಲ್ಲಿ ಪ್ರೀತಿ ನಿಮ್ಮನ್ನು ಕರುಡರನ್ನಾಗಿ ಮಾಡುವುದಿಲ್ಲ. ಕೆಲಮೊಮ್ಮೆ ನಾವು ಅದರಿಂದ ಕುರುಡರಾಗಲು ಅವಕಾಶ ಮಾಡಿಕೊಡುತ್ತೇವೆ. ಸಂಬಂಧ ಎಂದರೆ ಏನೆಂದು ಮೊದಲು ಅರಿಯಬೇಕು, ನೀವು ಸಹ ಪ್ರೀತಿಯಲ್ಲಿ ಕುರುಡಾಗಿದ್ದೀರಾ ಎಂದರೆ ನಿಮ್ಮನ್ನು ನೀವು ತಿಳಿಯಲು ಪ್ರಯತ್ನಿಸಿ. ನಿಮ್ಮೊಂದಿಗೆ ಸಂಪರ್ಕ ಸಾಧಿಸಿ. ನಿಮ್ಮೊಂದಿಗ ಪ್ರಾಮಾಣಿಕವಾಗಿರಿ. ಏಕೆಂದರೆ ಉತ್ತರ ನಿಮ್ಮೊಳಗೆ ಇದೆ.

blind love, tips relationship, ಪ್ರೀತಿ, ಪ್ರೇಮ, ಕುರುಡು, ದೋಖಾ,

” ನಿಜವಾದ ಪ್ರೀತಿ ಕಾಮವಿಕಾರವಲ್ಲ. ಅದು ಭಾವನಾತ್ಮಕವೂ ಅಲ್ಲ ಪ್ರೀತಿ ನಿಮ್ಮ ಪರಿಪೂರ್ಣ ಅಂತರಂಗವನ್ನು ಪ್ರವೇಶಿಸಿ ನಿಮ್ಮನ್ನು ಪೂರ್ಣಗೊಳಿಸುವ ಉಪಸ್ಥಿತಿ. ಒಬ್ಬರ ಇರುವಿಕೆ, ನಿಮ್ಮನ್ನು ಪರಿಪೂರ್ಣ ವ್ಯಕ್ತಿಯಾಗಿಸುವ ಪ್ರಕ್ರಿಯೆ – ಓಶೋ

”ಪ್ರೀತಿಯಲ್ಲಿ ಸುಮಧುರ ಭಾವನೆಗಳು ಅರಳುತ್ತವೆ.. ಅಲ್ಲಿ ಯಾವ ದ್ವೇಷ , ಅಸೂಯೆ, ಸ್ವಾಮ್ಯಗಳಿಗೆ ಅವಕಾಶವಿಲ್ಲ. ಅಲ್ಲಿ ಇರುವುದೆಲ್ಲಾ ಸಹಾನೂಭೂತಿ, ಮತ್ತು ಕೇವಲ ಪ್ರೀತಿ.. ಪ್ರೀತಿ ಮತ್ತು ಪ್ರೀತಿ”- ಓಶೋ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ